ಪುಟ್ಟಕ್ಕನ ಮಕ್ಕಳು: ಸ್ನೇಹಾ ಜೊತೆ ಕೈ ಜೋಡಿಸಿದ ಕಂಠಿ!
ಮೇಷ್ಟ್ರು ಹಾಗೂ ಅವರ ಬಾವ ನೇರವಾಗಿ ಪುಟ್ಟಕ್ಕನ ಮೆಸ್ ಬಳಿ ಬರುತ್ತಾರೆ. ಮೇಷ್ಟ್ರನ್ನೂ ನೋಡಿದ ಪುಟ್ಟಕ್ಕ ಬಹಳ ಖುಷಿ ಪಡುತ್ತಾರೆ. ಹಾಗೆಯೇ ಸಹನಾ ಕೂಡ ನಾಚಿ ನೀರಾಗುತ್ತಾಳೆ. ಇನ್ನು ಮೇಷ್ಟ್ರಿಗೆ ತಿನ್ನಲು ಪಲಾವು ಕೊಡುತ್ತಾಳೆ ಶಾಂತ. ಇನ್ನು ಅಲ್ಲಿಯೇ ಇದ್ದ ಸಹನಾ, ಮೇಷ್ಟ್ರು ಹಾಗೂ ಅವರ ಬಾವನಿಗೆ ಚಟ್ನಿ ಬಡಿಸುತ್ತಾಳೆ. ಮೇಷ್ಟ್ರ, ಬಾವನ ನಡತೆ ಮಾತ್ರ ಯಾರಿಗೂ ಇಷ್ಟ ಆಗುತ್ತಿಲ್ಲ. ಹೇಗಾದರೂ ಮಾಡಿ ಅನುಭವಿಸಿ ಬಿಡಬೇಕು ಎಂದು ಸಹನಾಳನ್ನು ಕಾಮದ ಕಣ್ಣುಗಳಿಂದ ನೋಡ ತೊಡಗುತ್ತಾನೆ.
ಆದರೆ ಇದಾವುದೂ ಯಾರಿಗೂ ಅರ್ಥ ಆಗುವುದಿಲ್ಲ. ಮೇಷ್ಟ್ರ ಬಳಿ ಪುಟ್ಟಕ್ಕ ಹೇಳುತ್ತಾರೆ, ಏನಾದರು ಹೇಳಿದರೆ ಮನೆಯವರು ಎಂದು ಕೇಳಿದಾಗ ಇಲ್ಲ ಅವ್ವ ಸ್ವಲ್ಪ ದಿನ ಆಗಬಹುದು ಅಕ್ಕ-ಬಾವ ಒಪ್ಪಿದ್ದಾರೆ ಆದರೆ ಅಮ್ಮ ಅಪ್ಪ ಮಾತ್ರ ಇನ್ನು ಒಪ್ಪಿಗೆ ನೀಡಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದಾಗ ಅಲ್ಲಿಗೆ ಬಂದ ಸ್ನೇಹಾ ಹೇಳುತ್ತಾಳೆ, ಅವರನ್ನು ಒಪ್ಪಿಸುವ ಜವಾಬ್ದಾರಿ ಮಾತ್ರ ನಿಮ್ಮದು. ನಮ್ಮ ಅಕ್ಕನಿಗೆ ಜಾಸ್ತಿ ಕಾಯಲು ಆಗುವುದಿಲ್ಲ ಎಂದು ತಮಾಷೆ ಮಾಡುತ್ತಾಳೆ ಆಗ ಅಲ್ಲಿಗೆ ಬಂದ ಶ್ರೀ, ಮೇಷ್ಟ್ರ ಕ್ಷೇಮ ಸಮಾಚಾರ ಕೇಳಿ ತಿಳಿದುಕೊಳ್ಳುತ್ತಾರೆ.

ಮೆಸ್‌ಗೆ ಬರುವ ಮೇಷ್ಟ್ರು
ಈ ವೇಳೆ ಸ್ನೇಹಾ, ಶ್ರೀ ಬಳಿ ಹೇಳುತ್ತಾಳೆ ಶ್ರೀ ನಾನು ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕು. ಸ್ವಲ್ಪ ಹೊರಗೆ ಬನ್ನಿ ಎಂದು ಕರೆಯುತ್ತಾಳೆ. ಬಳಿಕ ಹೇಳುತ್ತಾಳೆ ಶ್ರೀ ನನ್ನ ಅಮ್ಮನಿಗೆ ಸಹನಾ ಅಕ್ಕ ಹಾಗೂ ಮೇಷ್ಟ್ರ ವಿಚಾರ ಯಾರೋ ಹೇಳಿದ್ದಾರೆ. ಇಲ್ಲವಾದರೆ ಅವರಿಗೆ ಹೇಗೆ ಗೊತ್ತಾಗುತ್ತದೆ ಅಮ್ಮನ ಮೇಲೆ ಒಂದು ಇನ್ವೆಸ್ಟಿಗೇಷನ್ ಮಾಡಬೇಕು, ಅಕ್ಕನ ಮದುವೆ ಮಾತುಕತೆಯಂದೆ ದೊರೆ ಲೆಟರ್ ಬರೆದು ಶುಭಾಶಯ ತಿಳಿಸಿದ್ದಾರೆ. ಇದೆಲ್ಲ ಹೇಗೆ ಅಮ್ಮನಿಗೆ ಆ ದೊರೆ ಎಲ್ಲಾ ವಿಚಾರ ಹೇಳಿ ಇರಬಹುದೇ ಎಂದು ಹೇಳುತ್ತಾರೆ.

ಸ್ನೇಹಾ ಜೊತೆ ಕೈ ಸೇರಿಸುವ ಕಂಠಿ
ಇದನ್ನು ಕೇಳಿ ಶ್ರೀ ಮನದಲ್ಲೇ, 'ಮೀಸ್ಸು ಶ್ರೀನೂ ನಾನೇ ದೊರೇನು ನಾನೇ ಶ್ರೀಕಂಠನೂ ನಾನೇ ನಿಮ್ಮ ಮದುವೆ ಆಗುವ ಹುಡುಗನೂ ನಾನೇ ಎಂದು ಹೇಳುತ್ತಾನೆ. ಇನ್ನು ಸ್ನೇಹಾ ಹೇಳಿದ ಮಾತಿಗೆ ಒಪ್ಪಿಗೆಯನ್ನು ಸೂಚಿಸುತ್ತಾನೆ. ಇನ್ನು ರಾಜೀ ಬ್ಯೂಟಿ ಪಾರ್ಲರ್‌ಗೆ ಹೋಗಿ ಕೆಟ್ಟಿರುವ ಮುಖವನ್ನು ಸುಂದರವಾಗಿ ಮಾಡಲು ಹೋಗುತ್ತಾಳೆ. ಇನ್ನು ಗೋಪಾಲ ಬಂದು ಮನೆಯೆಲ್ಲ ಹುಡುಕುತ್ತಾನೆ. ರಾಜಿ ಎಂದು ಎಷ್ಟು ಕರೆದರೂ ರಾಜೀ ಇಲ್ಲ. ಎಲ್ಲಿ ಹೋಗಿರಬಹುದು ಎಂದು ಯೋಚನೆ ಮಾಡುತ್ತಾ ಇರಬೇಕಾದರೆ ಎದುರಿಗೆ ಕಾಳೀ ಬರುತ್ತಾನೆ.

ರಾಜಿ ನೋಡಿ ಬೆರಗಾದ ಗೋಪಾಲ
ನಿಮ್ಮ ಅಕ್ಕ ಎಲ್ಲಿ ಎಂದು ಕಾಳಿ ಬಳಿ ಕೇಳುತ್ತಾನೆ ಗೋಪಾಲ. ಆಗ ಕಾಳಿ ಹೇಳುತ್ತಾನೆ ಅಕ್ಕ ಮನೆಯಲ್ಲಿ ಇಲ್ಲ ಎಂದಾಗ ಗೋಪಾಲ ಸುಮ್ಮನಾಗುತ್ತಾರೆ. ಆಗ ರಾಜಿ ಪ್ರತ್ಯಕ್ಷ ಆಗುತ್ತಾಳೆ. ಮನೆ ಒಳಗೆ ಬಂದ ರಾಜಿಯನ್ನು ನೋಡಿ ನಿಬ್ಬೆರಗಾಗಿ ಹೋಗುತ್ತಾನೆ. ಎಷ್ಟು ಚಂದ ಕಾಣಿಸುತ್ತಾ ಇದ್ದೀಯಾ ಎಂದು ಹೋಗಳುತ್ತ ಇರುತ್ತಾನೆ ಬಳಿಕ ಗೋಪಾಲ ಹೇಳುತ್ತಾನೆ. ರಾಜಿ ನನಗೆ ಸ್ವಲ್ಪ ಕೆಲಸ ಇದೆ ನಾನು ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗುತ್ತಾನೆ.

ಅಮ್ಮನ ಪ್ಲಾನ್ ಅನ್ನು ರಟ್ಟು ಮಾಡುತ್ತಾನಾ ಪುರುಷೋತಮ?
ಆಗ ರಾಜಿ, ಕಾಳಿ ಬಳಿ ಬಾರಯ್ಯ ಮೇಷ್ಟ್ರ ತಂದೆ ಮನೆಗೆ ಹೋಗೋಣ. ಆತ ನಮ್ಮ ಗೆಳೆಯ ಎಂದು ಹೇಳಿ ಮೇಷ್ಟ್ರ ತಂದೆ ಬಳಿ ಮಾತನಾಡಲು ಅಲ್ಲಿಗೆ ಹೋಗುತ್ತಾರೆ. ಇದನ್ನು ಕೇಳಿಸಿಕೊಂಡ ಪುರುಷೋತ್ತಮ ಹೇಗಾದರೂ ಇದನ್ನು ಸುಮಾ ಇಲ್ಲವೇ ಮೇಷ್ಟ್ರ ಬಳಿ ಹೇಳಬೇಕು ಎಂದು ಕಾಯುತ್ತಾನೆ. ಇನ್ನೂ ಮೇಷ್ಟ್ರು ಕಾಲೇಜು ಬಳಿ ಬರುತ್ತಾರೆ. ಆಗ ಮೇಷ್ಟ್ರಿಗೆ ಎಲ್ಲಾ ಮಕ್ಕಳು ಕಿಂಡಲ್ ಮಾಡುತ್ತಾರೆ. ಮೇಷ್ಟ್ರಿಗೆ ಮದುವೆ ಎಂದು ಎಲ್ಲರೂ ಖುಷಿಯಿಂದ ಮೇಷ್ಟ್ರ ಕಾಲು ಎಳೆಯುತ್ತಾರೆ. ಮುಂದೇನು ಕಾದು ನೋಡಬೇಕಿದೆ


Click it and Unblock the Notifications











