Don't Miss!
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- News
Budget 2023; ರಾಜಕೀಯ ಉದ್ದೇಶದಿಂದ ಬಜೆಟ್ ಮಂಡನೆ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಜಿ ಕಾಲಿಗೆ ಬೀಳದ ಪುಟ್ಟಕ್ಕ; ರಾಜಿ ಪ್ಲಾನ್ ಫ್ಲಾಪ್!
ಪುಟ್ಟಕ್ಕ ರಾಜಿ ಬಳಿ ನಾನು ನಿನ್ನ ಕಾಲಿಗೆ ಬೀಳುತ್ತೇನೆ ಆದರೆ ನನ್ನ ಮಕ್ಕಳು ನಿನ್ನ ಕಾಲಿಗೆ ಬೀಳುವುದು ಬೇಡ ಎಂದಾಗ ಕುಪಿತಗೊಂಡ ರಾಜೇಶ್ವರಿ ಅದು ಹೇಗೆ ಆಗುತ್ತದೆ, ಅದು ಸರಿಯಾಗುವುದಿಲ್ಲ ಎನ್ನುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ನಿನ್ನ ಬಳಿ ನನ್ನ ಮಕ್ಕಳು ಕ್ಷಮೆ ಕೇಳುತ್ತಾರೆ ಆದರೆ ನಿನ್ನ ಕಾಲಿಗೆ ಅವರು ಬೀಳುವುದಿಲ್ಲ, ಪಂಚಾಯಿತಿಯಲ್ಲಿ ನಡೆದಿದ್ದು ನಮ್ಮಿಬ್ಬರ ಮಧ್ಯೆ, ಅದು ಬೇಕಾದರೆ ಚುಕ್ತಾ ಆಗಿ ಹೋಗಲಿ ಆದರೆ ಇದರ ಮಧ್ಯದಲ್ಲಿ ಮಕ್ಕಳನ್ನು ಎಳೆದು ತರುವುದು ಬೇಡ ಎಂದು ಹೇಳುತ್ತಾಳೆ.
ಈ ವೇಳೆ ರಾಜೇಶ್ವರಿ ಮನದಲ್ಲಿ ಯೋಚನೆ ಮಾಡುತ್ತಾಳೆ. ಬಿಟ್ಟರೆ ಇವಳು ಕಾಲಿಗೆ ಬೀಳುವುದು ತಪ್ಪುತ್ತದೆ ಎಂದುಕೊಂಡು ರಾಜೇಶ್ವರಿ ಪುಟ್ಟಕ್ಕನ ಮುಖ ನೋಡಿ ಸರಿ ಸರಿ ನೀನು ಬಂದು ನನ್ನ ಕಾಲಿಗೆ ಬೀಳು ಎಂದು ಹೇಳಿ ಮನದಲ್ಲಿ ಯೋಚನೆ ಮಾಡುತ್ತಾಳೆ. ನೀನು ಬೀಳು ಆಮೇಲೆ ಅವರನ್ನು ಬೀಳಿಸುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಒಂದು ನಿಮಿಷ ಹಾಗೆಯೇ ಗಂಡನತ್ತ ನೋಡುತ್ತಾಳೆ. ಆತ ಕಾಲು ಮುಟ್ಟಬೇಡ ಎಂದು ತಲೆ ಅಲ್ಲಾಡಿಸಿ ಹೇಳುತ್ತಾನೆ. ಸಹನಾ ಕೂಡ ಹಾಗೆ ಹೇಳುತ್ತಾಳೆ. ಯಾರ ಮಾತನ್ನೂ ಕೇಳದ ಪುಟ್ಟಕ್ಕ ರಾಜೇಶ್ವರಿ ಕಾಲಿಗೆ ಬೀಳಬೇಕು ಎನ್ನುವಷ್ಟರಲ್ಲಿ ಸಹನಾ ಜೋರಾಗಿ ಅಮ್ಮ ಎಂದು ಕೂಗುತ್ತಾಳೆ.
