ಗಂಡಿನ ಕಡೆಯವರ ಮೇಲೆ ಹರಿಹಾಯ್ದಿದ್ದೇಕೆ ಸ್ನೇಹಾ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಪುಟ್ಟಕ್ಕ ಏಷ್ಟು ಹಸನ್ಮುಖಿಯೋ ಅಷ್ಟೇ ಗಟ್ಟಿಗಿತ್ತಿ ಕೂಡ. ಸಹನಾಳಿಗೆ ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ. ಇದೀಗ ಗಂಡಿನ ಕಡೆಯವರು ಕೂಡಾ ಆಗಮಿಸಿದ್ದಾರೆ. ಗಂಡಿನ ಕಡೆಯವರನ್ನು ಆಧಾರದಿಂದ ಸ್ವಾಗತಿಸಿದ ಪುಟ್ಟಕ್ಕ ಕ್ಷೇಮ ಸಮಾಚಾರ ವಿಚಾರಿಸುತ್ತಾರೆ.ಬಳಿಕ ಅಲ್ಲಿಗೆ ರಾಜೇಶ್ವರಿ ಹಾಗೂ ಅವರ ಗಂಡ ಬರುತ್ತಾರೆ.

ಎಲ್ಲರನ್ನೂ ಕುಳ್ಳಿರಿಸಿ ಪುಟ್ಟಕ್ಕ ಮಾತನಾಡುತ್ತಿರಬೇಕಾದರೆ ಸ್ನೇಹಾನಾ ಬಳಿ ಗಂಡಿನ ಅಮ್ಮ ಕೇಳುತ್ತಾರೆ ಎನು ಮಾಡುತ್ತಿದ್ದಿಯಾ ಎಂದು ಅದಕ್ಕೆ ಸ್ನೇಹಾ ಹೇಳುವ ಮುಂಚೆಯೇ ರಾಜೇಶ್ವರಿ ಹೇಳುತ್ತಾಳೆ ಕಲೆಕ್ಟರ್ ಓದುತ್ತಿದ್ದಾಳೆ. ಇನ್ನೂ ಚಿಕ್ಕೊಳು ಹೈಸ್ಕೂಲ್ ಓದುತ್ತಿದ್ದಾಳೆ. ಇನ್ನೂ ಮದುವೆ ಹುಡುಗಿ ಹೆಚ್ಚು ಓದಿಲ್ಲ, ತಂಗಿಯರ ಜೀವನಕ್ಕಾಗಿ ಆಕೆಯ ಜೀವನ ಮುಡಿಪಾಗಿ ಇಟ್ಟಿದ್ದಾಳೆ ಎಂದು ಹೇಳುತ್ತಾಳೆ. ಅದಕ್ಕೆ ಗಂಡಿನ ಅಮ್ಮ ಹೇಳುತ್ತಾರೆ ಅದಕ್ಕೆ ನನಗೆ ನನ್ನ ಮಗನಿಗೂ ಆ ಹುಡುಗಿ ಬಹಳ ಇಷ್ಟ ಆದಳು. ಅದಕ್ಕೆ ಹೇಳಿದ ಕೂಡಲೇ ಒಪ್ಪಿಕೊಂಡ ಎಂದರು.

ರಾಜೇಶ್ವರಿ ಅವರನ್ನು ನೋಡಿದ ಹುಡುಗನ ಅಮ್ಮ ನೀವು ರಾಜೇಶ್ವರಿ ಅವರಲ್ಲವೆ ಎಂದು ಕೇಳುತ್ತಾರೆ ಅದಕ್ಕೆ ಹು ಎನ್ನುತ್ತಾಳೆ ರಾಜೇಶ್ವರಿ. ಇನ್ನೂ ಸ್ನೇಹಾ ಹೇಳುತ್ತಾಳೆ ಗಂಡಿನ ಕಡೆಯವರಿಗೆ ಅಲ್ಲ ನಮ್ಮ ಮನೆಯ ಕಾರ್ಯಕ್ರಮಕ್ಕೆ ಇವರಿಬ್ಬರೂ ಇರಲೇಬೇಕು ಎಂದು ಕಂಡೀಷನ್ ಯಾಕೆ ಹಾಕಿದ್ರಿ ಎಂದು ಕೇಳುತ್ತಾಳೆ ಅದಕ್ಕೆ ಅವರು ಮುಂದೆ ಯಾವುದಾದ್ರು ಪ್ರಾಬ್ಲಂ ಆದರೆ ಅದಕ್ಕೆ ಈಗಾಗಲೇ ಅವರನ್ನು ಕರೆಯಿಸಿ ಮಾತುಕತೆ ಮಾಡಿ ಬಿಡೋಣ ಅಂತ ಕರೆಯಲು ಹೇಳಿದ್ದು ಎಂದರು. ಇದನ್ನು ಕೇಳಿದ ರಾಜೇಶ್ವರಿ ಗೆ ಕೊಂಚ ಶಾಕ್ ಆಗುತ್ತದೆ.

