ಕಂಠಿ ಮೇಲಿನ ಕೋಪದಿಂದ ಜೀವನ ಹಾಳುಮಾಡಿಕೊಂಡ ಚಂದ್ರು

By ಪೂರ್ವ

ರಾಜಿ ಮೇಷ್ಟ್ರ ಮನೆಗೆ ಹೋಗುತ್ತಿದ್ದಾಳೆ. ಸಹನಾ-ಮೇಷ್ಟ್ರು ಮದುವೆಯನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಉದ್ದೇಶದಿಂದ ರಾಜಿ ಮತ್ತು ಕಾಳಿ ಮೇಷ್ಟ್ರ ಮನೆಗೆ ಬರುತ್ತಾರೆ. ಕಾರಿನಲ್ಲಿಯೇ ಬಂದ ರಾಜಿಯನ್ನೂ ನೋಡಿದ ಮನೆ ಮಂದಿ ಯಾರೆಂದು ತಿಳಿಯದೆ ಕೊಂಚ ತಬ್ಬಿಬ್ಬು ಆಗುತ್ತಾರೆ. ಬಳಿಕ ಮೇಷ್ಟ್ರ ತಂದೆಯ ಬಳಿ ಇಲ್ಲಸಲ್ಲಾದನ್ನು ಹೇಳುತ್ತಾರೆ. ಪುಟ್ಟಕ್ಕ ಅದೆಷ್ಟು ಮಾಯಾಂಗನೆ ಅಂದರೆ ನನ್ನ ಗಂಡನನ್ನೇ ಇದೀಗ ಕಿತ್ತುಕೊಳ್ಳಲು ನೋಡುತ್ತಿದ್ದಾಳೆ. ಆಕೆಯ ಗಂಡ ಅವಳನ್ನು ಬಿಟ್ಟು ನನ್ನ ಮದುವೆ ಆಗಿದ್ದಾನೆ. ಅವರ ಮಕ್ಕಳು ಹಾಗೆ ಹೀಗೆ ಎಂದು ಅನೇಕ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತ ಇರುತ್ತಾರೆ.

ಇದನ್ನೆಲ್ಲ ಕೇಳಿದ ಮೇಷ್ಟ್ರಿಗೆ ಶಾಕ್ ಆಗುತ್ತದೆ ಹಾಗೆಯೇ ಮೇಷ್ಟ್ರ ಅಕ್ಕನಿಗೆ ಬಹಳ ಸಿಟ್ಟು ಬರುತ್ತದೆ. ಮದುವೆ ಕೆಡಿಸಲು ಈ ರೀತಿಯ ಹುನ್ನಾರ ನಡೆಸುತ್ತಾ ಇದ್ದಾರೆ ಎಂಬುವುದು ಆಕೆಗೆ ಸ್ಪಷ್ಟವಾಗಿ ಅರ್ಥ ಆಗುತ್ತದೆ. ಇದನ್ನು ಮರೆಯಿಂದ ನೋಡುತ್ತಿದ್ದ ಗೋಪಾಲ, ಮದುವೆ ಕೆಡಿಸಲು ಈ ರೀತಿ ಅದ್ದ ದಾರಿ ಹಿಡಿಯುತ್ತಿದ್ದಾಳೆ ರಾಜಿ, ಇನ್ನೂ ಇದನ್ನು ಪುಟ್ಟಕ್ಕನಿಗೆ ಹೇಳದೆ ಇದ್ದರೆ ಬಹಳ ತೊಂದರೆ ಆಗುತ್ತದೆ. ಹೇಗಾದರೂ ಅವರಿಗೆ ತಿಳಿಸಬೇಕು ಎಂದು ಹೇಳುತ್ತಾ ಪುಟ್ಟಕ್ಕನಿಗೆ ಕರೆ ಮಾಡುತ್ತಾನೆ. ಆದರೆ ಕರೆ ಸ್ವೀಕರಿಸಿದ ಸ್ನೇಹಾ, ಗೋಪಾಲನಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ.

ಅಪ್ಪನಿಗೆ ಬೈದ ಸ್ನೇಹಾ

ಅಪ್ಪನಿಗೆ ಬೈದ ಸ್ನೇಹಾ

ಏನಯ್ಯ ನಿಂದು ಆಗ ಇಲ್ಲದ ಈ ಜವಾಬ್ದಾರಿ ಈಗ ಯಾಕೆ? ನಮ್ಮ ಅಕ್ಕನ ಮದುವೆ ಸಾರಾಗವಾಗಿ ನಡೆಯುತ್ತದೆ. ನೀನು ಇದಕ್ಕೆ ತಲೆ ಹಾಕಬೇಡ. ಎಂದು ಹೇಳಿ ಕರೆ ಕಟ್ ಮಾಡುತ್ತಾಳೆ ಇದನ್ನು ಕೇಳಿಸಿಕೊಂಡ ಗೋಪಾಲ ಏನು ಮಾಡುವುದು ಪುಟ್ಟಕ್ಕನಿಗೆ ಇದನ್ನು ತಿಳಿಸುವುದು ಹೇಗೆ ಫೋನ್‌ನಲ್ಲಿ ಹೇಳಬೇಕು ಎಂದರೆ ಮಧ್ಯದವಳ ಕಾಟ ಎಂದು ಕೊಂಡು ಹೋಗುತ್ತಾನೆ. ಇನ್ನು ಸ್ನೇಹಾ ಶಾಂತಕ್ಕ ಬಳಿ ವಿಚಾರಣೆ ನಡೆಸುತ್ತಾ ಇರುತ್ತಾರೆ. ಅಮ್ಮ ನಿನ್ನ ಬಳಿ ಏನಾದರು ಹೇಳಿದ್ರ ಶಾಂತಕ್ಕ. ಸಹನಾ ಮದುವೆ ಬಗ್ಗೆ ಏನಾದರೂ ಹೇಳಿದ್ರ ಎಂದಾಗ ಇಲ್ಲ ಸ್ನೇಹಾ ನನ್ನ ಬಳಿ ಏನು ಹೇಳಿಲ್ಲ. ಪುಟ್ಟಕ್ಕನಿಗೆ ಸುಮಾ ಅಥವಾ ಸಹನಾ ಹೇಳಿರಬೇಕು ಎಂದು ಹೇಳುತ್ತಾಳೆ.

ಅಮ್ಮನ ವಿರುದ್ಧ ಸ್ನೇಹಾಳ ತನಿಖೆ

ಅಮ್ಮನ ವಿರುದ್ಧ ಸ್ನೇಹಾಳ ತನಿಖೆ

ಇದನ್ನು ಕೇಳಿದ ಸರಿ ಶಾಂತಮ್ಮ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇನ್ನು ಬಂಗಾರಮ್ಮ ಲಾಯರ್‌ ಅನ್ನು ಮನೆಗೆ ಬರಲು ಹೇಳುತ್ತಾರೆ. ಮನೆಗೆ ಬಂದ ಲಾಯರ್ ಅನ್ನು ನೋಡಿದ ಬಂಗಾರಮ್ಮನವರ ಗಂಡ ಲಾಯರ್ ಯಾಕೆ ಬಂದಿದ್ದಾರೆ ಎಂದು ತಲೆ ಕೆಡಿಸಿಕೊಳ್ಳುತ್ತ ಇರುತ್ತಾರೆ. ಇನ್ನು ಲಾಯರ್ ನನ್ನು ಕಂಡು ಅಲ್ಲಿಗೆ ಬಂದ ಬಂಗಾರಮ್ಮ ಕುಳಿತುಕೊಳ್ಳಿ ಎಂದು ಹೇಳುತ್ತಾರೆ. ಆ ವೇಳೆ ಅಲ್ಲಿಗೆ ವಸು ಬರುತ್ತಾಳೆ ಲಾಯರ್ ನೋಟೀಸ್ ನೋಡಿದ ಬಂಗಾರಮ್ಮ ನ ಗಂಡನಿಗೆ ಎಲ್ಲಾ ಅರ್ಥ ಆಗುತ್ತದೆ.

ವಸು ನಿರ್ಧಾರಕ್ಕೆ ಬೆದರಿದ ಕಂಠಿ

ವಸು ನಿರ್ಧಾರಕ್ಕೆ ಬೆದರಿದ ಕಂಠಿ

ವಸು ಜಾಗರುಕತೆಯಿಂದ ಇಂತಹ ನಿರ್ಧಾರ ತೆಗೆದುಕೋ ಇದು ನನಗೆ ಯಾಕೋ ಸರಿ ಕಾಣುತ್ತಿಲ್ಲ ಎಂದಾಗ ಕಂಠಿ ಕೂಡ ಅಲ್ಲಿಗೆ ಬರುತ್ತಾನೆ. ವಸು ವಿಚ್ಛೇದನ ಪೇಪರ್‌ಗೆ ಸಹಿ ಹಾಕಿ ಕೊಡುತ್ತಾಳೆ. ಇದನ್ನು ನೋಡಿದ ಕಂಠಿಗೆ ಶಾಕ್ ಆಗುತ್ತದೆ ನನ್ನಿಂದಾಗಿ ನನ್ನ ತಂಗಿ ಹಾಗೂ ಬಾವ ದೂರ ಆಗುತ್ತಿದ್ದಾರಲ್ಲ ಎಂದು ಬಹಳ ಬೇಸರ ಪಟ್ಟುಕೊಂಡು ವಸು ಜೊತೆ ಮಾತನಾಡಲು ಕರೆಯುತ್ತಾನೆ.

ಅಣ್ಣನ ಪರವಾಗಿ ನಿಂತ ವಸು

ಅಣ್ಣನ ಪರವಾಗಿ ನಿಂತ ವಸು

ಸ್ನೇಹಾ ವಿಚಾರವಾಗಿ ನನ್ನ ಬಳಿ ಮಾತನಾಡಬಹುದಿತ್ತಲ್ಲ. ಅಣ್ಣ ನಿನ್ನ ಮೇಲಿನ ಕೋಪಕ್ಕೆ ಹೀಗೆಲ್ಲ ಮಾಡುತ್ತಾ ಇದ್ದರೆ ನನಗೆ ಅವರ ಮೇಲೆ ಕೋಪ ಇನ್ನೂ ಹತ್ತರಷ್ಟು ಜಾಸ್ತಿ ಆಗಿ ಬಿಡುತ್ತದೆ. ಅವ್ವನಾ ಅಥವಾ ಗಂಡನ ಎಂದು ಕೇಳಿದರೆ ನಾನು ಒಂದು ಕ್ಷಣ ಯೋಚನೆ ಮಾಡುತ್ತೇನೆ ಆದರೆ ಅಣ್ಣಯ್ಯನಾ-ಗಂಡನ ಎಂದು ಕೇಳಿದರೆ ನನ್ನ ಉತ್ತರ ಪ್ರಶ್ನೆ ಗಿಂತ ಮೊದಲೇ ತಯಾರು ಇರುತ್ತದೆ. ನನಗೆ ನೀನೆ ಮುಖ್ಯ ಅಣ್ಣಯ್ಯ ಎಂದಾಗ ಕಂಠಿ ಗೆ ಬಹಳ ನೋವು ಆಗುತ್ತದೆ. ಆಗ ತಂಗಿ ಬಳಿ ಹೇಳುತ್ತಾನೆ. ತಂಗಿ ನೀನು ನಡೆದುಕೊಳ್ಳುವ ರೀತಿ ನೋಡಿದರೆ ನನಗೆ ಬಹಳ ಭಯ ಆಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಸಾವಿರ ಸಲ ಯೋಚನೆ ಮಾಡುವ ನೀನು. ಈ ವಿಚಾರದಲ್ಲಿ ದುಡುಕಿನ ನಿರ್ಧಾರ ನನಗೆ ಸರಿ ಕಾಣಲಿಲ್ಲ ಎಂದು ಹೇಳಿದಾಗ ವಸು ಮಾತ್ರ ತಾನು ಮಾಡಿದ್ದೆ ಸರಿ ಎಂದು ವಾದ ಮಾಡುತ್ತಾನೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 3th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X