twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿನ ಜೀವನದ ಬಗ್ಗೆ ಮಕ್ಕಳ ಬಳಿ ಹೇಳಿಕೊಳ್ಳುತ್ತಾಳ ಪುಟ್ಟಕ್ಕ?

    By ಪೂರ್ವ
    |

    ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಒಂದಕ್ಕೊಂದು ವಿಭಿನ್ನ ಕಥಾ ಹಂದರವುಳ್ಳ ಧಾರಾವಾಹಿಗಳು ಅದರಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರವಾಹಿ ಕೂಡ ಒಂದು. ಕಂಠಿ ಸ್ನೇಹಾ, ಮುರಲಿ ಮೇಷ್ಟ್ರು ಹಾಗೂ ಸಹನಾ ಲವ್ ಸ್ಟೋರಿಗೆ ಜನ ಫಿದಾ ಆಗಿದ್ದಾರೆ. ಯಾವಾಗ ಈ ಬಗ್ಗೆ ಮನೆಯವರಿಗೆ ವಿಚಾರ ತಿಳಿಸುತ್ತಾರೆ ಎಂಬುವುದನ್ನು ಕಾಯುತ್ತಿದ್ದಾರೆ ಅಭಿಮಾನಿಗಳು. ಪುಟ್ಟಕ್ಕ ಇಡೀ ಧಾರಾವಾಹಿಯ ಕಳಶ.

    ಇದೀಗ ಪುಟ್ಟಕ್ಕ ಖೋ-ಖೋ ಪ್ಲೇಯರ್ ಎಂದು ಆಕೆಯ ಮಕ್ಕಳಿಗೆ ಗೊತ್ತಾಗುವ ಸಂದರ್ಭ ಬಂದಿದೆ. ಪುಟ್ಟಕ್ಕ ಅನೇಕ ಸವಾಲುಗಳನ್ನು ಎದುರಿಸಿದರು ಮಾತ್ರ ಸಮಸ್ಯೆಗಳು ಮಾತ್ರ ಬೆಂಬಿಡದೆ ಕಾಡುತ್ತಿದೆ. ಅದೆಷ್ಟು ನೋವುಗಳನ್ನು ಸಹಿಸಿ ಬಾಲ್ಯದ ಜೀವನ ಕಳೆದಿರಬಹುದು ಎಂಬುವುದನ್ನು ಊಹಿಸಲು ಸಾಧ್ಯವಿಲ್ಲ

    ಜೊತೆ ಜೊತೆಯಲಿ: ಆರ್ಯವರ್ಧನ್ ಜಾಗಕ್ಕೆ ಬರುವವರು ಯಾರು?ಜೊತೆ ಜೊತೆಯಲಿ: ಆರ್ಯವರ್ಧನ್ ಜಾಗಕ್ಕೆ ಬರುವವರು ಯಾರು?

    ಅಮ್ಮನ ಬಗ್ಗೆ ಇಲ್ಲ ಸಲ್ಲದ ಮಾತನಾಡಿದ ಸುಮಾಳ ಬಾಯಿಗೆ ಬ್ರೇಕ್ ಬೀಳುವ ಸಂದರ್ಭ ಬಂದಿದೆ. ಖೋ-ಖೋ ಬಗ್ಗೆ ಅಮ್ಮನಿಗೆ ಏನು ತಿಳಿದಿಲ್ಲ. ಊರಾಚೆ ಹೋಗಿ ಒಂದು ದಿನ ಬಸ್ಸಲ್ಲಿ ಹೋಗಿಲ್ಲ ಎಂದೆಲ್ಲ ಹೇಳಿದ ಸುಮಾಳ ಮಾತಿನಿಂದ ಪುಟ್ಟನಿಗೆ ಎಷ್ಟೇ ಬೇಸರ ಆದರೂ ಅದನ್ನು ತಡೆದುಕೊಂಡು ಮೂರು ಮಕ್ಕಳ ಮುಂದೆ ನಿಲ್ಲುತ್ತಾಳೆ. ಶಾಂತಕ್ಕ ಆವೇಶ ಭರಿತವಾಗಿ ಮಾತನಾಡಿ ಪುಟ್ಟಕ್ಕನ ಬಗ್ಗೆ ಅಲ್ಪ ಸ್ವಲ್ಪ ವಿಚಾರವನ್ನು ಮಕ್ಕಳ ಮುಂದೆ ಹೇಳಿ ಬಿಟ್ಟಿದ್ದಾಳೆ.

    ಪುಟ್ಟಕ್ಕನ ಆಸೆಗೆ ಕೊಳ್ಳಿ ಇಟ್ಟಿದ್ದು ಯಾರು?

