ಶ್ರೀ ಹಾಗೂ ಬಂಗಾರಮ್ಮನನ್ನು ಒಟ್ಟಿಗೆ ನೋಡಿದ ಸ್ನೇಹಾ

By ಪೂರ್ವ

ಮಂಜಮ್ಮ, ರಾಜೀ ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಹಾಗೆ ಮಾಡುತ್ತಾಳೆ. ಇದೀಗ ಪುಟ್ಟಕ್ಕನ ಸಂಸಾರ ಸರ್ವ ನಾಶ ಆಗಲಿ ಎಂದು ಪಟಾಕಿ ಜೊತೆ ಸಿಡಿ ಮದ್ದನ್ನು ಕೂಡ ಇಡಲು ಮಂಜಮ್ಮ ಗೆ ತಾಕೀತು ಮಾಡುತ್ತಾಳೆ ರಾಜಿ. ಆಕೆಯ ಚೇಲ ಆಗಿರುವ ಮಂಜಮ್ಮ ಇತರೆ ಪಟಾಕಿಯ ಜೊತೆ ಈ ಸಿಡಿಮದ್ದನ್ನು ಇಡುತ್ತಾಳೆ. ಇನ್ನು ಪಟಾಕಿ ಸಿಕ್ಕಿತು ಎಂಬ ಖುಷಿಯಲ್ಲಿ ಸುಮಾ ಮನೆ ಮುಂದೆ ಹಗಲೇ ಪಟಾಕಿ ಹೊಡೆಯಲು ಶುರು ಮಾಡುತ್ತಾಳೆ. ಆದರೆ ಇದರಿಂದ ಮೆಸ್‌ಗೆ ಬರುವ ಗಿರಾಕಿಗಳಿಗೆ ಬಹಳ ತೊಂದರೆ ಆಗುತ್ತದೆ. ಇದನ್ನು ನೋಡಿದ ಪುಟ್ಟಕ್ಕ ಮನೆ ಒಳಗಿನಿಂದ ಓಡೋಡಿ ಬಂದು, ಸುಮಾ ಇದೇನೆ ಹಗಲೇ ಪಟಾಕಿ ಹೊಡೆಯಲು ಶುರು ಮಾಡಿಬಿಟ್ಟೆ ರಾತ್ರಿ ಪಟಾಕಿ ಹೊಡಿ, ಈಗ ಬೇಡ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಸುಮಾ ರಾತ್ರಿ ಗೆ ಪಟಾಕಿ ಹೊಡೆಯಲು ಇನ್ನು ಇದೆ. ಇದು ಹಗಲು ಹೊಡೆಯುವ ಪಟಾಕಿ ಎಂದು ಹೇಳಿ ಪಟಾಕಿ ಹೊಡೆಯುತ್ತಾಳೆ ಇದನ್ನು ಕೇಳಿದ ಸಹನಾ ಹಾಗೂ ಸ್ನೇಹಾ ಕೂಡ ಸುಮಾಗೆ ಬುದ್ಧಿ ಹೇಳಿದರೆ ಕೊಂಚ ಮಟ್ಟಿಗೆ ಸುಮಾ ಕೋಪಾಗೊಳ್ಳುತ್ತಾಳೆ. ಪುಟ್ಟಕ್ಕ ಈ ವೇಳೆ ಊರಾಚೆ ಎಲ್ಲಾದರೂ ಪಟಾಕಿ ಹೊಡೆದು ಬನ್ನಿ ಎಂದು ಹೇಳಿದಾಗ ಸುಮಾಗೆ ಶ್ರೀ ತೋಟ ನೆನಪಾಗುತ್ತದೆ. ಅಲ್ಲಿ ಹೋದರೆ ಯಾರ ಹಂಗೂ ಇಲ್ಲ ಎಂದು ಕೊಂಡು ಸ್ನೇಹಾ ಅಕ್ಕನ ಬಳಿ ಹೇಳುತ್ತಾಳೆ. ಅಕ್ಕ ಶ್ರೀ ಅವರ ತೋಟಕ್ಕೆ ಹೋಗಿ ಪಟಾಕಿ ಹೊಡೆಯೋಣ ಅಲ್ಲಿಗೆ ಯಾರು ಬರುವುದಿಲ್ಲ ಎಂದು ಹೇಳಿ ಮನೆಯಿಂದ ಹೊರಡುತ್ತಾರೆ.

ತೋಟದಲ್ಲಿ ಪಟಾಕಿ ಹೊಡೆಯಲು ಹೊರಟ ಪುಟ್ಟಕ್ಕನ ಮಕ್ಕಳು

ತೋಟದಲ್ಲಿ ಪಟಾಕಿ ಹೊಡೆಯಲು ಹೊರಟ ಪುಟ್ಟಕ್ಕನ ಮಕ್ಕಳು

ದಾರಿಯಲ್ಲಿ ಸಹನಾಗೆ ಸುಮಾ ರೇಗಿಸುತ್ತ ಇರುತ್ತಾಳೆ. ಸಹನಾ ಅಕ್ಕಗೆ ಮುರಳಿ ಮೇಷ್ಟ್ರದ್ದೆ ನೆನಪು ಅವರು ಪಟಾಕಿ ಹೊಡೆಯಲು ಬರಬೇಕಿತ್ತು ಎಂದು ಅಕ್ಕನ ಮನಸ್ಸು ಹೇಳುತ್ತಿದೆ ಅಲ್ವಾ ಅಕ್ಕ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಹನಾ ಹುಸಿ ಕೋಪ ಮಾಡಿಕೊಂಡು ಸುಮಾ ಎಷ್ಟು ಮಾತನಾಡುತ್ತಿಯಾ ಸುಮ್ಮನಿರು ಎಂದು ಹೇಳುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಪುರುಷೋತ್ತಮ ದೀಪಾವಳಿಯ ಶುಭ ಕಾಮಾನೆ ತಿಳಿಸುತ್ತಾ.. ಸಹನಾಳನ್ನು ರೇಗಿಸುತ್ತಾನೆ. ಎಲ್ಲಿ ಮುರಳಿ ಮೇಷ್ಟ್ರು ಎಂದಾಗ ಎಲ್ಲರೂ ನಕ್ಕು ಸುಮ್ಮನಾಗುತ್ತಾರೆ. ಆ ವೇಳೆ ಪುರುಷೋತ್ತಮ ಹೇಳುತ್ತಾನೆ ಮೇಷ್ಟ್ರನ್ನೂ ನಾನೇ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಮೇಷ್ಟ್ರ ಮನೆಗೆ ಹೋಗುತ್ತಾನೆ.

ಬಂಗಾರಮ್ಮ ನವರ ಮನೆಯಲ್ಲಿ ಹಬ್ಬದ ಸಂಭ್ರಮ

ಬಂಗಾರಮ್ಮ ನವರ ಮನೆಯಲ್ಲಿ ಹಬ್ಬದ ಸಂಭ್ರಮ

ಇನ್ನೂ ಬಂಗಾರಮ್ಮ ಅವರ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಕೊಂಚ ಜೋರಾಗಿ ನಡೆಯುತ್ತಿದೆ. ಅದು ಅಲ್ಲದೆ ಕಂಠಿ ಬಳಿ ಬಂಗಾರಮ್ಮ ಹೇಳುತ್ತಾಳೆ ಇವತ್ತು ನಾವು ತೋಟದಲ್ಲಿ ಹೋಗಿ ದೀಪಾವಳಿ ಆಚರಣೆ ಮಾಡೋಣ. ಅಲ್ಲಿಯೇ ಊಟ ಮಾಡಿ ಬರೋಣ. ಎಂದು ಹೇಳಿದಾಗ ಕಂಠಿಗೆ ಕೊಂಚ ಬೇಸರ ಆಗುತ್ತದೆ. ಇವತ್ತು ನಮ್ಮ ಹುಡುಗಿನ ನೋಡಲು ಆಗುವುದಿಲ್ಲ ಎಂದು ಮನದಲ್ಲಿ ಬೇಸರ ಮಾಡಿಕೊಂಡು ಇರುತ್ತಾನೆ. ಬಳಿಕ ಎಲ್ಲರೂ ತೋಟಕ್ಕೆ ಹೋಗಲು ರೆಡಿ ಆಗುತ್ತಾರೆ.

ಬಂಗಾರಮ್ಮ ಜೊತೆ ಕಂಠಿಯ ನೋಡಿದ ಸ್ನೇಹಾ!

