ಸುಮಾ ಪರವಾಗಿ ಮೇಷ್ಟ್ರಿಗೆ ಸವಾಲು ಹಾಕಿದ ಸ್ನೇಹಾ

By ಪೂರ್ವ

ಸುಮಾ ಬಹಳ ಹಠಮಾರಿ, ತಾನು ಏನನ್ನಾದರೂ ಮಾಡಬೇಕು ಎಂದು ಅಂದುಕೊಂಡರೆ ಅದನ್ನು ಮಾಡೆ ತಿರುತ್ತಾಳೆ. ಇನ್ನೂ ಯಾವುದಾದರೂ ಕೆಲಸ ಮಾಡೋದು ಬೇಡ ಎಂದು ಇದ್ದರೆ ಅತ್ತ ಕಡೆ ಸುಳಿಯುವುದಿಲ್ಲ. ಇದೀಗ ಖೋ-ಖೋ ಆಟದ ವಿಚಾರದಲ್ಲಿ ಕೂಡ ಮೊಂಡತನ ಪ್ರದರ್ಶನ ಮಾಡಿದ್ದಾಳೆ. ಪುಟ್ಟಕ್ಕ ಅದೆಷ್ಟು ಬಾರಿ ತಾನೇ ಖೋ-ಖೋ ಆಟಗಾರ್ತಿ ಈ ಆಟವನ್ನು ನಾನು ಹೇಳಿ ಕೊಡುತ್ತೇನೆ ಎಂದು ಎಲ್ಲಾ ಸಿದ್ಧತೆಯನ್ನು ಭರದಿಂದ ಮಾಡಿ ಮುಗಿಸಿರುತ್ತಾಳೆ. ಆದರೂ ಸುಮಾ ಅಮ್ಮನನ್ನು ನಂಬುತ್ತಿಲ್ಲ.

ಇದೀಗ ಪಿಟಿ ಮೇಷ್ಟ್ರು, ಸುಮಾಳನ್ನು ಹಾಗೂ ಆಕೆಯ ಗೆಳತಿಯರನ್ನು ಗ್ರೌಂಡ್ ಗೆ ಹೋಗಲು ಬಿಡದೆ ಇದ್ದಿದ್ದಕ್ಕೆ ಗರಂ ಆಗಿದ್ದಾಳೆ ಸುಮಾ. ತಾನು ಕಲಿತ ಕಾಲೇಜಿನಲ್ಲಿ ಸರಿಯಾದ ದೈಹಿಕ ಶಿಕ್ಷಕರಿಲ್ಲ ಇದ್ದರೂ ಆಟದ ಟ್ರೈನಿಂಗ್ ಕೊಡುವುದಿಲ್ಲ. ಖೋ-ಖೋ ಆಟ ಪ್ರಾಕ್ಟೀಸ್ ಮಾಡಲು ಇಲ್ಲಿ ಜಾಗ ಕೊಡುವುದಿಲ್ಲ ಎಂದು ಹೇಳುತ್ತಾಳೆ. ಇದರಿಂದ ಕೋಪಗೊಂಡ ಸುಮಾ ಕಾಲೇಜು ಮೈದಾನದಲ್ಲಿ ಖೋ-ಖೋ ಆಟ ಪ್ರಾಕ್ಟೀಸ್ ಮಾಡಲು ಬಿಡಿ ಎಂದು ಕೇಳಿಕೊಳ್ಳುತ್ತಾಳೆ. ಕೊನೆಗೆ ಪಿಟಿ ಮೇಷ್ಟ್ರು ಬಿಡದ ಕಾರಣ ಆಕೆ ಸೀದಾ ಮೈದಾನದತ್ತ ತೆರಳುತ್ತಾಳೆ. ಆಕೆಯನ್ನು ತಡೆಯಲು ಬಂದ ಪಿಟಿ ಮೇಷ್ಟ್ರು ಆಕೆಯ ಕೈ ಹಿಡಿದುಕೊಳ್ಳುತ್ತಾನೆ. ಇದನ್ನು ಕಂಡ ಸುಮಾ ಗೆಳತಿಯರು ಶಾಕ್ ಆಗುತ್ತಾರೆ. ಅಲ್ಲಿಗೆ ಬಂದ ಸ್ನೇಹಾ ಪಿಟಿ ಮಾಸ್ಟರ್ ಕೈ ಹಿಡಿಯುತ್ತಾಳೆ.

