ಸಹನಾಗೆ ಉಡುಗೊರೆ ಕೊಟ್ಟು ಕ್ಷಮೆ ಕೇಳಿದ ಮೇಷ್ಟ್ರು: ಎತ್ತ ಸಾಗ್ತಿದೆ ಇವರ ಲವ್ ಸ್ಟೋರಿ?
'ಪುಟ್ಟಕ್ಕನ ಮಕ್ಕಳು'ಯಲ್ಲಿ ರಾಜೇಶ್ವರಿ ಇದೀಗ ಪುಟ್ಟಕ್ಕನ ಮನೆಯವರ ಹೊಟ್ಟೆಯುರಿಸಿ ಖುಷಿ ಪಡುತ್ತಿದ್ದಾಳೆ. ಪುಟ್ಟಕ್ಕನಿಗೆ ಅವಮಾನ ಮಾಡಿ ಮನೆಗೆ ಬಂದ ರಾಜೇಶ್ವರಿ ಗಂಡ ಗೋಪಾಲಯ್ಯ ನ ಬಳಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ನನಗೆ ಬಹಳ ಖುಷಿ ಆಯ್ತು, ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು ಕಚ್ಚಾಡಿ ಕಚ್ಚಾಡಿ ಸಾಯಬೇಕು ಆದೆ ನನ್ನ ಉದ್ದೇಶ ಎಂದು ಹೇಳುತ್ತಾರೆ. ನಾವು ಯಾವತ್ತೂ ಒಂದೇ ನಮ್ಮನ್ನು ಯಾರು ಮೆಟ್ಟಿ ನಿಲ್ಲಲು ಸಾಧ್ಯವಿಲ್ಲ ಎಂದೆಲ್ಲ ಹೇಳುತ್ತಾಳೆ.
ಇದೀಗ ಪುಟ್ಟಕ್ಕನ ಮಕ್ಕಳೆ ಪುಟ್ಟಕ್ಕ ಹೇಳಿದ ಮಾತು ಕೇಳುತ್ತಿಲ್ಲ ಇದು ನನಗೆ ಬಹಳ ಸಂತಸ ತಂದಿದೆ ಎಂದು ಹೇಳುತ್ತಾಳೆ. ಇದಕ್ಕೆ ಗೋಪಾಲ, ಕೊಂಚ ಸೊಪ್ಪು ಹಾಕಿದರು ಕೊನೆಗೆ ಏನೋ ಕೆಲಸ ಇದೆ ಎಂದು ಹೊರಡಲು ಅನುವಾಗುತ್ತಾನೆ. ಆ ವೇಳೆ ರಾಜಿ ಗಂಡನ ಬಳಿ ಕಾಫಿ ಕುಡಿದು ಹೋಗುವಂತೆ ಹೇಳುತ್ತಾಳೆ ಆದರೆ ಇದಕ್ಕೊಪ್ಪದ ಗೋಪಾಲ ಕೆಲಸದ ನೆಪ ಒಡ್ಡಿ ಮನೆಯಿಂದ ತೆರಳುತ್ತಾನೆ. ಇತ್ತ ಪುಟ್ಟಕ್ಕ ಹಾಗೂ ಆಕೆಯ ಇಬ್ಬರು ಮಕ್ಕಳು ಅಮ್ಮನ ಬಳಿ ಸುಮಾಳ ಬಗ್ಗೆ ಮಾತನಾಡುತ್ತಾ ಇದ್ದಾರೆ. ಅಮ್ಮನ ಬಳಿ ಸ್ನೇಹಾ ಹೇಳುತ್ತಾಳೆ ಸುಮಾ ಮಾತನಾಡುರುವ ರೀತಿ ಸರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾಳೆ.
ಅದಕ್ಕೆ ಪುಟ್ಟಕ್ಕ,. ಇವತ್ತು ಸುಮಾ ಕಾಲೇಜಿಗೆ ತೆರಳಿದ್ದಾಳೆ. ಡಬ್ಬಿ ತೆಗೆದುಕೊಂಡು ಹೋಗಿಲ್ಲ. ಮುಖವನ್ನು ಇಷ್ಟು ದಪ್ಪ ಮಾಡಿ ಹೋಗಿದ್ದಾಳೆ. ಆಕೆಗೆ ನನ್ನ ಮೇಲೆ ಕೋಪ, ಬಿಡು ಎಲ್ಲಾ ಸರಿ ಹೋಗುತ್ತದೆ ಎಂದು ಹೇಳುತ್ತಾಳೆ. ಇದಕ್ಕೆ ಸ್ನೇಹಾ ಮಾತಿಗೆ ಸಹನಾ, ನನಗೂ ಇಷ್ಟ ಆಗಲಿಲ್ಲ ಸುಮಾ ಮಾಡಿದ ಕೆಲಸ ಎಂದು ಹೇಳುತ್ತಾಳೆ. ಸ್ನೇಹಾ ಕೋಪದಿಂದ ಹೇಳುತ್ತಾಳೆ ರಾಜಿ ಅಷ್ಟು ಮಾತನಾಡಿದಾಗ ಅಮ್ಮನೇ ನನ್ನ ಕೋಚ್. ಅವರನ್ನೇ ಕೋಚ್ ಆಗಿ ಸ್ವೀಕರಿಸುತ್ತೇನೆ ಎಂದು ಹೇಳಬೇಕಿತ್ತು ಎಂದು ಹೇಳುತ್ತಾಳೆ. ಕೊನೆಗೆ ಪುಟ್ಟಕ್ಕ ಸಹನಾಳನ್ನು ಮೆಸ್ ಗೆ ಕಳುಹಿಸುತ್ತಾಳೆ.

ಸಹನಾಳನ್ನು ಮೆಸ್ ಗೆ ಕಳುಹಿಸಿದ ಪುಟ್ಟಕ್ಕ
ಮುರಳಿ ಮೇಷ್ಟ್ರು ಮೆಸ್ ಗೆ ಬಂದಾಗ ಅಲ್ಲಿ ಪುಟ್ಟಕ್ಕನ ಮಕ್ಕಳು ಯಾರೂ ಇರಲಿಲ್ಲ. ಮುಖ್ಯವಾಗಿ ಸಹನಾ ಮೆಸ್ ನಲ್ಲಿ ಕಾಣಿಸದೆ ಇದ್ದಿದ್ದನ್ನು ನೋಡಿ ಕೊಂಚ ಚಿಂತಿತನಾಗುತ್ತಾನೆ. ಇನ್ನೂ ಮಂಜಮ್ಮ ಬಂದು ಉಪಚರಿಸುತ್ತಾಳೆ. ಮಂಜಮ್ಮ, ಮೇಷ್ಟ್ರ ಬಳಿ ಬಂದು ಏನಾದರು ಬೇಕಾ ಮೇಷ್ಟ್ರೇ ಎಂದು ಕೇಳುತ್ತಾಳೆ ಆಗ ಇಡ್ಲಿ ಬೇಕು ಎಂದು ಹೇಳುತ್ತಾರೆ.

ಮೇಷ್ಟ್ರ ಬರವಣಿಗೆ ಕಂಡು ಖುಷಿಗೊಂಡ ಸ್ನೇಹಾ
ಈ ವೇಳೆ ಅಲ್ಲಿಗೆ ಬಂದ ಪುಟ್ಟಕ್ಕ, ಇವತ್ತು ಸುಮಾ, ಹೋಟೆಲ್‌ನಲ್ಲಿ ಯಾವುದೇ ಪದಗಳನ್ನೇ ಬರೆಯದೆ ಕಾಲೇಜಿಗೆ ಹೋಗಿದ್ದಾಳೆ. ಮೇಷ್ಟ್ರೇ ನೀವೇ ಬರೆದು ಬಿಡಿ ಎಂದು ಹೇಳುತ್ತಾರೆ. ಮೇಷ್ಟ್ರು ಹೋಟೆಲ್‌ನ ಬೋರ್ಡ್ ಮೇಲೆ ಸುಭಾಷಿತ ಬರೆಯುತ್ತಾರೆ. ಆಗ ಅಲ್ಲಿಗೆ ಬಂದ ಸ್ನೇಹಾಗೆ ಬಹಳ ಇಷ್ಟ ಆಗುತ್ತದೆ. ಸ್ನೇಹಾ ಮೇಷ್ಟ್ರು ಬಳಿ ಹೇಳುತ್ತಾಳೆ ನಮಸ್ತೆ ಸರ್ ಚೆನ್ನಾಗಿ ಸುಭಾಷಿತ ಬರೆದಿದ್ದೀರಾ ಎಂದು ಹೇಳಿ ಅಕ್ಕ ನನಗೆ ಸ್ವಲ್ಪ ಕೆಲಸ ಇದೆ. ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ. ಇನ್ನೂ ಮೇಷ್ಟ್ರು ಕೈಯಲ್ಲಿ ಏನೋ ಗಿಫ್ಟ್ ಹಿಡಿದು ಕೊಂಡಿರುವುದು ಮಂಜುಳಾ ನೋಡುತ್ತಾಳೆ. ಏನಾದರು ವಿಷಯ ಇರಬೇಕು ಮೇಷ್ಟ್ರು ಯಾವ ಗಿಫ್ಟ್ ಹಿಡಿದುಕೊಂಡಿದ್ದಾರೆ ತಿಳಿದುಕೊಳ್ಳಬೇಕು ಎಂದು ಯೋಚಿಸುತ್ತಾಳೆ.