ಬಂಗಾರಮ್ಮ ಜೊತೆ ಕಂಠಿಯ ನೋಡಿದ ಸ್ನೇಹಾ!

ಆಗ ವಸು ಕಂಠಿ ಬಳಿ ಬಂದು ಯಾಕೆ ಅಣ್ಣ ಬೇಸರ ಮಾಡಿಕೊಂಡಿದ್ದೀಯಾ ಎಲ್ಲಾ ಸರಿ ಹೋಗುತ್ತದೆ ಬಿಡು. ನೀನು ಸ್ನೇಹಾನ ನೋಡಕ್ಕೆ ಹೋಗು, ನಾನು ಏನಾದರು ಹೇಳಿ ಸಮಾಧಾನ ಮಾಡುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಎಲ್ಲರೂ ತೋಟಕ್ಕೆ ಹೊರಡುತ್ತಾರೆ. ತೋಟದಲ್ಲಿ ಅದ್ದೂರಿಯಾಗಿ ದೀಪಾವಳಿ ಸಂಭ್ರಮ ನಡೆಯುತ್ತಿತ್ತು. ಈ ವೇಳೆ ಶ್ರೀ ತೋಟದ ಹತ್ತಿರ ಬಂದ ವೇಳೆ ಬಂಗಾರಮ್ಮ ಕಾಣಿಸಿಕೊಳ್ಳುತ್ತಾರೆ. ನೋಡು ಸ್ನೇಹಾ ಅಕ್ಕ ಶ್ರೀ ಬಂಗಾರಮ್ಮ ಜೊತೆ ದೀಪಾವಳಿ ಆಚರಣೆ ಮಾಡುತ್ತಾ ಇದ್ದಾನೆ ನಾನು ಆವತ್ತೇ ಹೇಳಿದ್ದೆ ಬಂಗಾರಮ್ಮನಿಗೂ ಶ್ರೀಗೂ ನಂಟಿದೆ ಎಂದು ಯಾರು ನನ್ನ ಮಾತು ಕೇಳುವುದು ಇಲ್ಲ ಎಂದು ಹೇಳುತ್ತಾಳೆ.

ಸ್ನೇಹಾ ಬಳಿ ಮತ್ತು ಕತೆ ಹೇಳಿದ ಮುಂಗುಸಿ

ಸ್ನೇಹಾ ಬಳಿ ಮತ್ತು ಕತೆ ಹೇಳಿದ ಮುಂಗುಸಿ

ಬಳಿಕ ಸ್ನೇಹಾ ಳನ್ನು ನೋಡಿದ ಮುಂಗುಸಿ ಓಡಿ ಬರುತ್ತಾನೆ. ಈ ವೇಳೆ ಸ್ನೇಹಾ, ಸಿದ್ದೇಶ ಬಳಿ ಹೇಳುತ್ತಾಳೆ ಶ್ರೀ ಅವರು ಬಂಗಾರಮ್ಮ ಪರಿಚಯ ಇದ್ದಾರೆ ಎಂದು ಯಾವತ್ತೂ ಹೇಳಿಕೊಂಡೆ ಇಲ್ಲ ಎಂದಾಗ ಸಿದ್ದೇಶನಿಗೆ ಸುಳ್ಳು ಹೇಳದೆ ಬೇರೆ ದಾರಿ ಇಲ್ಲ ಎಂದು ಕೊಂಡು ಸ್ನೇಹಾ ಬಳಿ ಹೇಳುತ್ತಾನೆ ಹೇಳಲು ಅಣ್ಣನಿಗೆ ಇಷ್ಟ ಇಲ್ಲ ಸಿಸ್ಟರ್. ಅದೊಂದು ದೊಡ್ಡ ಕಥೆ ಎಂದು ಹೇಳಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾನೆ. ಬಳಿಕ ಸ್ನೇಹಾ ಹಾಗೂ ಸುಮಾ ಅವರನ್ನೆಲ್ಲ ಬೇರೆ ಕಡೆಗೆ ಪಟಾಕಿ ಹೊಡೆಯಲು ಕಳುಹಿಸಿದ ಸಿದ್ದೇಶ ಬಳಿಕ ಹೇಳುತ್ತಾನೆ ನಾನು ಅಣ್ಣನ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗುತ್ತಾನೆ. ಮುಂದೆ ಏನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 28th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X