ತಾರಕಕ್ಕೇರಿದೆ ಸುಮಾಳ ಕೋಪ: ಮಗಳ ಮನಸ್ಸು ಹೇಗೆ ಗೆಲ್ಲುತ್ತಾಳೆ ಪುಟ್ಟಕ್ಕ?
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ಜನ ಮನ ಸೆಳೆಯುತ್ತಿದೆ. ಮಗಳು ಚೆನ್ನಾಗಿ ಖೋ-ಖೋ ಆಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಬೇಕು ಎಂಬುದು ಪುಟ್ಟಕ್ಕನ ಆಸೆ. ಅದಕ್ಕೆ ತಾನೇ ಮಗಳಿಗೆ ಕೋಚ್ ಆಗಲು ಹೊರಟಿದ್ದಾಳೆ ಪುಟ್ಟಕ್ಕ. ಆದರೆ ಪುಟ್ಟಕ್ಕನ ಮಗಳು ಸುಮಾ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಅಮ್ಮ ನೀನು ಕೋಚ್ ಆಗೋದೇ ಬೇಡ. ನನಗೆ ಯಾರು ಕೋಚ್ ಮಾಡುವ ಅವಶ್ಯಕತೆ ಇಲ್ಲ. ನಾವೇ ತರಬೇತಿ ಪಡೆದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತೆವೆ ಎಂದೆಲ್ಲ ಹೇಳಿದ್ದಾಳೆ. ಆದರೆ ಪುಟ್ಟಕ್ಕ ತನ್ನ ಪ್ರಯತ್ನ ಬಿಟ್ಟಿಲ್ಲ.
ಇದೀಗ ಪುಟ್ಟಕ್ಕ ಕೋಚ್ ಆಗಿ ಖೋಖೋ ಆಟ ಹೇಳಿಕೊಡುತ್ತಿರುವುದು ರಾಜಿಗೆ ಗೊತ್ತಾಗಿದೆ. ಪುರುಷೋತ್ತಮ ಕಾಲೇಜಿನಿಂದ ಬಂದು ಅಮ್ಮನ ಬಳಿ ಹೇಳುತ್ತಾನೆ ಸುಮಾಳ ಅಮ್ಮ ಪುಟ್ಟಕ್ಕ ಖೋಖೋ ಆಟ ಹೇಳಿ ಕೊಡುತ್ತಾರೆ. ಖೋ-ಖೋ ಆಟಕ್ಕೆ ಕೋಚ್ ಆಗಿ ಬರುತ್ತಾರಂತೆ ಹೀಗೆ ಕಾಲೇಜಿನಲ್ಲಿ ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಖುಷಿಯಲ್ಲಿ ಅಮ್ಮನ ಬಳಿ ಬಂದು ಹೇಳುತ್ತಾನೆ ಇದನ್ನು ಕೇಳಿಸಿಕೊಂಡ ರಾಜೀ ಜೋರಾಗಿ ನಗುತ್ತಾಳೆ.
ಏನು? ಅಡುಗೆ ಕೆಲಸ ಮಾಡುವುದನ್ನು ಬಿಟ್ಟು ಇದೇನು ಕೆಲಸ ಮಾಡಲು ಹೊರಟಿದ್ದಾಳೆ ಎಂದು ಆಡಿಕೊಳ್ಳುತ್ತಾಳೆ ರಾಜೇಶ್ವರಿ. ಅಡುಗೆ ಮಾಡಿದಷ್ಟೂ ಸುಲಭಾನ ಖೋ-ಖೋ ಹೇಳಿಕೊಡುವುದು. ಬಹಳ ಖುಷಿ ಆಯ್ತು ನನಗೆ ಎಂದು ಜೋರಾಗಿ ನಗುತ್ತಾಳೆ. ಅಮ್ಮನ ಕುಹಕದ ಮಾತುಗಳನ್ನು ಕೇಳುತ್ತಿದ್ದ ಪುರುಷಿಗೆ ಕುಪಿತನಾಗಿ ಅಲ್ಲಿಂದ ತೆರಳುತ್ತಾನೆ. ಇದನ್ನು ಕಂಡ ರಾಜೀ ಗಂಡ ಏನಕ್ಕೆ ರಾಜೀ ನಗುತ್ತಿದ್ದಿಯಾ ಎಂದು ಕೇಳಿದಾಗ ಪುಟ್ಟಕ್ಕ ಖೋಖೋ ಆಟ ಹೇಳಿಕೊಡುತ್ತಾಳಂತೆ ಎಂದು ಹೇಳುತ್ತಾಳೆ.

ಪುಟ್ಟಕ್ಕನನ್ನು ಮಣಿಸುವ ಪ್ರಯತ್ನ
ಇದನ್ನು ಕೇಳಿಸಿಕೊಂಡ ಆತ ಕೂಡ ಹೇಳುತ್ತಾನೆ ಪುಟ್ಟಕ್ಕ ಮದುವೆಗಿಂತ ಮುಂಚೆ ಉತ್ತಮ ಖೋಖೋ ಆಟಗಾರ್ತಿ ಎಂದು ಹೇಳಿದಾಗ ರಾಜೀ ಕೋಪದಲ್ಲಿ ಕಿಡಿಕಾರುತ್ತಾಳೆ. ಇತ್ತ ಪುಟ್ಟಕ್ಕ ಖೋ-ಖೋ ಆಟ ಆಡಲು ತಯಾರಿ ನಡೆಸುತ್ತಿರುತ್ತಾರೆ. ಅಮ್ಮನನ್ನು ಕಾಣದೆ ಸ್ನೇಹಾ ಅಲ್ಲಿಗೆ ಬರುತ್ತಾಳೆ. ಅಮ್ಮ ನೀನೇನು ಮಾಡುತ್ತಿದ್ದಿಯಾ ಎಂದು ಕೇಳಿದ್ದಕ್ಕೆ, ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾಳೆ ಪುಟ್ಟಕ್ಕ ಆಗ ಅಲ್ಲಿಗೆ ಸುಮಾ ಬಂದು ಜೋರಾಗಿ ಮಾತನಾಡುತ್ತಾಳೆ. ಏನಿದೆಲ್ಲ? ನಾನು ಹೇಳಿದೆ ಅಲ್ವಾ ನೀನು ನಮಗೆ ಕೋಚ್ ಆಗುವುದು ಬೇಡ ನಾವೇ ನಮಗೆ ಕೋಚ್ ಅಷ್ಟೇ ಈ ಥರ ಕೆಲಸ ಮಾಡುವುದರಿಂದ ಸುಮ್ಮನೆ ಕಷ್ಟ ಪಡಬೇಡ ಎಂದು ಎಷ್ಟೇ ಹೇಳಿದರೂ ಕೋಪ ಮಾಡಿಕೊಂಡರು ಪುಟ್ಟಕ್ಕನ ಮಾತು ಒಂದೇ ಮಾಡುವ ಕೆಲಸ ಮಾತ್ರ ಶ್ರದ್ಧೆಯಿಂದ ಮಾಡಬೇಕು ಎಂದು.

ಸುಮಾ ಶಾಕ್
ಇದೀಗ ಪುಟ್ಟಕ್ಕನ ಬಳಿಗೆ ಸುಮಾ ಗೆಳತಿಯರು ಬರುತ್ತಾರೆ. ಗೆಳತಿಯರನ್ನು ಕಂಡು ಸುಮಾ ಶಾಕ್ ಆಗುತ್ತಾಳೆ. ಗೆಳತಿಯರ ಬಳಿ ಕೇಳಿದಾಗ ಪುಟ್ಟಕ್ಕನೇ ಬರ ಹೇಳಿದ್ದು ಎಂದು ತಿಳಿದು ಸುಮಾಗೆ ಕೆಂಡದಂಥ ಕೋಪ ಉಕ್ಕಿ ಬರುತ್ತದೆ. ಆಟದ ಬಗ್ಗೆ ಇರುವ ಶಿಸ್ತಿನ ಬಗ್ಗೆ ಪುಟ್ಟಕ್ಕ ಮಾತನಾಡುತ್ತಾ ಇರುತ್ತಾರೆ. ಆಡಲು ಬಂದ ಮಕ್ಕಳಿಗೂ ಈ ಪಾಠವನ್ನು ಹೇಳಿಕೊಡುತ್ತಾ ಇರುತ್ತಾರೆ. ಸಹನಾ ಹೇಳುತ್ತಾಳೆ ಅಮ್ಮ ನೀನು ಆಟ ಹೇಳಿಕೊಡುವುದು ಇಲ್ಲಿಯವರೆಗೆ ಯಾರಿಗೂ ಇಷ್ಟ ಇಲ್ಲ ಮತ್ತೆ ಯಾಕೆ ತೊಂದರೆ ತೆಗೆದುಕೊಳ್ಳುತ್ತೀಯಾ ಎಂದೆಲ್ಲ ಹೇಳುತ್ತಾರೆ. ಅದಕ್ಕೆ ಪುಟ್ಟಕ್ಕ ಸ್ನೇಹಾ ಬಳಿ ಸಹನಾಳನ್ನು ಮನೆಗೆ ಕರೆದುಕೊಂಡು ಹೋಗುವಂತೆ ಆಜ್ಞಾಪಿಸುತ್ತಾಳೆ.

