Puttakkana Makkalu: ಕಂಠಿಯನ್ನು ಮರೆಯಲು ಸಾಧ್ಯ ಆಗದೆ ಮನೆ ಬಿಟ್ಟು ಹೋದ ಸ್ನೇಹಾ ?
ಸ್ನೇಹಾ ಇದೀಗ ಕಂಠಿಯನ್ನು ಬಿಡಲು ಆಗದೇ ಭುವನ್‌ನನ್ನು ಒಪ್ಪಿಕೊಳ್ಳಲು ಆಗದೇ ಹರಸಾಹಸ ಪಡುತ್ತಾ ಇದ್ದಾಳೆ. ಶ್ರೀ ನನ್ನಿಂದ ದೂರ ಆಗಲೇಬೇಕು ಎಂದು ಅವಸರದ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಇದ್ದಾಳೆ. ಆದರೆ ಭುವನ್ ಕರೆ ಮಾಡಿದಾಗಲೆಲ್ಲಾ ಶ್ರೀ ಎಂದು ಸ್ನೇಹ ಬಾಯಲ್ಲಿ ಬಂದು ಹೋಗುತ್ತದೆ. ಸುಮಾ ಅದೆಷ್ಟು ಬಾರಿ ತನ್ನ ಅಕ್ಕನ ಬಳಿ ಕೇಳಿಕೊಂಡರು. ಆಕೆ ಮಾತ್ರ ಸುಮಾ ಮಾತನ್ನು ಚೂರು ಕೇಳಿಸಿಕೊಳ್ಳುತ್ತಿಲ್ಲ.
ಸುಮಾಗೆ ಭುವನ್‌ನನ್ನು ಪರಿಚಯ ಮಾಡಿಸಿದ ಚಂದ್ರು ಅಣ್ಣಯ್ಯನನ್ನು ಕಂಡಾಗ ಮಾತ್ರ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಆದರೂ ಏನಾದರು ಈ ಬಗ್ಗೆ ಹೇಳಲು ಹೋದರೆ ಪುಟ್ಟಕ್ಕ, ಸುಮಾಳ ಬಾಯಿ ಮುಚ್ಚಿಸಿ ಬಿಡುತ್ತಾಳೆ. ಇನ್ನು ಕಂಠಿಗೆ ಭುವನ್ ಫ್ಯಾಮಿಲಿ ಬಂದು ಹೂ ಮೂಡಿಸುವ ಶಾಸ್ತ್ರ ಎಲ್ಲ ಮಾಡಿ ಹೋಗಿದ್ದನ್ನು ಸುಮಾ ಹೇಳುತ್ತಾಳೆ.

ಕಂಠಿ ಬಳಿ ಸುಮಾ ಆಗಾಗ ಹೇಳುತ್ತ ಇರುತ್ತಾಳೆ, ಅಕ್ಕ ಮನಸಿಲ್ಲದ ಮನಸ್ಸಿನಿಂದ ಈ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ. ಆಕೆಗೆ ಈ ಮದುವೆ ಇಷ್ಟ ಇಲ್ಲ ಎಂದು ಹೇಳುತ್ತಾಳೆ. ಇದಕ್ಕೆಲ್ಲ ಚಂದ್ರು ಬಾವ ಕಾರಣ ಎಂದು ಗೊತ್ತಾದಾಗ ಮಾತ್ರ ಕಂಠಿಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಕೋಪ ಬರುತ್ತದೆ .
ಚಂದ್ರು ಕಾಲರ್ ಪಟ್ಟಿ ಹಿಡಿದ ಕಂಠಿ
ಇನ್ನು ಚಂದ್ರುವನ್ನು ಕೋರ್ಟ್ ಬಳಿಯೇ ಹುಡುಕಿಕೊಂಡು ಹೋದ ಕಂಠಿ ಮಾತ್ರ ಜೋರಾಗಿ ಚಂದ್ರು ಬಾವ ಎಂದು ಕರೆಯುತ್ತಾನೆ. ಕಂಠಿ ಕರೆದ ಸದ್ದಿಗೆ ಇಡೀ ಕೋರ್ಟ್‌ನಲ್ಲಿರುವ ಜನ ಹಿಂದೆ ತಿರುಗಿ ನೋಡುತ್ತಾರೆ. ಇನ್ನು ಕಂಠಿ ತನ್ನ ಬಾವನನ್ನು ಕಂಡ ಕೂಡಲೇ ಅಲ್ಲೇ ಪಕ್ಕಕ್ಕೆ ಕರೆದುಕೊಂಡು ಹೋಗಿ ನನ್ನ ಹಾಗೂ ಸ್ನೇಹಾ ಜೀವನ ಹಾಳು ಮಾಡಲು ಹೊರಟಿದ್ದಿಯಲ್ಲ.ಇದು ನಿನಗೆ ಸರಿ ಕಾಣುತ್ತದಾ? ಅದು ಯಾವನನ್ನೋ ಕರೆದುಕೊಂಡು ಬಂದಿದ್ದಿಯಲ್ಲಾ ಅವನು ಯಾವನೋ ಎಂದು ಜೋರಾಗಿ ಕೇಳಿದಾಗ ಚಂದ್ರು ಕೂಡ ಕೊಂಚ ಜೋರಾಗಿ ಮಾತನಾಡುತ್ತಾನೆ.

