Puttakkana Makkalu: ಅಪಾಯದಲ್ಲಿ ಸ್ನೇಹಾ-ಕಂಠಿ: ಬಂಗಾರಮ್ಮನ ಬಳಿ ನಿಜ ಹೇಳ್ತಾಳಾ ಪುಟ್ಟಕ್ಕ?

By Poorva

ಬಂಗಾರಮ್ಮನ ಬಳಿ ಬಂದ ಚಂದ್ರು ಆಗುತ್ತಿರುವ ಅನಾಹುತವನ್ನು ಆದಷ್ಟು ಬೇಗ ತಪ್ಪಿಸಲು ತುಂಬಾ ಸಲ ಪ್ರಯತ್ನ ಮಾಡುತ್ತಾನೆ. ಆದರೆ ನಂಜಮ್ಮ ಹಾಗೆ ಹೇಳಿದಳು, ನನ್ನ ಮನೆಯ ಸಂಸಾರ ಒಡೆಯುತ್ತಾಳಂತೆ, ಅದು ಹೇಗೆ ಆಕೆಯ ಸಂಸಾರ ಒಡೆದು ಹಾಕ್ತಾಳೆ ಅನ್ನೋದನ್ನು ನಾನು ನೋಡಬೇಕು ಎಂದೆಲ್ಲ ಹೇಳುತ್ತಾಳೆ. ಆದರೆ ಬಂಗಾರಮ್ಮ, ಚಂದ್ರು ಬಳಿ ಒಂದೇ ಒಂದು ಪ್ರಶ್ನೆ ಕೇಳುತ್ತಾರೆ.

ಸ್ನೇಹಾ ಅಂದರೆ ಯಾರು? ಆಕೆಗೂ ನಿನಗೂ ಎನು ಸಂಬಂಧ ಎಂದು ಕೇಳಿದಾಗ ಚಂದ್ರು ಸುಮ್ಮನೆ ಇರುತ್ತಾನೆ. ಈ ವೇಳೆ ಏನಾದರು ಚಂದ್ರು ಆಕೆ ಪುಟ್ಟಕ್ಕನ ಮಗಳು, ನನ್ನ ತಾಯಿಯ ಕಡೆಯವಳು ಅಲ್ಲ ಎಂದು ಹೇಳಿದ್ದರೆ ಆಗುತ್ತಿರುವ ಅನಾಹುತ ಮಾತ್ರ ತಪ್ಪಿ ಹೋಗುತ್ತಿತ್ತು.

Puttakkana Makkalu: ಅಪಾಯದಲ್ಲಿ ಸ್ನೇಹಾ-ಕಂಠಿ: ಬಂಗಾರಮ್ಮನ ಬಳಿ ನಿಜ ಹೇಳ್ತಾಳಾ ಪುಟ್ಟಕ್ಕ?

ಚಂದ್ರು ಮಾತಿಗೆ ಬೆಲೆ ಕೊಡದ ಬಂಗಾರಮ್ಮ

ಇದೀಗ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಯಾಕೆಂದರೆ ಇದೇ ವೇಳೆ ಬಂಗಾರಮ್ಮಗೆ ರಾಜೀ ಕರೆ ಮಾಡುತ್ತಾಳೆ. ಆದರೆ ಬಂಗಾರಮ್ಮಗೆ ಮಾತ್ರ ರಾಜೀ ಯಾಕೆ ಕರೆ ಮಾಡುತ್ತಾ ಇದ್ದಾಳೆ ಅನ್ನೋದು ಗೊತ್ತಾಗಲ್ಲ. ಇನ್ನು ರಾಜೀ ಮಾತ್ರ ಸ್ನೇಹಾಳ ಮೇಲೆ ಆಪಾದನೆ ಹೋರಿಸುತ್ತಾಳೆ. ಬಂಗಾರಮ್ಮನವರೆ ನಾನು ಹೇಳುತ್ತ ಇರುವುದು ನಿಜ ನಿಮ್ಮ ಮಗ ಹಾಗೂ ಆತನ ಜೊತೆಗೆ ಇರುವ ಹುಡುಗಿ ಹುಬ್ಬಳ್ಳಿಗೆ ಹೋಗುತ್ತಾ ಇದ್ದಾಳೆ. ಹುಬ್ಬಳ್ಳಿಗೆ ಹೋಗುವ ಮಧ್ಯೆದಲ್ಲಿ ನಿಮ್ಮ ಮಗನನ್ನು ಮುಗಿಸಲು ಆಕೆ ಪ್ಲಾನ್ ಮಾಡಿಕೊಂಡು ಇದ್ದಾಳೆ ಎಂದು ಹೇಳಿ ಫೋನ್ ಇಡುತ್ತಾಳೆ.

ಭೈರನಿಗೆ ಕರೆ ಮಾಡಿದ ಕಂಠಿ ತಾಯಿ

ಇನ್ನು ಬಂಗಾರಮ್ಮಗೆ ಭಯ ಆಗಿ ಆ ಕೂಡಲೇ ಭೈರನಿಗೆ ಕರೆ ಮಾಡಿ ಹೇಳುತ್ತಾಳೆ. ಹೇಗಾದರೂ ಮಾಡಿ ನನ್ನ ಮಗನ ಜೊತೆ ಇರುವ ಹುಡುಗಿಯನ್ನು ಎತ್ತಾಕಿಕೊಂಡು ಬನ್ನಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಭೈರ, ಸ್ನೇಹಾ ಮುಖದ ಮೇಲೆ ಕರ್ಚೀಫ್ ಇಟ್ಟು ಪ್ರಜ್ಞೆ ತಪ್ಪಿಸುತ್ತಾನೆ. ಆ ಬಳಿಕ ಆಕೆಯನ್ನು ಅಲ್ಲೇ ಕೂರಿಸಿ ಹೋಗುತ್ತಾರೆ. ಕಂಠಿ ರೌಡಿಗಳಿಂದ ತಪ್ಪಿಸಿಕೊಂಡು ಸ್ನೇಹಾಳನ್ನೂ ಹುಡುಕುತ್ತಾನೆ.

ಸ್ನೇಹಾ ಸ್ಥಿತಿ ನೋಡಿ ಕಂಠಿಗೆ ಬೇಸರ

ಸ್ನೇಹಾ ಮಾತ್ರ ಒಂದು ಮೂಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡು ಆಕೆಯ ಬಳಿ ಹೋಗುತ್ತಾನೆ. ಆ ವೇಳೆ ರೌಡಿಗಳು ಬಂದು ಆತನಿಗೆ ಹೊಡೆಯುತ್ತಾರೆ. ಆದರೆ ಕಂಠಿ ಅದೆಷ್ಟೇ ಪ್ರಯತ್ನಿಸಿದರು ಸ್ನೇಹಾಳ ಸ್ಥಿತಿ ಕಂಡು ಕಂಠಿಗೆ ಏನು ಮಾಡಬೇಕು ಎಂದು ತಿಳಿಯದೇ ಆಗುತ್ತದೆ.

Puttakkana Makkalu: ಅಪಾಯದಲ್ಲಿ ಸ್ನೇಹಾ-ಕಂಠಿ: ಬಂಗಾರಮ್ಮನ ಬಳಿ ನಿಜ ಹೇಳ್ತಾಳಾ ಪುಟ್ಟಕ್ಕ?

ಭಯದಲ್ಲಿ ಇರುವ ಪುಟ್ಟಕ್ಕ

ಇನ್ನೂ ಚಂದ್ರು, ಪುಟ್ಟಕ್ಕಗೆ ಕರೆ ಮಾಡಿ ನಿಮ್ಮ ಮಗಳು ಅಪಾಯದಲ್ಲಿ ಇದ್ದಾಳೆ. ನೀವು ಬಂಗಾರಮ್ಮಗೆ ಕರೆ ಮಾಡಿ ನಿಜ ವಿಚಾರ ಹೇಳಿ ಎಂದು ಫೋನ್ ಇಡುತ್ತಾನೆ. ಇದನ್ನು ಕೇಳಿ ಪುಟ್ಟಕ್ಕ ಶಾಕ್ ಆಗುತ್ತದೆ. ಆತಂಕದಿಂದಲೇ ಬಂಗಾರಮ್ಮಗೆ ಕರೆ ಮಾಡಿದಾಗ ಅತ್ತ ಕಡೆಯಿಂದ ಮನೆಗೆ ಬರುತ್ತೇನೆ ಎಂದು ಹೇಳುತ್ತಾಳೆ.

More from Filmibeat

English summary
Kannada serial puttakkana makkalu written updated on 27th April. here is details about Chandru calls Puttakka and tells her that Sneha is in danger. know morw.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X