ಕೆರಳಿ ಕೆಂಡವಾದ ಸ್ನೇಹಾ
ಸುಮಾ ಮಾತ್ರ ಅಮ್ಮನ ಬಗ್ಗೆ ಎಲ್ಲರೆದುರು ತುಚ್ಚವಾಗಿ ನಿಕೃಷ್ಠವಾಗಿ ಮಾತನಾಡುತ್ತಾಳೆ. ಇದನ್ನು ಕಂಡ ಸ್ನೇಹಾ ಗೆ ಕೆಂಡದಂತ ಕೋಪ ಬರುತ್ತದೆ. ಯಾರ ಹತ್ತಿರ ಎನು ಮಾತನಾಡಬೇಕು ಎಂಬುವುದನ್ನು ತಿಳಿದುಕೊಂಡು ಮಾತನಾಡು ಎಂದೆಲ್ಲ ಬುದ್ಧಿವಾದ ಹೇಳುತ್ತಾಳೆ. ಇದಕ್ಕೆ ಸುಮಾ, ಅಮ್ಮನ ಪರ ನೀನು ಮಾತನಾಡುತ್ತಾ ಇದ್ದೀಯಾ ಎಂದು ಹೇಳುತ್ತಾಳೆ. ಅಮ್ಮನ ಬಗ್ಗೆ ಈ ರೀತಿ ಮಾತನಾಡಿದರೆ ಮಾತ್ರ ಸ್ನೇಹಾ ಸಹಿಸಲ್ಲ ಅಮ್ಮ ಟೈಮ್ ಪಾಸ್ ಮಾಡುತ್ತಿದ್ದಾರಾ ಆಕೆಗೆ ಏನು ಗೊತ್ತಿದೆ ಅದನ್ನು ಹೇಳಿಕೊಡುತ್ತಿದ್ದಾಳೆ ಅಷ್ಟೇ ಎನ್ನುತ್ತಾಳೆ.

ಸುಮಾ ಪಾಡು ನೋಡಿ ಸಹನಾ ಕಿರಿ-ಕಿರಿ
ಇದಕ್ಕೆ ಪುಟ್ಟಕ್ಕ ಕೋಪ ಮಾಡಿಕೊಳ್ಳದೆ ಆಟಕ್ಕೆ ಬಾ. ನಿನ್ನ ತಂಡದವರನ್ನು ಅದಕ್ಕೆ ಕರೆದಿರುವುದು ನೀನು ಬರುತ್ತೀಯಾ ಎಂಬ ನಂಬಿಕೆ ನನಗಿದೆ ಎಂದಾಗ ಜೋರಾಗಿ ಸುಮಾ ಹೇಳುತ್ತಾಳೆ ನೀನು ನಮಗೆ ಕೋಚ್ ಆಗಿ ಬರುವುದು ಬೇಡ ಎನ್ನುತ್ತಾಳೆ. ಇದರಿಂದ ಪುಟ್ಟಕ್ಕಗೆ ಕೊಂಚ ಬೇಸರ ಆದರೂ ಸುಮ್ಮನಿರುತ್ತಾರೆ. ಈ ವೇಳೆ ರಾಜೀ ಬರುತ್ತಾಳೆ. ವ್ಯಂಗ್ಯವಾಗಿ ನಗುತ್ತಾ ಹೇಳುತ್ತಾಳೆ. ಪುಟ್ಟಕ್ಕನ ಮಕ್ಕಳು ಪುಟ್ಟಕ್ಕನ ವಿರುದ್ಧವೇ ನಿಲ್ಲುತ್ತಿದ್ದಾರೆ ಎಂದೆಲ್ಲ ಹೇಳಿ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಾಳೆ. ಮುಂದೇನಾಗುತ್ತದೆ ನೋಡಬೇಕಿದೆ.


Click it and Unblock the Notifications