ಪುಟ್ಟಕ್ಕನ ಮಕ್ಕಳು: ಮದುವೆ ನಿಲ್ಲಿಸಲು ತಂತ್ರ ಹೆಣೆದ ಕಂಠಿ!

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ಜನರ ಗಮನ ಸೆಳೆಯುತ್ತಿದೆ. ಎಲ್ಲರೂ ಪುಟ್ಟಕ್ಕ ಹೇಗೆ ಖೋ-ಖೋ ಆಡುತ್ತಾಳೆ ಎಂಬುವುದನ್ನು ನೋಡಲು ಕಾತರರಾಗಿದ್ದಾರೆ. ತನ್ನ ಹಳೆ ಜೀವನವನ್ನು ಮಕ್ಕಳಿಗೆ ವಿವರಿಸಿದ ಪುಟ್ಟಕ್ಕ ಅದೆಷ್ಟು ಕಷ್ಟಪಟ್ಟಳು ಎಂಬುವುದನ್ನು ಸಂಕ್ಷಿಪ್ತವಾಗಿ ಹೇಳಿದ್ದಾಳೆ. ಮದುವೆಗೆ ಮುಂಚೆ ಹೇಗೆ ಕಷ್ಟ ಪಡುತ್ತಾಳೆಯೋ ಹಾಗೆಯೇ ಮದುವೆ ಆದ ಬಳಿಕ ಕೂಡ ಅದಕ್ಕಿಂತ ಹೆಚ್ಚು ಕಷ್ಟ ಪಟ್ಟಿದ್ದಾಳೆ ಪುಟ್ಟಕ್ಕ. ಗಂಡನಿಲ್ಲದೆ ಮೂರು ಮಕ್ಕಳನ್ನು ಬೆಳೆಸಿದ್ದಾಳೆ.

ಸುಮಾ ಮಾತ್ರ ಪುಟ್ಟಕ್ಕ ಎಷ್ಟು ಒಳ್ಳೆಯ ಖೋ ಖೋ ಪ್ಲೇಯರ್ ಆಗಿದ್ದರು ಕೂಡ ನಮಗೆ ಕೋಚ್ ಆಗಿ ಬರುವುದು ಬೇಡ ಎಂದು ಹಠ ಹಿಡಿದಿದ್ದಾಳೆ. ಪುಟ್ಟಕ್ಕ ಯಾರು ಏನು ಎಂದು ತಿಳಿದ ಬಳಿಕ ಕೂಡ ಅಮ್ಮ ಮುಂಚಿನ ಕಾಲದಲ್ಲಿ ಏನೇ ಆಗಿದ್ದರೂ ಆಗಲಿ ಆದರೆ ಈಗ ಖೋ-ಖೋ ಆಡುವ ಶೈಲಿ ಎಲ್ಲ ಬದಲಾಗಿ ಬಿಟ್ಟಿದೆ. ಅಮ್ಮ ಖೋ-ಖೋ ಹೇಳಿಕೊಟ್ಟರೆ ಪಕ್ಕಾ ನಾವು ಸೋಲೋದು ಖಚಿತ. ಎಲ್ಲರೂ ನಮ್ಮ ಟೀಂ ಅನ್ನು ನೋಡಿ ಆಡಿಕೊಂಡು ನಗುತ್ತಾರೆ ಎಂಬುದು ಸುಮಾ ಅಭಿಪ್ರಾಯ.

ನಿಮಗೂ ಕೆಟ್ಟ ಹೆಸರು ಬರುತ್ತದೆ. ಆಡಿಕೊಳ್ಳುವವರ ಬಾಯಿಗೆ ನಾವು ಎಂದು ಬೀಳಬಾರದು ಎಂದೆಲ್ಲ ಅಮ್ಮನ ಬಳಿ ಹೇಳುತ್ತಾಳೆ. ಬಳಿಕ ಸ್ನೇಹಾನು ಹೇಳುತ್ತಾಳೆ ಅಮ್ಮ ಖೋ-ಖೋ ಪ್ಲೇಯರ್ ಅಲ್ವಾ. ಅವಳು ಹೇಳಿಕೊಟ್ಟರೆ ಏನಿವಾಗ ಎಂದಾಗ ಕೋಪಗೊಂಡ ಸುಮಾ ಹೇಳುತ್ತಾಳೆ. ಅಮ್ಮ ಖೋ ಖೋ ಕೋಚ್ ಆಗೋದು ಬೇಡ. ರಾಜ್ಯ ಮಟ್ಟದ ತಂಡಗಳು ನಮ್ಮೊಂದಿಗೆ ಆಡಲು ಬರುತ್ತಿದ್ದಾರೆ ಅವರ ಎದುರು ನಾವೇನು ಇಲ್ಲ. ಇದೀಗ ನಮಗೆ ಅಮ್ಮ ಕೋಚ್ ಆಗಿ ಬಂದರೆ ನಾವು ಖೋ-ಖೋ ಗೆಲ್ಲಲು ಮಾತ್ರ ಸಾಧ್ಯವೇ ಇಲ್ಲ ಎಂದು ಹೇಳಿ ಬಳಿಕ ಅಲ್ಲಿಂದ ಹೋಗುತ್ತಾಳೆ.

