Puttakkana Makkalu: ಪುಟ್ಟಕ್ಕನ ಬಳಿ ನಿಜ ಒಪ್ಪಿಕೊಂಡ ಕಂಠಿ: ಸಹನಾ ರುದ್ರವತಾರಕ್ಕೆ ಕಾಳೀ ಶಾಕ್

By Poorva

ಕಂಠಿಗೆ ಕೂಡ ಸ್ನೇಹಾ ಮಿಸ್ ಆಗಿದ್ದಾಳೆ. ಇದೀಗ ಸ್ನೇಹಾಳನ್ನು ಎಷ್ಟೇ ಹುಡುಕಿದರೂ ಆಕೆ ಮಾತ್ರ ಯಾರ ಕೈಗೆ ಸಿಗದೇ ಇರುವುದ ಎಲ್ಲರೂ ಕಂಗಾಲಾಗುವಂತೆ ಮಾಡಿದೆ. ಇದೀಗ ಕಂಠಿಗೆ ದಿಕ್ಕೇ ತೋಚದಂತಾಗಿದೆ. ಏನು ಮಾಡುವುದು ಎಂದು ತಿಳಿಯದೇ ಪುಟ್ಟಕ್ಕನ ಮನೆಗೆ ಬರುತ್ತಾನೆ. ಪುಟ್ಟಕ್ಕ ದೇವರ ಕಟ್ಟೆಯ ಬಳಿ ಕುಳಿತುಕೊಂಡು ಇರುತ್ತಾಳೆ. ಆಕೆಯ ಬಳಿಗೆ ಬಂದು ಕುಳಿತುಕೊಳ್ಳುತ್ತಾನೆ.

ವಿಚಾರ ಗೊತ್ತಿಲ್ಲದೇ ಕಂಠಿ ಪುಟ್ಟಕ್ಕನ ಬಳಿಯೇ ಬಂದು ಹೇಳುತ್ತಾನೆ. ಅವ್ವ ನನ್ನಿಂದ ಏನೋ ತಪ್ಪು ಆಗಿದೆ. ಯಾರು ನನ್ನ ಬಳಿ ಸರಿಯಾಗಿ ಮಾತನಾಡುತ್ತಾ ಇಲ್ಲ. ನೀವು ಕೂಡ ಮಾತನಾಡುತ್ತಾ ಇಲ್ಲ ಯಾಕೆ? ನಿಮ್ಮ ಬಳಿಯೂ ಸ್ನೇಹಾ ಹೇಳಿದ್ದಾಳಾ? ಮದುವೆ ಆಗ ಬಾರದು ಎಂದು ಕೇಳುತ್ತಾನೆ. ಆತ ಬೇಸರವಾಗಿರುವುದು ನೋಡಿ ಪುಟ್ಟಕ್ಕ ಮನದಲ್ಲಿ ಅಯ್ಯೋ ಹಾಗಂತ ನಾನೇ ಹೇಳಿರುವುದು, ಸ್ನೇಹಾ ಬಳಿ ಮಾತನಾಡಬಾರದು ಎಂದು ಹೇಳಿದ್ದು ನಾನೇ. ಆದರೆ ಅದೇ ನನ್ನ ಪಜೀತಿಗೆ ತಳ್ಳಿರುವುದು ಕೂಡ ಎಂದುಕೊಳ್ಳುತ್ತಾಳೆ.

Kannada serial puttakkana makkalu written updated on 30th may

ಕಂಠಿಗೆ ಪುಟ್ಟಕ್ಕ ರೆಸ್ಪೆಕ್ಟ್ ಕೊಟ್ಟು ಮಾತನಾಡುತ್ತಾ ಇರುವುದನ್ನು ಕಂಡು ಆತನಿಗೆ ಬೇಸರ ಆಗುತ್ತದೆ. ಕಂಠಿ ಮಾತ್ರ ಪುಟ್ಟಕ್ಕನ ಬಳಿ ತನ್ನ ಮನದ ಮಾತನ್ನು ಹೇಳುತ್ತ ಇರುತ್ತಾನೆ. ಸ್ನೇಹಾ ಯಾರನ್ನು ಬೇಕಾದರೂ ಮದುವೆ ಆಗಲಿ, ಆದರೆ ಆಕೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವುದು ಬೇರೆ ಯಾರೂ ಅಲ್ಲ. ಅದು ನಾನೊಬ್ಬನೇ ಎಂದು ಹೇಳಿ ಅಳುತ್ತಾನೆ.

ಸ್ನೇಹಾ ಇಲ್ಲದೇ ಕಂಠಿಯ ಒದ್ದಾಟ

ಸ್ನೇಹಾಳನ್ನು ಬಿಟ್ಟಿರದೇ ಒದ್ದಾಡುತ್ತಿರುವ ಕಂಠಿಯನ್ನು ನೋಡಿದ ಪುಟ್ಟಕ್ಕಗೆ ಮಾತ್ರ ಕರುಳು ಹಿಂಡಿದಂತಾಗುತ್ತದೆ. ಮನೆಯಲ್ಲಿ ಸ್ನೇಹಾ ಇಲ್ಲದ ನೋವು ಒಂದು ಕಡೆಯಾದರೆ ಮೆಸ್‌ನಲ್ಲಿ ಯಾರು ಇಲ್ಲದ್ದನ್ನು ಕಂಡ ಕಾಳೀ ಮಾತ್ರ ಸಹನಾ ಬಳಿ ಮಾತನಾಡಬೇಕು ಎಂದುಕೊಳ್ಳುತ್ತಾನೆ. ಇದಕ್ಕಾಗಿ ಹಲವು ಬಾರಿ ಯೋಚನೆ ಮಾಡುತ್ತಾ ಇರುತ್ತಾನೆ.

Kannada serial puttakkana makkalu written updated on 30th may

ಕಾಳಿಯ ಮೇಲೆ ಕೋಪ ಮಾಡಿಕೊಂಡ ಸಹನಾ

ಸಹನಾಗೆ ಕಾಳಿಯ ಮೇಲೆ ಕೋಪ ಇರುತ್ತದೆ. ಆದರೆ ಆತ ಮಾತ್ರ ಸಹನಾ ಕೈಗೆ ಸಿಕ್ಕಿರುವುದಿಲ್ಲ. ಕಾಳಿ ಸಹನಾಳನ್ನು ಮೆಸ್‌ನಲ್ಲಿ ನೋಡುತ್ತಾನೆ. ಆದರೆ ಅಲ್ಲಿ ಯಾರು ಇಲ್ಲದೇ ಇರುವುದನ್ನು ನೋಡಿದ ಆತ ಮಾತ್ರ ಮೆಸ್ ಒಳಗೆ ಬರುತ್ತಾನೆ. ಸಹನಾಗೆ ಮಾತ್ರ ಕೋಪ ಬಂದಿರುತ್ತದೆ. ಆದರೂ ತಡೆದುಕೊಳ್ಳುತ್ತಿರುತ್ತಾಳೆ.

ಕಾಳಿ ಮಾತಿಗೆ ಸಹನಾ ಗರಂ

ಆ ಬಳಿಕ ಕಾಳಿಗೆ ಅನ್ನ ಸಾರು ಬಡಿಸುತ್ತ ಇರುವಾಗ ಕಾಳೀ ಮೆತ್ತಗೆ ಸಹನಾ ಬಳಿ ಕೇಳುತ್ತಾನೆ. ಏನು ಸಹನಾ ಗಂಡನ ಮನೆಯಿಂದ ಬಂದು ಸುಮಾರು ದಿನ ಆಯಿತಂತೆ. ನನ್ನ ನೋಡಲು ಬಂದಿದ್ದೀಯಾ ಎಂದು ಕೇಳಿದಾಗ ಸಹನಾಗೆ ಬಹಳ ಕೋಪ ಬಂದು ಜೋರಾಗಿ ಬೈಯ್ಯುತ್ತಾಳೆ.

Kannada serial puttakkana makkalu written updated on 30th may

ಮೆಸ್‌ನಿಂದ ಕಾಳಿ ಹೊರಹಾಕಿದ ಸಹನಾ

ಆ ಬಳಿಕ ಹೊರಗೆ ಕರೆದುಕೊಂಡು ಬಂದು ವಾಪಸ್ ಬೈಯ್ಯುತ್ತಾಳೆ. ಏನು ನಿನಗಾಗಿ ನಾನು ನಮ್ಮ ಮನೆ ಬಿಟ್ಟು ತವರು ಬಂದಿದ್ದಿನಾ? ಏನು ಮಾತನಾಡುತ್ತಾ ಇದ್ದಿಯಾ ನೀನು ಎಂದೆಲ್ಲ ಜೋರಾಗಿ ಗಲಾಟೆ ಮಾಡುತ್ತಾಳೆ.

ಸಹನಾ ಕೋಪ ಕಂಡು ಭಯಗೊಂಡ ಕಾಳೀ

ಸಹನಾ ಕೋಪ ಕಂಡು ಕಾಳಿಗೆ ಏನು ಮಾಡಬೇಕು ಎಂದು ತೋಚದಂತಾಗುತ್ತದೆ. ಸಹನಾಗೆ ಕಾಳೀ ಮೇಲೆ ಎಲ್ಲಿಲ್ಲದ ಕೋಪ. ಯಾಕೆಂದರೆ ಆತ ಮಾಡಿದ ಅವಮಾನ ಹಾಗೆ ಇತ್ತು. ಗಂಡನ ಮನೆಯಲ್ಲಿ ಇರಬೇಕಾದರೆ ಫೋನ್ ಮಾಡಿ ಟಾರ್ಚರ್ ಕೊಡುತ್ತಾ ಇದ್ದ. ಇದೀಗ ಮನೆಗೆ ಬಂದು ಟಾರ್ಚರ್ ನೀಡುತ್ತಾ ಇರುವುದು ಸಹನಾಗೆ ಕೋಪ ತರಿಸಿದೆ.

More from Filmibeat

English summary
Kannada serial puttakkana makkalu written updated on 30th may. here is details about Kanti Meets Puttakka. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X