Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಮಾಳ ಮುನಿಸು ದೂರ ಪಂದ್ಯ ಆಡಲು ಸಜ್ಜಾಗುತ್ತಿರುವ ಪುಟ್ಟಕ್ಕನ ಮಗಳು!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಗೆಳೆಯರ ಮಾತಿನಿಂದ ಕೋಪಗೊಂಡ ಸುಮಾ ನೇರವಾಗಿ ಮನೆಗೆ ಬಂದಿದ್ದಾಳೆ. ಸುಮಾ ಮನೆಗೆ ಬಂದಿರುವುದನ್ನು ನೋಡಿದ ಪುಟ್ಟಕ್ಕ ಮತ್ತು ಸ್ನೇಹಾ ಏನಾಯ್ತು ಕೋಪದಿಂದ ಬರುತ್ತಿದ್ದಾಳೆ ಅಲ್ವಾ ಏನಾದರು ಕಿರಿಕ್ ಆಗಿರಬೇಕು ಎಂದು ಅವಳ ಹಿಂದೆ ಬರುತ್ತಾರೆ. ಆಗ ಪುಟ್ಟಕ್ಕ ಏನಾಯ್ತು ಎಂದು ಕೇಳಿದಾಗ, ಸುಮಾ ಹೇಳುತ್ತಾಳೆ 'ಅವ್ವ ನೀನು ಸುಮ್ಮನಿರು' ಎಂದು ರೇಗುತ್ತಾಳೆ. ಇನ್ನೂ ಸ್ನೇಹಾ ಕೂಡ ಸುಮಾ ಬಳಿ ಮಾತನಾಡುವಾಗ ಅಕ್ಕ ನೀನು ಸುಮ್ಮನಿರು ನನಗೆ ಮಾತನಾಡಲು ಅವಕಾಶ ಕೊಡು ಎಲ್ಲಾ ನೀವು ನೀವೇ ಮಾತನಾಡಿ ಮುಗಿಸಿ ಬಿಡಬೇಡಿ ಎಂದು ಹೇಳುತ್ತಾಳೆ.
ಬಳಿಕ ಅವ್ವನನ್ನು ನೋಡಿ ಸುಮಾ ಹೇಳುತ್ತಾಳೆ 'ಅಮ್ಮ ನೀನು ಒಳ್ಳೆಯ ಆಟಗಾರ್ತಿ ನಿಜ ಆದರೆ ಮುಂದೊಂದು ದಿನ ನಿನಗೆ ಯಾವುದೇ ಕೆಟ್ಟ ಹೆಸರು ಬರಬಾರದು. ನೀನು ಯಾವತ್ತೂ ಬೇಸರ ಪಟ್ಟುಕೊಳ್ಳಬಾರದು ಇದು ನನ್ನ ಆಸೆ ಅದಕ್ಕಾಗಿ ನೀನು ಆಟ ಹೇಳಿಕೊಡುವುದು ಬೇಡ ಎಂದು ಹೇಳಿದೆ ವಿನಃ ಬೇರೆ ಯಾವುದೇ ಕಾರಣದಿಂದ ಅಲ್ಲ. ಇದೀಗ ನನ್ನ ಗೆಳತಿಯರು ನನಗೆ ಗೊತ್ತಿಲ್ಲದ ಹಾಗೆ ನಿನ್ನ ಬಳಿ ಕೋಚಿಂಗ್‌ಗೆ ಬರುತ್ತಿದ್ದಾರೆ. ಇನ್ನೂ ಮುಂದೆ ನಾನು ನಿನ್ನ ಬಳಿ ಕೊಂಚಿಂಗ್‌ಗೆ ಬರುತ್ತೇನೆ ಎಂದು ಹೇಳುತ್ತಾಳೆ.

ಸುಮಾಳ ನಿರ್ಧಾರಕ್ಕೆ ಖುಷಿಯಾದ ಮನೆ ಮಂದಿ
ಆ ಮಾತಿನಿಂದ ಪುಟ್ಟಕ್ಕ ಗೆ ಖುಷಿ ಆಗುತ್ತದೆ ನನಗೆ ಗೊತ್ತಿತ್ತು ನೀನು ಬಂದೆ ಬರುತ್ತೀಯಾ ಎಂದು ಹೇಳಿದಳು. ಬಳಿಕ ಸುಮಾ ಹೇಳುತ್ತಾಳೆ. ಇನ್ನೂ ಸ್ವಲ್ಪ ಕೋಪ ಬಂದಿದ್ದು ನಿಮ್ಮ ಮುದ್ದಿನ ಮಗಳು ನಾನು. ನಿನ್ನ ಇಬ್ಬರು ಮಕ್ಕಳಿಗಿಂತ ಹೆಚ್ಚು ಪ್ರೀತಿ ನನಗೆ ಕೊಡಬೇಕು. ಇದೀಗ ನನ್ನ ಗೆಳೆಯರು ನಿನ್ನಾ ಬಳಿ ಕೋಚಿಂಗ್ ಬಂದಿದ್ದಾರೆ ಅದಕ್ಕೆ ನನಗೆ ಕೊಂಚ ಅವರ ಮೇಲೆ ಕೋಪ ಎಂದು ತನ್ನ ಮುನಿಸನ್ನು ಹೊರ ಹಾಕುತ್ತಾಳೆ ಸುಮಾ. ಇದನ್ನು ಕೇಳಿ ಎಲ್ಲರೂ ನಗುತ್ತಾರೆ. ಬಳಿಕ ಪುಟ್ಟಕ್ಕ ಹೇಳುತ್ತಾಳೆ ಇನ್ನೂ ಪಂದ್ಯ ಹತ್ತಿರ ಬರುತ್ತಿದೆ ನಾಳೆಯಿಂದ ಪ್ರಾಕ್ಟೀಸ್ ಶುರು ಮಾಡಬೇಕು ಎಂದು ಹೇಳುತ್ತಾಳೆ.

ಕಂಠಿ ಹೊಟ್ಟೆ ಉರಿಸುತ್ತಿರುವ ಪೂರ್ವಿ
ಇತ್ತ ಪೂರ್ವಿ, ಕಂಠಿ ಬಳಿ ಮಾತನಾಡುತ್ತಾಳೆ. ಕಂಠಿ ನೀನು ಯಾರೊಂದಿಗೆ ಆದರೂ ಪೋಸ್ಟರ್ ಹಾಕು ಆದರೆ ನೀನು ಮಾತ್ರ ನನ್ನವನೆ ನಿನ್ನನ್ನು ಬೇರೆಯವರ ಪಾಲಾಗಲು ನಾನು ಬಿಡುವುದಿಲ್ಲ. ಅದಲ್ಲದೆ ಮದುವೆಗೆ ಮುಂಚೆ ಹೀಗೆಲ್ಲ ಇರು ಆದರೆ ಮದುವೆ ಆದ ಬಳಿಕ ನಾನು ಎಲ್ಲಾ ಸರಿಪಡಿಸುತ್ತೇನೆ ಎಂದು ಹೇಳುತ್ತಾಳೆ. ಪೋಸ್ಟರ್ ವಿಚಾರ ಬಂಗಾರಮ್ಮ ವರೆಗೂ ಮುಟ್ಟಿದೆ ಇದೆಲ್ಲ ತಿಳಿದ ಕಂಠಿ ಹೇಳುತ್ತಾನೆ ಇದನ್ನೆಲ್ಲ ಯಾರು ಮಾಡಿದ್ದಾನೆ ಅವನು ನನ್ನ ಕೈಗೆ ಸಿಗಬೇಕು ಸಿಗಿದು ತೋರಣ ಕಟ್ಟುತ್ತೇನೆ ಎಂದೆಲ್ಲ ಕೋಪದಿಂದ ಹೇಳುತ್ತಾನೆ.

ವಸು ಜೊತೆ ಕಠೋರವಾಗಿ ನಡೆದುಕೊಂಡ ಚಂದ್ರು
ಪೋಸ್ಟರ್ ಅಂಟಿಸಿದ್ದು ನಂಜವ್ವನೇ ಎಂದು ಬಂಗಾರಮ್ಮ ಅಂದುಕೊಂಡಿದ್ದಾಳೆ. ಆಕೆ ಬೇಕು ಬೇಕಾಂತನೆ ಮಾಡಿದ್ದು ಎಂದಾಗ ವಸು ಇಲ್ಲ ಅಮ್ಮ ಅವರು ಮಾಡಿರಲ್ಲ ಸುಮ್ಮನೆ ಹೇಳುತ್ತಾರೆ ಅಷ್ಟೇ ಎಂದು ಹೇಳಿದಾಗ ಬಂಗಾರಮ್ಮ, ಚಂದ್ರುಗೆ ಕರೆ ಮಾಡುತ್ತಾಳೆ. ಪೋಸ್ಟರ್ ವಿಚಾರ ಆತನಿಗೆ ಹೇಳುತ್ತಾರೆ. ಈ ಸಂದರ್ಭ ಅವರಿಬ್ಬರ ನಡುವೆ ಬಹಳ ದೊಡ್ಡ ಜಗಳ ನಡೆಯುತ್ತದೆ. ಕಂಠಿ ಮಾಡಿರುವುದು ತಪ್ಪು ಎಂದು ಚಂದ್ರು ಹೇಳುತ್ತಿರುತ್ತಾನೆ. ಕೊನೆಗೆ ಅಮ್ಮನ ಬಗ್ಗೆ ಮಾತನಾಡಿದ್ದಕ್ಕೆ ಜೋರಾಗಿ ಜಗಳ ಮಾಡಿ ಕರೆ ಕಟ್ ಮಾಡುತ್ತಾಳೆ ವಸು. ನಂತರ ಜೋರಾಗಿ ಅಳುತ್ತಾಳೆ.

ಅಮ್ಮನನ್ನು ಬಿಗಿದಪ್ಪಿ ದುಃಖ ತೋಡಿಕೊಂಡ ವಸು
ಆಗ ಅಲ್ಲಿಗೆ ಬಂದ ಬಂಗಾರಮ್ಮ ಏನಾಯ್ತು ವಸು ಯಾಕೆ ಅಳುತ್ತಿದ್ದೀಯ ಏನಾಯ್ತು ಎಂದೆಲ್ಲ ಹೇಳುತ್ತಾರೆ. ಆಗ ವಸು, ಹೇಳುತ್ತಾಳೆ ಚಂದ್ರು ಹೀಗೆಲ್ಲ ಮಾತನಾಡುತ್ತಾನೆ ಎಂದುಕೊಂಡಿರಲಿಲ್ಲ ಅಮ್ಮ ನಾನು ನೀನು ಹೇಳಿದ ಹಾಗೆ ಇರುತ್ತೇನೆ ಅಮ್ಮ ನಾನು ಈ ಮನೆ ಬಿಟ್ಟು ಎಲ್ಲಿಗೂ ಹೋಗಲ್ಲ ಎಂದು ಜೋರಾಗಿ ಅತ್ತುಕೊಂಡು ಬಂಗಾರಮ್ಮನನ್ನು ತಬ್ಬಿ ಹಿಡಿದುಕೊಳ್ಳುತ್ತಾಳೆ. ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು ಊಟಕ್ಕೆ ಕುಳಿತಿರುತ್ತಾರೆ. ಈ ವೇಳೆ ಸುಮಾಗೆ ತುಂಬಾ ಹಸಿವು ಆಗುತ್ತಾ ಇರುತ್ತದೆ ಹಪ್ಪಳವನ್ನು ನೋಡಿ ಇನ್ನೂ ಆಸೆ ಆಗುತ್ತದೆ ಆದರೆ ಆಕೆ ಪಂದ್ಯ ಮುಗಿಯುವ ವರೆಗೂ ಸಪ್ಪೆ ಊಟವನ್ನು ಮಾಡಬೇಕು ಹೀಗಂತ ಪುಟ್ಟಕ್ಕ ಹೇಳುತ್ತಾಳೆ. ಆದರೆ ಇದಕ್ಕೆ ಸುಮಾ ಒಪ್ಪದೇ ಇದ್ದರೂ ಬಲವಂತದಿಂದ ಒಪ್ಪಿಸುತ್ತಾರೆ ಪುಟ್ಟಕ್ಕ. ಆ ವೇಳೆ ಪವರ್ ಕೂಡ ಕಟ್ ಆಗುತ್ತದೆ. ಇತ್ತ ನಂಜವ್ವ ಮಗನಿಗೆ ಬೇರೆ ಮದುವೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಮುಂದೇನು ಎಂಬುವುದನ್ನು ಕಾದುನೋಡಬೇಕಿದೆ.