Don't Miss!
- News
ಕಡಿಮೆ ಬಡ್ಡಿದರದಲ್ಲಿ ರೈತರಿಗೆ 20 ಲಕ್ಷ ಸಾಲ ಘೋಷಿಸಿದ ಸಿದ್ದರಾಮಯ್ಯ
- Automobiles
ಮಂಗಳೂರಿನಲ್ಲಿ ಐಕಾನಿಕ್ ವಿಲ್ಲೀಸ್ ಜೀಪ್ನಂತೆ ಮಾಡಿಫೈಗೊಂಡ ಮಹೀಂದ್ರಾ ಥಾರ್
- Finance
ಬಜೆಟ್ 2023: ಗಣರಾಜ್ಯೋತ್ಸವ ದಿನದಂದೇ ಬಜೆಟ್ ಹಲ್ವಾ ಸಮಾರಂಭ
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುರಳಿ ಮೇಷ್ಟ್ರನ್ನು ನೋಡಲು ಬಂದ ಸಹನಾಗೆ ಬಿಗ್ ಶಾಕ್!
ಸಹನಾ, ಮುರಳಿ ಮೇಷ್ಟ್ರನ್ನು ನೋಡಲು ಕಾಲೇಜು ಬಳಿ ಬರುತ್ತಾಳೆ. ಆ ವೇಳೆ ಅಲ್ಲಿಗೆ ಕಂಠಿ ಕೂಡ ಬರುತ್ತಾನೆ ಸಹನಾಳನ್ನು ನೋಡಿದ ಕಂಠಿ ಸಹನಾ ಅವರೇ ನೀವೇನು ಮಾಡುತ್ತಿದ್ದೀರಿ ಇಲ್ಲಿ? ಸ್ನೇಹಾ ಮತ್ತು ನೀವು ಜೊತೆಗೆ ಬಂದ್ರ ಸ್ನೇಹಾ ಎಲ್ಲಿ ಎಂದೆಲ್ಲ ವಿಚಾರ ಮಾಡುತ್ತಾನೆ. ಇದನ್ನು ನೋಡಿದ ಸಹನಾ ಅರ್ಥ ಆಗದೆ ನಿಲ್ಲುತ್ತಾಳೆ ಬಳಿಕ ಹೇಳುತ್ತಾನೆ ನಿಮಗೂ ನನ್ನ ಮೇಲೆ ಕೋಪ ಇದೆ ಅನ್ನಿಸುತ್ತದೆ. ಎಂದು ಹೇಳಿದಾಗ ಮೇಷ್ಟ್ರು ಅಲ್ಲಿಗೆ ಬಂದು ಸಹನಾ ಅವರೇ ನೀವೇನು ಇಲ್ಲಿ ಏನು ಮಾಡುತ್ತಿದ್ದೀರಾ ಇಲ್ಲಿ ಎಂದೆಲ್ಲ ವಿಚಾರ ಮಾಡಿದಾಗ ಕಂಠಿಯ ಗೆಳೆಯನಿಗೆ ಸಿಟ್ಟು ಬರುತ್ತದೆ.
ಆಗ ಮೇಷ್ಟ್ರು, ಸುಮಾಳನ್ನು ಹುಡುಕೋದಿಕ್ಕೆ ಬಂದ್ರ ಬನ್ನಿ ಎಂದು ಕರೆದುಕೊಂಡು ಹೋಗಲು ಬರುತ್ತಾರೆ ಆಗ ಕಂಠಿ, ಸಹನಾ ಅವರೇ ನಿಮ್ಮ ಬಳಿ ಮಾತನಾಡಬೇಕಿತ್ತು ಎಂದಾಗ ಸಹನಾ ಜೋರಾಗಿ, ಏನು ಮಾತಾಡಬೇಕಿತ್ತು ನನ್ನ ಬಳಿ ಎಂದು ಕೇಳುತ್ತಾಳೆ. ಅದಕ್ಕೆ ಕಂಠಿ, ಸ್ನೇಹಾ ನಿಮ್ಮ ಜೊತೆ ಬಂದ್ಲಾ ಎಲ್ಲಿದ್ದಾಳೆ ಎಂದು ಕೇಳುತ್ತಾನೆ. ಆಗ ಸ್ನೇಹಾನೆ ಜೋರಾಗಿ ನಾನಿಲ್ಲಿ ಇದ್ದೇನೆ ಶ್ರೀ. ನೀವು ನನ್ನ ಹುಡುಕುತ್ತಾ ಇಲ್ಲಿಗೆ ಬಂದ್ರ ಇದೆಲ್ಲ ಚೆನ್ನಾಗಿ ಇರೋದಿಲ್ಲ ನೀವು ಹೀಗೆಲ್ಲ ಮಾಡಿದರೆ ನಿಮ್ಮ ಮೇಲಿರುವ ಅಲ್ಪ ಸ್ವಲ್ಪ ಗೌರವ ಹಾಳಾಗುತ್ತದೆ ಎಂದು ಹೇಳುತ್ತಾಳೆ.

ಕಂಠಿ ಬಳಿ ಕಠೋರವಾಗಿ ನಡೆದುಕೊಂಡ ಸ್ನೇಹಾ
ಅಕ್ಕನ ಕಡೆ ನೋಡಿ ನೀನೇನು ಮಾಡುತ್ತಿದ್ದೀಯಾ ಇಲ್ಲಿ ಎಂದು ಕೇಳುತ್ತಾಳೆ ಸ್ನೇಹಾ ಮಾತಿಗೆ ಸಹನಾ ಕಕ್ಕಾಬಿಕ್ಕಿ ಆಗುತ್ತಾಳೆ. ಪಕ್ಕದಲ್ಲೇ ಇದ್ದ ಮೇಷ್ಟ್ರು ಹೇಳುತ್ತಾರೆ ಸುಮಾಗೆ ಊಟ ಕೊಡಕ್ಕೆ ಬಂದಿದ್ದಾರೆ ಅನ್ನಿಸುತ್ತದೆ ಎಂದು ಹೇಳಿ ಬಚಾವ್ ಮಾಡುತ್ತಾನೆ. ಬಳಿಕ ಸ್ನೇಹಾ ಹಾಗೂ ಸಹನಾ ಹೊರಟು ಹೋಗುತ್ತಾರೆ. ಕಂಠಿಗೆ ಸ್ನೇಹಾ ಮಾತಿನಿಂದ ಬೇಸರ ಆಗುತ್ತದೆ. ಸ್ನೇಹಾ ಬಳಿ ಮಾತನಾಡಬೇಕು ಎಂದು ಅದೆಷ್ಟು ಚಡಪಡಿಸುತ್ತಿದ್ದನೋ ಗೊತ್ತಿಲ್ಲ. ಆದರೆ ಸ್ನೇಹಾ ಮಾತ್ರ ಇದಕ್ಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅಲ್ಲಿಂದ ಹೊರಟು ಹೋಗುತ್ತಾಳೆ.

ರಾಜೇಶ್ವರಿ ಮನೆಗೆ ಆಗಮಿಸಿದ ಮಂಜಮ್ಮ
ಇನ್ನೂ ರಾಜೇಶ್ವರಿ ಮನೆಗೆ ಮಂಜಕ್ಕ ಬರುತ್ತಾಳೆ. ಮಂಜಕ್ಕನನ್ನು ನೋಡಿ ರಾಜೇಶ್ವರಿಗೆ ಶಾಕ್ ಆಗುತ್ತದೆ. ಮಂಜಕ್ಕ ಪಜೀತಿಗೆ ಬಿದ್ದ ವಿಚಾರವನ್ನು ರಾಜೇಶ್ವರಿಗೆ ತಿಳಿಸುತ್ತಾಳೆ. ಶಾಂತಕ್ಕ ಇದೀಗ ತುಂಬಾ ಅಲರ್ಟ್ ಆಗಿದ್ದಾಳೆ. ಇದರಿಂದ ಇನ್ನೂ ಮುಂದೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಹೇಳುತ್ತಾರೆ. ಬಳಿಕ ಇನ್ನೂ ಒಂದು ಸಿಹಿ ಸುದ್ದಿಯಿದೆ ಎಂದು ಹೇಳುತ್ತಾಳೆ. ರಾಜೇಶ್ವರಿ ಕೂತುಹಲ ಹೆಚ್ಚಾಗಿ ಏನೇ ಅದು ಎಂದು ಹೇಳು ಎಂದು ಹೇಳಿದಾಗ ಸಹನಾ ಮದುವೆಗೆ ಗಂಡಿನ ಕಡೆಯವರು ಒಪ್ಪಿದ್ದಾರೆ ಎಂದು ಹೇಳುತ್ತಾಳೆ.

ಸಹನಾ ಮದುವೆ ವಿಚಾರ ಪ್ರಸ್ತಾಪ ಮಾಡಿದ ಮಂಜಕ್ಕ
ಇದನ್ನು ಕೇಳಿ ರಾಜೇಶ್ವರಿ ಮಂಜಕ್ಕಳನ್ನು ಹಿತ್ತಲ ಬಳಿ ಕರೆದುಕೊಂಡು ಹೋಗುತ್ತಾಳೆ. ರಾಜೇಶ್ವರಿ ಹೇಳುತ್ತಾಳೆ ಮೆತ್ತಗೆ ಹೇಳು ಕಾಳಿ ಇದ್ದಾನೆ ಸಹನಾ ಎಂದ ಕೂಡಲೇ ಮೈಯೆಲ್ಲ ಕಣ್ಣಾಗಿರುತ್ತದೆ ಎಂದು ಹೇಳುತ್ತಾಳೆ. ಪುಟ್ಟಕ್ಕಗೆ ಈ ಬಾರಿಯಾದರೂ ಸರಿಯಾಗಿ ಚಳಿ ಬಿಡಿಸುತ್ತೇನೆ ನೋಡುತ್ತಿರು. ಮದುವೆ ನಡೆಯದ ಹಾಗೆ ಮಾಡುತ್ತೇನೆ ಎಂದು ಹೇಳುತ್ತ ಇರುತ್ತಾಳೆ. ಇದನ್ನು ಕಾಳಿ ಕೇಳಿಸಿಕೊಳ್ಳುತ್ತಾ ಇರುತ್ತಾನೆ.

ಅವ್ವನ ಬಳಿ ಮದುವೆ ಬಗ್ಗೆ ವಿಚಾರಿಸಿದ ಸ್ನೇಹಾ
ಇನ್ನೂ ಪುಟ್ಟಕ್ಕ ಖೋ ಖೋ ಕೊಂಚಿಂಗ್ ಕೊಡಲು ತಯಾರಿ ನಡೆಸುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಸ್ನೇಹಾ ಮದುವೆ ಬಗ್ಗೆ ಅವ್ವನ ಬಳಿ ಕೇಳುತ್ತಾಳೆ ಇದನ್ನು ಕೇಳಿದ ಪುಟ್ಟಕ್ಕ ಹೇಳುವುದೇ ಮರತೆ ಐದು ಆರು ತಾರೀಖು ಕೊಟ್ಟಿದ್ದಾರೆ ಅದರಲ್ಲಿ ಒಳ್ಳೆ ದಿನ ನೋಡಿ ಹೇಳಬೇಕು ಎಂದು ಹೇಳಿದಾಗ ಯಾವುದು ಹತ್ತಿರದ ಡೇಟ್ ಇದೆ ಅದನ್ನೇ ಫಿಕ್ಸ್ ಮಾಡು ಎಂದು ಹೇಳುತ್ತಾರೆ. ಅದಕ್ಕೆ ಸ್ನೇಹಾ ಹೇಳುತ್ತಾಳೆ ಬರೋ ಗುರುವಾರ ಆಗಬಹುದಾ ಎಂದು ಕೇಳಿದಾಗ ಸ್ನೇಹಾ ಖುಷಿ ಯಿಂದ ಶುಭಕಾರ್ಯ ಬೇಗ ಜರಗಳಿ ಎಂದು ಹೇಳುವಾಗ ಸಹನಾ ಬರುತ್ತಾಳೆ. ಏನು ಸ್ನೇಹಾ ಶುಭ ಕಾರ್ಯ ಎಂದಾಗ ಸುಮಾನು ಆಟಕ್ಕೆ ಪ್ರಾಕ್ಟೀಸ್ ಬರೋ ಕಾಲ ಬೇಗ ಇದೆ ಅದಕ್ಕೆ ಅವಳು ಬಂದರೆ ಶುಭಕಾರ್ಯ ಆದ ಹಾಗೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ.