Don't Miss!
- News
ರಾಜಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಂಗಾಧರ್ ಮೂರ್ತಿಯವರ ವಿಶೇಷ ಸಂದರ್ಶನ
- Sports
ICC Emerging Women's Cricketer: 2022ರ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವ ಪಡೆದ ರೇಣುಕಾ ಸಿಂಗ್
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Finance
ಕಾಲ್ಸೆಂಟರ್ನಲ್ಲಿ 8,000 ಪಡೆಯುತ್ತಿದ್ದ ವ್ಯಕ್ತಿ ಈಗ 2,094 ಕೋಟಿ ರೂ ಒಡೆಯ!
- Technology
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- Automobiles
ವಿದೇಶದಲ್ಲಿ 20 ಲಕ್ಷವಿದ್ದ ಕಾರು ಭಾರತಕ್ಕೆ ಬಂದರೆ 50 ಲಕ್ಷ ರೂ. ದುಬಾರಿಯಾಗಲು ಕಾರಣವೇನು..?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರು ತಂಡಕ್ಕೆ ಬೆವರಿಳಿಸಿ ಕಪ್ಪು ಗೆದ್ದ ಪುಟ್ಟಕ್ಕನ ತಂಡ
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಮುದ ನೀಡುತ್ತಿದೆ. ಇದೀಗ ಪುಟ್ಟಕ್ಕನ ಟೀಂ ಬೆಂಗಳೂರು ತಂಡದೊಂದಿಗೆ ಖೋ-ಖೋ ಆಡುತ್ತಾ ಇದ್ದಾರೆ. ಪುಟ್ಟಕ್ಕನಿಗೆ ಬೆಂಗಳೂರು ತಂಡದ ಕೋಚ್ ಅದೆಷ್ಟೇ ಆಡಿಕೊಂಡರು, ಮೂದಲಿಸಿದರು ಅದನ್ನೆಲ್ಲ ತಡೆದುಕೊಂಡು ಪುಟ್ಟಕ್ಕ ನಾನು ಮಾತನಾಡಿ ತೋರಿಸುವುದಿಲ್ಲ. ಆಟ ಆಡಿ ಗೆದ್ದು ತೋರಿಸುತ್ತೇನೆ. ನಿಮಗೆ ಆ ಮೂಲಕ ನಾನು ಉತ್ತರ ನೀಡುತ್ತೇನೆ ಎಂದು ಸವಾಲು ಹಾಕುತ್ತಾಳೆ.
ಬೆಂಗಳೂರು ತಂಡದ ಕೋಚ್ ಏನೇ ಮಾತನಾಡಿದರು ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಏನೂ ಮರು ಮಾತನಾಡದೆ ಇರುತ್ತಾಳೆ. ಪುಟ್ಟಕ್ಕ ತಮ್ಮ ತಂಡಕ್ಕೆ ಹುರಿದುಂಬಿಸುತ್ತಾಳೆ. ಪುಟ್ಟಕ್ಕನ ತಂಡದ ಮಕ್ಕಳು ಮೊದಲಿಗೆ ಅಷ್ಟಾಗಿ ಆಟ ಆಡದೆ ಇದ್ದರೂ ಕೊನೆ ಕೊನೆಗೆ ಬಹಳ ಅದ್ಭುತವಾಗಿ ಆಟ ಆಡುತ್ತಾರೆ ಕೊನೆಗೆ ಒಂದು ಪಾಯಿಂಟ್ ಗೆಲ್ಲಬೇಕು ಎಂದು ಯೋಚನೆ ಮಾಡುತ್ತಾ ಇರುವಾಗ ಸುಮಾಗೆ ಪುಟ್ಟಕ್ಕ ಧೈರ್ಯ ತುಂಬುತ್ತಾಳೆ. ಆ ವೇಳೆ ಸುಮಾಗೆ ಅವ್ವ ಕೊಟ್ಟ ಕೋಚಿಂಗ್ ನೆನಪಾಗುತ್ತದೆ.
ಮುಳ್ಳಿನ ಪೊದೇ ಮೇಲಿನಿಂದ ಹಾರುವಂತ ಕೋಚಿಂಗ್ ಕೂಡ ನೀಡುತ್ತಾರೆ ಪುಟ್ಟಕ್ಕ. ಇದನ್ನು ನೆನಪಿಸಿಕೊಂಡ ಸುಮಾ ಛಲ ಬಿಡದೆ ಆಟ ಆಡುತ್ತಾಳೆ ಇದನ್ನು ಕಂಡ ಪುಟ್ಟಕ್ಕಗೆ ಖುಷಿ ಆಗುತ್ತದೆ. ತಾನು ಕೊಟ್ಟ ಕೋಚಿಂಗ್ ಮಕ್ಕಳು ಸರಿಯಾಗಿ ಕಲಿತುಕೊಂಡಿದ್ದಾರೆ ಎಂದು ಖುಷಿ ಪಡುತ್ತಾಳೆ. ಇನ್ನು ಪುಟ್ಟಕ್ಕನ ತಂಡ ಗೆದ್ದು ಬೀಗುತ್ತಾ ಇರುವಾಗ ಬೆಂಗಳೂರು ತಂಡದ ಕೋಚ್ ಮಾತ್ರ ಸುಮ್ಮನೆ ಇರುತ್ತಾರೆ. ಈ ವೇಳೆ ಪುಟ್ಟಕ್ಕನ ಮಗಳು ಆ ಕೋಚ್ ಅನ್ನು ಕರೆದು ಹೇಳುತ್ತಾಳೆ ಮೇಡಂ ನಮಗೆ ಎಂ ಎಲ್ ಎ ಸಾಥ್ ಇದ್ದಾರಾ ಎಂದು ಕೇಳಿದಿರಿ ಅಲ್ವಾ ನಮಗೆ ಎಂಪಿ ಸಾಥ್ ಇದೆ ಮೇಡಂ ಎಂದು ಹೇಳುತ್ತಾರೆ ನಮಗೆ ಮದರ್ ಸಾಥ್ ಇದೆ ಎಂದು ಹೇಳುತ್ತಾಳೆ.

ಅವಮಾನದಿಂದ ತಲೆ ತಗ್ಗಿಸಿದ ಬೆಂಗಳೂರು ಕೋಚ್
ಇದನ್ನೆಲ್ಲ ಕೇಳಿ ಬೆಂಗಳೂರು ತಂಡದ ಕೋಚ್ ಗೆ ಬಹಳ ಅಪಮಾನ ಆಗುತ್ತದೆ. ಇನ್ನು ರಾಜೀ ಮಾತ್ರ ತನ್ನ ಪ್ಲಾನ್ ವರ್ಕ್ ಆಗಲಿಲ್ಲ ಎಂದು ಬೇಸರ ಮಾಡುತ್ತಾ ಇರುತ್ತಾಳೆ ಆದರೆ ಗೋಪಾಲ ಮಾತ್ರ ಬಹಳ ಖುಷಿ ಪಡುತ್ತಾನೆ. ಆ ವೇಳೆ ಪುಟ್ಟಕ್ಕ ಹೇಳುತ್ತಾಳೆ ಆ ಥರ ಎಲ್ಲಾ ಹೇಳಬಾರದು ಎಂದಾಗ ಪುರುಷೋತ್ತಮ ಮಾತ್ರ ನಾಲ್ಕೈದು ಜಯ ಘೋಷವನ್ನು ಹೇಳುತ್ತಾರೆ.. ಬಳಿಕ ಈ ಬಾರಿ ರನ್ನರ್ ಆಫ್ ಆಗಿ ಸೈಂಟ್ ಮೇರಿಸ್ ಮುಡಿಗೇರಿಸಿಕೊಂಡಿದೆ. ಹಾಗೆಯೇ ವಿನ್ನರ್ ಆಗಿ ಪುಟ್ಟಕ್ಕನ ಟೀಂ ಮೆಡಲ್ ಅನ್ನು ತೆಗೆದುಕೊಳ್ಳುತ್ತಾರೆ.. ಆಗ ಸುಮಾ ಪುಟ್ಟಕ್ಕನನ್ನೂ ಕೆರೆದು ನೀನೇ ನನಗೆ ಅವಾರ್ಡ್ ಕೊಡಬೇಕು ಎಂದು ಹೇಳುತ್ತಾಳೆ ಇದನ್ನು ಕೇಳಿದ ಪುಟ್ಟಕ್ಕ ಗಲಿಬಿಲಿ ಗೊಂಡರು ಬಳಿಕ ಕೊಂಚ ಸಾಂತ್ವನ ಮಾಡುತ್ತಾ ವೇದಿಕೆಗೆ ಬರುತ್ತಾಳೆ.. ಮುಂದೇನು ಕಾದು ನೋಡಬೇಕಿದೆ.

ಬಂಗಾರಮ್ಮನ ಭಯದಲ್ಲೇ ಕಂಠಿ ಗೆಳೆಯರು
ಇನ್ನು ಕಂಠಿ ಗೆಳೆಯರನ್ನು ರೂಮಿನ ಹತ್ತಿರ ಬಿಟ್ಟು ಸ್ನೇಹಾ ಜೊತೆ ಸುತ್ತಾಟ ಮಾಡಲು ಹೋಗಿದ್ದಾನೆ ಆದರೆ ಇದರಿಂದ ಭಯ ಗೊಂಡ ಕಂಠಿ ಗೆಳೆಯರು ಏನು ಮಾಡಬೇಕು ಎಂದು ತೋಚದೇ ವಿಲ ವಿಲ ಎಂದು ಒದ್ದಾಡುತ್ತಾ ಇದ್ದಾರೆ. ಏನು ಮಾಡುವುದು ಬಂಗಾರಮ್ಮ ಬಂದರೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಈ ವೇಳೆ ಮುಂಗುಸಿ ಹೇಳುತ್ತಾನೆ ನಾನು ಈಗಾಗಲೇ ಅಮ್ಮನ ಬಳಿ ಪೆಟ್ಟು ತಿಂದಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮತ್ತೊಬ್ಬನಿಗೂ ಭಯ ಆಗುತ್ತದೆ. ಈ ಸಲ ಸರದಿ ನಿಮ್ಮದು ಎಂದು ಹೇಳುತ್ತಾನೆ ಅದಕ್ಕೆ ಮತ್ತೊಬ್ಬ ಇಲ್ಲ ನನ್ನ ಕೈಯಿಂದ ಆಗಲ್ಲ ಎಂದು ಹೇಳುತ್ತಾನೆ. ಈ ವೇಳೆ ಅಲ್ಲಿಗೆ ಬಂದ ಬಂಗಾರಮ್ಮ ಕಂಠಿ ರೂಮಿನ ಬಾಗಿಲು ತಟ್ಟುತ್ತಾರೆ. ಇದನ್ನು ಕೇಳಿ ಭಯಗೊಂಡ ಮುಂಗುಸಿ ಹಾಗೂ ಆತನ ಗೆಳೆಯನಿಗೆ ಏನು ಮಾಡುವುದು ಎಂದು ತಿಳಿಯದೇ ಭಯ ಪಡುತ್ತಾರೆ.

ಬಂಗಾರಮ್ಮನಿಗೆ ಸುಳ್ಳು ಹೇಳಿದ ಕಂಠಿ ಗೆಳೆಯರು
ಬಳಿಕ ನಾಗನನ್ನು ಬೆಡ್ ಶೀಟ್ ಹೊದಿಸಿ ಮಲಗಿಸಿ ಬಾಗಿಲು ತೆಗೆಯುತ್ತಾನೆ ಮುಂಗುಸಿ. ಬಂಗಾರಮ್ಮ ತನ್ನ ಮಗ ಇನ್ನೂ ಮಲಗಿದ್ದಾನೆ ಎಂದು ಕೊಂಡು ಮುಂಗುಸಿ ಬಳಿ ಹೇಳುತ್ತಾರೆ ಯಾಕೆ ಹೀಗೆ ಮಲಗಿದ್ದಾನೆ ಎಂದಾಗ ಮುಂಗುಸಿ, ಅವ್ವನ ಬಳಿ ಅದು ಇದು ಎಂದು ಸಬೂಬು ಹೇಳುತ್ತಾನೆ ಇದನ್ನು ಕೇಳಿದ ಬಂಗಾರಮ್ಮ ಮುಂಗುಸಿ ಬಳಿ, 'ಡಾಕ್ಟರ್ ಬರೋದು ಕೊಂಚ ತಡ ಆಗುತ್ತಂತೆ ಅದಕ್ಕೆ ಹೇಳಿ ಹೋಗೋಣ ಅಂತ ಬಂದೆ' ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆತ ಸರಿಯಮ್ಮ ಎಂದು ಹೇಳುತ್ತಾನೆ. ಬೆಡ್ ಶೀಟ್ ಹೊದ್ದು ಮಲಗಿರುವ ನಾಗ ಮಾತ್ರ ಮಿಮಿಕ್ರಿ ಮಾಡಿ ಕಂಠಿ ಧ್ವನಿಯಲ್ಲಿ ಮಾತನಾಡುತ್ತಾನೆ.

ನಾಗ ಮಾಡಿದ ನಾಟಕ ವಸು ಮುಂದೆ ಬಯಲು
ಲೇಯ್ ಮುಂಗುಸಿ ಯಾರನ್ನು ಒಳಗೆ ಬಿಡಬೇಡ ನಾನು ಮಲಗಬೇಕು ಎಂದು ಹೇಳುತ್ತಾನೆ ಇದನ್ನು ಕೇಳಿದ ಬಂಗಾರಮ್ಮ ಹೊರ ಹೋಗುತ್ತಾರೆ. ಬಂಗಾರಮ್ಮ ಹೋದ ಬಳಿಕ ಅಣ್ಣನನ್ನು ವಿಚಾರಿಸಿಕೊಂಡು ಹೋಗೋಣ ಎಂದು ವಸು ಬರುತ್ತಾಳೆ. ಅಣ್ಣಯ್ಯನನ್ನು ನೋಡಲೇ ಬೇಕು ಎಂದು ಮುಸುಕು ತೆಗೆದಾಗ ನಾಗನನ್ನು ಕಂಡು ಬೆಚ್ಚಿ ಬೀಳುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.