Don't Miss!
- News
ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಫೋಟ: 50 ಮಂದಿ ಸಾವು!
- Sports
U-19 Women's World Cup 2023: ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಮುಖಾ-ಮುಖಿ ಆಗುತ್ತಾರಾ ಬಂಗಾರಮ್ಮ-ಸ್ನೇಹಾ?
ಮುಂಗುಸಿ ಹಾಗೂ ಡಾಕ್ಟರ್ ಬಹಳ ಲಗು-ಬಗೆಯಿಂದ ಓಡಿಕೊಂಡು ಹೋಗುತ್ತಾರೆ. ಬಂಗಾರಮ್ಮ ತನ್ನ ಮಗನಿಗೆ ಏನಾಯ್ತೋ ಎಂದು ಓಡಿಕೊಂಡು ಬರುತ್ತಿದ್ದಾರೆ. ಇದನ್ನು ನೋಡಿದ ನಾಗ ಬಹಳ ಭಯ ಪಟ್ಟುಕೊಳ್ಳುತ್ತಾರೆ. ಡಾಕ್ಟರ್ ಹಾಗೂ ಮುಂಗುಸಿ ಇಬ್ಬರು ನಾಗನನ್ನು ಹೊರಗೆ ನಿಲ್ಲಿಸುತ್ತಾರೆ. ಬಂಗಾರಮ್ಮ ಬಂದರೆ ತಡೆದು ನಿಲ್ಲಿಸಲು ಹೇಳುತ್ತಾರೆ. ಇದನ್ನು ಕೇಳಿ ನಾಗನಿಗೆ ಕೊಂಚ ಭಯ ಆಗುತ್ತದೆ. ಡಾಕ್ಟರ್ ಹಾಗೂ ಮುಂಗುಸಿ ಆಸ್ಪತ್ರೆಯ ಒಳಗೆ ಹೋದ ಮೇಲೆ ಬಂಗಾರಮ್ಮ ಹಾಗೂ ವಸು ಓಡಿಕೊಂಡು ಬಂದವರನ್ನು ನಾಗ ತಡೆದು ನಿಲ್ಲಿಸುತ್ತಾನೆ.
ಅವ್ವ ಅಣ್ಣನಿಗೆ ಚೆಕಪ್ ನಡೆಯುತ್ತಿದೆ. ಅದಕ್ಕೆ ನೀವು ಒಳಗೆ ಹೋಗಬೇಡಿ ಎಂದು ಹೇಳುತ್ತಾರೆ. ಇನ್ನು ಈ ವೇಳೆ ಸ್ನೇಹಾ, ಶ್ರೀಗೆ ಇನ್ನೂ ಪ್ರಜ್ಞೆ ಬಂದೆ ಇಲ್ಲವಲ್ಲಾ ಜ್ವರಕ್ಕೆ ಏನಾದರು ಉತ್ತಮ ಮದ್ದನ್ನು ನೀಡಬೇಕು ಅದಕ್ಕೆ ಕಷಾಯ ಮಾಡುವುದು ಉತ್ತಮ ಎಂದುಕೊಂಡು ಮನೆಗೆ ಹೊರಡುತ್ತಾಳೆ ಸ್ನೇಹಾ. ಈ ವೇಳೆ ಮೆಸ್‌ಗೆ ಬಂದಿದ್ದ ಮುರಳಿ ಮೇಷ್ಟ್ರನ್ನೂ ಬದಿಗೆ ಕರೆದ ಪುಟ್ಟಕ್ಕ ಮೇಷ್ಟ್ರ ಬಳಿ ಮಾತನಾಡುತ್ತಾರೆ. ಏನಾಯ್ತು ಮನೆಯಲ್ಲಿ ಏನಾದರೂ ಮಾತನಾಡಿದರಾ ಎಂದು ಕೇಳುತ್ತಾಳೆ ಅದಕ್ಕೆ ಮೇಷ್ಟ್ರು ಅಪ್ಪ ಏನು ಉತ್ತರ ನೀಡುತ್ತಿಲ್ಲ ಎಂದು ಹೇಳುತ್ತಾರೆ.

