For Quick Alerts
  ALLOW NOTIFICATIONS  
  For Daily Alerts

  ಅಮ್ಮನ ಬಗ್ಗೆ ಸತ್ಯ ತಿಳಿದುಕೊಂಡ ಪುಟ್ಟಕ್ಕನ ಮಕ್ಕಳು

  |

  'ಪುಟ್ಟಕ್ಕನ ಮಕ್ಕಳು' ಧಾರವಾಹಿ ಇದೀಗ ನಂಬರ್ ವನ್ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಧಾರವಾಹಿ ನೋಡುಗರಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದೀಗ ಪುಟ್ಟಕ್ಕನ ಮಗಳು ಸುಮಾ ಅಮ್ಮನನ್ನೆ ಪ್ರಶ್ನೆ ಮಾಡುತ್ತಿದ್ದಾಳೆ. ಯಾವ ಉದ್ದೇಶದಿಂದ ನಮಗೆ ಖೋ-ಖೋ ಕೋಚ್ ಆಗಿ ಬರುತ್ತಿದ್ದಿಯಾ. ಈ ಗ್ರೌಂಡ್ ನಲ್ಲಿ ಆಗಿದ್ದು ಓಕೆ ಎಲ್ಲಾದರೂ ಕಾಲೇಜು ಗ್ರೌಂಡ್ ನಲ್ಲಿ ಹೀಗೆಲ್ಲ ಆಗುತ್ತಿದ್ದರೆ ನಿನ್ನ ಮಾನ ಮರ್ಯಾದೆ ಏನಾಗುತ್ತಿತ್ತು ಗೊತ್ತಾ ಎಂದೆಲ್ಲ ಹೇಳಿ ಚೆನ್ನಾಗಿ ಬಯ್ಯುತ್ತಾ ಇರುತ್ತಾಳೆ. ಖೋ-ಖೋ ಆಟ ಎಂದರೆ ಏನು ಎಂಬುವುದಾದರು ನಿನಗೆ ಗೊತ್ತಾ. ಕೋಚ್ ಆಗುತ್ತೇನೆ ಎಂದು ಹೇಳುತ್ತಿಯಾ, ಏನಮ್ಮಾ ಇದೆಲ್ಲ ಎಂದು ಬಯ್ಯುತ್ತಾಳೆ?

  ಪುಟ್ಟಕ್ಕನಿಗೆ ಆಗ ಸ್ನೇಹಾ ಹೇಳುತ್ತಾಳೆ ಏನಾವ್ವ ಖೋ-ಖೋ ಹೇಳಿಕೊಡಲು ಬರುತ್ತಾರೆ ಅಂತ ನೀವೇ ಹೇಳಿದ್ದು ಅಲ್ವಾ ಎಂದಾಗ ಸುಮಾ ಕೂಡ ಇದನ್ನೆಲ್ಲ ಕೇಳುವಂತೆ ಕುಮ್ಮಕ್ಕು ನೀಡುತ್ತಾಳೆ. ಅಡಿಗೆ ಮಾಡಿದಷ್ಟೂ ಸುಲಭ ಅಲ್ಲ ಆಟ ಆಡೋದು ಎಂದು ಹೇಳಿದ ಮಾತಿನಿಂದ ಶಾಂತಮ್ಮನಿಗೆ ಬೇಸರವಾಗುತ್ತದೆ. ಬಳಿಕ ಶಾಂತಮ್ಮ ಜೋರಾಗಿ ಹೇಳುತ್ತಾರೆ. ಪುಟ್ಟಕ್ಕನ ಬಗ್ಗೆ ಏನಾದರೂ ನಿಮಗೆ ಗೊತ್ತಿದೆಯಾ. ಆಕೆಯ ಆಸೆ ಗೊತ್ತಿದೆಯಾ. ಅವಳನ್ನು ಯಾರು ಅಂದುಕೊಂಡಿದ್ದೀರಿ ಎಂದು ಹೇಳುತ್ತಾಳೆ. ಅದಕ್ಕೆ ಸುಮಾ ಸುಮ್ಮನಾಗುತ್ತಾರೆ. ಸಹನಾ ಸ್ನೇಹಾ ಶಾಕ್ ಆಗುತ್ತದೆ.

  ಬಳಿಕ ಮಾತು ಮುಂದುವರಿಸಿದ ಶಾಂತಕ್ಕ ಹೇಳುತ್ತಾರೆ ಪುಟ್ಟಕ್ಕ ಇಡೀ ಹಳ್ಳಿ ಜನಕ್ಕೆ ಖೋ-ಖೋ ಹೇಳಿಕೊಟ್ಟವರು. ಆಕೆಯ ಹಳೆಯ ಟ್ರಂಕ್ ಅನ್ನು ತೆರೆದು ಒಮ್ಮೆ ಪರೀಕ್ಷೆ ಮಾಡಿ ನೋಡಿ ಪ್ರಮಾಣ ಪತ್ರ ಎಲ್ಲಾ ಸಿಗುತ್ತದೆ ಎಂದು ಹೇಳುತ್ತಾಳೆ. ಖೋ-ಖೋದಲ್ಲಿ ಏಷ್ಟು ಜನ ಇರಬೇಕಿತ್ತು. ಯಾರೆಲ್ಲ ಇರಬೇಕು ಏನು ಎಂದು ಕೇಳುತ್ತಿದ್ದ ಸುಮಾ ಇದ್ಯಾಕೋ ಶಾಂತಕ್ಕನ ಮಾತಿನಿಂದ ಸುಮ್ಮನಾಗಿದ್ದಾರೆ. ಪುಟ್ಟಕ್ಕ ದೊಡ್ಡ ತಂಡ ಕಟ್ಟಿ ಪದಕವನ್ನು ಗೆದ್ದಿದ್ದಾರೆ.

  ಊರ ಜನರಿಗೆ ಖೋ-ಖೋ ಹೇಳಿಕೊಟ್ಟಿದ್ದ ಪುಟ್ಟಕ್ಕ

  ಊರ ಜನರಿಗೆ ಖೋ-ಖೋ ಹೇಳಿಕೊಟ್ಟಿದ್ದ ಪುಟ್ಟಕ್ಕ

  ಪುಟ್ಟಕ್ಕ ಖೋ-ಖೋ ಆಟದಲ್ಲಿ ಯಾರೇ ಎದುರಾಳಿ ಸಿಕ್ಕರೂ ಅವರೆಲ್ಲ ಪುಟ್ಟಕ್ಕನ ಬೇಟೆಯೇ. ಏಷ್ಟು ಚೆನ್ನಾಗಿ ಖೋ ಖೋ ಆಟವನ್ನು ಆಡಿ ಜನರ ಮನ ಗೆಲ್ಲುತ್ತಾರೆ. ಅಡಿಗೆ ಮನೆಯಲ್ಲಿ ಬೇಯ್ಯುವ ಪುಟ್ಟಕ್ಕ ಮಾತ್ರ ಗೊತ್ತಿರೋದು ಅದರಾಚೆಗೆ ಇರುವ ಆಕೆ ಕಥೆ ಬಗ್ಗೆ ಎನು ತಿಳಿದೇ ಇಲ್ಲ. ಹತ್ತೂರನ್ನು ಮೀರಿಸುವ ಖೋ-ಖೋ ಆಟಗಾರ್ತಿ ಪುಟ್ಟಕ್ಕ. ಆಟ ಆಡಿ ಗೆದ್ದು ಊರಿಗೆ ಹೆಸರು ಮಾಡಿ ಕೊಟ್ಟ ಪುಟ್ಟಕ್ಕ. ತನ್ನ ಮಕ್ಕಳಿಗೋಸ್ಕರ ಮನೆಗೋಸ್ಕರ ಪುಟ್ಟಕ್ಕ ಆಕೆಯ ಜನುಮವನ್ನು ತೆಯ್ದು ಬಿಟ್ಟಿದ್ದಾಳೆ.

  ಅಮ್ಮನನ್ನು ಕೋಚ್ ಆಗಿ ಸ್ವೀಕರಿಸುತ್ತಾಳ ಪುಟ್ಟಕ್ಕ

  ಅಮ್ಮನನ್ನು ಕೋಚ್ ಆಗಿ ಸ್ವೀಕರಿಸುತ್ತಾಳ ಪುಟ್ಟಕ್ಕ

  ಇನ್ನಾದರೂ ಸುಮಾ ಕೋಚ್ ಆಗಿ ಅಮ್ಮನನ್ನು ಸ್ವೀಕರಿಸುತ್ತಾಳ ಎಂಬುವುದನ್ನು ನೋಡಬೇಕಿದೆ. ಅಮ್ಮನಿಗೆ ಎಲ್ಲರೆದುರು ಅವಮಾನ ಮಾಡಿರುವುದು ಅಲ್ಲದೆ ಅಮ್ಮನ ಕನಸನ್ನು ನನಸು ಮಾಡುವತ್ತ ಗಮನ ಹರಿಸುತ್ತಾಳ ಎಂಬುದನ್ನು ಕಾದು ನೋಡಬೇಕಿದೆ. ಇತ್ತ ಕಂಠಿ ಹಾಗೂ ಸ್ನೇಹಾ ಮಾತನಾಡುತ್ತ ಕಂಠಿ ಕೈ ಹಿಡಿಯುತ್ತಾಳೆ ಇದನ್ನು ಸಹಿಸಿಕೊಳ್ಳದ ಪೂರ್ವಿ, ಕಂಠಿ ಹಾಗೂ ಸ್ನೇಹಾ ಇರುವಲ್ಲಿಗೆ ಬರುತ್ತಾಳೆ. ಪೂರ್ವಿಯನ್ನು ನೋಡಿದ ಸ್ನೇಹಾ ಹೇಳುತ್ತಾಳೆ ಅರೆ ಪೂರ್ವಿ ಹೇಗಿದ್ದೀಯಾ ಏನು ಇಲ್ಲಿಗೆ ಬಂದಿದ್ದೀಯಾ ಬಾ ತಿಂಡಿ ಮಾಡುವ ಎಂದೆಲ್ಲ ಹೇಳಿ ಪ್ರೀತಿಯಿಂದ ಕರೆಯುತ್ತಾಳೆ.

  ಸ್ನೇಹಾಳನ್ನು ಕಂಠಿ ಜೊತೆ ನೋಡಿದ ಪೂರ್ವಿ ಕೆಂಡಾಮಂಡಲ

  ಸ್ನೇಹಾಳನ್ನು ಕಂಠಿ ಜೊತೆ ನೋಡಿದ ಪೂರ್ವಿ ಕೆಂಡಾಮಂಡಲ

  ಆದರೆ ಆಕೆ ಬೇಡ ನಮ್ಮಿಬ್ಬರಿಗೂ ಮನೆಯಲ್ಲಿ ಕಾಯುತ್ತಿರುತ್ತಾರೆ ಎನ್ನುತ್ತಾಳೆ. ಇನ್ನೂ ಕಂಠಿ ಕೈ ಹಿಡಿದ ಪೂರ್ವಿ ಮೇಲೆ ರೇಗಲು ಆಗುವುದಿಲ್ಲ. ಸ್ನೇಹಾ ಬಳಿ ಕಣ್ಣಿನ ಸಂಜ್ಞೆ ಮೂಲಕ ಹೇಳುತ್ತಿರುವ ಕಂಠಿ. ಇದನ್ನೆಲ್ಲ ಸ್ನೇಹಾ ಅರ್ಥ ಮಾಡಿಕೊಳ್ಳುತ್ತಾಳೆ. ಬಳಿಕ ಸುಮ್ಮನಿರುವುದೇ ಒಂದೇ ಮಾರ್ಗ ಇತ್ತ ಸ್ನೇಹಾ ಅತ್ತ ಪೂರ್ವಿ ಇಬ್ಬರ ಕಿತ್ತಾಟದಲ್ಲಿ ಕಂಠಿ ಬಡವಾಗುತ್ತಿದ್ದಾನೆ.

  ಪೂರ್ವಿಯನ್ನು ದೂರ ತಳ್ಳುತ್ತಿರುವ ಕಂಠಿ

  ಪೂರ್ವಿಯನ್ನು ದೂರ ತಳ್ಳುತ್ತಿರುವ ಕಂಠಿ

  ಬಳಿಕ ಪೂರ್ವಿ ಹೇಳುತ್ತಾಳೆ ಕಂಠಿ ನಾನು ನಿನ್ನ ಬೈಕ್ ಅಲ್ಲಿ ಬರುತ್ತೇನೆ ಕಾರು ನಿಮ್ಮ ಹುಡುಗರ ಬಳಿ ತರಲು ಹೇಳು ಎಂದು ಹೇಳುತ್ತಾರೆ. ಕಂಠಿ ಇದಕ್ಕೆ ಒಪ್ಪದೇ ಬೈಕ್ ಟಯರ್ ನಲ್ಲಿ ಗಾಳಿ ಕಡಿಮೆ ಇದೆ ಹಾಗೆ ಬೇಡ ನೀನು ಕಾರಿನಲ್ಲಿ ಬಾ ಎಂದು ಸಬೂಬು ಹೇಳಿ ಅಲ್ಲಿಂದ ನುಣುಚಿಕೊಳ್ಳುತ್ತಾನೆ. ಇನ್ನು ಪೂರ್ವಿಯನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಿರುವ ಸ್ನೇಹಾ ಗೆ ಕೂಡ ಕಂಠಿ ಯ ಮೇಲೆ ಲವ್ ಆಗಿರುವುದಂತು ಪಕ್ಕಾ. ಮುಂದೆ ಏನೆಲ್ಲಾ ಆಗುತ್ತದೆ. ಫಾರಿನ್ ನಿಂದಾ ಬಂದ ಬಂಗಾರಮ್ಮ ಅಣ್ಣ ಮದುವೆ ಮಾತು ಕತೆ ಮಾಡುತ್ತಾನೆ. ತಂಗಿ ಮಗನಿಗೆ ತನ್ನ ಮಗಳನ್ನು ಕೊಡುತ್ತಿರುವುದು ಆತನಿಗೆ ಬಹಳ ಸಂತಸ ತಂದಿದೆ ಆದರೆ ಬಾವನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡ ಬದಾಯಿಸುತ್ತಿರುವುದಂತು ಸತ್ಯ. ಇನ್ನೂ ಕಂಠಿ ಸ್ನೇಹಾ ಮೇಲೆ ಇರುವ ಪ್ರೀತಿಯನ್ನು ಅವ್ವನ ಬಳಿ ಸ್ನೇಹಾನಾ ಬಳಿ ಹೇಳಿ ಒಪ್ಪಿಸಬೇಕಿದೆ. ಸ್ನೇಹಾ ತಾನು ಹೇಳಿರುವುದೆಲ್ಲ ಸುಳ್ಳು ಆಕೆ ತನ್ನ ಪ್ರೀತಿ ಒಪ್ಪಿಕೊಳ್ಳುತ್ತಾಳ ಎಂದೆಲ್ಲ ಸಂಶಯ ಆತನಲ್ಲಿ ಇದೆ. ಮುಂದೇನಾಗುತ್ತೆ ಎಂದು ಕಾದು ನೋಡಬೇಕಿದೆ.

  English summary
  Kannada serial Puttakkana Makkalu written updated on 26th August. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X