ಇಷ್ಟರವರೆಗೆ ಏನೂ ಮಾತನಾಡದ ಸಹನಾ ಇದೀಗ ಅಮ್ಮನಿಗೆ ಆಗುವ ಅವಮಾನವನ್ನು ತಪ್ಪಿಸುವ ಕೆಲಸ ಮಾಡಿದ್ದಾಳೆ.. ನನ್ನಿಂದಾಗಿ ಯಾರು ತಲೆ ತಗ್ಗಿಸುವುದು ಬೇಡ.. ನಿನಗೆ ಅವಮಾನ ಆಗುವುದು ಬೇಡ. ನಾನು ಮೇಷ್ಟ್ರ ಬಳಿ ಮಾತನಾಡುತ್ತೇನೆ ಅವರು ಒಪ್ಪದೇ ಇದ್ದರೂ ಪರವಾಗಿಲ್ಲ ನಾನು ಮದುವೆ ಆಗುವುದು ಇಲ್ಲ, ನೀನು ಮತ್ತು ನನ್ನ ತಂಗಿಯಂದಿರು ಯಾರ ಕಾಲಿಗೆ ಬೀಳುವ ಅಗತ್ಯ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕಂಡ ರಾಜಿ ಅವಕ್ಕಾಗುತ್ತಾಳೆ. ಇಷ್ಟು ದಿನ ಮಾತು ಬಂದರೂ ಯಾರ ಎದುರು ಧ್ವನಿ ಏರಿಸಿ ಮಾತನಾಡಿದವಳೇ ಅಲ್ಲ, ಮೂಗಿ ಹಾಗೆ ಇದ್ದ ಸಹನಾ ಮಾತನಾಡಿ ಬಿಟ್ಟಳಲ್ಲ ಎಂದು ಕೋಪದಿಂದ ಹೇಳುತ್ತಾಳೆ.

ಸಹನಾ ಬಗ್ಗೆ ತುಚ್ಚವಾಗಿ ಮಾತನಾಡಿದ ರಾಜಿ
ಮೂಗಿ ಅಂದುಕೊಂಡು ಇದ್ದೆ ಮಾತು ಚೆನ್ನಾಗಿ ಆಡುತ್ತಿಯಾ ಎಂದೆಲ್ಲ ಹೇಳಿದಾಗ ಸ್ನೇಹಾ ರಾಜಿಗೆ ಸವಾಲು ಹಾಕಿ ಅವಳ ತಾಯಿ ಹಾಗೂ ಅಕ್ಕ ತಂಗಿಯನ್ನು ಕರೆದುಕೊಂಡು ಹೋಗುತ್ತಾಳೆ. ಇನ್ನು ಗೋಪಾಲ ಪುಣ್ಯ ಊರವರ ಮುಂದೆ ಇದೆಲ್ಲ ನಡೆಯಲಿಲ್ಲ, ಎಲ್ಲರನ್ನೂ ಮನೆಗೆ ಕರೆದಿದ್ದೆ ನಿನ್ನ ತಪ್ಪು ಎಂದು ರಾಜಿಗೆ ಹೇಳುತ್ತಾನೆ. ಇದರಿಂದ ಸಿಟ್ಟಿಗೆದ್ದ ರಾಜಿ ಮಾತ್ರ ಗೋಪಾಲನಿಗೆ ಬಯ್ಯುತ್ತಾಳೆ. ಹೇಳಿದ್ದನ್ನೇ ಹೇಳಬೇಡ ಸುಮ್ಮನಿರು ಎಂದು ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಪುರುಷೋತ್ತಮನೀಗೆ ಒಂದು ಅರಿವಾಗುತ್ತದೆ ಪುಟ್ಟಕ್ಕ, ಯಾರೂ ಅಮ್ಮನ ಕಾಲಿಗೆ ಬಿದ್ದಿಲ್ಲ ಎಂದು. ಅಷ್ಟರಲ್ಲಿ ಕಾಳೀ ಮನೆಗೆ ಬರುತ್ತಾನೆ..

ಮನೆಗೆ ಬಂದ ಕಾಳಿ
ಮನೆಗೆ ಬಂದ ಕಾಳಿ ಅಕ್ಕ ನೀನು ಆ ಥರ ಮಾಡಿದ್ದು ಸರಿ ಅಲ್ಲ. ನೀನು ತಪ್ಪು ಮಾಡಿದೆ. ಸಹನಾ ಕಾಲಿಗೆ ಬೀಳುತ್ತಾಳೆ ಎಂದು ಗೊತ್ತಾದ ಮೇಲೆ ನಾನು ಇಲ್ಲಿ ನಿಲ್ಲಲಿಲ್ಲ ಎಂದು ಹೇಳುತ್ತಾನೆ. ಗೋಪಾಲ ಕಾಳಿಗೆ ಎಲ್ಲಾ ವಿಚಾರ ತಿಳಿಸುತ್ತಾನೆ . ನಿಜ ತಿಳಿದ ಕಾಳಿ ಜೋರಾಗಿ ನಗುತ್ತಾನೆ. ಇದನ್ನು ನೋಡಿದ ರಾಜಿಗೆ ಸಿಟ್ಟು ಇನ್ನೂ ಹೆಚ್ಚಾಗುತ್ತದೆ. ಮುರಲಳಿ ಮೇಷ್ಟ್ರ ಮನೆಯಲ್ಲಿ ಅಮ್ಮ ಮಾಡಿದ್ದು ತಪ್ಪು ಎನ್ನುವ ಹಾಗೆ ಮುರಳಿ ಮಾತನಾಡುತ್ತಾ ಇರುವಾಗ ಮೇಷ್ಟ್ರ ತಾಯಿ ಕೌಸಲ್ಯ ಬರುತ್ತಾರೆ ಏನು ಅಕ್ಕ ತಮ್ಮ ಏನೋ ಮಾತನಾಡುತ್ತ ಇದ್ದೀರಾ, ಸಹನಾ ಬಗ್ಗೆನಾ ಎಂದು ಹೇಳಿದಾಗ ಚೈತ್ರ ತಮ್ಮನ ಕಾಲು ಎಳೆಯುತ್ತಾಳೆ.

