ಕಂಠಿ ಮೇಲೆ ಮುನಿಸಿಕೊಂಡ ಸ್ನೇಹಾ! ಕಂಠಿ ಬಗ್ಗೆ ಪುಟ್ಟಕ್ಕನಿಗೆ ಸತ್ಯ ತಿಳಿಯುತ್ತಾ?

By ಪೂರ್ವ

ಪೋಸ್ಟರ್ ಅಂಟಿಸಿರುವುದು ಕಂಠಿ ಎಂದು ಭಾವಿಸಿ ಸ್ನೇಹಾ ಕಂಠಿ ಮೇಲೆ ಬೇಸರ ಮಾಡಿಕೊಂಡಿದ್ದಾಳೆ. ಆದರೆ ಇದರಲ್ಲಿ ಕಂಠಿ ಪಾತ್ರ ಏನೂ ಇಲ್ಲ. ಸ್ನೇಹಾಳ ತಪ್ಪು ತಿಳುವಳಿಕೆ ಬಗ್ಗೆ ಕಂಠಿ ಬಹಳ ಬೇಸರಗೊಂಡಿದ್ದಾನೆ. ಪೋಸ್ಟರ್ ಅಂಟಿಸಿದವ ಸಿಕ್ಕರೆ ಕಂಠಿ ಸುಮ್ಮನೆ ಬಿಡುವುದಿಲ್ಲ ಎಂದು ಗೊತ್ತಿದ್ದರೂ ಬಂಡ ಧೈರ್ಯ ಮಾಡಿದ ಕಾಳಿ ಆ ಪೋಸ್ಟರ್‌ಗಳನ್ನು ಊರೆಲ್ಲ ಅಂಟಿಸಿದ್ದಾನೆ. ಪುಟ್ಟಕ್ಕನ ಮೆಸ್ ಬಳಿಯೂ ಅಂಟಿಸಿದ್ದಾನೆ. ಬೆಳಗ್ಗೆ ಎದ್ದು ಪುಟ್ಟಕ್ಕ ಮೆಸ್ ಬಳಿ ಬರಬೇಕಾದರೆ ಸಹನಾ ಹಾಗೂ ಕಂಠಿ ಫೋಟೋ ನೋಡಿ ಶಾಕ್ ಆಗುತ್ತಾರೆ. ಆದರ ಮೇಲೆ ಬರೆದಿದ್ದನ್ನು ಓದಲು ಬಾರದೆ ಬೇರೆಯವರ ಬಳಿ ಓದಿಸಿ ತಿಳಿದುಕೊಳ್ಳುತ್ತಾರೆ.

ಅದೇ ವೇಳೆಗೆ ಕಂಠಿ ಅಲ್ಲಿಗೆ ಬರುತ್ತಾನೆ, ''ಅವ್ವ ನಿಮ್ಮ ಬಳಿ ಸ್ವಲ್ಪ ಮಾತನಾಡೋದು ಇದೆ ಎಂದು ಹೇಳುತ್ತಾನೆ. ಆಗ ಪುಟ್ಟಕ್ಕ ಕಂಠಿಯನ್ನು ನೋಡಿ ಆತನನ್ನು ಕರೆದುಕೊಂಡು ಹೋಗುತ್ತಾಳೆ. ಬಳಿಕ ಕಂಠಿ ಹೇಳುತ್ತಾನೆ ಅವ್ವ ನಾನೇನು ತಪ್ಪು ಮಾಡಿಲ್ಲ ಅವ್ವ ನಾನು ಇದನ್ನು ಅಂಟಿಸಿಲ್ಲ ಎಂದು ಹೇಳುತ್ತಾನೆ. ಬಳಿಕ ಹೇಳುತ್ತಾನೆ ಸ್ನೇಹಾ ಮಾತ್ರ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಈ ಕೆಲಸ ನಾನು ಮಾಡಿಲ್ಲ ಎಂದು ಹೇಳುತ್ತಾನೆ.

ಮುಂದೇನು ಮಾಡುತ್ತಾರೆ ಮುರಳಿ ಮೇಷ್ಟ್ರು?

ಮುಂದೇನು ಮಾಡುತ್ತಾರೆ ಮುರಳಿ ಮೇಷ್ಟ್ರು?

ಇನ್ನು ಮೇಷ್ಟ್ರು ತಮ್ಮ ಮನೆಯಲ್ಲಿ ಸಹನಾ ವಿಚಾರ ಮಾತನಾಡಲು ಪರದಾಡುತ್ತಿದ್ದಾರೆ. ಪ್ರೀತಿ ವಿಚಾರ ಹೇಳಿದರೆ ಅಪ್ಪನಿಂದ ಚಾಟಿ ಏಟು ಗ್ಯಾರಂಟಿ ಎಂದು ಗೊತ್ತಿದೆ. ಆದರೆ ಅಮ್ಮನ ಬಳಿ ಹೇಳಿದರೆ ಏನು ಪ್ರಯೋಜನ ಇಲ್ಲ ಎನ್ನುವುದು ಗೊತ್ತು ಆದರೂ ಕೂಡ ಸಹನಾ ವಿಚಾರ ಪ್ರಸ್ತಾಪ ಮಾಡಲೇಬೇಕು ಇಲ್ಲವಾದರೆ ಸಹನಾಳನ್ನು ಕಳೆದುಕೊಳ್ಳುವ ಭೀತಿ ಎದುರಾಗಬಹುದು ಎಂದು ತಿಳಿದಿದೆ ಮೇಷ್ಟ್ರಿಗೆ. ಇದೀಗ ಮೇಷ್ಟ್ರು ಅಪ್ಪನ ಬಳಿ ಬಂದು ಅಪ್ಪ ಅಪ್ಪ ಎಂದು ಹೇಳುತ್ತಾನೆ ಆದರೆ ಮುಂದಕ್ಕೆ ಹೇಳಲು ಭಯ . ಇನ್ನೂ ಈ ವಿಚಾರವನ್ನು ಅಮ್ಮನ ಬಳಿ ಹೇಳಲು ಹೋಗುತ್ತಾನೆ.

ಮೆಸ್ ಗೆ ಹೋಗದಂತೆ ಮೇಷ್ಟ್ರನ್ನು ತಡೆದ ತಾಯಿ

ಮೆಸ್ ಗೆ ಹೋಗದಂತೆ ಮೇಷ್ಟ್ರನ್ನು ತಡೆದ ತಾಯಿ

ಆ ವೇಳೆ ಮೇಷ್ಟ್ರ ತಾಯಿ ಹೇಳುತ್ತಾರೆ ನಾವು ಈ ಬಾರಿ ಊರಿಗೆ ಹೋಗುವ ಮುಂಚೆ ಮದುವೆ ಮಾಡಿಕೋ ನಾವು ಫೋಟೋ ತೋರಿಸಿದ ಹುಡುಗಿಯಲ್ಲಿ ಒಬ್ಬರನ್ನು ಆಯ್ಕೆ ಮಾಡು ಅಂದಾಗ ನನ್ನ ಮನದಲ್ಲಿ ಒಂದು ಹುಡುಗಿ ಇದಾಳೆ ಎಂದಾಗ ಅಮ್ಮ ಯದ್ವ ತದ್ವ ರೇಗಿ ಬಿಡುತ್ತಾರೆ. ಮನದಲ್ಲಿರುವ ಹುಡುಗಿ ಮನದಲ್ಲೇ ಇರಲಿ ನಾವು ತೋರಿಸಿದ ಹುಡುಗಿಯರಲ್ಲಿ ಆಯ್ಕೆ ಮಾಡು ಹಾಗೆಯೇ ದೋಸೆ ತಿನ್ನು ಮೆಸ್‌ಗೆ ಅಲ್ಲಿಗೆ ಇಲ್ಲಿಗೆ ಹೋಗಬೇಡ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮುರಳಿ ಮೇಷ್ಟ್ರು ಸಿಟ್ಟು ಮಾಡಿಕೊಳ್ಳುತ್ತಾರೆ.

ಹೆಣ್ಣು ಕೇಳಲು ಬರುವೆ ಎಂದು ಭರವಸೆ ಕೊಟ್ಟ ಮೇಷ್ಟ್ರು

ಹೆಣ್ಣು ಕೇಳಲು ಬರುವೆ ಎಂದು ಭರವಸೆ ಕೊಟ್ಟ ಮೇಷ್ಟ್ರು

ಬಳಿಕ ಮೆಸ್ ಬಳಿ ಬರುತ್ತಾರೆ. ಈ ವೇಳೆ ಅಲ್ಲಿ ಸಹನಾ ಇರುತ್ತಾಳೆ ಸಹನಾ ಮೇಷ್ಟ್ರ ನ್ನೂ ನೋಡಿ ಖುಷಿ ಪಡುತ್ತಾಳೆ ಬಳಿಕ ಅನ್ನ ಬಡಿಸುತ್ತಾಳೆ. ಆ ವೇಳೆ ಮೇಷ್ಟ್ರು ಇವತ್ತು ನಿಮ್ಮ ಅಮ್ಮನ ಬಳಿ ಮಾತನಾಡುತ್ತೇನೆ ಎಂದು ಹೇಳಿದಾಗ ಸಹನಾ ಹೇಳುತ್ತಾಳೆ ಸ್ನೇಹಾನ ಬಳಿ ಮಾತನಾಡಿ ಎಂದು ಹೇಳುತ್ತಾಳೆ. ಆ ವೇಳೆ ಅಲ್ಲಿಗೆ ಪುಟ್ಟಕ್ಕ ಸ್ನೇಹಾನನ್ನು ಹುಡುಕಿಕೊಂಡು ಬರುತ್ತಾಳೆ. ಆಗ ಸ್ನೇಹಾ ಮನೆಯಿಂದ ಹೊರಗೆ ಬರುತ್ತಾಳೆ ಸ್ನೇಹಾನನ್ನು ಕರೆದೊಯ್ದ ಪುಟ್ಟಕ್ಕ ಹೇಳುತ್ತಾರೆ ನನಗೆ ಎಲ್ಲಾ ತಿಳಿದು ಹೋಗಿದೆ. ಕಂಠಿ ಬಳಿ ಕೈ ತೋರಿಸಿ ಹೇಳುತ್ತಾರೆ ಈ ಹುಡುಗ ತಪ್ಪು ಮಾಡಿಲ್ಲ ಅಂತ ಹೇಳುತಿದ್ದಾನೆ ಅವನ ಮೇಲೆ ಯಾಕೆ ಕೋಪಿಸಿಕೊಂಡಿದ್ದಿಯಾ ಎಂದೆಲ್ಲ ಹೇಳುತ್ತಾಳೆ.

ಕಂಠಿ ಮಾತಿಗೆ ಸ್ನೇಹಾಳ ಖಡಕ್ ಉತ್ತರ

ಕಂಠಿ ಮಾತಿಗೆ ಸ್ನೇಹಾಳ ಖಡಕ್ ಉತ್ತರ

ಕಂಠಿಯನ್ನು ನೋಡಿದ ಸ್ನೇಹಾ, ನಾನು ಆಗಲೇ ಹೇಳಿದೆನಲ್ಲ ನನಗೆ ಏನೂ ಬೇಸರವಿಲ್ಲ ಎಂದು ಆದರೂ ಯಾಕೆ ಪದೇ ಪದೇ ಅದನ್ನೇ ಹೇಳುತ್ತಿದ್ದೀರಿ. ಅವ್ವನನ್ನು ನಿಲ್ಲಿಸಿ ಮಾತನಾಡುವಷ್ಟು ದೊಡ್ಡ ವಿಚಾರ ಅಲ್ಲ ಅಲ್ವಾ ಎಂದು ಹೇಳುತ್ತಾಳೆ. ಬಳಿಕ ಹೇಳುತ್ತಾಳೆ ಅವ್ವ ನಾನು ಕಾಲೇಜಿಗೆ ಹೋಗಿ ಬರುತ್ತೇನೆ. ಲೈಬ್ರೆರಿಗೆ ಹೋಗುತ್ತಿದ್ದೇನೆ ಬರೋದು ಸ್ವಲ್ಪ ತಡ ಆಗುತ್ತದೆ ಎಂದು ಹೇಳಿ ಹೋಗುತ್ತಾಳೆ. ಇತ್ತ ಮಂಜಕ್ಕಾ ಎಲ್ಲಾ ವರದಿಯನ್ನು ರಾಜೇಶ್ವರಿ ತಿಳಿಸುತ್ತಾಳೆ. ಇತ್ತ ರಾಜೇಶ್ವರಿ ಓಡೋಡಿ ಪುಟ್ಟಕ್ಕನ ಮೆಸ್ ಬಳಿ ಬಂದು ಪುಟ್ಟಕ್ಕನ ಮಾನ ಮರ್ಯಾದೆ ತೆಗೆಯುವ ಎಲ್ಲ ಲಕ್ಷಣ ಕಾಣುತ್ತಿದೆ.

More from Filmibeat

English summary
Kannada serial Puttakkana Makkalu written updated on 27th September episode. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X