Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಟ್ಟಕ್ಕನ ಮಗಳ ಮದುವೆಗೆ ಬರ್ತಾನಾ ಗಂಡ ಗೋಪಾಲ?
ಪುಟ್ಟಕ್ಕ ರಾಜಿ ಕಾಲಿಗೆ ಬೀಳಲಿಲ್ಲ ಎನ್ನುವ ಸುದ್ದಿ ಕೇಳಿ ಕಾಳಿ ಬಹಳ ಖುಷಿ ಪಡುತ್ತಾನೆ. ಏನು? ಪುಟ್ಟಕ್ಕ ನಿನ್ನ ಕಾಲಿಗೆ ಬೀಳಲಿಲ್ಲ. ಹಾಗಾದರೆ ನೀನು ಭಾವ ಮದುವೆಗೆ ಕೂಡ ಹೋಗುವುದು ಇಲ್ಲ ಎಂದು ಜೋರಾಗಿ ನಕ್ಕಾಗ ಕಾಳಿಗೆ ಕೋಪದಿಂದ ಹೊಡೆಯುತ್ತಾಳೆ ರಾಜೇಶ್ವರಿ. ಅಕ್ಕನ ಬಳಿ ಹೇಳುತ್ತಾನೆ ಕಾಳಿ ಅಕ್ಕ ನೀನು ಅವರ ಮದುವೆ ನಡೆಯೋದಿಲ್ಲ ಇದೆ ಅಲ್ವಾ ಬೇಕಿರೋದು ಎಂದು ಹೇಳುತ್ತಾನೆ ಇದನ್ನು ಕೇಳಿದ ಗೋಪಾಲನಿಗೆ ಬಹಳ ಕೋಪ ಬರುತ್ತದೆ.
ಬಳಿಕ ರಾಜಿ ಬಳಿ ಗೋಪಾಲ, ರಾಜಿ ನಾವು ಆ ಮದುವೆಗೆ ಹೋದರು ಹೋಗದೆ ಇದ್ದರೂ ಈ ಮದುವೆ ನಡೆಯುತ್ತದೆ ಅವರ ಜೊತೆ ಇರುವುದು ಬೇರೆ ಯಾರೂ ಅಲ್ಲ ಬಂಗಾರಮ್ಮ ಎಂದಾಗ ರಾಜಿಗೂ ಕೂಡ ಹೌದು ಎನಿಸುತ್ತದೆ. ಅಧಿಕಾರ ಚಲಾಯಿಸಲು ಹೋದರೆ ಕೆಲಸ ಕೆಡುತ್ತದೆ. ಯಾವುದು ನಾನು ಹೇಳುದಾಗೆ ನಡೆಯುವುದು ಇಲ್ಲ. ಆಗ ಪುಟ್ಟಕ್ಕ ಗೆಲ್ಲುತ್ತಾಳೆ. ಅದಕ್ಕೆ ಅವಳ ದಾರಿಯಲ್ಲಿ ಹೋಗಿ ಕೆಲಸ ಸಾಧಿಸಿಕೊಳ್ಳಬೇಕು ಎಂದು ಹೇಳುತ್ತ ಇರುವಾಗ ಕಾಳಿಯ ಕತೆ ಬೇರೇನೇ, ಆತನಿಗೆ ಇನ್ನೂ ಗೊತ್ತಾಗುತ್ತಿಲ್ಲ ಸಹನಾ ನನ್ನ ಪ್ರೀತಿ ಮಾಡುತ್ತಾ ಇದ್ದಾಳೆ ಎಂದು ಹಗಲು ಕನಸು ಕಾಣುತ್ತಾ ಇದ್ದಾನೆ. ಇದನ್ನೆಲ್ಲ ನೋಡಿದ ರಾಜಿಗೆ ಕೂಡ ತಲೆ ನೋವು ಶುರು ಆಗುತ್ತದೆ.
ಸ್ನೇಹಾ ಕಂಠಿಯನ್ನು ಮಾತನಾಡಿಸಲು ಹೊಲಕ್ಕೆ ಬರುತ್ತಾಳೆ. ಹೊಲಕ್ಕೆ ಬಂದ ಸ್ನೇಹಾ ಮನದಲ್ಲಿ ಮಾತನಾಡಿಕೊಳ್ಳುತ್ತ ಇರುತ್ತಾಳೆ ಶ್ರೀ ಇಲ್ಲಿಯೇ ಇರುತ್ತೇನೆ ಎಂದ್ರು ಈಗ ಎಲ್ಲಿಗೆ ಹೋಗಿದ್ದಾರೆ ಎಂದು ಯೋಚನೆ ಮಾಡುತ್ತಾ ಇರುವಾಗ ಮರದ ಬಳಿ ಕಂಠಿ ನಿಂತುಕೊಂಡಿರುವುದು ಕಾಣಿಸುತ್ತದೆ. ಬಳಿಕ ಕಂಠಿ ಇರುವ ಜಾಗಕ್ಕೆ ಸ್ನೇಹಾ ಹೋಗುತ್ತಾಳೆ. ಕಂಠಿ ಬಳಿ ರಾಜೇಶ್ವರಿ ಹೇಳಿದ ಮಾತುಗಳನ್ನೆಲ್ಲ ಹೇಳುತ್ತಾ ಇರುತ್ತಾರೆ. ಇದನ್ನು ಕೇಳಿದ ಕಂಠಿಗೆ ಸಿಕ್ಕಾ ಪಟ್ಟೆ ಕೋಪ ಬರುತ್ತದೆ.
