ಪೋಸ್ಟರ್ ಅಂಟಿಸಿದವ ಸಿಕ್ಕಿ ಬಿದ್ದ: ಇನ್ನಾದರೂ ಸ್ನೇಹಾಳ ಕೋಪ ಕರಗುತ್ತಾ?

By ಪೂರ್ವ

ಪುಟ್ಟಕ್ಕ ಹಾಗೂ ಮಕ್ಕಳು ಊಟ ಮಾಡಲು ತಯಾರಿ ಮಾಡುತ್ತಿರುತ್ತಾರೆ. ಖೋ-ಖೋ ಆಟ ಆಡುವುದಕ್ಕೆ ಸುಮಾ ಇದೀಗ ಪಥ್ಯ ಮಾಡುವ ಅವಶ್ಯಕತೆ ಬಂದೊದಗಿದೆ ಮನಸ್ಸಿಲ್ಲದ ಮನಸ್ಸಿನಿಂದ ಊಟಕ್ಕೆ ಕೂರುತ್ತಾಳೆ ಈ ವೇಳೆ ಕರೆಂಟ್ ಕೂಡ ಹೋಗುತ್ತದೆ ಪುಟ್ಟಕ್ಕ ದೀಪವನ್ನು ತರಲು ಹೋಗಿ ಬರುವ ವೇಳೆ ಬಾಗಿಲು ತಟ್ಟಿದ ಶಬ್ದ ಕೇಳುತ್ತದೆ. ಆಗ ಪುಟ್ಟಕ್ಕ ಯಾರಿರಬಹುದು ಎಂದು ಯೋಚನೆ ಮಾಡುತ್ತಾ ಬಾಗಿಲು ತೆರೆಯಲು ಹೋದಾಗ ಅವ್ವ ನಾನೇ ಬಾಗಿಲು ತೆಗೆಯುತ್ತೇನೆ ಎಂದು ಸ್ನೇಹಾ ಹೇಳುತ್ತಾಳೆ.

ಊಟದ ತಟ್ಟೆ ಮುಂದೆ ಕುಳಿತಿದ್ದ ಬಾಗಿಲು ತೆಗೆಯಲು ಹೊರಗೆ ಹೋಗುತ್ತಾಳೆ, ಯಾರು ಅದು ಬಾಗಿಲು ತಟ್ಟಿದ್ದು ಎಂದು ಕೇಳುತ್ತಾ ಹೊರಗೆ ಬರುತ್ತಾಳೆ. ಬಳಿಕ ಮೊಬೈಲ್‌ನಲ್ಲಿ ಟಾರ್ಚ್ ಬಿಟ್ಟುಕೊಂಡು ಮುಂದೆ ಬರುತ್ತಾಳೆ. ಆಗ ಅಲ್ಲೊಬ್ಬ ಬಂಧಿಯಾಗಿರುವ ವ್ಯಕ್ತಿ ಕಂಡುಬರುತ್ತಾನೆ. ಆತನ ಬಾಯಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚುತ್ತಾರೆ. ಬಳಿಕ ಕೈ ಗೆ ಕಟ್ಟಿರುವುದನ್ನು ಬಿಚ್ಚುತ್ತಾಳೆ. ಆ ಬಳಿಕ ಆತ ಕೆಂಪ ಎಂದು ಸ್ನೇಹಾಗೆ ತಿಳಿಯುತ್ತದೆ. ಆತನ ಮುಖದಲ್ಲಿ ರಕ್ತ ಒಸರುತ್ತಿರುತ್ತದೆ.

ಯಾರೋ ಸರಿಯಾಗಿ ಬೆಂಡೆತ್ತಿದ ಹಾಗೆ ಕಾಣುತ್ತಿತ್ತು ಆತನನ್ನು ಕಂಡ ಸ್ನೇಹಾ ಏನು ಇಷ್ಟು ಹೊತ್ತಿಗೆ ಬಂದಿದ್ದೀರಾ ಯಾಕೆ ಏನಾಯಿತು ಎಂದು ಕೇಳುತ್ತಾಳೆ ಆ ವೇಳೆ ಕೆಂಪ ನಾನು ಯಾರು ಎಂದು ಗೊತ್ತಾಯಿತಾ ಅಕ್ಕ. ನನ್ನದು ತಪ್ಪಾಯಿತಕ್ಕ ಕ್ಷಮಿಸಿ ಬಿಡು ಅಕ್ಕ. ಎಂದು ಹೇಳುತ್ತಾನೆ ಆ ವೇಳೆ ಆತಂಕ ಗೊಂಡ ಸ್ನೇಹಾ ಹೇ ಏನಾಯ್ತು ಯಾಕೆ ಕಾಲಿಗೆ ಬಿಳುತ್ತಿದ್ದೀಯ ಏನಾಯಿತು ಎಂದು ಕೇಳುತ್ತಾಳೆ.

ಅಕ್ಕ ನಾನು ತಪ್ಪು ಮಾಡಿ ಬಿಟ್ಟೆ ಅಕ್ಕ ಎಂದು ಕೆಂಪ ಅಂಗಲಾಚುವಾಗ ಮನೆಯಿಂದ ಸುಮಾ ಹಾಗೂ ಪುಟ್ಟಕ್ಕ ಹೊರ ಬರುತ್ತಾರೆ. ಪುಟ್ಟಕ್ಕ ಹೊರ ಬರುತ್ತಾ ಯಾರು ಅದು ಎಂದು ಕೇಳುತ್ತಾಳೆ. ನಾನು ಕೆಂಪ ಕಾಳಿ ಜೊತೆ ಇರುವವನು ಎಂದಾಗ ಸುಮಾ ಹೌದು ಇದು ಕೆಂಪ ಕಾಳಿ ಹಿಂದೆ ಹಿಂದೇನೆ ಸುತ್ತುತ್ತಿದ್ದ ಈಗ ಇಲ್ಲಿಗೆ ಯಾಕೆ ಬಂದಿದ್ದಾನೆ ಎಂದು ಹೇಳುತ್ತಾಳೆ. ಇದನ್ನು ನೋಡಿದ ಸ್ನೇಹಾ ಯಾಕೆ ಇಷ್ಟೊತ್ತಿಗೆ ಬಂದೆ ಎಂದು ಜೋರಾಗಿ ಕೇಳುತ್ತಾಳೆ.

ಕೆಂಪನಿಗೆ ಹೊಡೆಯಲು ಮುಂದಾದ ಸುಮಾ

ಕೆಂಪನಿಗೆ ಹೊಡೆಯಲು ಮುಂದಾದ ಸುಮಾ

ನಿಮ್ಮ ಪೋಸ್ಟರ್ ಅನ್ನು ಊರು ತುಂಬಾ ಅಂಟಿಸಿದ್ದು ನಾನೇ ಅಕ್ಕ ಎಂದು ಹೇಳಿದಾಗ ಪುಟ್ಟಕ್ಕನಿಗೆ ಸ್ನೇಹಾಗೆ ಶಾಕ್ ಆಗುತ್ತದೆ. ಆ ವೇಳೆ ಸ್ನೇಹಾಳ ಕಾಲಿಗೆ ಬೀಳಲು ಮುಂದಾಗುತ್ತಾನೆ. ಆಗ ಸುಮಾ ಕೋಪದಿಂದ ಕೆಂಪನಿಗೆ ಹೊಡೆಯಲು ಮುಂದಾಗುತ್ತಾಳೆ. ಆಗ ಸುಮಾಳನ್ನು ತಡೆದ ಪುಟ್ಟಕ್ಕ ಬಳಿಕ ಹೇಳುತ್ತಾಳೆ ಏನಪ್ಪ ಯಾಕೆ ಈ ರೀತಿ ಮಾಡಲು ಹೋದೆ. ಹೀಗೆ ಮಾಡುವುದರಿಂದ ನಿನಗೇನು ಸಿಗುತ್ತದೆ, ಹೆಣ್ಣು ಮಕ್ಕಳ ಮೇಲೆ ಹೀಗೆ ತಪ್ಪಾಗಿ ಪ್ರಚಾರ ಮಾಡುವುದು ನ್ಯಾಯವೇ? ಎಂದು ಪ್ರಶ್ನೆ ಮಾಡುತ್ತಾಳೆ.

ದೊರೆ ಹೆಸರು ಕೇಳಿ ಸ್ನೇಹಾ ಶಾಕ್

ದೊರೆ ಹೆಸರು ಕೇಳಿ ಸ್ನೇಹಾ ಶಾಕ್

ಆಗ ಕೆಂಪ, ಅದಕ್ಕೆ ಶಿಕ್ಷೆ ಆಗಿದೆ ಕಣವ್ವ ಎಂದು ಹೇಳುತ್ತಾನೆ. ಅದಕ್ಕೆ ಸ್ನೇಹಾ ಶಿಕ್ಷೇನಾ ಎಂದು ಆಶ್ಚರ್ಯದಿಂದ ಹೇಳುತ್ತಾಳೆ. ಅದಕ್ಕೆ ಕಂಠಿ ಹೌದು ಅಣ್ಣ ಶಿಕ್ಷೆ ಕೊಟ್ಟರು ಬೇರೆ ಅಲ್ಲ ಅದು ದೊರೆ ಅಣ್ಣ ಶಿಕ್ಷೆ ಕೊಟ್ಟಿದ್ದು. ಎಂದಾಗ ಸ್ನೇಹಾಗೆ ಶಾಕ್ ಆಗುತ್ತದೆ. ಆಗ ಸ್ನೇಹಾಗೆ ನಂಬಿಕೆ ಬಾರದೆ ದೊರೆ ನಿನ್ನ ಹೆದರಿಸಿ ಕರೆದುಕೊಂಡು ಬಂದ ಅಲ್ವಾ ಎಂದಾಗ ಕೆಂಪ ನೋವಿನಿಂದ ಇಲ್ಲ ಅಕ್ಕ ಬೇಕಾದರೆ ಈ ವಿಡಿಯೋ ನೋಡು ಎಂದು ಹೇಳಿ ತಾನು ಪೋಸ್ಟರ್ ಅಂಟಿಸುತ್ತಿದ್ದ ವಿಡಿಯೋ ತೋರಿಸುತ್ತಾನೆ.

ಸಾಕ್ಷಿ ತೋರಿಸಿದ ಕೆಂಪ

ಸಾಕ್ಷಿ ತೋರಿಸಿದ ಕೆಂಪ

ಇದನ್ನು ನೋಡಿ ಪುಟ್ಟಕ್ಕಗೆ ಆಶ್ಚರ್ಯ ಆಗುತ್ತದೆ. ಬಳಿಕ ಸ್ನೇಹಾ ಮನೆ ಹತ್ತಿರ ಕಂಠಿ ಹಾಗೂ ಆತನ ಗೆಳೆಯರು ಬರುತ್ತಾರೆ. ಆ ವೇಳೆ ಕಂಠಿ ಬಳಿ ಮಾತನಾಡಿದ ಸ್ನೇಹಾ ಹೇಳುತ್ತಾಳೆ ಶ್ರೀ ನಿಮ್ಮ ಮೇಲೆ ನನಗೆ ಕೋಪ ಇರಲಿಲ್ಲ. ಆದರೆ ಎಂದು ತೊದಲಿದ ಮೇಲೆ ಕಂಠಿ ಅದನ್ನೆಲ್ಲ ಮನದಲ್ಲಿ ಇಟ್ಟುಕೊಳ್ಳದೆ ಪರವಾಗಿಲ್ಲ ನಿಮ್ಮ ಜಾಗದಲ್ಲಿ ಯಾರು ಇದ್ದರೂ ಹಾಗೆ ನಡೆದುಕೊಳ್ಳುತ್ತಿದ್ದರು ಎಂದು ಹೇಳುತ್ತಾನೆ. ಸತ್ಯ ಎಲ್ಲರಿಗೂ ತಿಳಿಯಿತು ಅಲ್ವಾ ಆದೆ ಖುಷಿ ಎಂದು ಖುಷಿಯಿಂದ ಹೇಳುತ್ತಾನೆ.

