Puttakkana Makkalu: ಮಗಳ ಸಲುವಾಗಿ ಬಂಗಾರಮ್ಮನನ್ನು ಎದುರು ಹಾಕಿಕೊಂಡ ಪುಟ್ಟಕ್ಕ!

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಸ್ನೇಹಾ ಹಾಗೂ ಬಂಗಾರಮ್ಮ ನಡುವೆ ಪುಟ್ಟಕ್ಕ ಎಂಟ್ರಿ ಆಗಿದ್ದಾರೆ. ಕಂಠಿಯ ಮೋಸದ ಆಟ ಗೊತ್ತಾಗಿ ಸ್ನೇಹಾ ಬಹಳ ಕೋಪ ಮಾಡಿಕೊಂಡಿದ್ದಾಳೆ. ಆಕೆ ಕಂಠಿ ಕಟ್ಟಿದ ತಾಳಿಯನ್ನು ತೆಗೆಯಲು ಮುಂದಾದಾಗ ಪುಟ್ಟಕ್ಕ ಬರುತ್ತಾರೆ.

ಪುಟ್ಟಕ್ಕ ತನ್ನ ಮಗಳ ಬಳಿ ತಾಳಿಯ ಬಗ್ಗೆ ಇರುವ ಪವಿತ್ರತೆಯ ಬಗ್ಗೆ ತಿಳಿ ಹೇಳುತ್ತಾಳೆ. ಆದರೆ ಸ್ನೇಹಾ ಮಾತು ಒಂದೇ ಇಷ್ಟ ಇಲ್ಲದ ತಾಳಿಯನ್ನು ಕಟ್ಟಿಕೊಂಡು ನಾನು ಮಾಡುವುದಾದರೂ ಏನು ನನಗೆ ಈ ತಾಳಿ ಕಸಕ್ಕೆ ಸಮ ಎಂದು ಬಹಳ ಕೋಪ ಮಾಡಿಕೊಂಡಿರುತ್ತಾಳೆ. ಆದರೆ ಪುಟ್ಟಕ್ಕ ಬಹಳ ಶಾಂತವಾಗಿ ಹೇಳುತ್ತಾಳೆ.

puttakkana makkalu

ತಾಳಿಯನ್ನು ತೆಗೆಯ ಬೇಡ, ಒಂದು ಸಲ ತಾಳಿ ಕುತ್ತಿಗೆಗೆ ಏರಿದ ಮೇಲೆ ಅದನ್ನು ತೆಗೆಯ ಕೂಡದು. ತೆಗೆದರೆ ನನ್ನ ಮೇಲೆ ಆಣೆ ಎಂದು ಜೋರಾಗಿ ಹೇಳಿದಾಗ ಸ್ನೇಹಾ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಅಮ್ಮ ನೀನೇನು ಹೇಳುತ್ತಿದ್ದಿಯಾ.. ನನಗೆ ಈ ಮನೆಯಲ್ಲಿ ಇರಲು ಸ್ವಲ್ಪ ಕೂಡ ಇಷ್ಟ ಇಲ್ಲ, ಅಂತಹದರಲ್ಲಿ ನಾನು ಇಲ್ಲಿ ಇರುತ್ತೇನೆ ಎಂದು ನೀನು ಹೇಗೆ ಅಂದುಕೊಳ್ಳುತ್ತಿಯಾ ಎಂದು ಹೇಳುತ್ತಾಳೆ.

ಇನ್ನು ಇದನ್ನೆಲ್ಲ ಕೇಳಿದ ಬಂಗಾರಮ್ಮ ಪುಟ್ಟಕ್ಕನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಏನು ನೀನು ಕೂಡ ಆ ನಂಜಮ್ಮನ ಮಾತು ಕೇಳುತ್ತಿದ್ದಿಯಾ ಹೇಗೆ, ನಿನ್ನ ಮಗಳು ನಮ್ಮ ಮನೆಯ ಸೊಸೆ ಆಗಲು ಸಾಧ್ಯವಿಲ್ಲ ಎಂದು ಹೇಳಿದಾಗ ಪುಟ್ಟಕ್ಕ ಹೇಳುತ್ತಾಳೆ. ಅಮ್ಮಾವರೇ ಸ್ನೇಹಾ ಇದೀಗ ನಿಮ್ಮ ಮನೆಯ ಸೊಸೆ .

ಆಕೆಯನ್ನು ಸೊಸೆ ಎಂದು ಸ್ವೀಕಾರ ಮಾಡುವ ಕಾಲ ಕೂಡ ಬರುತ್ತದೆ ಆದರೆ ಸ್ನೇಹಾ ಎನು ತಪ್ಪು ಮಾಡಿ ಇಲ್ಲ ಆಕೆ ನಾನು ಹೇಳಿದ ಯಾವ ಮಾತನ್ನೂ ದಿಕ್ಕರಿಸುವುದು ಇಲ್ಲ.. ತಪ್ಪೆಲ್ಲ ನಿಮ್ಮ ಕಡೆಯೇ ಇದೆ ಎಂದು ಹೇಳಿದಾಗ ಬಂಗಾರಮ್ಮಾ ಕೋಪದಿಂದ ಪುಟ್ಟಕ್ಕನ ಮುಖ ನೋಡುತ್ತಾರೆ. ಪುಟ್ಟಕ್ಕ ಹೇಳುತ್ತಾಳೆ ನಾನು ನಿಮ್ಮ ಮಗನನ್ನು ಅಳಿಯ ಎಂದು ಒಪ್ಪಿಕೊಂಡು ಇದ್ದೇನೆ ಹಾಗೆಯೇ ನನ್ನ ಮಗಳನ್ನು ಸೊಸೆ ಎಂದು ಒಪ್ಪಿಕೊಳ್ಳಿ ಎಂದು ಹೇಳಿದಾಗ ಬಂಗಾರಮ್ಮ ಪುಟ್ಟಕ್ಕನ ಬಳಿ ಹೇಳುತ್ತಾರೆ.

ಎನು ಪುಟ್ಟಕ್ಕ ಹಾಗಂತ ನನಗೆ ಸವಾಲು ಹಾಕುತ್ತ ಇದ್ದೀಯಾ ಎಂದಾಗ ಪುಟ್ಟಕ್ಕ ಅಮ್ಮಾವರೇ ನಿಮಗೆ ಸವಾಲು ಹಾಕುವುದು ವುಂಟ... ನಿಮ್ಮ ಮಗಳ ಹಾಗೆ ನನ್ನ ಮಗಳು ತವರಿನಲ್ಲಿ ಇರಬಾರದು ಎನ್ನುವ ಆಸೆ ಅದಕ್ಕಾಗಿ ನಾನು ಹೇಳಿದೆ ಎಂದು ಹೇಳುತ್ತಾಳೆ. ಎಂದು ಹೇಳಿದಾಗ ಬಂಗಾರಮ್ಮ ಆಕೆಯ ಮನೆಯವರು ಎಲ್ಲರೂ ಒಳಗೆ ಹೋಗುತ್ತಾರೆ.

ಆದರೆ ಕಂಠಿ ಮಾತ್ರ ಹೊರಗೆ ನಿಂತು ಇರುತ್ತಾನೆ. ಕಂಠಿ ಪುಟ್ಟಕ್ಕನ ಬಳಿ ಕ್ಷಮೆ ಕೇಳುತ್ತಾನೆ. ಆಗ ಪುಟ್ಟಕ್ಕ ಹೇಳುತ್ತಾಳೆ.. ಅಳಿಯಂದಿರೇ ಸ್ನೇಹಾ ಜವಾಬ್ದಾರಿ ಇನ್ನೂ ಮೇಲೆ ನಿಮ್ಮದು.. ಆಕೆಯನ್ನು ಆದಷ್ಟು ಬೇಗ ಈ ಮನೆಗೆ ಕರೆದುಕೊಂಡು ಬನ್ನಿ ಎಂದು ಹೇಳುತ್ತಾಳೆ ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 3th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X