ಮಿಸ್ಸು ದೊರೆ ಬಳಿ ಏನಾದರು ಹೇಳಬೇಕಾ ಎಂದಾಗ ನಗುತ್ತಾ ಸ್ನೇಹಾ ಕಂಠಿ ಮುಖವನ್ನೇ ನೋಡುತ್ತಾಳೆ. ಇನ್ನು ಸಹನಾ, ಮುರಳಿ ಮೇಷ್ಟ್ರನ್ನು ಭೇಟಿ ಆಗುತ್ತಾಳೆ. ಮುರಳಿ ಬಳಿ ಸಹನಾ ನಡೆದ ವಿಚಾರವನ್ನು ತಿಳಿಸುತ್ತಾಳೆ. ಮುರಳಿಗೆ ಕೊಂಚ ಶಾಕ್ ಆಗುತ್ತದೆ. ಈ ರೀತಿ ಎಲ್ಲಾ ಆದರೆ ಅಮ್ಮ ಮದುವೆಗೆ ಒಪ್ಪಲ್ಲ ಎಂದು ಅಂದುಕೊಳ್ಳುತ್ತಾನೆ. ಇನ್ನೂ ಸಹನಾ, ಮುರಳಿ ಬಳಿ ಹೇಳುತ್ತಾಳೆ ಹೇಗಾದರೂ ಮಾಡಿ ನಿಮ್ಮ ಅಮ್ಮನನ್ನು ಒಪ್ಪಿಸಿ ನನ್ನ ಮದುವೆ ಆಗಲು ಒಪ್ಪಿಗೆ ನೀಡಲು ಹೇಳಿ. ನನ್ನಿಂದಾಗಿ ನನ್ನ ತಾಯಿ ತಲೆ ತಗ್ಗಿಸುವುದು ನನಗೆ ಸರಿ ಕಾಣುವುದಿಲ್ಲ. ದಯಮಾಡಿ ನನ್ನ ಒಂದು ಕೋರಿಕೆಯನ್ನು ಈಡೇರಿಸಿ ಕೊಡಿ ಎಂದು ಹೇಳುತ್ತಾಳೆ ಇದನ್ನು ಕೇಳಿದ ಮುರಳಿಗೆ ಎನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನೆ ಇರುತ್ತಾನೆ.

ಮೇಷ್ಟ್ರ ಬಳಿ ವಿಚಾರ ಹೇಳಿದ ಸಹನಾ
ಮಾತು ಮುಂದುವರಿಸಿದ ಸಹನಾ, ವಿಚಾರ ಏನೆಂದು ತಿಳಿದು ನೀವು ನಮ್ಮ ಮನೆಗೆ ಬಂದು ಮಾತನಾಡಿ ಎಂದು ಹೇಳಿ ಹೋಗುತ್ತಾಳೆ. ಇದನ್ನೆಲ್ಲ ಕದ್ದಾಲಿಸಿದ ಕಾಳಿ ಮನದಲ್ಲಿ ಹೇಳಿಕೊಳ್ಳುತ್ತಾನೆ ಸಹನಾಗೆ ಮದುವೆ ಇಷ್ಟ ಇಲ್ಲ ಅದಕ್ಕೆ ಆಕೆ ಇಷ್ಟೆಲ್ಲ ಮೇಷ್ಟ್ರ ಬಳಿ ಕೇಳಿಕೊಳ್ಳುತ್ತಾ ಇರುವುದು ಅನ್ನಿಸುತ್ತದೆ ಎಂದು ಅಲ್ಲಿಂದ ಹೋಗುತ್ತಾನೆ ಮನೆಗೆ ಬಂದ ಮುರಳಿ ಅಕ್ಕ ಚೈತ್ರನ ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾನೆ ಅದಕ್ಕೆ ಅಕ್ಕ ಅಮ್ಮನ ಬಳಿ ಸುಳ್ಳು ಹೇಳಿ ಬಿಡು ಮತ್ತೆ ಹೇಗಾದರೂ ಮ್ಯಾನೇಜ್ ಮಾಡೋಣ ಎಂದುಕೊಂಡು ಹೇಳುತ್ತಾಳೆ.

