Puttakkana Makkalu: ಅತ್ತೆಯ ಮುಂದೆ ರೌದ್ರಾವತಾರ ಎತ್ತಿದ ಸಹನಾ ಕೋಪಕ್ಕೆ ಬೆದರಿದ ಕೌಸಲ್ಯ ಮುಂದೇನು ಮಾಡುತ್ತಾಳೆ?

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಕಂಠಿ ರಾಧಳನ್ನು ಮನಸಿಲ್ಲದ ಮನದಲ್ಲಿ ಒಪ್ಪಿಕೊಂಡು ಮದುವೆ ಆಗಲು ಸಿದ್ದ ಆಗುತ್ತಾನೆ.

ಸ್ನೇಹಾ ಭುವನ್ ಜೊತೆ ರಾಜಾರೋಷವಾಗಿ ಕೈ ಕೈ ಹಿಡಿದು ಸುತ್ತಾಡುತ್ತಾ ಇರುತ್ತಾಳೆ. ಇದನ್ನು ಕಂಡ ಕಂಠಿ ಮನದಲ್ಲಿ ನಿರ್ಧಾರ ಮಾಡಿ ಬಿಡುತ್ತಾನೆ. ತಾನು ಮದುವೆ ಆಗ ಬೇಕು.. ತನ್ನ ಹೆತ್ತ ತಾಯಿಗೆ ಯಾಕೆ ಇನ್ನಷ್ಟು ನೋವು ಕೊಡುವುದು ಎಂದೆಲ್ಲ ಯೋಚನೆ ಮಾಡಿ ಮದುವೆ ಮಾಡಿಕೊಳ್ಳಲು ಅಮ್ಮನ ಬಳಿ ಹೇಳಿದಾಗ ಮಾದೆ ಗೌಡರ ತಂಗಿ ಶಶಿಕಲಾ ಮಗಳನ್ನೆ ಕಂಠಿಗೆ ತಂದುಕೊಳ್ಳಬೇಕು ಎನ್ನುವ ಆಸೆಯನ್ನು ಬಂಗಾರಮ್ಮ ಇಟ್ಟುಕೊಂಡು ಇರುತ್ತಾಳೆ.

Kannada serial Puttakkana Makkalu written updated on 2nd june

ಆ ಪ್ರಕಾರವಾಗಿ ಬಂಗಾರಮ್ಮ ಅವರಿಬ್ಬರನ್ನು ಮನೆಗೆ ಕರೆಸಿ ಹೆಣ್ಣು ಕೇಳುವ ಶಾಸ್ತ್ರ ಮಾಡಿ ಮುಗಿಸಿ ನಿಶ್ಚಿತಾರ್ಥ ಕೂಡ ತರಾತುರಿಯಲ್ಲಿ ಮಾಡಿ ಮುಗಿಸಿ ಬಿಡುತ್ತಾರೆ. ನಿಶ್ಚಿತಾರ್ಥ ಸಂದರ್ಭ ಕಂಠಿಗೆ ಸ್ನೇಹಳದ್ದೇ ನೆನಪು. ಸ್ನೇಹಾ ಎದುರು ಬಂದು ನಿಂತಂತೆ ಹಾಗೆಯೇ ಉಂಗುರ ತೊಡಿಸಿದ ಹಾಗೆ ಆಗುತ್ತದೆ.

ಸ್ನೇಹಾ ಹಾಗೂ ತನ್ನದೇ ನಿಶ್ಚಿತಾರ್ಥ ಎನ್ನುವ ಹಾಗೆ ಕಂಠಿ ಇದ್ದ. ಆದರೆ ಭ್ರಮೆ ಲೋಕದಿಂದ ಹೊರಗೆ ಬಂದ ಕಂಠಿ ಮಾತ್ರ ನನ್ನೆದುರು ನಿಂತಿರುವುದು ಹಾಗೆಯೇ ನನಗೆ ಉಂಗುರ ತೋಡಿಸಿದವರು ಸ್ನೇಹಾ ಅಲ್ಲ ಎನ್ನುವ ವಿಚಾರ ಆತನಿಗೆ ತಿಳಿಯುತ್ತಾ ಹೋಗುತ್ತದೆ.

ಈ ವಿಚಾರದಿಂದ ಕಂಠಿ ಮುಖ ಮಾತ್ರ ಬಾಡಿ ಹೋಗಿದ್ದರೆ ಬಂಗಾರಮ್ಮನ ಮುಖ ಅರಳಿರುತ್ತದೆ. ಮಗ ಬೇರೆ ಮದುವೆ ಆಗುತ್ತಿದ್ದಾನೆ. ಆ ಸ್ನೇಹಾ ಸಹವಾಸದಿಂದ ಈಗ ಮುಕ್ತಿ ಸಿಕ್ಕಿದೆ ಎಂದು ಅನ್ನಿಸುತ್ತಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಮನೆಯಲ್ಲಿ ಸಂಭ್ರಮ ಮನೆ ಮಾಡಿ ಇರುತ್ತದೆ . ಇನ್ನು ಕೌಸಲ್ಯ ಮಾತ್ರ ಪುಟ್ಟಕ್ಕನ ಮನೆಗೆ ಬರುತ್ತಾಳೆ . ಕೌಸಲ್ಯ ಹಾಗೂ ಆಕೆಯ ಮಗಳು ಇಬ್ಬರು ಬರುತ್ತಾರೆ.

ಅವರಿಬ್ಬರೂ ಬಂದಿರುವುದನ್ನು ನೋಡಿದ ಪುಟ್ಟಕ್ಕಗೆ ಸ್ವಲ್ಪ ಭಯದಲ್ಲಿ ಇರುತ್ತದೆ. ಇನ್ನು ಕೌಸಲ್ಯ ಹಾಗೂ ಚಿತ್ರಳನ್ನು ಮನೆಯ ಒಳಗೆ ಕರೆಯುತ್ತಾಳೆ ಪುಟ್ಟಕ್ಕ. ಪುಟ್ಟಕ್ಕ ನಿಂತುಕೊಂಡೆ ಇರುತ್ತಾಳೆ. ಅವರಿಬ್ಬರನ್ನು ಸೋಫಾದ ಮೇಲೆ ಕುಳಿತುಕೊಳ್ಳಲು ಪುಟ್ಟಕ್ಕ ಹೇಳುತ್ತಾಳೆ.

ಆ ಬಳಿಕ ಇಬ್ಬರೂ ಸೋಫಾದ ಮೇಲೆ ಕುಳಿತು ಸಹನಾ ಬಳಿ ಮಾತನಾಡುತ್ತಾರೆ. ಸಹನಾ ಮುರಳಿ ಕಾಲೇಜು ಎಂದೆಲ್ಲ ಓಡಾಡಿಕೊಂಡು ಇರುತ್ತಾನೆ. ಆದರೆ ನಿನಗೆ ಒಂದು ಮಾತು ಹೇಳಲು ಆಗುವುದಿಲ್ಲ.. ಯಾಕಮ್ಮ ನೀನು ಇಲ್ಲಿಯೇ ಇದ್ದೀಯಾ ಮನೆಗೆ ಬಾ ಎಂದು ಹೇಳಿದಾಗ ಸಹನಾ ತಾಯಿಯ ಬಳಿ ಸೋಫಾದ ಮೇಲೆ ಕುಳಿತುಕೊಳ್ಳಲು ಹೇಳುತ್ತಾಳೆ.

ನಾನು ಇನ್ನು ಮುಂದೆ ಆ ಮನೆಗೆ ಬರುವುದು ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕೌಸಲ್ಯ ತಬ್ಬಿಬ್ಬು ಆಗುತ್ತಾಳೆ. ಸಹನಾ ರೋಷ ಆವೇಶ ಕಂಡು ಪುಟ್ಟಕ್ಕ ಮಾತನಾಡದೆ ಸಹನಾ ಮುಖ ನೋಡುತ್ತಾಳೆ . ಆದರೆ ಸಹನಾ ಮಾತ್ರ ರೌದ್ರ ಅವತಾರದಲ್ಲಿ ಇರುತ್ತಾಳೆ. ಇದನ್ನು ನೋಡಿದ ಕೌಸಲ್ಯಗೆ ತಿಳಿಯುತ್ತದೆ. ಸಹನಾಗೆ ಎಲ್ಲಾ ವಿಚಾರ ತಿಳಿದು ಹೋಗಿದೆ ಎಂದು. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 2th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X