Don't Miss!
- Sports
ಭಾರತ vs ಪಾಕಿಸ್ತಾನ: ಟಿ20 ಸೆಣೆಸಾಟದಲ್ಲಿ ಹೆಚ್ಚು ಗೆದ್ದಿದ್ಯಾರು? ಹೆಚ್ಚು ಸಿಕ್ಸ್, ಹೆಚ್ಚು ವಿಕೆಟ್ ಸೇರಿದಂತೆ ಕುತೂಹಲಕರ ಮಾಹಿತ
- Finance
ಕೇರಳ ಲಾಟರಿ: 'ಅಕ್ಷಯ AK 561' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- News
ಮುಖ್ಯಮಂತ್ರಿ ಬದಲಾವಣೆ ಗೊಂದಲ ಸೃಷ್ಟಿಸಿದ್ದು ಬಿಜೆಪಿ; ಡಿಕೆಶಿ
- Technology
ಭಾರತದಲ್ಲಿ ಟೆಕ್ನೋ ಕ್ಯಾಮನ್ 19 ಪ್ರೊ 5G ಲಾಂಚ್! ವಾವ್ಹ್ ಎನಿಸುವ ಫೀಚರ್ಸ್!
- Automobiles
ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರ್ ಓಡಿಸುತ್ತಾ ಮುಂಬೈ ರಸ್ತೆಗಳಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದೇವರು
- Lifestyle
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಪುಟ್ಟಕ್ಕನ ಮನೆಗೆ ಕೋಪ ಮರೆತು ರಾಜೇಶ್ವರಿ ಬರುತ್ತಾಳಾ?
ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲೀಗ ವರಮಹಾಲಕ್ಷ್ಮಿ ಸಂಭ್ರಮ. ಸ್ವಾಮೀಜಿಯ ಮಾತಿನ ಪ್ರಕಾರ ರಾಜೇಶ್ವರಿ ಜೊತೆ ಒಂದಾಗಬೇಕು ಎಂಬುದು ಪುಟ್ಟಕ್ಕನ ನಿಲುವು. ಇದಕ್ಕೆ ಮೊದಲು ಸ್ನೇಹಾ ಚಕಾರ ಎತ್ತಿದರು ಕೂಡ ಬಳಿಕ ಅಮ್ಮನ ಮಾತಿಗೆ ಮೆತ್ತಗಾಗುತ್ತಾಳೆ. ಸ್ನೇಹಾ ಪುರುಷೋತ್ತಮನಿಗೆ ವಿಡಿಯೋ ಕಾಲ್ ಮಾಡುತ್ತಾಳೆ ಇದನ್ನು ಕಂಡ ರಾಜೇಶ್ವರಿ ಕೋಪದಿಂದ ಹೇಳುತ್ತಾಳೆ ಅವಳ ಜೊತೆ ನಿನಗೇನು ಮಾತು ಎಂದು.
ಅದಕ್ಕೆ ಪುರುಷೋತ್ತಮ, ನಾನು ಹೇಳಿದನಲ್ಲ ಅಕ್ಕ ನಮ್ಮಮ್ಮ ಹೀಗೆ ಹೇಳೋದು ಅಂತ ಅಂದಾಗ ಸ್ನೇಹಾ ಹೇಳುತ್ತಾಳೆ ಸರಿ ಪುರುಶಿ ಅಮ್ಮನ ಕೈಗೆ ಫೋನ್ ಕೊಡು ನಾನು ಮಾತನಾಡುತ್ತೇನೆ ಎಂದು ಹೇಳುತ್ತಾಳೆ ಅದಕ್ಕೆ ಒಪ್ಪಿಕೊಂಡ ಪುರುಶಿ ಅಮ್ಮನಿಗೆ ಫೋನ್ ಕೊಡುತ್ತಾನೆ. ಆಗ ಕಾಳಿ ಹೇಳುತ್ತಾನೆ ಫೋನ್ ಈ ಕಡೆ ತಿರುಗಿಸಬೇಡ ಕಣೋ ಎಂದು ಹೇಳಿ ಪುಟ್ಟಕ್ಕನ ಮನೆಗೆ ಆಗಾಗ್ಗೆ ಹೋಗುತ್ತಿದ್ದ ಕಳ್ಳ ಸ್ವಾಮೀಜಿಯನ್ನು ಸ್ವಲ್ಪ ದೂರ ಕರೆದುಕೊಂಡು ಹೋಗುತ್ತಾನೆ.
