Puttakkana Makkalu: ಸ್ನೇಹಾ ದೂರ ಆಗಲು ಅಮ್ಮನೇ ಕಾರಣ ಎಂದು ಕಂಠಿಗೆ ತಿಳಿಯುತ್ತಾ?

By Poorva

ಸ್ನೇಹಾ ಮನೆಯಲ್ಲಿ ಎಲ್ಲಿಯೂ ಕಾಣಿಸದ ಕಾರಣ ಪುಟ್ಟಕ್ಕ ಭಯಗೊಂಡರೆ ಸುಮಾ ಮಾತ್ರ ಅಮ್ಮನಿಗೆ ಬೈಯ್ಯುತ್ತಾ ಇರುತ್ತಾಳೆ . ಇಷ್ಟವಿಲ್ಲದ ಮದುವೆ ಆಗು ಎಂದು ಒತ್ತಡ ಹೇರಿ ಇದೀಗ ಏನು ಗೊತ್ತಿಲ್ಲದ ಹಾಗೆ ಅಮ್ಮ ಇದ್ದಾಳಲ್ಲ ಎಂದು ಬೇಸರಗೊಂಡಿದ್ದಾಳೆ. ಮನೆಯಲ್ಲಿ ಹುಡುಕಿದರೂ ಎಲ್ಲೂ ಕಾಣುತ್ತಿಲ್ಲ. ಆಕೆ ಮನೆ ಬಿಟ್ಟು ಹೋಗಲು ಯಾವುದೇ ಕಾರಣ ಇಲ್ಲ.

ಸ್ನೇಹಾ ಅಮ್ಮನ ಬಳಿ ಜಗಳ ಆಡಿಲ್ಲ, ಹಾಗೆಯೇ ಯಾರ ಜೊತೆ ಏನು ಮಾತನಾಡುತ್ತಾ ಇಲ್ಲ. ಹೀಗಿದ್ಧಾಗ ಮನೆ ಬಿಟ್ಟು ಹೋಗಲು ಬೇರೆ ಏನು ಕಾರಣ ಇಲ್ಲ. ಇರೋದೆಲ್ಲಾ ಒಂದೇ, ಮದುವೆ ಇಷ್ಟ ಇಲ್ಲದಿರುವುದು ಎಂದು ಸುಮಾ ಪದೇ ಪದೇ ಹೇಳುತ್ತಾ ಇರುತ್ತಾಳೆ.

Kannada serial puttakkana makkalu written updated on 29th may

ಇನ್ನೂ ಪುಟ್ಟಕ್ಕಗೆ ಇರುವುದು ಒಂದೇ ತಳಮಳ. ನನ್ನ ಮಗಳು ಏನು ಅಪಾಯ ಮಾಡಿಕೊಳ್ಳದೇ ಇರಲಿ ಅನ್ನೋದು. ಚಂದ್ರುಗೆ ಕರೆ ಮಾಡುತ್ತಾರೆ. ಸ್ನೇಹಾ ಏನಾದರು ಅಲ್ಲಿಗೆ ಬಂದಿದ್ದಾಳಾ ಎಂದು ತಿಳಿದುಕೊಳ್ಳಲು ಆಗ ಚಂದ್ರು, ಭುವನ್ ಬಳಿ ವಿಚಾರಿಸುತ್ತಾನೆ. ಇಲ್ಲಿಗೆ ಬಂದಿಲ್ಲ ಎಂದು ಹೇಳಿದಾಗ ಪುಟ್ಟಕ್ಕಗೆ ಇನ್ನೂ ಭಯ ಹೆಚ್ಚಾಗುತ್ತದೆ.

ಭಯಗೊಂಡ ಪುಟ್ಟಕ್ಕ

ನಂಜಮ್ಮ, ಪುಟ್ಟಕ್ಕನ ಬಳಿ ಮಾತನಾಡುವಾಗ ಪುಟ್ಟಕ್ಕನ ಬಳಿ ಹೇಳುತ್ತಾಳೆ, ಪುಟ್ಟಕ್ಕ, ಬಂಗಾರಮ್ಮ ಏನಾದರು ಸ್ನೇಹಾಗೆ ಅಪಾಯ ಮಾಡಿದ್ದಾರಾ ಎನ್ನುತ್ತಾಳೆ. ಇದರಿದಂದ ಇಲ್ಲದೇ ಇರುವ ಅನುಮಾನ ಬೀಜ ಬಿತ್ತಿದಂತಾಗಿದೆ. ಇದನ್ನು ಕೇಳಿದ ಪುಟ್ಟಕ್ಕ ಮಾತ್ರ ಬಹಳ ಭಯಗೊಳ್ಳುತ್ತಾಳೆ. ಯಾಕೆಂದರೆ ಆಕೆಗೆ ತನ್ನ ಮಗಳೆಂದರೆ ಜೀವ.

Kannada serial puttakkana makkalu written updated on 29th may

ಅಕ್ಕನನ್ನು ನೆನೆದು ಅಳುತ್ತಿರುವ ಸುಮಾ

ಸ್ನೇಹಾ ಬಹಳ ಗಟ್ಟಿಗಿತ್ತಿ ಕೂಡ. ಆದರೆ ಸ್ನೇಹಾ ಕಾಣೆಯಾಗಿರುವುದನ್ನು ನೋಡಿದಾಗ ಪುಟ್ಟಕ್ಕ ಬಹಳ ಭಯ ಪಟ್ಟುಕೊಂಡು ಇರುತ್ತಾಳೆ. ಇನ್ನು ನಂಜಮ್ಮ ಕರೆ ಮಾಡಿದ ಬಳಿಕ ಬಂಗಾರಮ್ಮಗೆ ಕರೆ ಮಾಡಿದ ಪುಟ್ಟಕ್ಕ ನಿಮ್ಮನ್ನು ಬಹಳ ಆತುರವಾಗಿ ಭೇಟಿ ಆಗಬೇಕಿತ್ತು ಎಂದು ಹೇಳುತ್ತಾಳೆ. ಆಗ ಬಂಗಾರಮ್ಮ, ಪುಟ್ಟಕ್ಕ ಹೇಳಿದ ಕಡೆಗೆ ಬರುತ್ತಾರೆ.