ಭಯ ಪಟ್ಟುಕೊಂಡು ಮೇಷ್ಟ್ರ ಬಳಿ ಮಾತನಾಡಿದ ಸಹನಾ
ಬಳಿಕ ಮೇಷ್ಟ್ರು ಸಹನಾಳನ್ನು ಕಣ್ಣು ಸನ್ನೆ ಮಾಡಿ ಕರೆಯುತ್ತಾರೆ. ಅದನ್ನು ಕಂಡ ಸಹನಾ ಸ್ವಲ್ಪ ಭಯಗೊಳ್ಳುತ್ತಾಳೆ. ಹೊರಗಡೆ ಬಾ ಪ್ಲೀಸ್ ಎಂದು ಮುರಳಿ ಮೇಷ್ಟ್ರು ಕೇಳಿಕೊಂಡ ಬಳಿಕ ಮೆತ್ತಗೆ ಹೊರಗೆ ಹೋಗುತ್ತಾಳೆ. ಮೇಷ್ಟ್ರು ಆಕೆಯನ್ನು ಹಿಂಬಾಲಿಸುತ್ತಾರೆ. ಬಾವಿ ಕಟ್ಟೆಯ ಬಳಿ ಬಂದ ಮೇಷ್ಟ್ರು ಕೈ ಯಲ್ಲಿ ಇದ್ದ ಗಿಫ್ಟ್ ಪ್ಯಾಕೆಟ್ ಅನ್ನು ಕೊಡುತ್ತಾರೆ. ನಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ ಅದಕ್ಕಾಗಿ ಇದನ್ನು ನಿನಗೆ ಕೊಡುತ್ತಿದ್ದೇನೆ ಎಂದು ಹೇಳುತ್ತಾನೆ. ಭಯ ಪಟ್ಟುಕೊಂಡು ಮೇಷ್ಟ್ರ ಕೈಯಿಂದ ಆ ಗಿಫ್ಟ್ ಅನ್ನು ತೆಗೆದುಕೊಳ್ಳುತ್ತಾಳೆ ಸಹನಾ.

ಕಂಠಿಯನ್ನು ನೋಡಿ ಮುನಿಸಿಕೊಂಡ ಪೂರ್ವಿ
ಇತ್ತ ಕಂಠಿ ಪೂರ್ವಿ ಮನೆಗೆ ಬರುತ್ತಾನೆ. ಕೈಯಲ್ಲಿ ಮಲ್ಲಿಗೆ ಹೂವು ತೆಗೆದುಕೊಂಡು ಬರುತ್ತಾನೆ. ಪೂರ್ವಿ ತಂದೆ ತಾಯಿಯ ಬಳಿ ಬಂದು ಮಾತನಾಡುತ್ತಾನೆ. ಎಷ್ಟೇ ಕರೆ ಮಾಡಿದರು ಕರೆ ಸ್ವೀಕರಿಸದ ಹಿನ್ನೆಲೆ ಕಂಠಿ ಪೂರ್ವಿ ಮನೆಗೆ ಬಂದಿರುತ್ತಾನೆ. ಪೂರ್ವಿ, ಕಂಠಿ ಯನ್ನು ನೋಡಿ ತುಸು ಗಂಭೀರವಾಗಿ ಇರುವ ರೀತಿ ನಟನೆ ಮಾಡುತ್ತಾಳೆ. ಬಳಿಕ ನಗುತ್ತಾ ಎನ್ ಶಾಕ್ ಅದ್ರಾ ನಾನು ನಿಮಗೆಲ್ಲ ಕೊಂಚ ಶಾಕ್ ಕೊಟ್ಟಿದ್ದು ಎಂದು ಹೇಳುತ್ತಾಳೆ. ಬಳಿಕ ಕಂಠಿ, ಪೂರ್ವಿ ಹೊರಗೆ ಕರೆದುಕೊಂಡು ಹೋಗುತ್ತಾನೆ ಮುಂದೇನು ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications











