ಸ್ನೇಹಾ ಜೊತೆ ಕಂಠಿಯನ್ನು ನೋಡಿದ ಪೂರ್ವಿ! ಮುಂದೇನು ಗತಿ

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಪೂರ್ವಿ ಬಂದು ಬಂಗಾರಮ್ಮನ ಬಳಿ ಕಂಪ್ಲೇಂಟ್ ಮಾಡುತ್ತಿದ್ದಾಳೆ. ಪೂರ್ವಿ ಹೇಳುತ್ತಾಳೆ, ಕಂಠಿ ನಿನ್ನೆ ರಾತ್ರಿ ಎಲ್ಲಿ ಇದ್ದ ಅಂತ ನಿಮಗೆ ಗೊತ್ತಾ ಎಂದು ಜೋರಾಗಿ ಕೇಳುತ್ತಾಳೆ. ಅದಕ್ಕೆ ಬಂಗಾರಮ್ಮ ಯಾಕೆ ಏನಾಯ್ತು ಪೂರ್ವಿ ಕೇಳುತ್ತಾಳೆ.

ಖಂಡಿತ ಅವ ಸುಳ್ಳು ಹೇಳಿಯೆ ಹೋಗಿರುತ್ತಾನೆ. ಅದಕ್ಕೆ ಕಂಠಿ ಗೆಳೆಯ ಹೇಳುತ್ತಾನೆ ಕಂಠಿ ಯಾರ ಹತ್ರಾನು ಸುಳ್ಳು ಹೇಳಲು ಸಾಧ್ಯವಿಲ್ಲ ಅದು ಕೂಡ ಅಮ್ಮನ ಬಳಿ ಸುಳ್ಳು ಹೇಳುವುದಿಲ್ಲ ಎನ್ನುತ್ತಾನೆ. ಆಗ ಪೂರ್ವಿ ಕಂಠಿಯನ್ನೆ ಕೇಳುತ್ತಾಳೆ ಕಂಠಿ ನಿನ್ನೆ ರಾತ್ರಿ ನೀನು ಎಲ್ಲಿಗೆ ಹೋಗಿದ್ದೆ ಎಂದು ಕೋಪದಿಂದ ಕೇಳುತ್ತಾಳೆ. ಅದಕ್ಕೆ ಕಂಠಿ ಹೇಳುತ್ತಾನೆ ಎಲ್ಲಿ ಹೋಗಿದ್ದೆ ಗುಡಿಗೆ ಹೋಗಿದ್ದೇ ಎನ್ನುತ್ತಾನೆ.

ಬಂಗಾರಮ್ಮನ ಬಳಿ ಪೂರ್ವಿ ದೂರು

ಬಂಗಾರಮ್ಮನ ಬಳಿ ಪೂರ್ವಿ ದೂರು

ಅದಕ್ಕೆ ಪೂರ್ವಿ ಹೇಳುತ್ತಾಳೆ. ಅತ್ತೆಗೆ ಗುಡಿಗೆ ಹೋಗಿರೋದನ್ನು ಮಾತ್ರ ಹೇಳಿದ್ದೆ ಅನ್ನಿಸುತ್ತೆ, ಅತ್ತೆ ಕಂಠಿ ಗುಡಿಗೆ ಹೋಗಿ ಆ ಪುಟ್ಟಕ್ಕನ ಮಗಳ ಜೊತೆ ಮಾತನಾಡುತ್ತಿದ್ದ ಅವನ ಬಳಿ ಇದನ್ನು ಇಲ್ಲ ಅಂತ ಹೇಳಿಸು ನೋಡೋಣ ಅತ್ತೆ ಎನ್ನುತ್ತಾಳೆ. ಅದಕ್ಕೆ ಬಂಗಾರಮ್ಮ ಜೋರಾಗಿ ನಗುತ್ತಾಳೆ. ಎಲ್ಲರೂ ನಗೋದನ್ನು ನೋಡಿ ಪೂರ್ವಿ ಹೇಳುತ್ತಾಳೆ ಯಾಕೆ ನಗುತ್ತಿದ್ದಿರಾ ಎಂದಾಗ ಬಂಗಾರಮ್ಮ ಹೇಳುತ್ತಾಳೆ ಯಾಕ್ರೋ ನಗುತ್ತಿದ್ದಿರಾ ಸುಮ್ಮನಿರಿ ಎಂದು ಜೋರಾಗಿ ಹೇಳುತ್ತಾಳೆ.

''ಪುಟ್ಟಕ್ಕನ ಮಕ್ಕಳ ಬಳಿ ಮಾತನಾಡಲು ಹೇಳಿದ್ದೆ ನಾನು''

''ಪುಟ್ಟಕ್ಕನ ಮಕ್ಕಳ ಬಳಿ ಮಾತನಾಡಲು ಹೇಳಿದ್ದೆ ನಾನು''

ಮತ್ತೆ ಹೇಳುತ್ತಾಳೆ ಅಲ್ಲಾ ಪೂರ್ವಿ ಈ ವಿಷಯವನ್ನು ಅಷ್ಟೊಂದು ಗಂಭೀರವಾಗಿ ಹೇಳುತ್ತಿದ್ದಿಯಾ ಎಂದಾಗ ಪೂರ್ವಿ ಹೇಳುತ್ತಾಳೆ ಅತ್ತೆ ಇದು ಗಂಭೀರವಾದ ವಿಚಾರ ಅಲ್ವಾ. ಕಂಠಿ ಅವಳ ಬಳಿ ಮಾತನಾಡೋದು ನಿಮಗೆ ಓಕೆ ನಾ ಎಂದಾಗ ಬಂಗಾರಮ್ಮ ಹೇಳುತ್ತಾಳೆ ಅದರಲ್ಲಿ ಏನಿದೆ ನಾನೇ ಅವನನ್ನು ಪುಟ್ಟಕ್ಕನ ಮಗಳನ್ನು ತೋರಿಸಿದ್ದಕ್ಕೆ ಹೇಳಿದ್ದು ಎಂದಾಗ ಪೂರ್ವಿಗೆ ಶಾಕ್ ಆಗುತ್ತದೆ. ಪೂರ್ವಿ ಏನು ಎಂದು ಕೇಳಿದಾಗ ಬಂಗಾರಮ್ಮ ಹೇಳುತ್ತಾಳೆ ಕಂಠಿ ನಾನು ಗುಡಿಗೆ ಹೋಗಿದ್ದಾಗ ನಾನು ಅವಳ ಬಳಿ ಮಾತನಾಡಿದೆ. ನಮ್ಮ ವಸೂನು ವಿಡಿಯೋ ಕಾಲ್ ಮಾಡಿದಳು.

ಬಂಗಾರಮ್ಮ ನ ಮಾತಿಗೆ ಪೂರ್ವಿ ಶಾಕ್

ಬಂಗಾರಮ್ಮ ನ ಮಾತಿಗೆ ಪೂರ್ವಿ ಶಾಕ್

ನಮ್ಮ ಪುಟ್ಟಕ್ಕನ ಮಕ್ಕಳು ಅಲ್ಲಿಯೇ ಇದ್ದರೂ ನಾನು ನೋಡಿದೆ. ಕಂಠಿ ನಾನೇ ಸ್ವಲ್ಪ ಸರಿಯಾಗಿ ತೋರಿಸು ಎಂದಿದ್ದೆ. ಲೆ.... ಕಂಠಿ ಅದಾದ ಮೇಲೂ ನೀನು ಮಾತನಾಡಿದ್ಯಾ ಎಂದಾಗ ಕಂಠಿ ಹೇಳುತ್ತಾನೆ ಹೂ... ಮಾತನಾಡಿದೆ ಅಮ್ಮ ಅವರಾಗೆ ಬಂದು ಮಾತನಾಡಿಸಿದರು. ಎಂದಾಗ ಬಂಗಾರಮ್ಮ ಹೇಳುತ್ತಾಳೆ ಓ ಅವರೇ ಬಂದು ಮಾತನಾಡಿಸಿದರಾ... ಪುಟ್ಟಕ್ಕ ಮೂರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದಾಳೆ. ಅಲ್ಲಾ ಪೂರ್ವಿ ಕಂಠಿ ಅವಳ ಬಳಿ ಮಾತನಾಡಿದರೆ ನಿನಗೇನು ಕೊಪನಾ ಎಂದು ಕೇಳುತ್ತಾರೆ.

''ಮದುವೆಗೆ ಮುಂಚೆ ಮಾತನಾಡಿದರೆ ಕೋಪಾನಾ?''

''ಮದುವೆಗೆ ಮುಂಚೆ ಮಾತನಾಡಿದರೆ ಕೋಪಾನಾ?''

ಅದಕ್ಕೆ ಕಂಠಿ ಗೆಳೆಯ ಹೇಳುತ್ತಾನೆ ಕೋಪ ಅಲ್ಲ ಹೊಟ್ಟೆ ಕಿಚ್ಚು ಎಂದಾಗ ಬಂಗಾರಮ್ಮ ಹೇಳುತ್ತಾಳೆ ಸುಮ್ಮನಿರೋ ಎನ್ನುತ್ತಾಳೆ ಅದಕ್ಕೆ ಪೂರ್ವಿ ಹೇಳುತ್ತಾಳೆ ಅಲ್ಲ ಅತ್ತೆ ನಿಮಗೆ ಮತ್ತೆ ಅವರಿಗೆ ಆಗಲ್ಲ ಅಂತ... ನಿಮಗೆ ಕಂಠಿ ಅವಳ ಬಳಿ ಮಾತನಾಡಿದ್ದು ಓಕೆ ನಾ.. ಎಂದಾಗ ಹೇಳುತ್ತಾಳೆ ಅದಕ್ಕೆ ಬಂಗಾರಮ್ಮ ಹೇಳುತ್ತಾಳೆ ನಾನೇ ಅವನ ಬಳಿ ಹೇಳಿದ್ದು ಅಂತ ಹೇಳಿದೆ ಅಲ್ವಾ ಎನ್ನುತ್ತಾಳೆ. ಓ ಮದುವೆ ಮೊದಲೇ ನನ್ನ ಗಂಡ ಯಾರತ್ರನು ಮಾತನಾಡಬಾರದು ಎಂದು ಬಿಗಿ ಮಾಡುತ್ತಿದ್ದೀಯಾ ಹಮ್ ಆದರೆ ಒಂದು ನೆನಪಿಟ್ಟುಕೊ ನನ್ನ ಮಗನ ಮನಸ್ಸಿನಲ್ಲಿ ನಿನ್ನ ಬಿಟ್ಟು ಇನ್ಯಾರು ಇಲ್ಲ. ಎಂದು ಹೇಳುತ್ತಾರೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

English summary
Kannada serial Puttakkana Makkalu written updated on 3th August. Know more episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X