ಕಂಠಿ ಬಳಿ ಕ್ಷಮೆ ಕೇಳಿದ ಸ್ನೇಹಾ

ಕಂಠಿ ಬಳಿ ಕ್ಷಮೆ ಕೇಳಿದ ಸ್ನೇಹಾ

ಆಗ ಕಂಠಿ ಗೆಳೆಯ ಹೇಳುತ್ತಾನೆ ಅಣ್ಣಯ್ಯನದ್ದು ಏನೂ ತಪ್ಪಿಲ್ಲ ಅಕ್ಕ. ಅಣ್ಣ ಬಹಳ ನೊಂದುಕೊಂಡಿದ್ದರೂ. ಊಟ ಕೂಡ ಮಾಡಲಿಲ್ಲ. ಎಂದಾಗ ಸ್ನೇಹಾಗೆ ಬೇಸರ ಆಗುತ್ತದೆ. ಹೌದಾ ಎಂದು ಹೇಳುತ್ತಾಳೆ ಅದಕ್ಕೆ ಕಂಠಿ ಹಾಗೇನಿಲ್ಲ ಎಂದು ಹೇಳುತ್ತಾನೆ ಅದಕ್ಕೆ ಕಂಠಿ ಗೆಳೆಯ ಅಣ್ಣ ಬಹಳ ಫೀಲಿಂಗ್ ನಲ್ಲಿ ಇದ್ದರು. ಅಣ್ಣನೀಗೆ ನಿಮ್ಮ ಮೇಲೆ ತುಂಬಾ ಗೌರವ. ನೀವು ಮಾತನಾಡದೆ ಇದ್ದಿದ್ದಕ್ಕೆ ಸಿಕ್ಕ ಪಟ್ಟೆ ನೊಂದುಕೊಂಡರು. ಎಂದು ಜೋರಾಗಿ ಅಳುತ್ತಾನೆ ಇದನ್ನು ನೋಡಿ ಸ್ನೇಹಾಗೆ ಬೇಸರ ಆಗುತ್ತದೆ. ಆ ವೇಳೆ ಸ್ನೇಹಾ ಹೇಳುತ್ತಾಳೆ ನನ್ನ ಕ್ಷಮಿಸಿ ನನ್ನಿಂದ ನಿಮಗೆ ತುಂಬಾ ನೋವಾಗಿದೆ. ಯಾರನ್ನು ನಾನು ಸುಮ್ಮನೆ ನಂಬಲ್ಲ ನಾನು ಆದರೆ ನೀವು ಹಾಗಲ್ಲ ಅಂತ ಗೊತ್ತಾಯಿತು ಎಂದಾಗ ಕಂಠಿ ಗೆ ಖುಷಿ ಆಗುತ್ತದೆ. ಊಟ ಮಾಡಲು ಮನೆಗೆ ಕರೆಯುತ್ತಾ ಇರುತ್ತಾಳೆ ಸ್ನೇಹಾ ಆದರೆ ಕಂಠಿ ಒಪ್ಪದೇ ಇದ್ದಿದ್ದಕ್ಕೆ ಸುಮ್ಮನಾಗುತ್ತಾರೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾನೆ. ಇನ್ನು ಇವರಿಬ್ಬರ ಲವ್ ಸ್ಟೋರಿ ನೋಡಕ್ಕೆ ಜನ ಕಾಯುತ್ತಿದ್ದಾರೆ.

More from Filmibeat

English summary
Kannada serial Puttakkana Makkalu written updated on 3th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X