ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಠಿ, ಆಸ್ಪತ್ರೆಗೆ ಸೇರಿಸಿದ ಸ್ನೇಹಾ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಖೋ-ಖೋ ಸ್ಪರ್ಧೆಯಲ್ಲಿ ಪುಟ್ಟಕ್ಕನ ಟೀಂ ಗೆದ್ದಿದೆ. ತನ್ನ ಅಮ್ಮನ ಕೈಯಿಂದಲೆ ಮೆಡಲ್ ತೆಗೆದುಕೊಳ್ಳುತ್ತಿರುವುದು ಸುಮಾಗೆ ಖುಷಿ ನೀಡಿದೆ. ಸುಮಾ ತನ್ನ ಆಟದ ಎಲ್ಲಾ ಕ್ರೆಡಿಟ್ ಅನ್ನು ಅಮ್ಮನಿಗೆ ಕೊಟ್ಟಿದ್ದಾಳೆ. ತನ್ನ ಅಮ್ಮ ನಮಗೆಲ್ಲ ತೆರಬೇತಿ ನೀಡಿ ಮೊದಲ ಸ್ಥಾನ ಬರಲು ಕಾರಣ ಆಗಿದ್ದಾಳೆ ಇದರಿಂದ ನನಗೆ ಬಹಳ ಖುಷಿ ಆಗುತ್ತಿದೆ ಎಂದು ಹೇಳುತ್ತಾಳೆ. ಬಳಿಕ ಸ್ಪರ್ಧೆಯ ಆಯೋಜಕರು ಪುಟ್ಟಕ್ಕನ ಬಳಿ ಮಾತನಾಡಲು ಹೇಳುತ್ತಾರೆ ಈ ವೇಳೆ ಮಾತನಾಡಿದ ಪುಟ್ಟಕ್ಕ ಸಿಟಿ ಕಾಲೇಜ್ ತಂಡಕ್ಕೂ ಅಭಿನಂದನೆಗಳನ್ನು ಸಲ್ಲಿಸುತ್ತಾರೆ.

ಮಕ್ಕಳಿಗೆಲ್ಲ ಕೋಚಿಂಗ್ ಕೊಟ್ಟ ಮೇಡಂಗೆ ಶುಭಾಶಯಗಳು. ಬಹಳ ಅದ್ಭುತವಾಗಿ ಆಟವನ್ನು ಆಡಿದಿರಿ ಈ ಮಕ್ಕಳು ಸೋತಿದ್ದು ಮನಸಿನಿಂದಾಗಿ ಇಲ್ಲವಾದರೆ ಹೇಗಾದರೂ ಗೆಲ್ಲುತ್ತಿದ್ದರು. ಗೆಲ್ಲುವ ಛಲ ಇರಬೇಕು ಆದರೆ ಆಟಕ್ಕಿಂತ ಮೊದಲೇ ಗೆದ್ದೆ ಎಂದು ಬೀಗಬಾರದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬೆಂಗಳೂರು ತಂಡದ ಕೋಚ್ ಗೆ ತನ್ನ ತಪ್ಪಿನ ಅರಿವಾಗುತ್ತದೆ. ಬಳಿಕ ಪುಟ್ಟಕ್ಕನ ಬಳಿ ತನ್ನ ತಪ್ಪಿನ ಬಗ್ಗೆ ಕ್ಷಮೆಯನ್ನು ಕೇಳುತ್ತಾರೆ.

ಇನ್ನು ಪುಟ್ಟಕ್ಕನ ಬಳಿ ಬಂದ ಬೆಂಗಳೂರು ತಂಡದ ಕೋಚ್ ಅಭಿನಂದನೆಗಳು ಎಂದು ಹೇಳಿ ಕೈ ಕುಲುಕುತ್ತಾರೆ. ಇದನ್ನು ನೋಡಿ ಪುಟ್ಟಕ್ಕ ನಮಸ್ತೆ ಎಂದು ಕೈ ಮುಗಿದು ಬಿಡುತ್ತಾಳೆ. ಬಳಿಕ ಪುಟ್ಟಕ್ಕನ ಬಳಿ ಕ್ಷಮೆ ಕೇಳುತ್ತಾಳೆ. ಬಳಿಕ ಅಲ್ಲಿಂದ ತೆರಳುತ್ತಾರೆ. ಇನ್ನು ಸಹನಾ ಬಳಿ, ನಮ್ಮ ತಂಡ ಗೆಲ್ಲಲು ನಿನ್ನ ಕೊಡುಗೆಗೆ ಬಹಳ ಹೆಚ್ಚಿದೆ ಎಂದು ಹೇಳುತ್ತಾಳೆ.

ಕುಸಿದು ಬಿದ್ದ ಕಂಠಿ

ಕುಸಿದು ಬಿದ್ದ ಕಂಠಿ

ಇನ್ನೂ ಕಂಠಿ ಕುಸಿದು ಬೀಳುತ್ತಾನೆ. ಜ್ವರ ಜಾಸ್ತಿಯಾಗಿ ಆತನಿಗೆ ಬೈಕ್ ಕೂಡ ಓಡಿಸಲು ಆಗದೆ ಬೀಳುತ್ತಾನೆ ಇದನ್ನು ಕಂಡ ಸ್ನೇಹಾ ಕಂಠಿ ಏನಾಯಿತು ಎಂದೆಲ್ಲ ಕೇಳುತ್ತಾಳೆ ಅಲ್ಲೇ ಇದ್ದ ಒಬ್ಬಾಕೆ ಹೆಂಗಸು ಆತನನ್ನು ಮುಟ್ಟಿ ನೋಡಿ ಇವರಿಗೆ ಜ್ವರ ಹೆಚ್ಚಾಗಿದೆ ಎಂದು ಹೇಳುತ್ತಾರೆ ಆಸ್ಪತ್ರೆಗೆ ಸಾಗಿಸಲು ಅಲ್ಲಿ ಯಾರೂ ಇಲ್ಲದ ವೇಳೆ ಏನು ಮಾಡಬೇಕು ತಿಳಿಯದೇ ಯೋಚನೆ ಮಾಡುತ್ತಾಳೆ. ಬಳಿಕ ಕಂಠಿಯನ್ನು ಹೆಗಲಿಗೆ ಕಟ್ಟಿಕೊಂಡು ಬೈಕ್ ಚಲಾಯಿಸಿಕೊಂಡು ಆಸ್ಪತ್ರೆಗೆ ಹೋಗುತ್ತಾಳೆ. ಮನೆಯ ಕಡೆ ಹೋಗುತ್ತಾ ಇದ್ದ ಸುಮಾ, ಸಹನಾ ಹಾಗೂ ಪುಟ್ಟಕ್ಕ ಕಂಠಿಯನ್ನು ಸ್ನೇಹಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದನ್ನು ದಾರಿಯಲ್ಲಿ ನೋಡುತ್ತಾರೆ.

ಮುಂಗುಸಿಗೆ ವಸು ಕ್ಲಾಸ್

ಮುಂಗುಸಿಗೆ ವಸು ಕ್ಲಾಸ್

ಇತ್ತ ವಸು ಮಾತ್ರ ಅಣ್ಣ ಇಲ್ಲದನ್ನು ಕಂಡು ಮುಂಗುಸಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಆ ವೇಳೆ ನಾಗ ಹಾಗೂ ಮುಂಗುಸಿ ಇರುವ ನಿಜ ವಿಚಾರವನ್ನು ಹೇಳುತ್ತಾರೆ ಇದನ್ನು ಕೇಳಿ ವಸು ಇನ್ನೂ ಆಘಾತವಾಗುತ್ತದೆ. ಈ ವೇಳೆ ಮನೆಯ ಕಾಲಿಂಗ್ ಬೆಲ್ ಸದ್ದಾಗುತ್ತದೆ ಏನು ಮಾಡಬೇಕು ಎಂದು ತಿಳಿಯದೇ ವಸು, ನಾಗ, ಮುಂಗುಸಿ ಮುಖ ಮುಖ ನೋಡಿಕೊಳ್ಳುತ್ತಾರೆ.

