Puttakkana Makkalu: ಪುಟ್ಟಕ್ಕನ ಮನೆಯಲ್ಲಿ ಗೋಪಾಲನನ್ನು ನೋಡಿದ ರಾಜಿ!
ಪುಟ್ಟಕ್ಕನ ಮನೆ ಮದುವಣ ಗಿತ್ತಿ ಹಾಗೆ ಸಿಂಗಾರಗೊಂಡಿದೆ. ಬಳೆ ಶಾಸ್ತ್ರ ಮುಗಿದು ಹೋಗಿದೆ. ಇದೀಗ ರಸಮಂಜರಿ ಕಾರ್ಯಕ್ರಮ ರಾತ್ರಿ ಹೊತ್ತು ನಡೆಯುತ್ತಿದೆ. ಇದರಿಂದ ಖುಷಿ ಪಟ್ಟ ಪುಟ್ಟಕ್ಕನ ಮನೆ ಮಂದಿ ಕುಣಿದು ಕುಪ್ಪಳಿಸುತ್ತಾರೆ. ಇತ್ತ ನಾಗ ಹಾಗೂ ಮುಂಗುಸಿ ಬಹಳ ಖುಷಿಯಿಂದ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಮುಂಗುಸಿ ಕುಡಿದ ಮತ್ತಿನಲ್ಲಿ ಮಾತನಾಡುತ್ತಾ ಡಾನ್ಸ್ ಮಾಡುತ್ತಾ ಇದ್ದರೆ ನಾಗ ಮಾತ್ರ ಫುಲ್ ಜೋಶ್ ನಲ್ಲಿ ಇದ್ದಾನೆ. ಇದನ್ನು ನೋಡಿದ ಎಲ್ಲರೂ ಬಹಳ ಖುಷಿ ಪಡುತ್ತಾರೆ.
ಇನ್ನು ನಾಗ ಹಾಗೂ ಮುಂಗುಸಿ ಜೋರಾಗಿ ಅವರ ಒಡೆಯನನ್ನು ಡಾನ್ಸ್ ಮಾಡಲು ಕರೆಯುತ್ತಾರೆ. ಆದರೆ ಕಂಠಿ ಮಾತ್ರ ಮುಜುಗರದಿಂದ ಕುಳಿತಿರುತ್ತಾನೆ. ಇದನ್ನು ಕಂಡ ಮುಂಗುಸಿ ಕಂಠಿಯನ್ನು ವೇದಿಕೆಗೆ ಎಳೆದು ತರುತ್ತಾನೆ. ಇನ್ನು ಕಂಠಿಗೆ ಜೊತೆಯಾಗಿ ಸ್ನೇಹಾ ಡಾನ್ಸ್ ಮಾಡುತ್ತಾಳೆ. ಇವರಿಬ್ಬರೂ ಡಾನ್ಸ್ ಮಾಡುತ್ತಾ ಇರುವಾಗ ಸಹನಾ ಹಾಗೂ ಮುರಳಿಯನ್ನು ಡಾನ್ಸ್ ಮಾಡಲು ಕರೆದುಕೊಂಡು ಹೋಗುತ್ತಾರೆ. ಅವರಿಬ್ಬರೂ ಒಟ್ಟಿಗೆ ಡಾನ್ಸ್ ಮಾಡುವ ವೇಳೆ ಇನ್ನೂ ಆ ಕಾರ್ಯಕ್ರಮ ಕಳೆ ಕಟ್ಟುತ್ತದೆ.
ಇನ್ನು ರಾಜೀ ಮನೆ ಮುಂದೆ ನಿಂತುಕೊಂಡಿರುತ್ತಾಳೆ . ಏನಪ್ಪಾ ಪುಟ್ಟಕ್ಕನ ಮನೆಯಲ್ಲಿ ಮದುವೆ ಬಹಳ ಭರ್ಜರಿ ಆಗಿ ನಡೆಯುತ್ತಿದೆ, ನಡೆಯದ ಮದುವೆಗೆ ಇಷ್ಟೆಲ್ಲ ಖರ್ಚು ಮಾಡುತ್ತಾ ಇದ್ದಾರಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇದನ್ನು ಕೇಳಿಸಿಕೊಂಡ ಗೋಪಾಲ ಮಾತ್ರ ರಾಜಿಯನ್ನು ಹೇಗಾದರೂ ಮಲಗಿಸಿ ಪುಟ್ಟಕ್ಕನ ಮನೆ ಕಾರ್ಯಕ್ರಮಕ್ಕೆ ತೆರಳಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಈ ವೇಳೆ ರಾಜೀಗೆ ಸಮಾಧಾನ ಮಾಡಿದ ಗೋಪಾಲ ಬಿಡು ಸಮಾಧಾನ ಮಾಡಿಕೋ ಹೋಗಿ ಮಲಗಿ ಬಿಡೋಣ ನಾಳೆ ಏನಾಗುತ್ತದೆ ಎಂದು ತಿಳಿಯುವುದು ಬೇಡವೇ ಎಂದು ಹೇಳಿ ಮಲಗಲು ಹೋಗುತ್ತಾರೆ.

ನಿದ್ದೆ ಹೋದ ರಾಜೀ
ರಾಜೀ ನಿದ್ದೆ ಹೋಗುವುದನ್ನೇ ಕಾಯುತ್ತಿದ್ದ ಗೋಪಾಲ ಮದುವೆ ಮನೆಗೆ ಹೋಗುತ್ತಾನೆ. ಇನ್ನೂ ರಾಜೀ ಮಗ ಪುರುಷೋತ್ತಮ ಕೂಡ ಪುಟ್ಟಕ್ಕ ಮನೆಗೆ ಹೋಗಿ ಕುಣಿಯುತ್ತಾ ಇರುತ್ತಾನೆ. ಈ ವೇಳೆ ಸುಮಾ ಹಾಗೂ ಆಕೆಯ ಅಕ್ಕ ಡಾನ್ಸ್ ಮಾಡಲು ಪುಟ್ಟಕ್ಕ ಅವರನ್ನು ಕರೆದುಕೊಂಡು ಬರುತ್ತಾರೆ. ವೇದಿಕೆ ಮೇಲೆ ಕೊಂಚ ಹೊತ್ತು ಕುಣಿದ ಪುಟ್ಟಕ್ಕಗೆ ಬಹಳ ನಾಚಿಕೆ ಆಗುತ್ತದೆ. ಬಳಿಕ ಅಲ್ಲಿಂದ ತೆರಳುತ್ತಾರೆ. ಈ ವೇಳೆ ಗೋಪಾಲ ಕೆಳಗೆ ಕುಳಿತು ಇದೆಲ್ಲವನ್ನೂ ನೋಡುತ್ತಾ ಖುಷಿ ಪಡುತ್ತಾ ಇರುತ್ತಾನೆ. ಇನ್ನು ಗೋಪಾಲ ಅವರನ್ನು ವೇದಿಕೆಗೆ ಕರೆದುಕೊಂಡು ಬಂದ ಕಂಠಿ ಗೆಳೆಯರು ಡಾನ್ಸ್ ಮಾಡಲು ಹೇಳುತ್ತಾರೆ. ಆದರೆ ಮೊದಲು ಗೋಪಾಲ ಮುಜುಗರ ಪಟ್ಟರೂ ಆ ಬಳಿಕ ಬಹಳ ಖುಷಿಯಿಂದ ಹೆಜ್ಜೆ ಹಾಕುತ್ತಾನೆ. ಆದರೆ ಇದನ್ನು ನೋಡಿದ ಸ್ನೇಹಾ ಸುಮಾ ಹಾಗೂ ಸಹನಾ ಮೌನ ವಹಿಸುತ್ತಾರೆ.

ಬಾವನ ಪ್ಲಾನ್ ಅರಿತ ಮತ್ತಿನಲ್ಲಿದ್ದ ಕಾಳಿ
ಪುರುಷಿ ಬಾವ ಎಂದು ಕರೆದರೆ ಅಲ್ಲಿ ಯಾರು ಇರಲಿಲ್ಲ. ಬಳಿಕ ಮನೆಯ ಒಳಗೆ ಬಂದು ಜೋರಾಗಿ ಕರೆಯುತ್ತಾನೆ. ಈ ಶಬ್ದಕ್ಕೆ ಎಚ್ಚರಗೊಂಡ ರಾಜೀ ಏನಪ್ಪ ಇದು ಶಬ್ದ ಎಂದುಕೊಂಡು ಬರುತ್ತಾಳೆ. ಅಲ್ಲಿ ಕಾಳಿಯನ್ನು ಕಂಡ ರಾಜಿ ಯಾಕೆ ಎನಾಯಿತು ಎಂದು ಕೇಳುತ್ತಾಳೆ. ಬಳಿಕ ನಿನ್ನ ಬಾವ ಕೂಡ ಇಲ್ಲ ಎಂದಾಗ ಕಾಳಿ ಪುರುಷೋತ್ತಮ ಕೂಡ ಇಲ್ಲ ಎಂದು ಹೇಳುತ್ತಾನೆ.

ಅಕ್ಕನನ್ನು ಬಾವ ಇರುವಲ್ಲಿಗೆ ಕರೆದುಕೊಂಡು ಹೋದ ಕಾಳಿ
ಇನ್ನು ರಾಜಿ ಕಾಳಿ ಕುಡಿದ ಮತ್ತಿನಲ್ಲಿ ಹೀಗೆಲ್ಲ ಮಾತನಾಡುವುದು ಇರಬೇಕು ಎಂದುಕೊಂಡು ಸುಮ್ಮನೆ ಇರುತ್ತಾಳೆ. ಆದರೆ ಕಾಳಿ ಮಾತ್ರ ರಾಜೀಯನ್ನು ಪುಟ್ಟಕ್ಕನ ಮನೆಗೆ ಕರೆದುಕೊಂಡು ಹೋಗಿ ವೇದಿಕೆಯಲ್ಲಿ ಕುಣಿಯುತ್ತಿರುವ ಗೋಪಾಲ ಹಾಗೂ ಆಕೆಯ ಮಗನನ್ನು ತೋರಿಸಿ ನೋಡಕ್ಕೊ ನಿಮ್ಮ ಗಂಡ ಹಾಗೂ ಮಗ ಹೆಂಗೆ ಡಾನ್ಸ್ ಮಾಡುತ್ತಾ ಇದ್ದಾರೆ ಎಂದಾಗ ರಾಜೀ ಕೋಪಗೊಳ್ಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