ಮೆಸ್‌ಗೆ ಬರಬೇಡಿ ಎಂದು ಮೇಷ್ಟ್ರಿಗೆ ಹೇಳಿದ ಪುಟ್ಟಕ್ಕ
ಇದರಿಂದ ಕೊಂಚ ಗಲಿಬಿಲಿಗೊಂಡ ಪುಟ್ಟಕ್ಕ ಸ್ವಲ್ಪ ಸುಧಾರಿಸಿಕೊಂಡು ನಿಮಗೂ ಸಹನಾಗೆ ಮದುವೆ ಬಗ್ಗೆ ಈ ಊರಿನ ಜನರಿಗೆ ಗೊತ್ತಾಗಿದೆ. ಇಡೀ ಊರಿನ ಜನರು ಈ ಬಗ್ಗೆ ಮಾತನಾಡಿಕೊಂಡು ಇರುತ್ತಾರೆ. ನೀವು ಪದೇ ಪದೇ ಮೆಸ್‌ಗೆ ಬಂದರೆ ಅವರೆಲ್ಲ ಏನೇನೋ ಹೇಳುತ್ತಾರೆ ಆದರಿಂದ ಮದುವೆ ಬಗ್ಗೆ ಎಲ್ಲಾ ಗೊತ್ತಾದ ಬಳಿಕ ಬಂದರೆ ಉತ್ತಮ ಅಲ್ವಾ. ಅದು ಅಲ್ಲದೆ ನಾವು ನೋಡಿದ ಹುಡುಗ ನೀನು ಅಲ್ಲ. ಇದು ನೀವು ನೀವೇ ಪ್ರೀತಿ ಮಾಡಿಕೊಂಡು ಮದುವೆ ಆಗಲು ಇಚ್ಚಿಸಿದ್ದು. ಆದುದರಿಂದ ಮದುವೆ ಗೊತ್ತಾಗುವವರೆಗೆ ಹೀಗೆ ಬಂದು ಹೋಗಬೇಡಿ ಎಂದು ಹೇಳುತ್ತಾರೆ ಇದನ್ನು ಕೇಳಿದ ಮೇಷ್ಟ್ರು ಅಲ್ಲಿಂದಲೇ ಹೋಗುತ್ತಾರೆ.

ಕಷಾಯ ಮಾಡಲು ಮನೆಗೆ ಬಂದ ಸ್ನೇಹಾ
ಇದನ್ನೆಲ್ಲ ಕದ್ದು ಕೇಳಿಸಿಕೊಂಡ ಸಹನಾಗೆ ಕೊಂಚ ಬೇಸರ ಆಗುತ್ತದೆ. ಸುಮಾ ತನ್ನ ಮೆಡಲ್ ಅನ್ನು ಚೆನ್ನಾಗಿ ಒರೆಸುತ್ತಾ ಇರುತ್ತಾಳೆ ಈ ವೇಳೆ ಅಲ್ಲಿಗೆ ಬಂದ ಸಹನಾ, ಸುಮಾ ಬಳಿ ಇನ್ನೂ ಸ್ನೇಹಾ ಬರಲಿಲ್ಲ ಅಲ್ವಾ ಅವಳಿಗೆ ಕರೆ ಮಾಡು ಎಂದು ಹೇಳುತ್ತಾಳೆ. ಆಕೆಗೆ ಕರೆ ಮಾಡಿದರೆ ಆಕೆ ಕರೆಯನ್ನು ಸ್ವೀಕರಿಸುವುದಿಲ್ಲ ಎಂದು ಸುಮಾ ಹೇಳುತ್ತ ಇರುತ್ತಾಳೆ ಈ ವೇಳೆ ಸ್ನೇಹಾ ಮನೆಗೆ ಬಂದು ಅಮ್ಮನ ಬಳಿ ನಡೆದ ಎಲ್ಲಾ ವಿಚಾರವನ್ನು ಹೇಳುತ್ತಾಳೆ.

