Puttakkana Makkalu: ಅಮ್ಮನ ಮಾತಿಗೆ ಕಟ್ಟು ಬಿದ್ದ ಸ್ನೇಹಾ: ಮುಂದೇನು ಮಾಡುತ್ತಾಳೆ ಪುಟ್ಟಕ್ಕ?
ಪುಟ್ಟಕ್ಕನಿಗೆ ನಿಜ ವಿಚಾರ ತಿಳಿದು ಹೋಗಿದೆ. ಆಕೆ ತನ್ನ ಮಗಳ ಬಳಿ ನಿಜಹೇಳಲು ಪರದಾಟ ಮಾಡುತ್ತಾ ಇದ್ದಾಳೆ. ಇಲ್ಲಿ ನನ್ನ ಮಗಳಿಗೆ ಏನಾದರು ಆಗಿ ಬಿಡುತ್ತಾ ಎನ್ನುವ ಭಯ. ಬಂಗಾರಮ್ಮ ಋಣದಲ್ಲಿ ಇರುವ ಪುಟ್ಟಕ್ಕಗೆ ಮಗಳ ವಿಚಾರದಿಂದಾಗಿ ಇಬ್ಬರು ಬೇರೆ ಬೇರೆ ಆಗುವ ಭಯ ಕೂಡ ಕಾಡ್ತಿದೆ. ಅದಕ್ಕಾಗಿ ಸ್ನೇಹಾ ಬಳಿ ಕಂಠಿಯನ್ನು ಮರೆಯುವಂತೆ ಹೇಳುತ್ತಾಳೆ.
ಕಂಠಿ ಒಳ್ಳೆಯ ಹುಡುಗ ಎಂದು ನೀನೇ ಹೇಳಿದೆ ಅಲ್ವಾ ಅಮ್ಮ ಎಂದು ಸ್ನೇಹಾ ಹೇಳಿದ್ದಾಳೆ. ಆದರೆ ಇದೀಗ ನೀನೇ ಆತನನ್ನು ಪ್ರೀತಿ ಮಾಡಬೇಡ ಎಂದು ಹೇಳುತ್ತ ಇದ್ದೀಯಾ ಯಾಕೆ ಎಂದು ಹೇಳು ಎಂದಾಗ ಆತ ಬಡವ ಅದಕ್ಕಾಗಿ ಆತ ನಮ್ಮ ಕುಟುಂಬಕ್ಕೆ ಆಗಿ ಬರುವುದು ಇಲ್ಲ. ಹಾಗಾಗಿ ಆತ ನಮಗೆ ಸೆಟ್ ಆಗುವುದು ಇಲ್ಲ ಕೂಡ ಅದಕ್ಕೆ ಅವನು ಬೇಡ ಎಂದು ಹೇಳುತ್ತಾಳೆ.

ಮಗಳ ಮಾತು ಕೇಳದ ಪುಟ್ಟಕ್ಕ
ಇದನ್ನು ಕೇಳಿದ ಸ್ನೇಹಾ ಮಾತ್ರ ನನಗೆ ಅವರನ್ನು ಮರೆಯಲು ಸಾಧ್ಯ ಇಲ್ಲ. ದಯಮಾಡಿ ನನ್ನ ಮದುವೆ ಗೆ ಒಪ್ಪಿಗೆ ಕೊಡಮ್ಮ. ನೀನು ಸಹನಾ ಹಾಗೂ ಮುರಳಿ ಬಾವನ ಪ್ರೀತಿಗೆ ಒಪ್ಪಿಗೆ ಕೊಟ್ಟಿದ್ದಿಯಾ. ಹಾಗೆಯೇ ನಮ್ಮಿಬ್ಬರ ಪ್ರೀತಿಗೆ ಯಾಕೆ ಹೀಗೆ ಅಡ್ಡಗಾಲು ಹಾಕುತ್ತ ಇದ್ದೀಯಾ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸುತ್ತಾಳೆ. ಇನ್ನು ಪುಟ್ಟಕ್ಕ ಮಾತ್ರ ಶ್ರೀಯನ್ನೂ ಮರೆಯುವಂತೆ ಆಕೆಯ ಮೇಲೆ ಆಣೆ ಮಾಡಿಸಿ ಅಲ್ಲಿಂದ ಹೋಗುತ್ತಾಳೆ.
ದುಃಖ ತಡೆಯದೇ ಅತ್ತ ಸ್ನೇಹಾ
ಇನ್ನು ಸ್ನೇಹಾ ಮಾತ್ರ ದುಃಖ ತಡೆಯಲಾಗದೇ ಜೋರಾಗಿ ಅಳುತ್ತಾಳೆ. ರೂಮ್‌ನಲ್ಲಿ ಸ್ನೇಹಾ ಸುಮ್ಮನೆ ಕುಳಿತು ಇರಬೇಕಾದರೆ, ಸುಮಾ ಖುಷಿಯಾಗಿ ಬರುತ್ತಾಳೆ. ಅಕ್ಕ ಹೇಗಿದ್ದೀಯಾ? ಪರೀಕ್ಷೆ ಹೇಗಾಯಿತು? ಎಂದೆಲ್ಲ ಕೇಳಿದಾಗ ಸ್ನೇಹಾ ಮಾತ್ರ ಏನು ಹೇಳದೇ ಸುಮ್ಮನೆ ಇರುತ್ತಾಳೆ. ಇದರಿಂದ ಸುಮಾಗೆ ಒಂದು ಸ್ಪಷ್ಟ ಆಗುತ್ತದೆ .