ಅಕ್ಕಂದಿರ ಬಳಿ ಅಸಮಾಧಾನ ವ್ಯಕ್ತಪಡಿಸಿದ ಸುಮಾ

ಅಕ್ಕಂದಿರ ಬಳಿ ಅಸಮಾಧಾನ ವ್ಯಕ್ತಪಡಿಸಿದ ಸುಮಾ

ಮಗಳ ನಿರ್ಧಾರದಿಂದ ಬೇಸರಗೊಂಡ ಪುಟ್ಟಕ್ಕ ಮುಂದಕ್ಕೆ ಮಾತನಾಡಲು ಆಗದೆ ಸುಮ್ಮನಿರುತ್ತಾರೆ. ಮರುದಿನ ಸುಮಾ ಗಂಟು ಮುಖವನ್ನು ಹಾಕಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಸಹನಾ ಕರೆಯುತ್ತಾಳೆ ಸುಮಾ ಹಾಗ್ಯಾಕೆ ಕೋಪ ಮಾಡಿಕೊಂಡು ಹೋಗುತ್ತಿದ್ದೀಯಾ ಏನಾಯ್ತು ನಿನ್ನೆಯದನ್ನೆ ಇನ್ನೂ ಮನಸಿನಲ್ಲಿ ಇಟ್ಟುಕೊಂಡಿದ್ದಿಯಾ ಎಂದು ಕೇಳುತ್ತಾಳೆ. ಅದಕ್ಕೆ ಸುಮಾ ಹಾಗೇನಿಲ್ಲ ಎನ್ನುತ್ತಾಳೆ. ಬಳಿಕ ಖೋ ಖೋ ಆಟದ ಬಗ್ಗೆನೇ ಮಾತು ಕತೆ ಆಗುತ್ತದೆ. ಆಗ ಪುಟ್ಟಕ್ಕ ಮನೆಯ ಹೊರಗೆ ಬರುತ್ತಾಳೆ. ಮಕ್ಕಳು ಮಾತನಾಡುತ್ತಿರುವ ದೃಶ್ಯಾವಳಿಗಳನ್ನು ನೋಡುತ್ತಾ ನಿಂತಿರುತ್ತಾಳೆ.

ಅಮ್ಮನ ಮಾತು ಕೇಳದ ಸುಮಾ

ಅಮ್ಮನ ಮಾತು ಕೇಳದ ಸುಮಾ

ಆಗ ಪುಟ್ಟಕ್ಕನ ಬಳಿ ಬಂದ ಸುಮಾ ಹೇಳುತ್ತಾಳೆ ಅಮ್ಮನ ಬಗ್ಗೆ ನನಗೆ ಪ್ರೀತಿ ಇಲ್ಲ ಅಂತ ಯಾರೂ ಹೇಳಿದ್ದು ಅಮ್ಮ ಅಂದರೆ ನನ್ನ ಜೀವ ಆದರೆ ಆಕೆಯಿಂದ ಕೋಚಿಂಗ್ ಕೊಡಲು ಸಾಧ್ಯವಿಲ್ಲ. ಅಮ್ಮನಿಗೆ ಕಷ್ಟ ಕೊಡಲು ನನಗೆ ಇಷ್ಟ ಇಲ್ಲ. ನಮ್ಮ ಪಿ.ಟಿ ಸರ್ ಗೆ ಈ ವಿಚಾರ ಎಲ್ಲಾ ತಿಳಿದರೆ ಆಡಿಕೊಂಡು ನಗುತ್ತಾರೆ. ಇನ್ನೂ ಈ ಲೆವೆಲ್ ನಲ್ಲಿ ಗೆದ್ದರೆ ಮಾತ್ರ ಮುಂದೆ ಆಡಲು ಅವಕಾಶ ಸಿಗುತ್ತದೆ. ಇಲ್ಲವಾದರೆ ನಮಗೆ ಈ ವರುಷ ಅವಕಾಶವಿಲ್ಲ. ಅದಕ್ಕಾಗಿ ಹೇಳುತ್ತಿದ್ದೇನೆ ಎನ್ನುತ್ತಾಳೆ. ಬಳಿಕ ಸ್ನೇಹಾ, ಕಾಲೇಜಿಗೆ ಹೋಗು ಎನ್ನುತ್ತಾಳೆ.

ಅಮ್ಮನ ಆಟ ನೋಡಲು ಕಾತರಳಾದ ಮಕ್ಕಳು

ಅಮ್ಮನ ಆಟ ನೋಡಲು ಕಾತರಳಾದ ಮಕ್ಕಳು

ಈಗಾಗಲೇ ಎರಡು ಕ್ಲಾಸ್ ಮಿಸ್ ಆಯ್ತು ಎಂದೆಲ್ಲ ಗುಣಗಿಕೊಂಡು ಕಾಲೇಜಿಗೆ ತೆರಳುತ್ತಾಳೆ ಸುಮಾ. ಇನ್ನೂ ಸ್ನೇಹಾ ಹಾಗೂ ಸಹನಾ ಪುಟ್ಟಕ್ಕನ ಪ್ರಶಸ್ತಿ ಪತ್ರ, ಮೆಡಲ್ ಇದನ್ನೆಲ್ಲ ನೋಡಿ ಅಮ್ಮ ಖೋ ಖೋ ಆಡುವುದನ್ನು ನಾವು ನೋಡಬೇಕು. ನಾನು ಕಾತರಳಾಗಿ ಇದ್ದೇನೆ ಅಮ್ಮ ಹೇಗೆ ಖೋ-ಖೋ ಆಡುತ್ತಾಳೆ ಎಂಬುವುದನ್ನು ಆ ಇಬ್ಬರು ಮಕ್ಕಳು ಹೇಳುತ್ತಿರುತ್ತಾರೆ. ಇದನ್ನು ಕೇಳಿಸಿಕೊಂಡ ಪುಟ್ಟಕ್ಕಗೆ ಬಹಳ ಖುಷಿ ಆಗುತ್ತದೆ. ಇನ್ನೂ ಕಂಠಿ ಹಾಗೂ ಆತನ ಇಬ್ಬರು ಸ್ನೇಹಿತರು ಅಶ್ವಥ್ ಕಟ್ಟೆಯ ಮುಂದೆ ಕುಳಿತಿರುತ್ತಾರೆ. ಕಂಠಿ ಸ್ನೇಹಾಗೆ ಪ್ರೀತಿ ಹೇಗೆ ಹೇಳುವುದು ಎಂದು ಯೋಚಿಸುತ್ತಾ ಇರುತ್ತಾನೆ ಇದನ್ನು ನೋಡಿದ ಕಂಠಿ ಗೆಳೆಯ ಏನು ಅಣ್ಣ ಬ್ಲಾಕ್ ಅಂಡ್ ವೈಟ್ ಥರ ಕಾಣುತ್ತಿದೆ ಎನ್ನುತ್ತಾನೆ.

ಕಂಠಿ ಹೆಣೆದಿದ್ದಾನೆ ಮಾಸ್ಟರ್ ಪ್ಲಾನ್

ಕಂಠಿ ಹೆಣೆದಿದ್ದಾನೆ ಮಾಸ್ಟರ್ ಪ್ಲಾನ್

ಅಣ್ಣಾ ತುಂಬಾ ಫೀಲಿಂಗ್‌ನಲ್ಲಿ ಇದ್ದ ಹಾಗೆ ಕಾಣುತ್ತದೆ ಎಂದೆಲ್ಲಾ ಹೇಳಿದಾಗ ಕಂಠಿ ಕೋಪ ನೆತ್ತಿಗೇರಿ ಗೆಳೆಯನ ಕೆನ್ನೆಗೆ ಪಟಾರ್ ಎಂದು ಬಾರಿಸುತ್ತಾನೆ. ಬಳಿಕ ಹೇಳುತ್ತಾನೆ ಪೂರ್ವಿ ಬಳಿ ಮಾತನಾಡಿ ಆಕೆಯೇ ಮದುವೆನಾ ಕ್ಯಾನ್ಸಲ್ ಮಾಡುವ ಹಾಗೆ ಮಾಡೆ ಮಾಡುತ್ತೇನೆ ಹಾಗೆಯೇ ಈಗ ಮೆಸ್ ಗೆ ಹೋಗುವ ಎಂದಾಗ ಕಂಠಿ ಗೆಳೆಯ ಹೇಳುತ್ತಾನೆ ಮೆಸ್ ಗೆ ಹೋಗುವ ಹಸಿವಾಗುತ್ತಿದೆ ಎಂದು ಹೇಳಿದಾಗ ಕಂಠಿ ಹೇಳುತ್ತಾನೆ ಯಾವತ್ತೂ ಅಲ್ಲಿ ತಿಂದು ಬರುವುದು ಇವತ್ತು ನಾವು ಕೊಟ್ಟು ಬರೋಣ ಎಂದು ಹೇಳಿ ಪುಟ್ಟಕ್ಕನ ಮೆಸ್ ಕಡೆ ಹೋಗುತ್ತಾರೆ.

More from Filmibeat

English summary
Kannada serial Puttakkana Makkalu written updated on 30th August. Know more about episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X