ಪೀಟಿ ಮಾಸ್ಟರ್ ಚಳಿ ಬಿಡಿಸಿದ ಸ್ನೇಹಾ

ಪೀಟಿ ಮಾಸ್ಟರ್ ಚಳಿ ಬಿಡಿಸಿದ ಸ್ನೇಹಾ

ಸ್ನೇಹಾಳನ್ನು ನೋಡಿದ ಪಿಟಿ ಮೇಷ್ಟ್ರು ಸುಮಾಳ ಕೈ ಬಿಡುತ್ತಾನೆ. ಬಳಿಕ ಸುಮಾ, ಸ್ನೇಹಾಗೆ ಎಲ್ಲವನ್ನು ವಿವರವಾಗಿ ಹೇಳುತ್ತಾಳೆ. ಆ ವೇಳೆ ಸ್ನೇಹಾ ಸಮಾಧಾನದಿಂದ ಹೇಳುತ್ತಾಳೆ. ಅಲ್ಲ ಸರ್ ನೀವು ಅವರಿಗೆ ಕೋಚಿಂಗ್ ನೀಡುತ್ತಿಲ್ಲ ಅಂದ ಮೇಲೆ ಗ್ರೌಂಡ್‌ಗೆ ಹೋಗಿ ಆಡಬೇಡಿ ಎನ್ನುವ ರೈಟ್ಸ್ ನಿಮಗೆ ಯಾರು ಕೊಟ್ಟಿಲ್ಲ. ಅವರಾಗಿಯೇ ಖೋ-ಖೋ ಆಟ ಪ್ರಾಕ್ಟೀಸ್ ಮಾಡಿ ಸ್ಪರ್ಧೆಗೆ ಹೋಗಬೇಕು ಎಂಬುವುದು ಅವರ ಆಸೆ ಬಿಟ್ಟು ಬಿಡಿ. ಹುಡುಗಿಯರನ್ನು ಎಂದಿಗೂ ಕೀಳಾಗಿ ನೋಡಬೇಡಿ ಎಂದು ಹೇಳಿದರು ಆತ ಮಾತ್ರ ಸ್ನೇಹಾಳ ಮಾತನ್ನೇ ಕೇಳಲು ರೆಡಿ ಆಗಿಲ್ಲ. ಮೊನ್ನೆ ನಿಮ್ಮ ತಾಯಿ ಬಂದು ಆವಾಜ್ ಹಾಕಿದರು. ಇವತ್ತು ನೀವು ಬಂದು ಹೇಳುತ್ತಿದ್ದೀರ. ಎಂದೆಲ್ಲ ಹೀಯಾಳಿಸಿ ಮಾತನಾಡುತ್ತಾನೆ.

ಪುಟ್ಟಕ್ಕಳನ್ನು ಹೀಯಾಳಿಸಿ ಮಾತನಾಡಿದ ಪಿಟಿ ಮಾಸ್ಟರ್

ಪುಟ್ಟಕ್ಕಳನ್ನು ಹೀಯಾಳಿಸಿ ಮಾತನಾಡಿದ ಪಿಟಿ ಮಾಸ್ಟರ್

ಇದನ್ನು ಕಂಡ ಸ್ನೇಹಾ, ಇದಕ್ಕೆಲ್ಲ ಉತ್ತರ ಸುಮಾ ಕೊಡುತ್ತಾಳೆ ಎಂದು ಹೇಳುತ್ತಾಳೆ. ಆಗ ಸುಮಾ, ಹೌದು ಅಕ್ಕ ನಾನು ಈ ಮ್ಯಾಚ್ ನಲ್ಲಿ ಗೆದ್ದೆ ಗೆಲ್ಲುತ್ತೇನೆ ಎಂದು ಹೇಳುತ್ತಾಳೆ. ಆಗ ಸ್ನೇಹಾ, ಪಿಟಿ ಮಾಸ್ಟರ್ ಬಳಿ ಹೇಳುತ್ತಾಳೆ ಸುಮಾ ಟೀಂ ಗೆದ್ದರೆ ನಿಮ್ಮ ಕಾಲೇಜಿಗೆ ಲೇಡಿ ಪಿಟಿ ಟೀಚರ್ ಅನ್ನು ನೇಮಕ ಮಾಡಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪಿಟಿ ಮೇಷ್ಟ್ರು ಒಮ್ಮೆ ಅವಕ್ಕಾದರು ಬಳಿಕ ಆಯ್ತು ಎಂದು ಹೇಳುತ್ತಾರೆ. ಸುಮನಿಗೆ ಸ್ನೇಹಾ ಹೇಳುತ್ತಾಳೆ ಆಟ ಆಡಿ ತೋರಿಸು ಸುಮಾ. ಹಾಗೆಯೇ ಸೋಲಬೇಡ ಎಂದೆಲ್ಲ ಕೊಂಚ ಕಿವಿ ಮಾತು ಹೇಳುತ್ತಾರೆ. ಅದರಲ್ಲಿ ಅವ್ವನ ಬಳಿ ಕೋಚಿಂಗ್ ತೆಗೆದುಕೋ ಎಂದು ಸ್ನೇಹಾ ಹೇಳುತ್ತಿರುವುದು ಸ್ಪಷ್ಟವಾಗಿ ಸುಮಾಗೆ ತಿಳಿಯಿತ್ತದೆ.