ಬೇರೆ ಮದುವೆ ಆಗಲು ಚಂದ್ರುಗೆ ನಂಜವ್ವ ಒತ್ತಡ

ಬೇರೆ ಮದುವೆ ಆಗಲು ಚಂದ್ರುಗೆ ನಂಜವ್ವ ಒತ್ತಡ

ಇತ್ತ ನಂಜವ್ವ ತನ್ನ ಮಗ ಚಂದ್ರು ಬಳಿ ಏನೇನೋ ವಿಚಾರ ಹೇಳುತ್ತ ಇರುತ್ತಾಳೆ. ವಸು ಬೇರೆ ಹುಡುಗನನ್ನು ಮದುವೆ ಆಗಲು ರೆಡಿ ಆಗಿ ನಿಂತಿದ್ದಾಳೆ ನಿನಗೂ ಬೇರೆ ಮದುವೆ ಆಗಬಹುದು ಅಲ್ವಾ ಎಂದೆಲ್ಲ ಹೇಳುತ್ತಾಳೆ ಆದರೆ ಚಂದ್ರು ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ ಇದನ್ನು ನೋಡಿದ ನಂಜವ್ವ ಅದೆಷ್ಟೇ ಪಿತೂರಿ ಮಾಡಿದರು. ಮಗ ಮಾತ್ರ ಮದುವೆ ಒಪ್ಪದೇ ಇರುವುದನ್ನು ನೋಡಿ ಕಂಗಾಲಾಗಿದ್ದಾಳೆ.

ಶ್ರೀ ಆರೋಗ್ಯ ವಿಚಾರಿಸಿದ ಪುಟ್ಟಕ್ಕ

ಶ್ರೀ ಆರೋಗ್ಯ ವಿಚಾರಿಸಿದ ಪುಟ್ಟಕ್ಕ

ಇನ್ನು ಈ ವೇಳೆ ಪುಟ್ಟಕ್ಕ ಸ್ನೇಹಾ ಗೆ ಕರೆ ಮಾಡಿ ಶ್ರೀ ಅವರಿಗೆ ಏನಾಯಿತೋ ಎಂದು ಗಾಬರಿಯಿಂದ ಕೇಳುತ್ತಾರೆ. ಈ ವೇಳೆ ಸ್ನೇಹಾ ನಡೆದ ವಿಚಾರವನ್ನು ಅಮ್ಮನ ಬಳಿ ಹೇಳುತ್ತಾರೆ. ಬಳಿಕ ಹೇಳುತ್ತಾರೆ ಶ್ರೀ ಗೆ ಹುಷಾರ್ ತಪ್ಪಿದೆ ಅದಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದೆ ಎನ್ನುತ್ತಾಳೆ. ಇನ್ನು ಪುಟ್ಟಕ್ಕನ ಟೀಂ ಗೆದ್ದಿದ್ದಕ್ಕೆ ರಾಜಿ ಬಹಳ ಕೋಪಗೊಂಡಿದ್ದಾಳೆ. ಆ ವೇಳೆ ಪುರುಷೋತ್ತಮ ರಾಜೀ ಬಳಿ, 'ಅಮ್ಮ ಪುಟ್ಟವ್ವಾ ತಾನೇ ಮುಂದೆ ಬಂದು ಮಕ್ಕಳಿಗೆ ಸಪೋರ್ಟ್ ಮಾಡಿದ್ದಾಳೆ. ಅಮ್ಮ ಅಂದರೆ ಹಾಗಿರಬೇಕು ನಿನ್ನ ಥರ ಹೀಗೆಲ್ಲ ಮಾಡುವುದಲ್ಲ' ಎಂದಾಗ ರಾಜಿ ಕೋಪದಿಂದ ಪುರುಷೋತ್ತಮ ಕೆನ್ನೆಗೆ ಹೊಡೆಯುತ್ತಾಳೆ. ಆದರೂ ಪುರುಷೋತ್ತಮ ಹೇಳುತ್ತಾನೆ ನಿಮಗೆ ಖುಷಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನನಗೆ ಖುಷಿ ಇದೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.

More from Filmibeat

English summary
Kannada serial Puttakkana Makkalu written updated on 30th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X