ಬಳಿಕ ಸ್ವಾಮೀಜಿ ಜೊತೆ ಹೇಳುತ್ತಾನೆ ಆ ಫೋನ್ ಕಾಲ್ ಕಟ್ ಆಗೋವರೆಗೂ ನೀನು ಇಲ್ಲಿಯೇ ನಿಂತಿರಬೇಕು ಎಂದು ಹೇಳುತ್ತಾನೆ. ವಿಡಿಯೋ ಕಾಲ್ ನ್ನು ಮುಖದತ್ತ ಹಿಡಿದ ರಾಜೇಶ್ವರಿ ಹೂ ಎಂದು ಮುಖ ತಿರುಗಿಸುತ್ತಾ ಹೇಳುತ್ತಾಳೆ. ಆಗ ಸ್ನೇಹಾ ಹೇಳುತ್ತಾಳೆ ನಮಸ್ಕಾರ ರಾಜೇಶ್ವರಿ ಅವರೇ ಹೇಗಿದ್ದೀರಿ ಹಬ್ಬದ ದಿನ ಯಾಕೋ ಗರಂ ಆಗಿರೋ ಥರ ಕಾಣುತ್ತಿದೆ ಎನ್ನುತ್ತಾಳೆ .

ರಾಜೇಶ್ವರಿಗೆ ಸ್ನೇಹಾ ಫೋನ್ ಕಾಲ್
ಅದಕ್ಕೆ ಪುರುಶಿ ಹೇಳುತ್ತಾನೆ ನಮ್ಮ ಮಮ್ಮಿ ಯಾವಾಗಲೂ ಹೀಗೆ ಇರುವುದು ಸ್ನೇಹಕ್ಕ ಎನ್ನುತ್ತಾನೆ ಅದಕ್ಕೆ ಸ್ನೇಹಾ ಹೇಳುತ್ತಾಳೆ ಸರಿ ನೀವು ಹೇಗಾದರೂ ಇರಿ ನಿಮ್ಮಿಷ್ಟ ನಾವು ನಮ್ಮ ಕರ್ತವ್ಯನ ಮುಗಿಸಿಕೊಳ್ಳುತ್ತೇವೆ ಎನ್ನುತ್ತಾಳೆ. ಅದಕ್ಕೆ ರಾಜೇಶ್ವರಿ ಹೇಳುತ್ತಾಳೆ ನನ್ನ ಜೊತೆ ಈ ಹುಡುಗಾಟದ ಮಾತನ್ನು ಇಟ್ಟುಕೊಳ್ಳಬೇಡ. ಫೋನ್ ಮಾಡಿದ್ದು ಯಾಕೆ ಅಂತ ಹೇಳು ಮೊದಲು ಎನ್ನುತ್ತಾಳೆ. ಅದಕ್ಕೆ ಸ್ನೇಹಾ ಹೇಳುತ್ತಾಳೆ ಅದಕ್ಕೆ ಬಂದೆ ರಾಜೇಶ್ವರಿ ಅವರೇ ಇರಿ ಎನ್ನುತ್ತಾಳೆ ಮತ್ತೆ ಮನೆಯವರ ಎಲ್ಲರ ಮುಖ ತೋರಿಸುತ್ತಾಳೆ. ಪುಟ್ಟಕ್ಕನ ಮುಖ ನೋಡಿದ ರಾಜೇಶ್ವರಿಗೆ ಇನ್ನೂ ಕೋಪ ಹೆಚ್ಚಾಗುತ್ತದೆ.

ಮೆಂಟಲ್ ಆಗಿದ್ದೀಯಾ? ಎಂದ ರಾಜೇಶ್ವರಿ
ಪುಟ್ಟಕ್ಕ ಹೇಳುತ್ತಾಳೆ ರಾಜವ್ವ ಹೇಗಿದ್ದೀಯಾ ಎನ್ನುತ್ತಾಳೆ. ಅದಕ್ಕೆ ರಾಜೇಶ್ವರಿ ಕೋಪದಿಂದ ಕೇಳುತ್ತಾಳೆ ಮನೆಯವರಿಗೆ ಎಲ್ಲರಿಗೂ ಒಟ್ಟಿಗೆ ಮೆಂಟಲ್ ಆಗಿದ್ಯಾ ಹೇಗೆ ನನ್ನ ಮೈ ಉರಿಸಬೇಕು ಎಂದು ಹೀಗೆ ಮಾಡುತ್ತಿದ್ದೀಯಾ ಪುಟ್ಟಕ್ಕ ಎನ್ನುತ್ತಾಳೆ. ಅದಕ್ಕೆ ಸ್ನೇಹಾ ಹೇಳುತ್ತಾಳೆ ಲೆ ರಾಜೇಶ್ವರಿ ಸ್ವಲ್ಪ ಕೋಪ ಕಮ್ಮಿ ಮಾಡ್ಕೊಳ್ಳೆ ಅಂತ ಏಕವಚನದಲ್ಲೀ ಮಾತನಾಡಿದರೆ ನಿಮಗೂ ಕೋಪ ಬರುತ್ತೆ ತಾನೇ. ಹಾಗೆ ನಮ್ಮ ತಾಯಿನ ನೀವು ಏಕವಚನದಲ್ಲಿ ಮಾತನಾಡಿಸಿದರೆ ನಮಗೂ ಹಾಗೆ ಕೋಪ ಬರುತ್ತೆ ಎನ್ನುತ್ತಾಳೆ ಅದಕ್ಕೆ ಪುಟ್ಟಕ್ಕ ಸ್ನೇಹಾಳನ್ನು ಗದರಿಸಿ ಸುಮ್ಮನಾಗಿಸುತ್ತಾರೆ.

ರಾಜೇಶ್ವರಿಯನ್ನು ಪೂಜೆಗೆ ಕರೆವ ಪುಟ್ಟಕ್ಕ
ಪುಟ್ಟಕ್ಕ, ರಾಜೇಶ್ವರಿ ಬಳಿ ಹೇಳುತ್ತಾಳೆ, ರಾಜವ್ವ ಇವತ್ತು ಮನೆಯಲ್ಲಿ ಪೂಜೆ ಇಟ್ಟುಕೊಂಡಿದ್ದೇವೆ. ನಿನ್ನನ್ನು ಅರಶಿನ ಕುಂಕುಮಕ್ಕೆ ಕರಿಯೋಣ ಅಂತ ಫೋನ್ ಮಾಡಿದ್ದೇವೆ ಎನ್ನುತ್ತಾಳೆ ಅದಕ್ಕೆ ಸ್ನೇಹಾ ಹೇಳುತ್ತಾಳೆ ಹೌದು ಮನೆಯವರೆಲ್ಲರೂ ಒಟ್ಟಿಗೆ ಕರೆಯುತ್ತಿದ್ದೆವೆ ನೀವು ತಪ್ಪದೇ ಬರಬೇಕು ರಾಜೇಶ್ವರಿ ಅವರೇ ಎನ್ನುತ್ತಾರೆ. ನೀವು ಬಂದು ಅರಶಿನ ಕುಂಕುಮ ತಗೊಂಡು ಹೋದರೆನೆ ನಮಗೆ ಸಮಾಧಾನ ಎಂದಾಗ ರಾಜೇಶ್ವರಿ ಯೇಯ್ ಎಷ್ಟೇ ಕೊಬ್ಬು ನಿಮಗೆ ರಾಜೇಶ್ವರಿ ಅಂದರೆ ಏಷ್ಟು ಸದರ ಆಗೋದ್ನಾ ಎನ್ನುತ್ತಾಳೆ.

ಒಮ್ಮೆಲೆ ಗರಂ ಆಗುವ ರಾಜೇಶ್ವರಿ
ಇತ್ತ ಕಾಳೀ ಹಾಗೂ ಸ್ವಾಮೀಜಿ ಪರಸ್ಪರ ಮೆತ್ತಗೆ ಮಾತನಾಡುತ್ತಾ ಇರುತ್ತಾರೆರೆ. ಇದೆನಯ್ಯ ಇದು ಪುಟ್ಟಕ್ಕ ಮನೆ ಬಳಿ ಬಂದು ಕರೆಯುತ್ತಾಳೆ ಎಂದುಕೊಂಡರೆ ಹೀಗೆ ದಿಢೀರ್ ಆಗಿ ಫೋನ್ ಮಾಡಿ ಹೇಳುತ್ತಿದ್ದಾಳೆ ಎನ್ನುತ್ತಾನೆ ಕಾಳಿ. ಬಳಿಕ ರಾಜಿ ಹೇಳುತ್ತಾಳೆ ನಾನು ಬರುವುದಿಲ್ಲ ಎಂದು ಗೊತ್ತಿದ್ದರೂ ಈ ರೀತಿ ಹೇಳುತ್ತಿದ್ದೀರ ನೀವು ಎನ್ನುತ್ತಾರೆ ಅದಕ್ಕೆ ಪುಟ್ಟಕ್ಕ ಹೇಳುತ್ತಾಳೆ ನಿಮ್ಮನ್ನು ನಿಜವಾಗಿಯೂ ಕರೆಯಲು ಕಾಲ್ ಮಾಡಿದ್ದು ಎನ್ನತ್ತಾಳೆ. ಅದಕ್ಕೆ ರಾಜೇಶ್ವರಿ ಮುಚ್ಚೆ ಬಾಯಿ ಎಂದು ಜೋರಾಗಿ ಹೇಳುತ್ತಾಳೆ. ಇನ್ನೂ ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ.