ಸ್ವಾಮೀಜಿ ಹೇಳೊ ಮಾತನ್ನು ನಂಬಿ ಬಿಟ್ಟಳು ಪುಟ್ಟಕ್ಕ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದೆ. ಪುಟ್ಟಕ್ಕನ ಮನೆಗೆ ಇದೀಗ ಸ್ವಾಮೀಜಿ ಎಂಟ್ರಿ ನೀಡಿದ್ದಾರೆ. ಬರಬಹುದೇ ತಾಯಿ ಎಂದು ಪುಟ್ಟಕ್ಕನ ಬಳಿ ಕೇಳುತ್ತಾರೆ. ಸ್ವಾಮೀಜಿಯನ್ನು ನೋಡಿದ ಪುಟ್ಟಕ್ಕ ಗಾಬರಿಯಿಂದ ಬನ್ನಿ ಸ್ವಾಮೀಜಿ ಬನ್ನಿ ಕುಳಿತುಕೊಳ್ಳಿ ಎನ್ನುತ್ತಾಳೆ. ಆಗ ಸ್ವಾಮೀಜಿ ಅಲ್ಲಿಯೇ ಟೇಬಲ್ ನಲ್ಲಿ ಕುಳಿತುಕೊಳ್ಳುತ್ತಾರೆ.

''ಎಷ್ಟೇ ದೇವರ ಆರಾಧಕರಾದರು ಉದರಕ್ಕೆ ಹಸಿವೆಂಬುವುದು ನಿಶ್ಚಯ ತಾನೇ'' ಎನ್ನುತ್ತಾರೆ. ಬಳಿಕ ಅಲ್ಲಿರುವರನ್ನು ತೋರಿಸಿ ಇವರೆಲ್ಲ ನಾಲಗೆಯ ಬಂದಕ್ಕೆ ಬಂದಿದ್ದಾರೆ. ನಾನು ಆರೋಗ್ಯದ ದೃಷ್ಟಿಯಿಂದ ಬಂದಿದ್ದೇನೆ. ನಿಮ್ಮ ಮನೆಯ ಅಡಿಗೆ ಶುದ್ಧವಾಗಿದೆ ಆರೋಗ್ಯಕರವಾಗಿದೆ. ಸರಿ ಬಡಿಸು ತಾಯಿ ಎಂದು ಹೇಳುತ್ತಾರೆ ಸ್ವಾಮೀಜಿ. ಆಗ ಪುಟ್ಟಕ್ಕ ಹೂ.. ಹೂ ಎಂದು ಹೇಳುತ್ತಾಳೆ. ಬಳಿಕ ಸ್ವಾಮೀಜಿಗೆ ಅನ್ನ ಬಡಿಸುತ್ತಾರೆ ಪುಟ್ಟಕ್ಕ.

ಊಟ ತಿನ್ನದ ಸ್ವಾಮೀಜಿ

ಊಟ ತಿನ್ನದ ಸ್ವಾಮೀಜಿ

ಬಳಿಕ ಸ್ವಾಮೀಜಿ ಊಟವನ್ನು ಬಾಯಿಗೆ ಇಡಬೇಕು ಎನ್ನುವಷ್ಟರಲ್ಲಿ ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತಾರೆ. ಬಳಿಕ ಊಟ ಹಿಡಿದ ಕೈಯನ್ನು ನಿಧಾನವಾಗಿ ಕೆಳಗಿಳಿಸುತ್ತಾರೆ. ಇದರಿಂದ ಆತಂಕಕ್ಕೆ ಒಳಗಾದ ಪುಟ್ಟಕ್ಕ ಏನಾಯ್ತು ಸ್ವಾಮಿ ಎಂದು ಕೇಳಿದಾಗ ಸ್ವಾಮೀಜಿ ಹೇಳುತ್ತಾರೆ ಅಡುಗೆಯಲ್ಲಿ ದೋಷ ಕಾಣುತ್ತಿದೆ ಅಮ್ಮ ಎಂದಾಗ. ಪುಟ್ಟಕ್ಕಗೆ ಶಾಕ್ ಆಗುತ್ತದೆ. ಆಗ ಸ್ವಾಮೀಜಿ ಹೇಳುತ್ತಾರೆ ಏನೋ ಅಪಶಕುನ ಸಂಭವಿಸಿದೆ. ನೀನು ತಯಾರಿ ಮಾಡಿದ ಅಡಿಗೆಯಲ್ಲಿ ಏನೋ ಅಪಶಕುನ ಆಗಿದೆ ಇದು ಒಳ್ಳೆಯ ಸೂಚನೆ ಅಲ್ಲ ಎಂದಾಗ ಪುಟ್ಟಕ್ಕ ಹೇಳುತ್ತಾಳೆ ಹಂಗೇನು ಇಲ್ಲ ಸ್ವಾಮಿ ಅವರೇ ಎಲ್ಲಾ ಸರಿಯಾಗಿ ಇದೆ ಎನ್ನುತ್ತಾಳೆ.

ಗಾಬರಿಯಾದ ಪುಟ್ಟಕ್ಕ

ಗಾಬರಿಯಾದ ಪುಟ್ಟಕ್ಕ

ಆಗ ಮಂಜಮ್ಮ ಹೇಳುತ್ತಾಳೆ, ಪುಟ್ಟಕ್ಕ ನಿನ್ನೆ ಆಗಿರೋದರ ಬಗ್ಗೆ ಹೇಳುತ್ತಿರಬೇಕು ಎನ್ನುತ್ತಾರೆ. ಆಗ ಸ್ವಾಮೀಜಿ ಹೇಳುತ್ತಾರೆ ಹಾಲು ಒಡೆದು ಕಾಯಿ ಕೆಟ್ಟು ಅಪಶಕುನದ ಸೂಚನೆ ನೀಡಿದೆ ಎಂದರು ಆಗ ಪುಟ್ಟಕ್ಕ ಹೇಳುತ್ತಾಳೆ ಹೂ ಸ್ವಾಮೀಜಿ ಮಂಜಮ್ಮ ಅಡುಗೆ ಮಾಡುವಾಗ ಹಾಗೆ ಆಗಿತ್ತು. ಹಾಗಾದರೆ ಅದು ಏನು ಅರ್ಥ. ಏನು ಆಗಲ್ಲ ಆಲ್ವಾ ಸ್ವಾಮೀಜಿ ಎಂದು ಕೇಳುತ್ತಾರೆ ಎನ್ನುತ್ತಾರೆ ಆಗ ಸ್ವಾಮೀಜಿ ಸಹನಾಳನ್ನೂ ನೋಡಿ ಮೊದಲನೇ ಮಗಳ ಎಂದು ಕೇಳುತ್ತಾನೆ.

ಸಹನಾ ಬಗ್ಗೆ ಸ್ವಾಮೀಜಿ ಭವಿಷ್ಯ

ಸಹನಾ ಬಗ್ಗೆ ಸ್ವಾಮೀಜಿ ಭವಿಷ್ಯ

ಆಗ ಪುಟ್ಟಕ್ಕ ಹೂ ಎಂದು ತಲೆಯಾಡಿಸುತ್ತಾಳೆ. ಸಹಾನಾಳನ್ನು ನೋಡಿ ಸ್ವಾಮೀಜಿ ಹೇಳುತ್ತಾರೆ ಜೋಪಾನ ಮಗಳೆ ಎಂದು ಪುಟ್ಟಕ್ಕನನ್ನು ನೋಡಿ ಸ್ವಾಮೀಜಿ ಹೇಳುತ್ತಾರೆ ''ನಿಮ್ಮ ಮಗಳ ಮದುವೆ ಹಾಗೂ ಆರೋಗ್ಯದ ವಿಚಾರದಲ್ಲಿ ಜೋಪಾನ ಅವಸರ ಮಾಡಬೇಡ ಪುಟ್ಟಕ್ಕ ಇವಳಿಗೆ ಊಟ ನಿದ್ದೆ ಸೇರದೆ ಇರೋ ಹಾಗೆ ಆಗುತ್ತದೆ. ಸಣ್ಣ ಸಣ್ಣ ಸದ್ದಿಗು ಭಯ ಬೀಳುತ್ತಾಳೆ. ಸಂಬಂಧಗಳು ಸಲೀಸಾಗಿ ಕೈ ಗೂಡದೆ ಹೋಗಬಹುದು. ಎಂದಾಗ ಪುಟ್ಟಕ್ಕ ಸ್ವಾಮೀಜಿ ಬಳಿ ಕೇಳುತ್ತಾಳೆ ಇದಕ್ಕೆ ಪರಿಹಾರ ಎನು ಎಂದಾಗ ಸ್ವಾಮೀಜಿ ಹೇಳುತ್ತಾರೆ ತಾಳ್ಮೆ ಹಾಗೆಯೇ ನೀವು ಜಗಳ ಮಾಡಿಕೊಂಡಿರುವವರ ಜೊತೆ ರಾಜೀ ಆಗಬೇಕು ಎಂದು ಹೇಳುತ್ತಾರೆ. ಇನ್ನೂ ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 2th August. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X