ಏಕವಚನದಲ್ಲಿ ಚಂದ್ರು- ಕಂಠಿ ಮಾತು
ಏನೇ ಆಗಿರಲಿ ಆಕೆ ಚೆನ್ನಾಗಿರಲಿ. ಎಂದೆಲ್ಲ ಕೊಂಚ ಜೋರಾಗಿ ಮಾತನಾಡಿದಾಗ ಚಂದ್ರು ಕಾಲರ್ ಹಿಡಿಯುತ್ತಾನೆ. ಆಗ ಚಂದ್ರು ಕಂಠಿ ಕೋಪ ಕಂಡು ಶಾಕ್ ಆಗಿ ಹೋಗುತ್ತಾನೆ. ಇನ್ನು ಪುಟ್ಟಕ್ಕ ಮೆಸ್‌ನಲ್ಲಿ ಗೌಡರಿಗೆ ಊಟ ಬಡಿಸುತ್ತಾರೆ.
ಸ್ನೇಹಾ ಮದುವೆ ಬಗ್ಗೆ ಗೌಡರಿಗೆ ಹೇಳಿದ ಪುಟ್ಟಕ್ಕ
ಈ ವೇಳೆ ಗೌಡರು ಕೇಳುತ್ತಾರೆ, ಏನು ಪುಟ್ಟಕ್ಕ ಸ್ನೇಹಾ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಅಂತೆ ನನಗೆ ಗೊತ್ತಾಯಿತು. ಅದಕ್ಕೆ ಕೇಳಿದೆ ಎಂದಾಗ ಹೂ ಹೌದು.. ಸ್ನೇಹಾ ಮದುವೆಗೆ ಒಪ್ಪಿಕೊಂಡಿದ್ದಾಳೆ. ನಾನು ಆಕೆಗೆ ಮದುವೆ ಇಷ್ಟು ಬೇಗ ಯಾಕೆ ಅಂದುಕೊಂಡು ಇದ್ದೆ. ಆದರೆ ಈಗ ಆಕೆಯೇ ಮದುವೆ ಗೆ ಒಪ್ಪಿಗೆ ಸೂಚಿಸಿದ್ದು ನನಗೆ ಖುಷಿ ನೀಡಿದೆ ಎಂದು ಹೇಳುತ್ತಾಳೆ. ಇದೆಲ್ಲವನ್ನೂ ಕೇಳಿದ ಗೌಡರಿಗೆ ಖುಷಿ ಆಗುತ್ತದೆ. ಅಷ್ಟರಲ್ಲಿ ಸುಮಾ ಅಕ್ಕನನ್ನು ಹುಡುಕಿಕೊಂಡು ಬರುತ್ತಾಳೆ..
ಸ್ನೇಹಾ ಮನೆಯಲ್ಲಿ ಇಲ್ಲ
ಅಮ್ಮನ ಬಳಿ ಸುಮಾ ಕೇಳುತ್ತಾಳೆ, ಅಮ್ಮ ಅಕ್ಕ ಎಲ್ಲಿಯೂ ಕಾಣಿಸುತ್ತಿಲ್ಲ ನನಗೆ ಒಂದು ಡೌಟ್ ಬಂದಿತ್ತು. ಅದನ್ನು ಕೇಳಲು ಎಂದು ಹೋಗಿದ್ದೆ ಆದರೆ ನನಗೆ ರೂಮ್‌ನಲ್ಲಿ ಅಕ್ಕ ಕಾಣಿಸಲಿಲ್ಲ ಎಂದಾಗ ಗಾಬರಿಗೊಂಡ ಪುಟ್ಟಕ್ಕ ಎಲ್ಲೆಡೆ ಹುಡುಕುತ್ತಾಳೆ. ಆದರೆ ಸ್ನೇಹಾ ಮಾತ್ರ ಅಲ್ಲಿ ಎಲ್ಲಿಯೂ ಇರದ್ದನ್ನು ಕಂಡು ಏನಾದರು ಮಾಡಿಕೊಂಡು ಬಿಟ್ಟಳಾ ಹೇಗೆ? ಎನ್ನುವ ಭಯ ಶುರುವಾಗುತ್ತದೆ.
ಸ್ನೇಹಾಗೆ ಏನಾಯ್ತೋ ಎಂದು ಪುಟ್ಟಕ್ಕನಿಗೆ ನಡುಕ ಶುರುವಾಗುತ್ತದೆ. ಇದಕ್ಕೆ ಸರಿಯಾಗಿ ಸುಮಾ ಕೂಡ ಅಮ್ಮನ ಬಳಿ ಅಕ್ಕ ಏನಾದರು ಮಾಡಿಕೊಂಡರೆ? ಎಂದಾಗ ಪುಟ್ಟಕ್ಕ ತನಗೆ ತಾನೇ ಸಮಾಧಾನ ಹೇಳುತ್ತ ಅಲ್ಲಿಂದ ಹೊರ ನಡೆಯುತ್ತಾಳೆ.


Click it and Unblock the Notifications