ಬಂಗಾರಮ್ಮ ಭೇಟಿ ಆದ ಪುಟ್ಟಕ್ಕ

ಪುಟ್ಟಕ್ಕ ಭಯದಿಂದ ಇರುವುದನ್ನು ಕಂಡು ಬಂಗಾರಮ್ಮ ವಿಚಾರಣೆ ಮಾಡಿದಾಗ ಸ್ನೇಹಾ ಕಾಣೆಯಾಗಿರುವ ಬಗ್ಗೆ ಹೇಳುತ್ತಾಳೆ. ಸ್ನೇಹಾಗೆ ಈ ಮದುವೆ ಇಷ್ಟ ಇರಲಿಲ್ಲ. ಆದರೂ ಬಲವಂತದಿಂದ ಮದುವೆಗೆ ಒಪ್ಪಿಗೆ ನೀಡಿದ್ದಳು. ಆದರೆ ಇದೀಗ ಆಕೆ ಕಾಣಿಸುತ್ತಿಲ್ಲ ಎಂದು ಬಂಗಾರಮ್ಮ ಬಳಿ ಭಯ ತೋಡಿಕೊಳ್ಳುತ್ತಾಳೆ.

Kannada serial puttakkana makkalu written updated on 29th may

ಬಂಗಾರಮ್ಮ ಹಾಗೂ ಪುಟ್ಟಕ್ಕ ಮಾತನಾಡುವುದನ್ನು ನೋಡಿದ ಕಂಠಿ

ಆ ವೇಳೆ ಆ ಕಡೆಯಿಂದ ಕಂಠಿ ಬರುತ್ತಾನೆ. ಬಂಗಾರಮ್ಮ ಹಾಗೂ ಪುಟ್ಟಕ್ಕ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಳ್ಳುತ್ತಾ ಇರುತ್ತಾನೆ. ಇನ್ನೂ ಬಂಗಾರಮ್ಮ, ಪುಟ್ಟಕ್ಕಗೆ ಸಮಾಧಾನ ಮಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಮೆತ್ತಗೆ ಬಂಗಾರಮ್ಮನ ಮೇಲಿರುವ ಅನುಮಾನವನ್ನು ಹೊರಹಾಕುತ್ತಾ ಇರುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಅಚ್ಚರಿ ವ್ಯಕ್ತಪಡಿಸುತ್ತಾಳೆ.

ನಂಜಮ್ಮ ಮಾತಿಗೆ ಭಯಗೊಂಡ ಪುಟ್ಟಕ್ಕ

ಪುಟ್ಟಕ್ಕ ನೀನು ನನ್ನ ಮೇಲೆ ಅನುಮಾನ ಪಡುತ್ತಿದ್ದೀಯಾ? ನಾನು ನಿನ್ನ ಮಗಳನ್ನು ಆ ರೀತಿ ಅಪಾಯಕ್ಕೆ ಗುರಿ ಮಾಡಿಲ್ಲ ಎಂದು ಹೇಳುತ್ತಾಳೆ. ಆಗ ಪುಟ್ಟಕ್ಕ, ನಂಜಮ್ಮ ಹೇಳಿದ್ದ್ದನ್ನೆಲ್ಲ ಹೇಳುತ್ತಾಳೆ. ಅದನ್ನು ಕೇಳಿಸಿಕೊಂಡ ಬಂಗಾರಮ್ಮ ಸಮಾಧಾನ ಮಾಡುತ್ತಾಳೆ.

ಪುಟ್ಟಕ್ಕನಿಗೆ ಬಂಗಾರಮ್ಮ ಭರವಸೆ

ಪುಟ್ಟಕ್ಕ ನಿನ್ನ ಮಗಳು ಎಲ್ಲಿಯೇ ಇರಲಿ ನಾನು ಹುಡುಕುತ್ತೇನೆ ಎಂದು ಭರವಸೆ ನೀಡುತ್ತಾಳೆ. ಆ ಬಳಿಕ ಅಲ್ಲಿಂದ ಪುಟ್ಟಕ್ಕ ಮೆತ್ತಗೆ ಮನೆಯತ್ತ ಮುಖ ಮಾಡುತ್ತಾಳೆ. ಇನ್ನು ಪುಟ್ಟಕ್ಕ ಮನೆ ತಲುಪುವ ವೇಳೆ ಮುರಳಿ ಹಾಗೂ ಸಹನಾ ಬರುತ್ತಾರೆ. ಸಹನಾ ಇಲ್ಲದನ್ನು ಕಂಡು ಬಹಳ ಗಾಬರಿಗೊಂಡಿರುತ್ತಾರೆ.

ಪುಟ್ಟಕ್ಕನ ಮಾತಿಗೆ ಸಹನಾ ಶಾಕ್

ಇನ್ನು ಪುಟ್ಟಕ್ಕ ಮಾತ್ರ ಸ್ನೇಹಾಗೆ ಏನು ಆಗಲ್ಲ. ಬಂಗಾರಮ್ಮ ಸ್ನೇಹಳನ್ನು ಹೇಗಾದರೂ ಮಾಡಿ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ ಎಂದಾ ಎಲ್ಲರಿಗೂ ಶಾಕ್ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 29th may. here is details about Puttakka Meets Bangaramma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X