    ಪುಟ್ಟಕ್ಕನ ಆಸೆಗೆ ಕೊಳ್ಳಿ ಇಟ್ಟಿದ್ದು ಯಾರು?

    ಬಳಿಕ ಶಾಂತ ಪುಟ್ಟಕ್ಕನ ಬಳಿಯೇ ಎಲ್ಲಾ ವಿಚಾರವನ್ನು ಮಕ್ಕಳಿಗೆ ತಿಳಿಸುವಂತೆ ಹೇಳುತ್ತಾಳೆ. ಬಳಿಕ ಪುಟ್ಟಕ್ಕ ತನ್ನ ಹಿಂದಿನ ದಿನದ ಕಷ್ಟದ ದಿನಗಳ ಮೆಲುಕನ್ನು ಹಾಕುತ್ತಾಳೆ. ತುಂಬಾ ಚಿಕ್ಕ ಹಳ್ಳಿಯಲ್ಲಿ ಬೆಳೆದವಳು ಪುಟ್ಟಕ್ಕ. ಎಲ್ಲರೊಂದಿಗೆ ಕೂಡಿ ಆಡುವ ಸಮಯದಲ್ಲಿ ತನ್ನ ತಂದೆಯನ್ನು ಕಿತ್ತುಕೊಂಡು ಬಿಟ್ಟ ಆ ದೇವರು. ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ಆಟ ಆಡುತ್ತಿರುತ್ತಾರೆ. ತನಗೂ ಆಡಬೇಕು ಎಂಬ ಹಂಬಲ. ಆದರೆ ಮನೆಯಲ್ಲಿ ಕಷ್ಟ. ಆ ಊರಿನ ಜನಕ್ಕೆ ಒಂದು ಕೊಡ ನೀರು ಬೇಕು ಅಂದರೂ 8 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ಇತ್ತು'' ಎಂದು ತನ್ನ ಬಾಲ್ಯದ ಕತೆ ಹೇಳಲು ಶುರು ಮಾಡುತ್ತಾಳೆ.

    ಏಜೆ ಸೊಸೆಯಂದಿರಿಗೆ ತಕ್ಕ ಪಾಠ ಕಲಿಸುತ್ತಾಳ ಲೀಲಾ ತಾಯಿ ಕೌಸಲ್ಯ?ಏಜೆ ಸೊಸೆಯಂದಿರಿಗೆ ತಕ್ಕ ಪಾಠ ಕಲಿಸುತ್ತಾಳ ಲೀಲಾ ತಾಯಿ ಕೌಸಲ್ಯ?

    ಗಂಡನನ್ನು ಕಳೆದುಕೊಂಡ ಅಮ್ಮನಿಗೆ ಬಲ ನೀಡಿದ ಪುಟ್ಟಕ್ಕ

    ಗಂಡನನ್ನು ಕಳೆದುಕೊಂಡ ಅಮ್ಮನಿಗೆ ಬಲ ನೀಡಿದ ಪುಟ್ಟಕ್ಕ

    ಅಮ್ಮನಿಗೆ ಆರೋಗ್ಯ ಸರಿಯಾಗಿ ಇರದ ಕಾರಣ ಬಾಲ್ಯದ ಜೀವನದಲ್ಲಿಯೇ ಮನೆಯ ಜವಾಬ್ದಾರಿಯನ್ನು ಕೊಂಚ ಮಟ್ಟಿಗೆ ನಿಭಾಯಿಸಬೇಕಾಗಿತ್ತು. ಹಾಗಾಗಿ, ಹೀಗೆ ದಿನಕ್ಕೆ 5 ಬಾರಿ ಆದರೂ ನೀರು ತರಲು ಹೋಗುತ್ತಿದ್ದರು. ಇನ್ನೂ ಅಪ್ಪನ ಆಸರೆ ಇಲ್ಲದೆ ಬದುಕಿದ್ದ ಪುಟ್ಟಕ್ಕಗೆ ಅಣ್ಣನೇ ಆಧಾರ ಸ್ಥಂಭ ಇದ್ದ ಹಾಗೆ. ಅವನು ಹೇಳಿದ ಪ್ರಕಾರ ಇರುತ್ತಿದ್ದರು ಪುಟ್ಟಕ್ಕ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಇರುತ್ತಿರಲಿಲ್ಲ. ಹಾಗೆಯೇ ಮನೆಯವರು ಶಾಲೆಗೆ ಹೆಣ್ಣು ಮಕ್ಕಳನ್ನು ಕಳುಹಿಸುತ್ತಾ ಇರಲಿಲ್ಲ.

    ಖೋ ಖೋ ಆಟವನ್ನು ಹಠದಿಂದ ಕಲಿತ ಪುಟ್ಟಕ್ಕ

    ಖೋ ಖೋ ಆಟವನ್ನು ಹಠದಿಂದ ಕಲಿತ ಪುಟ್ಟಕ್ಕ

    ಗಂಡು ಮಕ್ಕಳಿಗೆ ಮಾತ್ರ ಶಿಕ್ಷಣ ನೀಡುತ್ತಿದ್ದರು. ಇದರಿಂದಾಗಿ ಮನೆಯಲ್ಲಿ ಇರಬೇಕಾಯಿತು ಪುಟ್ಟಕ್ಕ. ಒಂದು ದಿನ ಪಕ್ಕದ ಊರಿನ ಬಳಿ ಖೋ-ಖೋ ಆಟ ಹೇಳಿಕೊಡುತ್ತಾರೆ ಎಂಬುವುದು ತಿಳಿಯುತ್ತದೆ. ಆ ಮಾಹಿತಿ ಮೇರೆಗೆ ಪುಟ್ಟಕ್ಕ ಖೋ ಖೋ ಆಟ ಆಡಲು ಮನೆಯವರ ಒಪ್ಪಿಗೆ ತೆಗೆದುಕೊಂಡು ಆಡಲು ಹೋಗುತ್ತಾರೆ. ಹೀಗೆ ಪುಟ್ಟಕ್ಕ ಮಕ್ಕಳಿಗೆ ತನ್ನ ಬಾಲ್ಯದ ವಿಚಾರವನ್ನು ವಿವರವಾಗಿ ಹೇಳುತ್ತಾರೆ.

    ಅಮ್ಮನ ಕಷ್ಟದ ಜೀವನ ತಿಳಿದು ಮರುಕ ಪಟ್ಟ ಮಕ್ಕಳು

    ಅಮ್ಮನ ಕಷ್ಟದ ಜೀವನ ತಿಳಿದು ಮರುಕ ಪಟ್ಟ ಮಕ್ಕಳು

    ಇದನ್ನೆಲ್ಲ ಕೇಳಿಸಿಕೊಂಡ ಮಕ್ಕಳಿಗೆ ಶಾಕ್ ಆಗುತ್ತದೆ. ಸಹನಾ ಹಾಗೂ ಸ್ನೇಹಾ ಮುಖ ಮುಖ ನೋಡಿಕೊಳ್ಳುತ್ತಾರೆ. ಇನ್ನೂ ಅಮ್ಮನ ಹಿನ್ನೆಲೆ ತಿಳಿದುಕೊಂಡ ಮಕ್ಕಳು ಮಾತ್ರ ಹೆಮ್ಮೆ ಪಡುತ್ತಾರೆ. ಅದೆಷ್ಟು ಸವಾಲುಗಳನ್ನು ಮೆಟ್ಟಿ ನಿಂತು ಈ ಆಟವನ್ನು ಕರಗತ ಮಾಡಿಕೊಂಡಿರಬಹುದು ಪುಟ್ಟಕ್ಕ. ಖೋ-ಖೋ ಆಟದಲ್ಲಿ ಪುಟ್ಟಕ್ಕಗೆ ಎದುರಾಳಿಯಾಗಿ ಸಿಕ್ಕವರನ್ನು ಆಕೆ ಎಂದಿಗೂ ಬಿಟ್ಟಿಲ್ಲ. ಇಷ್ಟೆಲ್ಲ ಇದ್ದರೂ ಪುಟ್ಟಕ್ಕ ತನ್ನ ಗುರಿಯನ್ನು ತಲುಪಲು ಅಸಾಧ್ಯವಾದದ್ದು ಹೇಗೆ ಎಂಬುವುದನ್ನು ಕಾದು ನೋಡಬೇಕಿದೆ. ಇನ್ನೂ ಅಮ್ಮ ಒಬ್ಬ ಖೋ-ಖೋ ಪ್ಲೇಯರ್ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಾದ ಸರದಿ ಸುಮಳದ್ದು. ಅಮ್ಮನ ಬಗ್ಗೆ ತುಚ್ಛವಾಗಿ ಮಾತನಾಡಿದ ಸುಮಾ ಅಮ್ಮನ ಬಳಿ ಕ್ಷಮೆ ಕೇಳುತ್ತಾಳ ಎಂಬುವುದನ್ನು ಕಾದು ನೋಡಬೇಕಿದೆ.

    English summary
    Kannada serial Puttakkana Makkalu written updated on 29th August. Know more
    Monday, August 29, 2022, 22:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X