ಪುಟ್ಟಕ್ಕನ ಮನೆಯಲ್ಲಿ ಭಾವಿ ಅಳಿಯಂದಿರ ಭರ್ಜರಿ ಹಬ್ಬದೂಟ!
ಬಂಗಾರಮ್ಮ ಹಾಗೂ ಅವರ ಸಂಸಾರದವರೆಲ್ಲ ಒಟ್ಟಾಗಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಇದ್ದಾರೆ. ಇದನ್ನು ನೋಡಿದ ಸ್ನೇಹಾ ತಪ್ಪು ತಿಳಿಯಬಾರದು ಎಂದು ಸಿದ್ದೇಶ್ ಎಲ್ಲಾ ರೀತಿಯ ಸುಳ್ಳುಗಳನ್ನು ಹೇಳಿ ಮ್ಯಾನೇಜ್ ಮಾಡಿದ್ದಾನೆ ಇನ್ನೂ ಕಂಠಿ ಬಳಿ ಬಂದ ಸಿದ್ದೇಶ್ 'ಅಣ್ಣ ಅತ್ತಿಗೆ ಬಂದಿದ್ದಾರೆ' ಎಂದು ಹೇಳಿದಾಗ, ಕಂಠಿ ಗೆ ಅರ್ಥ ಆಗದೆ ಯಾರೋ ಅದು ಅತ್ತಿಗೆ ಎಂದು ಹೇಳುತ್ತಾರೆ.
ಅತ್ತಿಗೆ.. ಸ್ನೇಹಾ ಅತ್ತಿಗೆ ಬಂದಿದ್ದಾರೆ ಎಂದು ಹೇಳುತ್ತಾನೆ. ಆಗ ಜೋರಾಗಿ ಕಂಠಿ ಮತ್ತೊಬ್ಬ ಗೆಳೆಯ ಅತ್ತಿಗೆನಾ ಎಂದು ಬೊಬ್ಬೆ ಹೊಡೆಯುತ್ತಾನೆ ಇದನ್ನು ಕೇಳಿದ ಬಂಗಾರಮ್ಮ ಏನು ಅತ್ತಿಗೆನಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಕಂಠಿಗೆ ಕೊಂಚ ಭಯ ಆಗುತ್ತದೆ ಅಷ್ಟರಲ್ಲಿ ಆತನ ಗೆಳೆಯ ಹೇಳುತ್ತಾನೆ, ಅಯ್ಯೋ ಅಮ್ಮಾವರೇ ನಾನು ಆಟಂ ಬಾಂಬ್ ಅನ್ನು ಅತ್ತಿಗೆ ಪಟಾಕಿ ಎಂದು ಕರೆಯುತ್ತೇನೆ. ಎಂದು ಹೇಳಿದಾಗ ಬಂಗಾರಮ್ಮ ಹೇಳುತ್ತಾರೆ ಇದೊಳ್ಳೆ ಚೆನ್ನಾಗಿದೆ, ಆಟಾಂಬಾಂಬ್ ನ್ನೂ ಹಾಗೆಲ್ಲ ಕರೆಯುತ್ತಾರ ಎಂದು ಜೋರಾಗಿ ನಗುತ್ತಾರೆ. ಇದನ್ನು ಕೇಳಿದ ಸಿದ್ದೇಶ್ ಹೌದು ಹೌದು ಎಂದು ಹೇಳಿ ಕಂಠಿ ಬಳಿ ಹೇಳುತ್ತಾನೆ. ಏನೇನೋ ಹೇಳಿ ಸಂಭಾಳಿಸಿದ್ದೇನೆ. ನೀನು ಬಾ ಅಣ್ಣ ಎಂದು ಕರೆಯುತ್ತಾನೆ.
ಆಗ ಬಂಗಾರಮ್ಮ, ಬನ್ನಿ ಊಟ ತಯಾರಾಗಿದೆ ಎಂದು ಹೇಳಿದಾಗ ಹಾ ಬರುತ್ತೇವೆ ಎಂದು ಹೇಳುತ್ತಾನೆ ಕಂಠಿ. ಅಲ್ಲಿಗೆ ಬಂದಿದ್ದ ಸಹನಾ, ಸುಮಾ ಹಾಗೂ ಮೇಷ್ಟ್ರನ್ನೂ ನೋಡಿ ಮಾತನಾಡಿಸುತ್ತಾರೆ ಬಂಗಾರಮ್ಮ. ಬಳಿಕ ಕಂಠಿ ಮನದಲ್ಲಿ ಯೋಚನೆ ಮಾಡುತ್ತಾನೆ ಇನ್ನೂ ಹೆಚ್ಚಿಗೆ ಮಾತು ಬೆಳೆಸದೆ ದೀಪಾವಳಿ ಆಚರಣೆ ಮಾಡಬೇಕು ಎಂದು ಹೇಳಿ ಅಮ್ಮನಿಗೆ ಒಂದು ನೆಪ ಹೇಳಿ ಅಲ್ಲಿಂದ ಹೋಗುತ್ತಾರೆ.

ಪಟ್ಟಕ್ಕನ ಮನೆಯಲ್ಲಿ ಹಬ್ಬದೂಟ
ಬಳಿಕ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ ಆದರೆ ರಾಜಿ ಕೊಟ್ಟ ಬಾಂಬ್ ಮಾತ್ರ ವರ್ಕ್ ಆಗಲೇ ಇಲ್ಲ. ಇದರಿಂದ ಅಲ್ಲಿದ್ದವರು ಎಲ್ಲಾ ಪ್ರಾಣ ಅಪಾಯದಿಂದ ಪಾರಾಗುತ್ತಾರೆ. ಬಳಿಕ ಅಲ್ಲಿಂದ ನೇರವಾಗಿ ಪುಟ್ಟಕ್ಕನ ಮನೆಗೆ ತೆರಳುತ್ತಾರೆ. ಅಷ್ಟ್ರಲ್ಲಿ ಆಗಲೇ ಪುಟ್ಟಕ್ಕ ಹಬ್ಬದ ಊಟವನ್ನು ತಯಾರು ಮಾಡಿ ಇಟ್ಟಿರುತ್ತಾರೆ. ಇದನ್ನು ನೋಡಿದ ಮಕ್ಕಳೆಲ್ಲ ಬಹಳ ಖುಷಿ ಪಟ್ಟರು ಮೇಷ್ಟ್ರು ಮಾತ್ರ ಕೊಂಚ ಮುಜುಗರ ಪಟ್ಟಿದ್ದರು. ಆಗ ಪುಟ್ಟಕ್ಕ ಹೇಳುತ್ತಾರೆ. ನಿಮ್ಮ ಮನೆಯವರು ಒಪ್ಪಿಕೊಂಡಿಲ್ಲ ಹೌದು ಆದರೆ ನಾವು ನಿಮ್ಮನ್ನು ಒಪ್ಪಿಕೊಂಡಿದ್ದೇವೆ. ಕುಳಿತುಕೊಳ್ಳಿ ಊಟಕ್ಕೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮೇಷ್ಟ್ರು ಊಟಕ್ಕೆ ಕೂರುತ್ತಾರೆ.

ಪುಟ್ಟಕ್ಕನ ಮನೆಯಲ್ಲಿ ಊಟ ಮಾಡಿದ ಕಂಠಿ
ಊಟಕ್ಕೆ ಕುಳಿತವರಿಗೆ ಸಹನಾ, ಸ್ನೇಹ ಹಬ್ಬದ ಊಟವನ್ನು ಬಡಿಸುತ್ತಾರೆ. ಆ ವೇಳೆ ಮೇಷ್ಟ್ರು ಮುಖ ನೋಡಿದ ಸಹನಾ ನಾಚಿ ನೀರಾಗುತ್ತಾಳೆ. ಕಂಠಿ ಕೂಡ ಸ್ನೇಹಳನ್ನು ನೋಡಿ ಖುಷಿ ಪಡುತ್ತಾ ಇರುತ್ತಾನೆ. ಬಳಿಕ ಕಂಠಿ ಹೇಳುತ್ತಾನೆ. ನಾನು ಊಟ ಶುರು ಮಾಡಿ ಬಿಡುತ್ತೇನೆ, ಎಂದಾಗ ಮೇಷ್ಟ್ರಿಗೆ ಒಂದು ಕರೆ ಬರುತ್ತದೆ. ಮೊಬೈಲ್ ನ್ನೂ ನೋಡಿದ ಮೇಷ್ಟ್ರು ಭಯ ಪಡುತ್ತಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿ ಬಿಡುತ್ತಾರೆ.

ಠುಸ್ಸೆಂದ ರಾಜಿ ಕೊಟ್ಟ ಪಟಾಕಿ
ಆಗ ಸುಮಾ, ಊಟ ಆದ ಬಳಿಕ ಎಲ್ಲರೂ ನನ್ನ ಜೊತೆ ಪಟಾಕಿ ಹೊಡೆಯಲು ಬರಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಲ್ಲಿದ್ದವರು ಪಟಾಕಿ ಹೊಡೆದಾಯಿತಲ್ಲ ಎಂದಾಗ ಇಲ್ಲ ರಾತ್ರಿಗೆ ಪಟಾಕಿ ಇಟ್ಟಿದ್ದೀನಿ ಎಂದು ಹೇಳುತ್ತಾಳೆ. ಸಿದ್ದೇಶ ನೀವು ಬರುತ್ತಿರಿ ಅಲ್ವಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿದ್ದೇಶ್ ನಾನು ರೆಡಿ ಎಂದು ಹೇಳುತ್ತಾನೆ. ಊಟ ಆದ ಬಳಿಕ ಎಲ್ಲರೂ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಇದನ್ನು ನೋಡಿದ ಪುಟ್ಟಕ್ಕ ಖುಷಿಪಡುತ್ತಾರೆ. ಆದರೆ ಇದೆಲ್ಲವನ್ನೂ ಮರೆಯಿಂದ ನೋಡುತ್ತಿದ್ದ ಮಂಜಮ್ಮ ಮಾತ್ರ ಇನ್ನೂ ಏನು ಆಗಿಲ್ವ ಎಂಬಂತೆ ನೋಡುತ್ತಾ ನಿಂತಿರುತ್ತಾಳೆ. ಪಟಾಕಿ ಹಚ್ಚುವ ಮೇಲೆ ಸಹನಾ ಹಾಗೂ ಸ್ನೇಹಾ ಪಟಾಕಿ ಶಬ್ದವನ್ನು ಕೇಳಲು ಆಗದೆ ಕಿವಿ ಮುಚ್ಚಿಕೊಳ್ಳುತ್ತಾ ಇರುತ್ತಾರೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ


Click it and Unblock the Notifications











