For Quick Alerts
  ALLOW NOTIFICATIONS  
  For Daily Alerts

  ತಾರಕಕ್ಕೆ ಏರಿದ ನಂಜವ್ವ-ಬಂಗಾರಮ್ಮನ ಜಗಳ!

  By ಪೂರ್ವ
  |

  'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ದಿನದಿಂದ ದಿನಕ್ಕೆ ಈ ಧಾರಾವಾಹಿ ವೀಕ್ಷಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದೀಗ ಧಾರಾವಾಹಿಯಲ್ಲಿ ಮೇಷ್ಟ್ರ ತಂದೆಗೆ ಪುಟ್ಟಕ್ಕ ಅದೆಷ್ಟು ತಿಳಿ ಹೇಳಿದರು ಮೇಷ್ಟ್ರ ತಂದೆ ಮಾತ್ರ ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾರೆ ಈ ವೇಳೆ ಮೇಷ್ಟ್ರ ತಂದೆ, ಪುಟ್ಟಕ್ಕನ ಮಾತಿಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ ಆಗ ಪುಟ್ಟಕ್ಕ, ನಾನು ಹಾಗೆ ಹೇಳಿದ್ದಲ್ಲ ಇಬ್ಬರ ಜೀವನ ಚೆನ್ನಾಗಿ ಇರಲಿ ಎಂದು ಪರದಾಡುತ್ತಾ ಇದ್ದೇನೆ ಅದಕ್ಕಾಗಿ ನಾನು ಹೇಳಿದೆ'' ಎಂದು ಹೇಳುತ್ತಾಳೆ.

  ಬಳಿಕ ಮೆಸ್ ಬಳಿಗೆ ಕಂಠಿ ಹಾಗೂ ಬಂಗಾರಮ್ಮ ಬರುತ್ತಾರೆ. ಈ ವೇಳೆ ಕಂಠಿ ಹೇಳುತ್ತಾರೆ, ಅಮ್ಮ ನೀವು ಪುಟ್ಟಕ್ಕನ ಮನೆಗೆ ಹೋಗು ನಾನು ಸ್ವಲ್ಪ ಕೆಲಸವನ್ನು ಪೂರ್ಣ ಮಾಡಿ ಬರುತ್ತೇನೆ ಎಂದು ಹೇಳಿದಾಗ ಬಂಗಾರಮ್ಮ ಅಲ್ಲಿಂದ ಪುಟ್ಟಕ್ಕನ ಮನೆಗೆ ತೆರಳುತ್ತಾರೆ. ಇನ್ನು ಪುಟ್ಟಕ್ಕನ ಮನೆಯಲ್ಲಿ ಮದುವೆ ಮಾತುಕತೆ ನಡೆಯುತ್ತಿರುತ್ತದೆ. ಈ ವೇಳೆ ಅಲ್ಲಿಗೆ ಬಂದ ಬಂಗಾರಮ್ಮನನ್ನು ನೋಡಿ ಪುಟ್ಟಕನಿಗೆ ಕೊಂಚ ಶಾಕ್ ಆಗುತ್ತದೆ. ಪುಟ್ಟಕ್ಕ ಬಂಗಾರಮ್ಮನನ್ನು ನೋಡಿ ಅಮ್ಮಾವರೇ ಎಂದು ಹೇಳುತ್ತಾ ಆಹ್ವಾನಿಸುತ್ತಾಳೆ.

  ಬಂಗಾರಮ್ಮನ ಮುಂದೆ ಕ್ಯಾತೆ ತೆಗೆದ ಮೇಷ್ಟ್ರ ತಂದೆ

  ಬಂಗಾರಮ್ಮನ ಮುಂದೆ ಕ್ಯಾತೆ ತೆಗೆದ ಮೇಷ್ಟ್ರ ತಂದೆ

  ಇದನ್ನು ನೋಡಿದ ಮೇಷ್ಟ್ರ ಕಡೆಯವರು ಯಾರೆಂದು ತಿಳಿಯದೇ ಸುಮ್ಮನೆ ಕುಳಿತಿರುತ್ತಾರೆ. ಈ ವೇಳೆ ಪುಟ್ಟಕ್ಕ ಕೇಳುತ್ತಾಳೆ, ನಿಮ್ಮ ಮನೆಯಲ್ಲಿ ನಿಶ್ಚಿತಾರ್ಥ ಇದ್ದರೂ ಇಲ್ಲಿಗೆ ಬಂದ್ರಾ ಎಂದು ಕೇಳಿದಾಗ ಬಂಗಾರಮ್ಮ, ನಮ್ಮ ಮನೆಯಲ್ಲಿ ನಿಶ್ಚಿತಾರ್ಥ ನಿಂತು ಹೋಯಿತು ಆದ ಕಾರಣ ನಾನು ಇಲ್ಲಿ ಬಂದೆ ಎಂದು ಹೇಳುತ್ತಾಳೆ. ಇನ್ನು ಬಂಗಾರಮ್ಮ ಇರುವ ವೇಳೆ ಮತ್ತೆ ಕ್ಯಾತೆ ತೆಗೆದ ಮೇಷ್ಟ್ರ ತಂದೆ ಈ ಮದುವೆ ನನಗೆ ಕೊಂಚ ಕೂಡ ಇಷ್ಟ ಇಲ್ಲ. ನನಗೆ ಈ ಮದುವೆಗೆ ಸ್ವಲ್ಪ ಕೂಡ ಒಪ್ಪಿಗೆ ಇಲ್ಲ'' ಎಂದು ಹೇಳುತ್ತಾರೆ.

  ಮೇಷ್ಟ್ರ ತಂದೆ ಮೇಲೆ ಬಂಗಾರಮ್ಮ ಗರಂ

  ಮೇಷ್ಟ್ರ ತಂದೆ ಮೇಲೆ ಬಂಗಾರಮ್ಮ ಗರಂ

  ಇದನ್ನು ಕೇಳಿದ ಬಂಗಾರಮ್ಮ ಕೋಪದಿಂದ ನಿಮ್ಮ ಮಗ ಈಕೆಯನ್ನು ಪ್ರೀತಿ ಮಾಡಿದ್ದಾನೆ ಮದುವೆ ಆಗಲೇ ಬೇಕು ಎಂದು ಎಂದಾಗ ಮೇಷ್ಟ್ರ ತಂದೆ ಕೊಂಚ ಬೆದರಿ ಇನ್ನೂ ಈಕೆ ಬಳಿ ಮಾತನಾಡಿದರೆ ಆಗುವುದಿಲ್ಲ ಎಂದು ಹೇಳಿ ಕೊಂಚ ಸಮಯ ಬೇಕು ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಇನ್ನು ಮೇಷ್ಟ್ರು ಮಾತ್ರ ಸಹನಾಳನ್ನು ನೋಡಿ ಆರಾಮವಾಗಿ ಇರು ಬೇಸರ ಮಾಡಿಕೊಳ್ಳಬೇಡ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳುತ್ತಾನೆ. ಸ್ನೇಹಾ ಹಾಗೂ ಕಂಠಿ ಮಾತನಾಡುತ್ತಾ ಇರುವ ವೇಳೆ ನಂಜವ್ವ ಬರುತ್ತಾಳೆ. ಇದನ್ನು ನೋಡಿದ ಕಂಠಿ ಮೆತ್ತಗೆ ಅಲ್ಲಿಂದ ಕಾಲ್ಕೀಳುತ್ತಾನೆ. ಪುಟ್ಟಕ್ಕನ ಮನೆಗೆ ನಂಜವ್ವ ಬೇರೆ ಬರುತ್ತಾಳೆ.

  ನಂಜವ್ವಳನ್ನು ನೋಡಿ ಬಂಗಾರಮ್ಮ ಕಿಡಿ

  ನಂಜವ್ವಳನ್ನು ನೋಡಿ ಬಂಗಾರಮ್ಮ ಕಿಡಿ

  ನಂಜವ್ವಳನ್ನು ನೋಡಿ ಬಂಗಾರಮ್ಮ ಕಿಡಿಕಾರುತ್ತಾರೆ. ಕಂಠಿ ಗೆ ಫುಲ್ ಟೆನ್ಶನ್ ಅಲ್ಲಿ ಅಮ್ಮ ಒಬ್ಬರೇ ನನಗೆ ಹೋಗಲು ಆಗುತ್ತಿಲ್ಲ. ನಂಜವ್ವನ ಜೊತೆ ಸ್ನೇಹ ಬೇರೆ ಇದ್ದಾಳೆ. ಈಗ ನಾನೇ ಪುಟ್ಟಕ್ಕನ ಮಗ ಎಂದು ಗೊತ್ತಾದರೆ ಅವ್ವ ಯಾವತ್ತೂ ಈ ಮನೆಗೆ ಬರುವುದಿಲ್ಲ ಎಂದು ಕಾಣುತ್ತದೆ. ಬಹಳ ಭಯ ಆಗುತ್ತಿದೆ ಎಂದು ತನ್ನ ಕಷ್ಟವನ್ನು ಗೆಳೆಯರ ಬಳಿ ತೋಡಿಕೊಳ್ಳುತ್ತಾನೆ. ಇತ್ತ ಪುಟ್ಟಕ್ಕನ ಬಳಿ ಬಂಗಾರಮ್ಮ ಕೂಡ ಬೇಸರ ಮಾಡಿಕೊಳ್ಳುತ್ತಾಳೆ. ನೀನು ತಪ್ಪು ಮಾಡಿದೆ ಪುಟ್ಟಕ್ಕ ಎಂದಾಗ ನಂಜವ್ವ ಕಾಲ್ಕೇರೆದುಕೊಂಡು ಜಗಳಕ್ಕೆ ಬರುತ್ತಾಳೆ.

  ಬಂಗಾರಮ್ಮನ ಕೋಪ ಮಿತಿ ಮೀರುತ್ತದೆ

  ಬಂಗಾರಮ್ಮನ ಕೋಪ ಮಿತಿ ಮೀರುತ್ತದೆ

  ಈ ವೇಳೆ ಬಂಗಾರಮ್ಮನಿಗೆ ಕರೆ ಮಾಡಿದ ಕೋದಂಡನ ಬಳಿ ಕೋಪದಿಂದ ನಾನು ಪುಟ್ಟಕ್ಕನ ಮನೆಯಲ್ಲಿ ಇದ್ದೇನೆ ಅದು ಏನೇ ಇದ್ದರೂ ಮಾತಾಡು ಎಂದು ಹೇಳಿದಾಗ ಕೋದಂಡ ಅಮ್ಮವರೆ ವಸು ಅಮ್ಮವರಿಗೆ ನಿಮ್ಮ ಬೀಗರು ಡೈವರ್ಸ್ ನೋಟಿಸ್ ಕಳಿಸಿದ್ದಾರೆ. ಅದನ್ನು ನೋಡಿದ ಅಮ್ಮವರು ಆಗಲಿಂದ ಅಳುತ್ತಾ ಇದ್ದಾರೆ. ಕೋಣೆ ಒಳಗಿನಿಂದ ಈಚೆ ಬರುತ್ತಾನೆ ಇಲ್ಲ. ಎಷ್ಟು ಕರೆದರೂ ಮಾತು ಕೂಡ ಆಡುತ್ತಿಲ್ಲ ಎಂದು ಹೇಳಿದಾಗ ಬಂಗಾರಮ್ಮಗೆ ಇನ್ನೂ ಟೆನ್ಶನ್ ಹೆಚ್ಚಾಗುತ್ತದೆ. ಇನ್ನೂ ನಂಜವ್ವ ಬೇರೆ ಅಲ್ಲೇ ಇರುವುದರಿಂದ ಬಂಗಾರಮ್ಮಗೆ ಇನ್ನೂ ಕೋಪ ಹೆಚ್ಚಾಗುತ್ತದೆ. ಬಳಿಕ ಇಬ್ಬರೂ ಜಗಳ ಮಾಡತೊಡಗುತ್ತಾರೆ. ಪುಟ್ಟಕ್ಕನಿಗೆ ಅವರಿಬ್ಬರನ್ನು ಸಂಭಾಳಿಸುವಷ್ಟರಲ್ಲಿ ಸುಸ್ತಾಗಿ ಹೋಗುತ್ತದೆ.

  English summary
  Kannada serial Puttakkana Makkalu written updated on 26 th October episode. Know more about it.
  Thursday, October 27, 2022, 17:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X