ಮನೆಯಲ್ಲಿ ಸುಳ್ಳು ಹೇಳಿದ ಮೇಷ್ಟ್ರು
ಇದನ್ನು ಕೇಳಿದ ಮುರಳಿ ಅಕ್ಕ ಆದರೂ ಏನು ಮಾಡುವುದು ಎಂದು ಹೇಳಿದಾಗ ಮುರಳಿಗೆ ಧೈರ್ಯ ತುಂಬುತ್ತಾರೆ. ಮುರಳಿ ಅಮ್ಮ ಅಪ್ಪ ಮುರಳಿಯನ್ನು ಜೋರಾಗಿ ಕರೆಯುತ್ತಾರೆ. ಮೇಷ್ಟ್ರ ತಾಯಿ ಮುರಳಿ ಬಳಿ ಕೇಳುತ್ತಾಳೆ ಏನಂದ್ರು ನಿನ್ನ ಹುಡುಗಿ ಮನೆಯಲ್ಲಿ ಏನಾದರೂ ಸುದ್ದಿ ಬಂತ ಎಂದು ಕೇಳಿದಾಗ ಹೌದು ಎಂದು ಹೇಳುತ್ತಾನೆ. ಅವರ ಗಂಡ ಒಪ್ಪಿಕೊಂಡರಂತೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದಾಗ ಮೇಷ್ಟ್ರ ತಾಯಿ ಹೌದ ಎಂದು ಕೇಳುತ್ತಾಳೆ.

ಗೋಪಾಲನನ್ನು ಬೇಡಿಕೊಂಡ ಪುಟ್ಟಕ್ಕ
ಇನ್ನು ಪುಟ್ಟಕ್ಕ ತನ್ನ ಗಂಡ ಗೋಪಾಲನನ್ನು ದೇವಾಲಯಕ್ಕೆ ಕರೆದು ಮಗಳ ಮದುವೆ ಮಾತುಕತೆ ಬಗ್ಗೆ ಮಾತನಾಡುತ್ತಾಳೆ. ಹೇಗಾದರೂ ಮಾಡಿ ನನ್ನ ಮಗಳನ್ನು ಕನ್ಯಾ ದಾನ ಮಾಡಲು ಬಾ, ಈ ಒಂದು ಕರ್ತವ್ಯ ಮಾಡಲು ಬಾ ಎಂದು ಹೇಳಿ ಅಳುತ್ತಾಳೆ. ಇದನ್ನು ಕೇಳಿದ ಗೋಪಾಲ, ರಾಜೇಶ್ವರಿ ಪರ ಮಾತನಾಡುತ್ತಾನೆ ಆದರೆ ರಾಜಿ ಮಾತ್ರ ಇದೆಲ್ಲವನ್ನು ಕದ್ದು ಕೇಳಿಸಿಕೊಂಡು ಖುಷಿ ಪಡುತ್ತಾ ಇರುತ್ತಾಳೆ. ಇನ್ನು ಪುಟ್ಟಕ್ಕನ ಮನೆಗೆ ಬಂದ ಮುರಳಿ ಮೇಷ್ಟ್ರನ್ನು ನೋಡಿ ಪುಟ್ಟಕ್ಕ ಖುಷಿ ಪಡುತ್ತಾರೆ. ಈ ವೇಳೆ ಅಲ್ಲಿ ಕಂಠಿ ಇದ್ದಿದ್ದುದರಿಂದ ಮೇಷ್ಟ್ರ ಕಾಲು ಎಳೆಯುತ್ತಾರೆ.

ಪುಟ್ಟಕ್ಕಗೆ ಕರೆ ಮಾಡಿದ ಬಂಗಾರಮ್ಮ
ಮೇಷ್ಟ್ರು ಹೇಳುತ್ತಾರೆ ಮದುವೆಗೆ ನಿಮ್ಮ ಗಂಡ ಬರದಿದ್ದರೂ ತೊಂದರೆ ಇಲ್ಲ ಎಂದು ಹೇಳಿದಾಗ ಪುಟ್ಟಕ್ಕನ ಖುಷಿ ಇನ್ನೂ ದುಪ್ಪಟ್ಟು ಆಗುತ್ತದೆ. ಇನ್ನು ಬಂಗಾರಮ್ಮ ಪುಟ್ಟಕ್ಕನಿಗೆ ಕರೆ ಮಾಡುತ್ತಾರೆ. ಮನೆಯಲ್ಲಿ ಬಹಳ ಕೆಲಸ ಇದ್ದ ಕಾರಣ ನನಗೆ ಮದುವೆಗೆ ಬರಲು ಸಾಧ್ಯ ಇಲ್ಲ. ಅದಕ್ಕಾಗಿ ನನ್ನ ಮಗ ಹಾಗೂ ಮಗಳನ್ನು ಕಳುಹಿಸಿದ್ದೇನೆ ಎಂದು ಹೇಳುತ್ತಾರೆ ಇದನ್ನು ಕೇಳಿ ಪುಟ್ಟಕ್ಕ ಆಯಿತು ಎಂದು ಹೇಳಿ ಕರೆ ಕಟ್ ಮಾಡುವ ವೇಳೆ ಕಾರಿನಿಂದ ವಸು ಕಂಠಿ ಇಳಿಯುತ್ತಾರೆ. ಇದನ್ನು ನೋಡಿ ಪುಟ್ಟಕ್ಕ ಗೆ ಶಾಕ್ ಆಗುತ್ತದೆ.