ಪುಟ್ಟಕ್ಕನ ಮನೆಗೆ ಬಾಂಬ್ ಇಡಿಸಿದ ರಾಜಿ! ಮುಂದೇನಾಗುತ್ತೆ?

By ಪೂರ್ವ

ಪುಟ್ಟಕ್ಕ ಶಾಂತಿ ಪ್ರಿಯಳು ಆದರೆ ಈಗ ಆಕೆಯ ಮನೆಯಲ್ಲಿ ಜಗಳ ನಡೆಯುತ್ತಿದೆ. ಇದು ಪುಟ್ಟಕ್ಕನಿಗೆ ಸಹ್ಯವಲ್ಲ. ಇತ್ತ ಬಹಳ ಬೇಸರದಿಂದ ಹೊರಟ ಬಂಗಾರಮ್ಮ ತನ್ನ ಮಗಳು ಎಷ್ಟು ದುಃಖ ಅನುಭವಿಸುತ್ತಾ ಇದ್ದಾಳೋ ಪಾಪ ಎಂದು ನೊಂದುಕೊಳ್ಳುತ್ತಾರೆ. ದೀಪಾವಳಿ ಹಬ್ಬ ಇದ್ದರೂ ಸುಮಾ ಮತ್ತು ತಂಡಕ್ಕೆ ಖೋ ಖೋ ತರಬೇತಿ ಮಾತ್ರ ನಿಂತಿಲ್ಲ.

ತರಬೇತಿ ನೀಡುತ್ತಿರುವ ಪುಟ್ಟಕ್ಕ, ಆಟಗಾರ್ತಿಯರನ್ನು ಗ್ರೌಂಡ್ ಸುತ್ತ ಓಡಿಸುತ್ತಾರೆ. ಮಕ್ಕಳಿಗೆ ಎಷ್ಟೇ ಸುಸ್ತು ಆದರೂ ಪುಟ್ಟಕ್ಕ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ ಯಾಕೆಂದರೆ ಪುಟ್ಟಕ್ಕನಿಗೆ ಆಟ ಗೆಲ್ಲುವುದು ಮುಖ್ಯ. ಅದಕ್ಕಾಗಿ ಮಕ್ಕಳು ಶ್ರಮ ವಹಿಸಲೇಬೇಕು ಎಂಬ ಯೋಚನೆ ಆಕೆಯದ್ದು. ಇನ್ನು ಒಂದು ಮನೆ ಬಳಿ ಕರೆದುಕೊಂಡು ಬಂದ ಪುಟ್ಟಕ್ಕ ಮಕ್ಕಳಿಗೆ ಎಲ್ಲರಿಗೂ ಕೈ ಹಾಗೂ ಕಣ್ಣಿಗೆ ಪಟ್ಟಿ ಕಟ್ಟುತ್ತಾರೆ. ಮಕ್ಕಳಿಗೆಲ್ಲ ವಿಚಿತ್ರ ಎನ್ನಿಸುತ್ತದೆ ಯಾಕೆ ಕಣ್ಣಿಗೆ ಪಟ್ಟಿ ಕಟ್ಟುತ್ತಿದ್ದಾರೆ ಎಂದು ತಿಳಿಯದೇ ಅಮ್ಮ ಇದ್ಯಾಕೆ ಪಟ್ಟಿ ಕಟ್ಟುತ್ತಾ ಇದ್ದೀರಾ ಏನಾದ್ರು ಆಟ ಆಡಿಸುತ್ತಾ ಇದ್ದೀಯಾ ಎಂದಾಗ ಪುಟ್ಟಕ್ಕ ಹೇಳುತ್ತಾರೆ. ಹೂ ಇದೊಂದು ಹೊಸ ಆಟ ಎಂದು ಹೇಳಿ ಅಲ್ಲಿಂದ ಮಕ್ಕಳನ್ನು ಮನೆಯ ಒಳಗೆ ಕಳುಹಿಸುತ್ತಾಳೆ. ಬಳಿಕ ಮಕ್ಕಳನ್ನು ಮನೆಯ ಒಳಗೆ ಬಿಟ್ಟು ಹೇಳುತ್ತಾಳೆ ಇಲ್ಲಿ ನೀವು ಎರಡು ನಿಮಿಷ ಇರಬೇಕು. ನಿಮ್ಮ ಒಟ್ಟಿಗೆ ಹಾವು ಚೇಳು ಎಲ್ಲಾ ಇರುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಕ್ಕಳು ಭಯಪಟ್ಟು ಜೋರಾಗಿ ಕಿರುಚುತ್ತಾರೆ.

ಮಕ್ಕಳಿಗೆ ಧೈರ್ಯ ತುಂಬಿದ ಪುಟ್ಟಕ್ಕ

ಮಕ್ಕಳಿಗೆ ಧೈರ್ಯ ತುಂಬಿದ ಪುಟ್ಟಕ್ಕ

ಪುಟ್ಟಕ್ಕ ಮಾತ್ರ ಬಾಗಿಲನ್ನು ಹಾಕಿಕೊಳ್ಳುತ್ತಾರೆ. ಮಕ್ಕಳು ಎಷ್ಟೇ ಜೋರು ಅರಚಾಡಿದರು ಪುಟ್ಟಕ್ಕ ಮಾತ್ರ ಬಾಗಿಲು ತೆರೆಯುವುದಿಲ್ಲ. ಬಳಿಕ ಎರಡು ನಿಮಿಷ ಬಿಟ್ಟು ಬಾಗಿಲು ತೆಗೆದು ಮಕ್ಕಳನ್ನು ಹೊರಗೆ ಕರೆದುಕೊಂಡು ಬಂದು ಕಣ್ಣಿಗೆ ಕೈ ಗೆ ಹಾಕಿದ ಕಟ್ಟನ್ನು ಬಿಚ್ಚುತ್ತಾ ಇರುತ್ತಾಳೆ.. ಇನ್ನೂ ಮಕ್ಕಳಿಗೆ ಸಮಾಧಾನ ಹೇಳಿದ ಪುಟ್ಟಕ್ಕ ಹೇಳುತ್ತಾರೆ.

ಪಾಠ ಕಲಿಸುವ ಪುಟ್ಟಕ್ಕ

ಪಾಠ ಕಲಿಸುವ ಪುಟ್ಟಕ್ಕ

ಆಟ ಎಂದರೆ ಸೋಲು ಗೆಲುವು ಇದ್ದದ್ದೇ.. ನೀವು ಈ ಆಟದಲ್ಲಿ ಗೆದ್ದು ಗೆಲ್ಲಲು ದೈರ್ಯ ಮುಖ್ಯ ಧೈರ್ಯ ಇಲ್ಲದೆ ಇದ್ದರೆ ನಿಮ್ಮಿಂದ ಏನು ಮಾಡಲು ಕೂಡ ಸಾಧ್ಯ ಇಲ್ಲ, ಎಂದು ಮಕ್ಕಳಿಗೆ ಹೇಳುತ್ತಾಳೆ. ಬಳಿಕ ಮನೆಗೆ ಬಂದ ಪುಟ್ಟಕ್ಕನ ಬಳಿ ಸುಮಾ ಪಟಾಕಿ ಬೇಕೆಂದು ಹಠ ಹಿಡಿಯುತ್ತಾಳೆ. ಇದನ್ನು ನೋಡಿದ ಸ್ನೇಹಾ ಗೆ ಸಿಟ್ಟು ಬರುತ್ತದೆ. ಪಟಾಕಿ ಹೊಡೆಯಬಾರದು ಒಳ್ಳೆಯದಲ್ಲ ಎಂದು ಹೇಳಿದರು ಕೇಳದೆ ಅಮ್ಮನ ಬಳಿ ಬಲವಂತವಾಗಿ ಪಟಾಕಿ ತರಲು ಹೇಳುತ್ತಾಳೆ. ಇನ್ನು ರಾಜೇಶ್ವರಿ ಕೋಪ ಮಿತಿ ಮೀರಿದೆ ಪುಟ್ಟಕ್ಕ ಇದೀಗ ನಮ್ಮ ಯಾರ ಸಪೋರ್ಟ್ ಇಲ್ಲದೆ ಮಗಳಿಗೆ ಮದುವೆ ಮಾಡಲು ಹೊರಟಿದ್ದಾಳೆ. ಮಳ್ಳಿ ಹಾಗಿದ್ದ ಸಹನಾ ಮೇಷ್ಟ್ರನ್ನೆ ಲವ್ ಮಾಡಿದ್ದಾಳೆ ಎಂದುಕೊಳ್ಳುತ್ತಾಳೆ. ಆದರೆ ಕಾಳಿ ಮಾತ್ರ ಇನ್ನೂ ಸಹನಾ ಸಿಗುತ್ತಾಳೆ ಎಂದು ಕಾಯುತ್ತಾ ಇದ್ದಾನೆ.

ಪುಟ್ಟಕ್ಕನ ಮೇಲೆ ರಾಜಿ ಬಾಂಬ್ ಪ್ರಯೋಗ

ಪುಟ್ಟಕ್ಕನ ಮೇಲೆ ರಾಜಿ ಬಾಂಬ್ ಪ್ರಯೋಗ

ಮಂಜಮ್ಮ ಗೆ ಕರೆ ಮಾಡಿದ ರಾಜಿ ಮನೆಗೆ ಕರೆಯಿಸಿಕೊಳ್ಳುತ್ತಾಳೆ ಬಳಿಕ ಪಟಾಕಿ ತರ ಇರುವ ಬಾಂಬ್ ಅನ್ನು ಕೊಡುತ್ತಾಳೆ. ಇದನ್ನು ಪುಟ್ಟಕ್ಕ ತಂಡ ಪಟಾಕಿ ಒಟ್ಟಿಗೆ ಇಟ್ಟು ಬಿಡು ಪಟಾಕಿ ಹಚ್ಚುವ ವೇಳೆ ಬಾಂಬ್ ಬ್ಲಾಸ್ಟ್ ಆಗುತ್ತದೆ ಆಗ ಪುಟ್ಟಕ್ಕನ ಸ್ಥಿತಿ ಅದೋಗತಿ ಎಂದು ನಗುತ್ತಾ ಹೇಳುತ್ತಾಳೆ. ಇನ್ನು ಮಂಜಮ್ಮ ಆ ಸಿಡಿಮದ್ದನ್ನೂ ಪುಟ್ಟಕ್ಕನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಂಜಮ್ಮ ಪಟಾಕಿ ಇರುವ ಕವರ್‌ನಲ್ಲಿ ಹಾಕುತ್ತಾಳೆ.

ಪಟಾಕಿ ಹಚ್ಚಿ ಸಂತಸ ಪಡುತ್ತಿರುವ ಸುಮಾ

ಪಟಾಕಿ ಹಚ್ಚಿ ಸಂತಸ ಪಡುತ್ತಿರುವ ಸುಮಾ

ಮರುದಿನ ಪಟಾಕಿ ಹಚ್ಚಿ ಸುಮಾ ಸಂತಸ ಪಡುತ್ತಾ ಇರುತ್ತಾಳೆ. ಇನ್ನೇನು ಪಟಾಕಿ ತರ ಇರುವ ಬಾಂಬ್ ಗೆ ಬೆಂಕಿ ಹಚ್ಚಲು ಮುಂದೆ ಬರುತ್ತಾಳೆ. ಇದನ್ನು ಮರೆಯಿಂದ ನೋಡುತ್ತಿದ್ದ ಮಂಜಮ್ಮ ಮೆತ್ತಗೆ ನಗುತ್ತಾ ಇರುತ್ತಾಳೆ. ಇನ್ನು ಕಂಠಿ ಮಾತ್ರ ಬಹಳ ಬೇಸರದಲ್ಲಿ ಇರುತ್ತಾನೆ. ತನ್ನ ತಂಗಿಗೆ ಇಂಥ ಸ್ಥಿತಿ ಬರಬಾರದು ಎಂದು ಬೇಸರ ವ್ಯಕ್ತ ಪಡಿಸುತ್ತಾನೆ. ಆದರೆ ವಸು ಮಾತ್ರ ಏನೂ ನಡೆದಿಲ್ಲ ಅನ್ನುವ ಹಾಗೆ ಹಬ್ಬದ ದಿನ ಬಹಳ ಖುಷಿ ಯಿಂದ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಓಡಾಡುತ್ತಾ ಇರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 27 th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X