ನಿಜ ವಿಚಾರ ಸುಮಾಗೆ ತಿಳಿಯಿತು, ಮುಂದೇನು ಮಾಡುತ್ತಾಳೆ?

ನಿಜ ವಿಚಾರ ಸುಮಾಗೆ ತಿಳಿಯಿತು, ಮುಂದೇನು ಮಾಡುತ್ತಾಳೆ?

ಬಳಿಕ ಅಲ್ಲಿಂದ ಸ್ನೇಹಾ ಲೈಬ್ರರಿಗೆ ಹೋಗುತ್ತಾಳೆ. ಸ್ನೇಹಾ ಹೋದ ಬಳಿಕ ಸುಮಾ ಗೆಳತಿಯರು ಹೇಳುತ್ತಾರೆ ಸುಮಾ ನಿನ್ನ ಅಮ್ಮ ಉತ್ತಮ ಖೋ-ಖೋ ಪ್ಲೇಯರ್ ನೀನು ಕೇಳಿದೆ ಅಲ್ವಾ ಕೆಲವೊಂದನ್ನು ಇದನ್ನೆಲ್ಲ ಹೇಗೆ ಕಲಿತೆ ಎಂದೆಲ್ಲ ಅದು ನಿನ್ನ ಅಮ್ಮ ಹೇಳಿಕೊಟ್ಟಿದ್ದು. ನಾವು ಒಂದು ವಾರದಿಂದ ನಿನ್ನ ತಾಯಿ ಬಳಿಯಿಂದ ಕೋಚಿಂಗ್ ತೆಗೆದುಕೊಳ್ಳುತ್ತಿದ್ದೇವೆ. ಸುಮಾ ಬಂದೆ ಬರುತ್ತಾಳೆ ಎಂದು ಆಗಾಗ ನಿನ್ನ ತಾಯಿ ಹೇಳುತ್ತಿದ್ದರು. ಎಂದಾಗ ಸುಮಾ ಕೊಪಗೊಳ್ಳುತ್ತಾಳೆ. ಬಳಿಕ ಅಲ್ಲಿಂದ ಕೋಪದಿಂದ ಮನೆಗೆ ತೆರಳುತ್ತಾಳೆ. ಆಗ ರಸ್ತೆ ಮದ್ಯೆ ಮೇಷ್ಟ್ರು ಸಿಗುತ್ತಾರೆ.

ಮುರಳಿ ಮೇಷ್ಟ್ರು ಮೇಲೆ ರೆಗಾಡಿದ ಸುಮಾ

ಮುರಳಿ ಮೇಷ್ಟ್ರು ಮೇಲೆ ರೆಗಾಡಿದ ಸುಮಾ

ಆಗ ಮುರಳಿ ಮೇಷ್ಟ್ರು ಸುಮಾಳನ್ನು ಕರೆದು ಸ್ನೇಹಾ ಎಲ್ಲಿ ಹೋದಳು ಎಂದು ಕೇಳುತ್ತಾರೆ. ಆಗ ಸುಮಾ ಕೋಪದಿಂದ ಹೇಳುತ್ತಾಳೆ ನಾನು ನಿಮ್ಮ ಸ್ಟೂಡೆಂಟ್ ನೀವು ನನ್ನ ಬಗ್ಗೆ ವಿಚಾರಿಸಲ್ಲ ನನ್ನ ಅಕ್ಕಂದಿರನ್ನೂ ವಿಚಾರಿಸುತ್ತಿರಾ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿದ ಮೇಷ್ಟ್ರು ಶಾಕ್ ಆಗುತ್ತಾರೆ. ಸುತ್ತ ಮುತ್ತ ಯಾರಾದರೂ ಇದ್ದಾರೆ ಎಂದು ನೋಡುತ್ತಾರೆ. ಯಾರು ಇಲ್ಲದನ್ನು ಕಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ. ಕಾಲೇಜಿಗೆ ಸಹನಾ ಬರುತ್ತಾಳೆ ಮೇಷ್ಟ್ರನ್ನೂ ಮೀಟ್ ಆಗಬೇಕು ಎಂದು ವೇಗವಾಗಿ ಬರುತ್ತಾಳೆ. ಇದೀಗ ಸಹನಾಳನ್ನೂ ಸ್ನೇಹಾ ನೋಡಿದರೆ ಮುಂದೇನಾಗುತ್ತದೆ ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 28th September episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X