ಮ್ಯಾಚ್ ಗೆ ತೆರಳಿದ ಸುಮಾ

ಮ್ಯಾಚ್ ಗೆ ತೆರಳಿದ ಸುಮಾ

ಇತ್ತ ಸುಮ ಮ್ಯಾಚ್ ಗೆ ಹೋಗಲು ರೆಡಿಯಾಗಿದ್ದಾರೆ. ಆದರೆ ಪಿಟಿ ಸರ್ ಬಾರದೆ ಇರೋ ಕಾರಣ ಮಕ್ಕಳಲ್ಲಿ ತಳಮಳ ಶುರುವಾಗುತ್ತದೆ. ಸ್ಪರ್ಧೆ ಶುರುವಾಗಲು ಕೆಲವೇ ಸಮಯ ಬಾಕಿ ಉಳಿದಿದೆ. ಆದರೆ ಎನು ಮಾಡುವುದು ಎಂದು ಕೊಂಡಾಗ ಒಬ್ಬರು ಸರ್ ಕಾಣಿಸುತ್ತಾರೆ. ಸರ್ ಎಂದು ಕರೆಯುತ್ತಾ ಸುಮಾ ಹಾಗೂ ಅವರ ಗೆಳೆಯರು ಸರ್ ಬಳಿ ಹೋಗುತ್ತಾರೆ ಅವರು ಕೂಡ ಪಿಟಿ ಮೇಷ್ಟ್ರಿಗೆ ಕಾಲ್ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಕ್ಕಳು ಇದ್ದ ವಾಹನಕ್ಕೆ ಕೈ ಹಿಡಿದರು ಯಾರು ನಿಲ್ಲಿಸುವುದಿಲ್ಲ. ಬಳಿಕ ಮಕ್ಕಳು ಪಕ್ಕದ ಊರಲ್ಲಿ ನಡೆಯುವ ಮ್ಯಾಚ್ ಗೆ ಓಡಿಕೊಂಡು ಹೋಗಲು ನಿರ್ಧರಿಸುತ್ತಾರೆ.

ಸ್ನೇಹಳನ್ನು ಗದರಿದ ಪುಟ್ಟಕ್ಕ

ಸ್ನೇಹಳನ್ನು ಗದರಿದ ಪುಟ್ಟಕ್ಕ

ಇತ್ತ ಪುಟ್ಟಕ್ಕ ಸ್ನೇಹಾಳನ್ನು ಸುಮ್ಮನಿರು ಎಂದು ಗಂಡಿನ ಕಡೆಯವರು ಮಾತನಾಡಲಿ ಎಂದು ಹೇಳುತ್ತಾರೆ. ಆದರೂ ಸ್ನೇಹಾ ಕೇಳಿದ ಪ್ರಶ್ನೆಗೆ ಗಂಡಿನ ಕಡೆಯವರು ಏನು ಬೇಸರ ಪಟ್ಟುಕೊಳ್ಳದೆ ಇಲ್ಲ ನಿನ್ನ ಅಮ್ಮನಿಗೂ ನಿನ್ನ ಅಪ್ಪನಿಗೂ ಇನ್ನೂ ಡೈವರ್ಸ್ ಆಗಿಲ್ಲ ಆ ಕಾರಣಕ್ಕಾಗಿ ನಾವು ಅವರನ್ನು ಬರ ಹೇಳಿದ್ದು ಯಾಕೆ ಎಂದರೆ ಮುಂದೆ ಪ್ರಾಬ್ಲಂ ಆಗಬಾರದು ಅಲ್ವಾ ಅಂದಾಗ ನಂಜುಂಡ ಹೇಳುತ್ತಾನೆ ನಾವಿಬ್ಬರೂ ಈಗ ಒಟ್ಟಿಗೆ ಇಲ್ಲ. ಬಹಳ ವರ್ಷಗಳೇ ಕಳೆಯಿತು. ನನಗೂ ಆಕೆಗೂ ಸರಿ ಬರುತ್ತಿರಲಿಲ್ಲ. ಅದಕ್ಕೆ ಅವಳನ್ನು ಬಿಟ್ಟು ಬಂದೆ ಎಂದು ಹೇಳಿದಾಗ ಸ್ನೇಹಾ ಹೇಳುತ್ತಾಳೆ ಇಲ್ಲ ಇಲ್ಲ ನನ್ನ ಅವ್ವನಿಗೆ ಮೂರು ಹೆಣ್ಣು ಮಕ್ಕಳೇ ಆಯ್ತಲ್ವಾ ಅದಕ್ಕೆ ಅವ್ವನ ಬಿಟ್ಟು ಹೋಗಿದ್ದಾನೆ ಎಂದು ಜೋರಾಗಿ ಹೇಳುತ್ತಾಳೆ. ಬಳಿಕ ಹೇಳುತ್ತಾಳೆ. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಮುಂದೆ ಸಮಸ್ಯೆ ಎದುರಿಸೋದು ತಪ್ಪುತ್ತದೆ ಎನ್ನುತ್ತಾಳೆ.