ತಮ್ಮನ ಕಾಲು ಎಳೆದ ಚೈತ್ರ
ಬಿಟ್ಟರೆ ಮಾತನಾಡುತ್ತಾ ಇರುತ್ತಾರೆ ಅನ್ನಿಸುತ್ತದೆ ಎಂದು ಕೌಸಲ್ಯ ಹೇಳುತ್ತಾಳೆ. ಇನ್ನು ಕೌಸಲ್ಯ ಮಾತ್ರ ಪುಟ್ಟಕ್ಕ ಬಳಿ ಆ ರೀತಿ ಮಾತನಾಡಿದ್ದನ್ನು ಪ್ರಶ್ನೆ ಮಾಡುತ್ತಾರೆ ಅಕ್ಕ ತಮ್ಮ. ಆಗ ಕೌಸಲ್ಯ ಮಾತನ್ನೇ ತಿರುಗಿಸುತ್ತಾಳೆ. ಪುಟ್ಟಕ್ಕ ಇಷ್ಟರವರೆಗೆ ಗಂಡನಿಂದ ದೂರವಾಗಿ ಇದ್ದರೂ ಆ ಕಾರಣಕ್ಕಾಗಿ ಅವರಿಬ್ಬರೂ ಒಂದಾಗಬೇಕು ಎನ್ನುವ ಉದ್ದೇಶದಿಂದ ಹಾಗೆ ಹೇಳಿದೆ ಎಂದು ಹೇಳುತ್ತಾಳೆ. ಅದಕ್ಕೆ ಮುರಳಿ ಈ ಕಾರಣಕ್ಕಾಗಿ ಪುಟ್ಟಕ್ಕ ಅವರಿಗೆ ನೋವು ಕೊಡುವುದು ಇಷ್ಟರ ಮಟ್ಟಿಗೆ ಸರಿ ಎಂದೆಲ್ಲ ಹೇಳಿದಾಗ ಕೌಸಲ್ಯ ಏನೋ ಒಂದನ್ನು ಹೇಳಿ ಅಲ್ಲಿಂದ ಹೋಗುತ್ತಾಳೆ. ಬಳಿಕ ನನ್ನಿಂದ ನನ್ನ ಮಗನ ದೂರ ಮಾಡಲು ಹೋದ ಪುಟ್ಟಕ್ಕ ಹಾಗೂ ಅವರ ಮಕ್ಕಳಿಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾಳೆ.

ಮನೆಗೆ ಬಂದು ಮಗಳ ಮದುವೆ ಬಗ್ಗೆ ಯೋಚಿಸಿದ ಪುಟ್ಟಕ್ಕ
ಇನ್ನು ರಾಜಿ ಮನೆಯಿಂದ ನೇರವಾಗಿ ಮನೆಗೆ ಬಂದ ಪುಟ್ಟಕ್ಕಗೆ ಮಕ್ಕಳು ಸಮಾಧಾನ ಮಾಡುತ್ತಾರೆ. ನಾವು ಒಪ್ಪಿಸುತ್ತೇವೆ ಅಮ್ಮ ನೀನೇನು ತಲೆ ಕೆಡಿಸಿಕೊಳ್ಳಬೇಡ ಎಂದೆಲ್ಲ ಹೇಳುತ್ತಾರೆ. ಬಳಿಕ ಪುಟ್ಟಕ್ಕ ಮಕ್ಕಳ ಬಳಿ ನೀವು ಏನು ಬೇಕಾದರೂ ಮಾಡಿಕೊಳ್ಳಿ ನಿಮ್ಮಿಷ್ಟ ಎಂದು ಹೇಳುತ್ತಾಳೆ. ಮುಂದೇನಾಗುತ್ತೋ ಕಾದುನೋಡಬೇಕಿದೆ.