ಸ್ನೇಹಾ ಮೇಲೆ ಸುಮಾಗೆ ಬೇಸರ
ಇದನ್ನು ಕೇಳಿದ ಪುಟ್ಟಕ್ಕ ಅಯ್ಯೋ ಇಷ್ಟೆಲ್ಲ ಆಗಿ ಹೋಯಿತಾ ಎಂದು ಹೇಳುತ್ತಾಳೆ. ಬಳಿಕ ಅವರಿಗೆ ಕಷಾಯ ಮಾಡಬೇಕಿದೆ ಎಂದಾಗ ಪುಟ್ಟಕ್ಕ ನಾನೇ ಮಾಡುತ್ತೇನೆ ಎಂದು ಹೇಳುತ್ತಾಳೆ ಆದರೆ ಅದನ್ನು ಕೇಳದೆ ಸ್ನೇಹಾ ಕಷಾಯ ಮಾಡುತ್ತಾ ಇರುವಾಗ ಅಲ್ಲಿಗೆ ಸುಮಾ ಬರುತ್ತಾಳೆ. ಆಕೆಯನ್ನು ನೋಡಿದರೂ ಮೆಡಲ್ ಬಗ್ಗೆ ಏನೂ ಕೇಳುವುದಿಲ್ಲ ಸ್ನೇಹಾ. ಕಷಾಯ ರೆಡಿ ಆದ ಬಳಿಕ ಅಲ್ಲಿಂದ ತೆರಳುತ್ತಾಳೆ. ಇದನ್ನು ನೋಡಿ ಸುಮಾ, ಸ್ನೇಹಾ ಅಕ್ಕ ಮುಂಚಿನ ಹಾಗೆ ಇಲ್ಲ. ಆಕೆ ಬದಲಾಗಿದ್ದಾಳೆ ಎಂದು ಹೇಳುತ್ತಾಳೆ.

ಮತ್ತೆ ಬಂಗಾರಮ್ಮ-ಸ್ನೇಹಾ ಮುಖಾ-ಮುಖಿ?
ಇನ್ನು ಸ್ನೇಹಾ ಆಸ್ಪತ್ರೆಗೆ ಕಷಾಯ ಹಿಡಿದುಕೊಂಡು ಹೊರಟಿದ್ದಾಳೆ. ಇದನ್ನು ನೋಡಿದ ಪುಟ್ಟಕ್ಕ ಬೇಗ ಬಾ ಸ್ನೇಹಾ ಎಂದು ಹೇಳುತ್ತಾಳೆ. ಸ್ನೇಹಾ ಆಯಿತು ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಇನ್ನು ಮಗನನ್ನು ನೋಡಲು ಬಂಗಾರಮ್ಮ ಕಾಯುತ್ತಾ ಇರುವಾಗ ಮುಂಗುಸಿ ಬರುತ್ತಾನೆ ಅವ್ವ ಡಾಕ್ಟರ್ ಹೇಳಿದ್ರು ನೀವು ಅಣ್ಣನ ನೋಡಲು ಹೋಗಿ ಎಂದು ಕಳುಹಿಸಿ ಕೊಡುತ್ತಾನೆ. ಆ ವೇಳೆ ನಾಗ ಬಳಿ ಹೇಳುತ್ತಾನೆ ಅತ್ತಿಗೆ ಅಲ್ಲಿ ಇಲ್ಲ ಎಂದು ಇದನ್ನು ಕೇಳಿದ ನಾಗ ಕೊಂಚ ಶಾಕ್ ಆಗುತ್ತಾನೆ ಯಾಕೆ ಎಂದರೆ ಅಲ್ಲಿ ಆಗಲೇ ಸ್ನೇಹಾ ಬಂದು ಬಿಟ್ಟಿದ್ದಳು ಮುಂದೇನು ಕಾದು ನೋಡಬೇಕಿದೆ.