ಕೋಪದಲ್ಲಿರುವ ಕಾಳಿ

ಕೋಪದಲ್ಲಿರುವ ಕಾಳಿ

ಇನ್ನೂ ಪುಟ್ಟಕ್ಕನ ಮನೆಗೆ ಗಂಡಿನ ಕಡೆಯವರು ಬಂದಿದ್ದಾರೆ ಎಂದು ಕಾಳಿಗೆ ತಿಳಿದು ಹೋಗಿದೆ. ಇದೀಗ ಕೋಪದಲ್ಲಿಯೆ ಬುಸುಗುಟ್ಟುತ್ತಾ ಪುಟ್ಟಕ್ಕನ ಮನೆಗೆ ಎಂಟ್ರಿ ನೀಡಲು ಬರುತ್ತಿದ್ದಾನೆ. ಇತ್ತ ವಸು ಅಣ್ಣನ ಜೊತೆ ಮಾತನಾಡಲು ತಡಕಾಡುತ್ತಿದ್ದಾಳೆ. ಕೆಲಸದಾಕೆಗೆ ಹೇಳುತ್ತಾಳೆ ಅಣ್ಣಯ್ಯನನ್ನ ಕರಿ ಎಂದು ಹೇಳಿದಾಗ ಕಂಠಿಯ ರೂಮಿಗೆ ಹೋಗುತ್ತಾಳೆ ಕೆಲಸದಾಕೆ ಬಳಿಕ ಅಲ್ಲಿ ಕಂಠಿ ಬಳಿ ಒಳಕ್ಕೆ ಬರಬಹುದಾ ದಣಿ ಎಂದು ಕೇಳುತ್ತಾಳೆ ಅದಕ್ಕೆ ಬಾ ಎಂದು ಕರೆಯುತ್ತಾನೆ.

ಸಹನಾಗೆ ದಿಕ್ಕೇ ತೋಚದಾಗಿದೆ

ಸಹನಾಗೆ ದಿಕ್ಕೇ ತೋಚದಾಗಿದೆ

ವಸು ಅಕ್ಕ ನಿಮ್ಮ ಬಳಿ ಏನೋ ಮಾತನಾಡಬೇಕು ಎನ್ನುತ್ತಿದ್ದರು. ಅದಕ್ಕೆ ನಿಮ್ಮನ್ನು ಕರೆಯಲು ಹೇಳಿದರು ಎಂದು ಹೇಳುತ್ತಾಳೆ. ಅದಕ್ಕೆ ಕಂಠಿ ಬೇಕಾದರೆ ಅವರೇ ಬರಲಿ ಎಂದು ಹೇಳುತ್ತಾನೆ. ಕೆಲಸದಾಕೆ ವಾಪಸ್ ಬಂದು ನೀವೇ ಹೋಗಿ ಮಾತನಾಡಬೇಕೆಂದು ಅವರು ಹೇಳಿದರು ಎಂದಾಗ ಕಂಠಿ ಬಗ್ಗೆ ಹುಸಿ ಮುನಿಸಿನಿಂದ ಮಾತನಾಡಲು ಬರುತ್ತಾಳೆ ವಸು. ಕಂಠಿಯನ್ನು ಕಂಡ ವಸು ಕೆಮ್ಮುತ್ತಾಳೆ ಇದನ್ನು ಕಂಡ ಕಂಠಿ ವಸುಗೆ ಕುಡಿಯಲು ನೀರು ಕೊಡುತ್ತಾರೆ. ಇನ್ನೂ ವಸು ಹೇಳುತ್ತಾಳೆ ನಿನ್ನಾ ಹತ್ರ ನಾನು ಮಾತಾಡಬೇಕು ಅಲ್ವಾ ಎಂದು ಹೇಳಿ ನಿನ್ನೆ ಇದ್ದಲ್ಲಿಗೆ ಇಂದು ಕರೆದುಕೊಂಡು ಹೋಗು ಎಂದು ಹೇಳುತ್ತಾಳೆ ಅದಕ್ಕೆ ಕಂಠಿ ಆಗೋದಿಲ್ಲ ಎಂದು ಹೇಳುತ್ತಾಳೆ ಅದಕ್ಕೆ ವಸು ಹೇಳುತ್ತಾಳೆ ಆಗಿಲ್ಲವೆಂದರೆ ಸ್ನೇಹಾ ಬಳಿ ಹೇಳುತ್ತೇನೆ ಎಂದು ಅದಕ್ಕೆ ಕಂಠಿ ಆಯ್ತು ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾನೆ. ಇತ್ತ ಸ್ನೇಹಾ ಸಹನಾಳನ್ನು ಗಂಡಿನ ಕಡೆಯವರ ಬಳಿ ಕರೆದುಕೊಂಡು ಬರುತ್ತಾಳೆ. ಇನ್ನೂ ಸಹನಾಗೆ ದಿಕ್ಕೇ ತೋಚದಾಗಿದೆ. ಮುಂದೇನಾಗುತ್ತದೆ ಅಂತ ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 4 July. Showing many twists and turns.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X