ಸ್ವಾಮಿಗಳ ಮಾತಿಗೆ ದಿಗಿಲುಗೊಂಡ ಪುಟ್ಟಕ್ಕ? ಮುಂದೇನು ಮಾಡುತ್ತಾಳೆ?
'ಪುಟ್ಟಕ್ಕನ ಮಕ್ಕಳು' ಧಾರವಾಹಿಯಲ್ಲಿ ಶಾಂತಕ್ಕ ಪುಟ್ಟಕ್ಕನ ಮನೆಗೆ ಬರುತ್ತಾರೆ. ಏನು ಪುಟ್ಟಕ್ಕ ಹೀಗೆ ಕುಳಿತಿದ್ದಿಯಾ ಮಕ್ಕಳೆಲ್ಲ ಎಲ್ಲಿಗೆ ಹೋಗಿದ್ದಾರೆ ಎಂದು ಶಾಂತ ಕೇಳುತ್ತಾಳೆ ಅದಕ್ಕೆ 'ಪುಟ್ಟಕ್ಕ ಮಕ್ಕಳೆಲ್ಲ ಗುಡಿಗೆ ಹೋಗಿದ್ದಾರೆ ಶಾಂತ ಹೌದು ನೀನು ಮುತ್ತಯ್ಯನ ಅಲ್ಲೇ ಒಬ್ಬನನ್ನೇ ಬಿಟ್ಟು ಬಂದ್ಯಾ ಎಂದು ಕೇಳುತ್ತಾಳೆ.
ಅದಕ್ಕೆ ಶಾಂತಕ್ಕ, 'ಹೂ ಅಕ್ಕ ಮಲಗಿಕೊಂಡಿದ್ದಾನೆ. ನನಗೆ ಸಾಕ್ ಸಾಕ್ ಆಗೋಯ್ತು ಪುಟ್ಟಕ್ಕ. ಮನುಷ್ಯನ ಜೀವನಾನೆ ಬೇಡ ಅನ್ನೋವಷ್ಟು ರೋಸಿ ಹೋಗಿದೆ ನನಗೆ. ಎಂದಾಗ ಪುಟ್ಟಕ್ಕ ಹೇಳುತ್ತಾಳೆ ಅಯ್ಯಯ್ಯೋ ಹೊತ್ತಲ್ಲದ ಹೊತ್ತಲ್ಲಿ ಎಂತ ಮಾತನಾಡುತ್ತ ಇದ್ದೀಯಾ ಶಾಂತ ಬಿಡ್ತು ಅನ್ನು ಎನ್ನುತ್ತಾಳೆ.
ಆಗ ಶಾಂತ ಹೇಳುತ್ತಾಳೆ ಕ್ಷಮಿಸಿ ಬಿಡು ಪುಟ್ಟಕ್ಕ ಇಂತ ಮಾತೆಲ್ಲ ನಿನಗೆ ಇಷ್ಟ ಆಗಲ್ಲ ಗೊತ್ತು. ಯಾವತ್ತೂ ಧೈರ್ಯ ಕಳೆದುಕೊಂಡವಳು ಅಲ್ಲ ನೀನು. ನಿನಗೆ ಬಂದ ಕಷ್ಟದಲ್ಲಿ ಸಾಸಿವೆಯಷ್ಟು ಕಷ್ಟ ನನಗೆ ಬಂದಿದ್ದರು ಕೂಡ ನಾನು ಇಷ್ಟರ ವರೆಗೆ ಬರುತ್ತಿರಲಿಲ್ಲ ಎಂದು ಹೇಳುತ್ತಾಳೆ.

ಧೈರ್ಯ ತುಂಬುವ ಪುಟ್ಟಕ್ಕ
ಪುಟ್ಟಕ್ಕ ಹೇಳುತ್ತಾಳೆ ಆನೆ ಬಾರ ಆನೆಗೆ ಇರುವೆ ಬಾರ ಇರುವೆಗೆ ಎಲ್ಲಾರಿಗೂ ಕಷ್ಟ ತಪ್ಪಿದ್ದಲ್ಲ ಶಾಂತ ಇನ್ನೂ ನಮ್ಮಂತವರಿಗೇನು. ಅಂತಹ ಕೃಷ್ಣ ಪರಮಾತ್ಮ ರಾಮನಿಗೂ ಕಷ್ಟ ತಪ್ಪಿಲ್ಲ. ಅವರೆಲ್ಲರೂ ನಮಗೆ ಏನು ಹೇಳಿಕೊಟ್ಟಿದ್ದಾರೆ. ಎಂಥಹ ಕಷ್ಟ ಇದ್ದರೂ ಛಲ ಬಿಡಬೇಡಿ ಧೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ ಅಲ್ವಾ. ಎಂದಾಗ ಶಾಂತ ಹೇಳುತ್ತಾಳೆ ನಿನ್ನ ಬಳಿ ಮಾತನಾಡಿದಾಗ ಮನಸಿಗೆ ಸ್ವಲ್ಪ ಧೈರ್ಯ ಬರುತ್ತದೆ ಎನ್ನುತ್ತಾಳೆ.

ಜ್ಯೋತಿಷಿಗಳ ಬಗ್ಗೆ ಹೇಳಿದ ಪುಟ್ಟಕ್ಕ
ಇದು ನಿನಗೆ ಮಾತ್ರ ಹೇಳಿದ ಧೈರ್ಯ ಅಲ್ಲ. ನನಗೆ ನಾನೇ ಧೈರ್ಯ ಹೇಳಿಕೊಳ್ಳುತ್ತಾ ಇದ್ದೇನೆ. ಎಂದಾಗ ಶಾಂತ ಕೇಳುತ್ತಾಳೆ ಪುಟ್ಟಕ್ಕ ಏನಾಯ್ತು ಎಂದು ಅದಕ್ಕೆ ಪುಟ್ಟಕ್ಕ ಒಂದು ಘಳಿಗೆ ಮುಂಚೆ ಇಬ್ಬರು ಬಂದಿದ್ದರು ಶಾಂತ, ಸ್ವಾಮಿಗಳು ಭವಿಷ್ಯ ಹೇಳುತ್ತಾರಲ್ಲ ಅವರು. ನಾನೇನು ಕರೆದಿಲ್ಲ ಅವರಾಗಿಯೇ ಬಂದಿರುವುದು. ನಿಜವಾಗಿ ಹೊತ್ತು ಮುಗಿದ ಮೇಲೆ ಶಾಸ್ತ್ರನ ಹೇಳುವುದಿಲ್ಲಾ ಎಂದು ಹೇಳುತ್ತಾಳೆ.

ಜ್ಯೋತಿಷಿ ಮಾತಿನಿಂದ ದಿಗಿಲು
ಬಳಿಕ ಹೇಳುತ್ತಾಳೆ ಇದು ಅವರಾಗಿಯೇ ಬಂದು ನಮ್ಮ ಮನೆ ನೋಡಿ ಸುಮ್ಮನಿರಲು ಆಗಲಿಲ್ಲ ಅನಿಸುತ್ತದೆ. ಅವರು ಹೇಳಿದ್ದು ಕೇಳಿ ನನಗೆ ಕೈ ಕಾಲು ಬಿದ್ದಂಗೆ ಆಗಿದೆ ಶಾಂತ. ಮುಂದೆ ಏನೇನೋ ಅಪಶಕುನಗಳು ಕಾದಿದೆ ಅಂತೆ. ನನಗೆ ದಿಗಿಲು ಆಗುತ್ತಿದೆ ಎಂದು ಭಯ ತೋಡಿಕೊಂಡಳು. ಅದಕ್ಕೆ ಶಾಂತಕ್ಕ ಏನು ಅಂದ್ರು ಪುಟ್ಟಕ್ಕ ಎಂದು ಕೇಳಿದಾಗ ಪುಟ್ಟಕ್ಕ ನಡೆದ ಸಂಗತಿ ಎಲ್ಲಾ ವಿವರವಾಗಿ ಶಂತಕ್ಕನಿಗೆ ಹೇಳುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

ಸತ್ಯ ಹೇಳಲು ಒದ್ದಾಡುತ್ತಿರವ ಕಂಠಿ
ಮತ್ತೊಂದೆಡೆ ಸ್ನೇಹಾಗೆ ಸತ್ಯ ಹೇಳಲು ಕಂಠಿ ಒದ್ದಾಡುತ್ತಿದ್ದಾನೆ. ಸ್ನೇಹಾ ಆತನನ್ನು ಶ್ರೀ ಶ್ರೀ ಎಂದು ಕರೆಯುವಾಗೆಲ್ಲ ಆತನ ಮನಸ್ಸಿಗೆ ನೋವಾಗುತ್ತಿದೆ. ಇದರ ಜೊತೆಗೆ ಕಂಠಿಯ ತಾಯಿ ಬಂಗಾರಮ್ಮ, ಕಂಠಿಯ ಮದುವೆ ಮಾಡಲು ನಿಶ್ಚಯ ಮಾಡಿದ್ದಾರೆ. ಈಗಲೂ ಕಂಠಿ ಸತ್ಯ ಹೇಳದೇ ಹೋದರೆ ಸ್ನೇಹಾಳ ಪ್ರೀತಿಯನ್ನು ಕಳೆದುಕೊಳ್ಳುವ ಅಪಾಯವಿದೆ.


Click it and Unblock the Notifications