ಸಹನಾಗೆ ಮೇಷ್ಟ್ರ ಮೇಲೆ ಪ್ರೀತಿ: ಆದರೆ ಪುಟ್ಟಕ್ಕನ ಯೋಚನೆಯೇ ಬೇರೆ!

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಇದೀಗ ಪುಟ್ಟಕ್ಕನ ದೊಡ್ಡ ಮಗಳು ಸಹನಾ ಮದುವೆ ಮಾತುಕತೆ ಬಾರ್ ವಿಚಾರದ ಗಲಾಟೆಯಿಂದ ನಿಂತು ಹೋಗಿತ್ತು. ಆದರೆ ಇದೀಗ ವಾಪಸ್ ಮದುವೆ ವಿಚಾರ ಮುಂದೆ ಬಂದಿದೆ. ಸಹನಾ ಲವ್ ಸ್ಟೋರಿ ಮನೆಯಲ್ಲಿ ಸುಮಾನಿಗೆ ಬಿಟ್ಟು ಮಿಕ್ಕವರಿಗೆ ಯಾರಿಗೂ ತಿಳಿದಿಲ್ಲ. ಅಮ್ಮನಿಗೆ ಯಾವ ವಿಚಾರದಲ್ಲಿ ಸುಳ್ಳು ಹೇಳದ ಸಹನಾ ಮುರಳಿ ಮೇಷ್ಟ್ರ ವಿಚಾರದಲ್ಲಿ ಸುಳ್ಳು ಗಳನ್ನೆ ಹೇಳುತ್ತಾ ಬಂದಿದ್ದಾರೆ.

ಪುಟ್ಟಕ್ಕ ಹಾಗೂ ಸ್ನೇಹಾ ಮಾತನಾಡುತ್ತಾ ಕುಳಿತಿರಬೇಕಾದರೆ ಪುಟ್ಟಕ್ಕನಿಗೆ ಒಂದು ಕರೆ ಬರುತ್ತದೆ. ಪುಟ್ಟಕ್ಕ ಆ ಕರೆಯನ್ನು ಸ್ವೀಕರಿಸುತ್ತಾರೆ, ಅತ್ತ ಕಡೆಯಿಂದ ನಮಸ್ಕಾರ ಪುಟ್ಟಕ್ಕನವರೆ ನಾನು ಚಂದ್ರಕಲಾ ಮಾತನಾಡುತ್ತಾ ಇರುವುದು ಎನ್ನುತ್ತದೆ ಧ್ವನಿ. ಯಾರು ಎಂದು ಗೊತ್ತಾಗದೆ ಪುಟ್ಟಕ್ಕ ಯಾರು ಎಂದು ಕೇಳುತ್ತಾಳೆ. ಅದೇ ನಿಮ್ಮ ದೊಡ್ಡ ಮಗಳನ್ನು ನೋಡಲು ಬಂದಿದ್ದೆವು ಅಲ್ವಾ ಎಂದಾಗ ಪುಟ್ಟಕ್ಕ ಹೊ ನೀವಾ ಎಂದು ಹೇಳುತ್ತಾರೆ. ಆ ವೇಳೆ ಪುಟ್ಟಕ್ಕ ಮೆತ್ತಗೆ ಸ್ನೇಹಾ ಬಳಿ ಹೇಳುತ್ತಾರೆ ಸಹನಾ ನೋಡಕ್ಕೆ ಬಂದಿದ್ದಾರೆ ಅಲ್ವಾ ಗಂಡಿನ ಕಡೆಯವರು ಫೋನ್ ಮಾಡಿದ್ದಾರೆ ಎನ್ನುತ್ತಾಳೆ. ಆ ವೇಳೆ ಚಂದ್ರಕಲಾ ಇವರೆನಪ್ಪ ಮತ್ತೆ ಫೋನ್ ಮಾಡಿದ್ದಾರೆ ಅಂದು ಕೊಳ್ಳಬೇಡಿ ತುಂಬಾ ದಿನದಿಂದ ಫೋನ್ ಮಾಡಬೇಕು ಅಂತ ಅಂದುಕೊಂಡು ಇದ್ದೆವು. ಆ ಘಟನೆಗಳು ನಡೆದ ಮೇಲೆ ಹೇಗೆ ಫೋನ್ ಮಾಡುವುದು ಎಂದು ಯೋಚನೆ ಮಾಡುತ್ತಿದ್ದೆ ಎನ್ನುತ್ತಾರೆ.

ಮನೆಗೆ ಮಾತು ಕತೆಗೆ ಬರಲು ಹೇಳಿದ ಪುಟ್ಟಕ್ಕ

ಮನೆಗೆ ಮಾತು ಕತೆಗೆ ಬರಲು ಹೇಳಿದ ಪುಟ್ಟಕ್ಕ

ಪುಟ್ಟಕ್ಕ ಗೆ ಒಂದು ತಿಳಿಯುವುದಿಲ್ಲ ಆಗ ಹೇಳುತ್ತಾಳೆ ಈಗ ನೀವು ಯಾವ ವಿಚಾರಕ್ಕೆ ಕರೆ ಮಾಡಿದ್ದೀರಿ ಎಂದು ಕೇಳುತ್ತಾರೆ. 'ಮದುವೆ ಮಾತು ಕತೆ ಬಗ್ಗೆ ಮಾತನಾಡಲು ಕರೆ ಮಾಡಿದ್ದೇವೆ. ಎಂದಾಗ ಪುಟ್ಟಕ್ಕನಿಗೆ ಸಂತೋಷ ಆಗುತ್ತದೆ. ಆವತ್ತು ನಡೆದ ವಿಚಾರದಿಂದ ಊರಿನವರು ತುಂಬಾ ಹೊಗಳುತ್ತಿದ್ದರು ನಿಮ್ಮಂತವರ ಸಂಬಂಧ ಬೇಡ ಎಂದರೆ ಹೇಗೆ ಪುಟ್ಟಕ್ಕ ಅದಕ್ಕೆ ಮತ್ತೆ ಸಂಬಂಧ ಕುದುರಿಸುವ ಎಂದು ಕರೆ ಮಾಡಿದೆ ಎಂದು ಹೇಳುತ್ತಾರೆ. ಮತ್ತೆ ಮಾತು ಕತೆಗೆ ನಾವು ಬರಬಹುದೇ ಎಂದು ಕೇಳಿದಾಗ ಪುಟ್ಟಕ್ಕನಿಗೆ ಬಹಳ ಖುಷಿ ಆಗುತ್ತದೆ. ಖುಷಿಯಿಂದ ಪುಟ್ಟಕ್ಕ ಖಂಡಿತ ಬನ್ನಿ. ನಿಮ್ಮಂತವರ ಸಂಬಂಧ ಕೈ ಬಿಟ್ಟು ಹೋಗಿದ್ದಕ್ಕೆ ಬಾರಿ ಬೇಸರ ಆಗಿತ್ತು ಈಗ ನೋಡಿ ದೇವರು ದೊಡ್ಡವನು ಎಂದು ಖುಷಿಯಿಂದ ಹೇಳುತ್ತಾಳೆ. ಈ ವೇಳೆ ಹುಡುಗನ ತಾಯಿ ಬಹಳ ಖುಷಿ ಪಡುತ್ತಾರೆ.

ಸ್ನೇಹಾಳ ಬಳಿ ಖುಷಿ ಹಂಚಿಕೊಂಡ ಪುಟ್ಟಕ್ಕ

ಸ್ನೇಹಾಳ ಬಳಿ ಖುಷಿ ಹಂಚಿಕೊಂಡ ಪುಟ್ಟಕ್ಕ

ಬಳಿಕ ಕರೆ ಕಟ್ ಮಾಡಿ ಸ್ನೇಹಾನಾ ಬಳಿ, ನೋಡಿದೆಯಾ ಸ್ನೇಹಾ ಅವರಾಗಿಯೇ ಮನೆಗೆ ಬರುತ್ತೇನೆ ಎಂದರು ಎಂದಾಗ ಸ್ನೇಹಾ ಹೇಳುತ್ತಾಳೆ ಅಕ್ಕನ ಒಳ್ಳೆತನ ಇದಕ್ಕೆ ನಿದರ್ಶನ. ಅಕ್ಕನಿಗೆ ಆ ಹುಡುಗ ಬಹಳ ಇಷ್ಟ ಆಗಿದ್ದ. ಅಕ್ಕನಿಗೆ ಹೇಳದೆ ಸರ್ಪ್ರೈಸ್ ಕೊಡೋಣ ಅವಳಿಗೆ ಖುಷಿ ಆಗುತ್ತದೆ ಎಂದು ಹೇಳುತ್ತಾಳೆ ಸ್ನೇಃಆ. ಇತ್ತ ಸಹನಾಗೆ ದಿನವಿಡೀ ಒಂದೇ ಧ್ಯಾನ. ಮುರಳಿ ಮೇಷ್ಟ್ರು ಕೊಟ್ಟ ವಾಚ್ ಅನ್ನು ಭಾರಿ ಭಾರಿ ನೋಡುತ್ತಿರುತ್ತಾಳೆ. ವಾಚ್ ನೋಡಿ ಕಿಸಕ್ ಎಂದು ನಗುತ್ತಿದ್ದಳು. ಒಬ್ಬೊಬ್ಬರೇ ಮಾತನಾಡುತ್ತಾ ಇರುತ್ತಾಳೆ.

ವಾಚ್ ನೋಡಿ ಖುಷಿ ಪಡುವ ಸಹನಾ

ವಾಚ್ ನೋಡಿ ಖುಷಿ ಪಡುವ ಸಹನಾ

ವಾಚ್ ಇರುವ ಹಾಗೆ ಮದುವೆ ಆದ ಬಳಿಕ ಮೇಷ್ಟ್ರು ಕೂಡ ನನ್ನ ಬಳಿ ಇರುತ್ತಾರೆ ಎಂಬ ಧೈರ್ಯ ಆಕೆಗೆ ಹೇಗಾದರೂ ಮಾಡಿ ಮದುವೆ ಆದರೆ ಮತ್ತೆ ಸಮಸ್ಯೆ ಇಲ್ಲ. ಮೇಷ್ಟ್ರು ನಾನು ಜೀವನ ಇಡೀ ಇರಬಹುದು ಎಂದೆಲ್ಲ ಯೋಚನೆ ಮಾಡುತ್ತಾಳೆ. ಅಕ್ಕ ನಗುತ್ತಿರುವ ದೃಶ್ಯವನ್ನು ಸುಮಾ ಮಂಚದ ಮೇಲಿಂದ ನೋಡುತ್ತಾಳೆ ಬಳಿಕ ಏನನ್ನೋ ಅಡಗಿಸುತ್ತಾಳೆ ಅದೇನು ಎಂದು ಗೊತ್ತಾಗುವುದಿಲ್ಲ. ಸುಮಾ ಅಕ್ಕನ ಪಕ್ಕಾ ಬರುತ್ತಾಳೆ ಸೂಮಾಳನ್ನು ನೋಡಿ ಸಹನಾ ಕಾಕ್ಕಾ ಬಿಕ್ಕಿ ಆಗುತ್ತಾಳೆ. ಭಯ ಗೊಳ್ಳುತ್ತಾ ಇರುತ್ತಾಳೆ. ಆಗ ಹೇಳುತ್ತಾಳೆ ಸುಮಾ ಎನು ಅಕ್ಕ ನಾಗುತ್ತಿದ್ದಿಯಾ ಎಂದಾಗ ಏನಿಲ್ಲ ಎನ್ನುತ್ತಾಳೆ.

ಸಹನಾಳಿಗೆ ಬುದ್ದಿ ಮಾತು ಹೇಳಿದ ತಂಗಿ

ಸಹನಾಳಿಗೆ ಬುದ್ದಿ ಮಾತು ಹೇಳಿದ ತಂಗಿ

ಬಳಿಕ ಸಹನಾಗೆ ಒಂದು ಅಡ್ವೈಸ್ ಕೊಡುತ್ತಾಳೆ ಅಕ್ಕ ಆದಷ್ಟು ಬೇಗ ಮೇಷ್ಟ್ರು ಬಳಿ ತಾಂಬೂಲ ತರಲು ಹೇಳು ಆದಷ್ಟು ಬೇಗ ಅಮ್ಮನ ಬಳಿ ಮಾತನಾಡಿ ಇಲ್ಲವಾದರೆ ನಿನಿಗೆ ಬೇರೆ ಮದುವೆ ಮಾಡಲು ನಿರ್ಧಾರ ಮಾಡುತ್ತಾರೆ ಆ ಮೇಲೆ ಬಹಳ ಕಷ್ಟ ಎದುರಿಸಬೇಕಾಗುತ್ತದೆ. ಇನ್ನೂ ನಿನ್ನ ಇಷ್ಟ ಎಂದು ಹೇಳುತ್ತಾಳೆ ಬಳಿಕ ಮಲಗುತ್ತಾಳೆ. ಮುಂದೇನು ಎಂಬುವುದನ್ನು ಕಾದುನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 26th September Episode. Know more about that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X