ಅಕ್ಕನ ಮಾತಿಗೆ ಬೇಸರಗೊಂಡ ಸುಮಾ
ಮನೆಯಲ್ಲಿ ಏನೋ ಗಲಾಟೆ ಆಗಿದೆ. ಅಥವಾ ಶ್ರೀ ಅವರ ಜೊತೆ ಏನೋ ಗಲಾಟೆ ಆಗಿದೆ. ಅದಕ್ಕೆ ಹೀಗೆ ಮಾಡುತ್ತಾ ಇದ್ದಾಳೆ ಎಂದು ಯೋಚನೆ ಮಾಡುತ್ತಾಳೆ. ಇನ್ನೂ ಸ್ನೇಹಾ ಮಾತ್ರ ಅಳುತ್ತಾ ಮೆಸ್ ಬಳಿ ಹೋಗುತ್ತಾಳೆ. ಅಲ್ಲಿ ಪುಟ್ಟಕ್ಕ ಕಾಣಿಸದ್ದನು ಕಂಡು ಸ್ನೇಹಾ ಹಾಗೂ ಸುಮಾ ಹುಡುಕುತ್ತಾರೆ. ಅದೇ ಸಮಯಕ್ಕೆ ಚಂದ್ರು ಬಂದಾಗ ಆತನ ಬಳಿ ನಡೆದ ವಿಚಾರವನ್ನು ಸ್ನೇಹಾ ಹೇಳುತ್ತಾಳೆ.
ಚಂದ್ರು ಬಳಿ ವಿಚಾರ ಹೇಳಿದ ಸ್ನೇಹಾ
ಚಂದ್ರು ಹೇಳುತ್ತಾನೆ ಸರಿ ನಾನು ಪುಟ್ಟಕ್ಕನ ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇತ್ತ ಸಹನಾಗೆ ಮಾತ್ರ ತನ್ನ ತಾಯಿ ಇವರಿಗೆ 15 ಲಕ್ಷ ರೂ. ವರದಕ್ಷಿಣೆ ಕೊಟ್ಟಿದ್ದಾರೆ ಎಂದೆಲ್ಲ ಪಾತ್ರೆ ತೊಳೆಯುತ್ತಾ ಯೋಚನೆ ಮಾಡುತ್ತಾ ಇರುತ್ತಾಳೆ. ಈ ವೇಳೆ ಅಲ್ಲಿಗೆ ಚಿತ್ರ ಬರುತ್ತಾಳೆ. ಸಹನಾ ನನಗೆ ಸ್ವೀಟ್ ಮಾಡಿ ಕೊಡು ಎಂದೆಲ್ಲ ಹೇಳುತ್ತ ಇರುತ್ತಾಳೆ. ಆ ವೇಳೆ ಸಹನಾ ಏನೋ ಯೋಚನೆ ಮಾಡುತ್ತಿರುವ ಹಾಗೆ ಚಿತ್ರಗೆ ಕಾಣಿಸುತ್ತದೆ.

ಸಹನಾ ಮಾತಿಗೆ ಬೆಚ್ಚಿಬಿದ್ದ ಚಿತ್ರ
ಆಕೆ ಸಹನಾ ಬಳಿ ಕೇಳಿದಾಗ ಸಹನಾ ಹೇಳುತ್ತಾಳೆ. ಚಿತ್ರ ಅವರೇ ನನ್ನ ತಾಯಿ ಮದುವೆಗೆ ಬಹಳ ಕಷ್ಟ ಪಟ್ಟಿದ್ದಾರೆ. ಅದರ ಹೊರತಾಗಿ ಏನಾದರು ಹಣ ಕೊಟ್ಟಿರುವ ವಿಚಾರ ನಿಮಗೆ ಗೊತ್ತಾ ಎಂದಾಗ ಚಿತ್ರ ಕೊಂಚ ತಬ್ಬಿಬ್ಬು ಆಗುತ್ತಾಳೆ. ಆ ಬಳಿಕ ಚಿತ್ರ ಹಾಗೇನೂ ಇಲ್ಲ ಎಂದೆಲ್ಲ ಸಬೂಬು ಹೇಳಿ ಮುರಳಿ ಬಳಿ ಇದನ್ನು ಕೇಳದಂತೆ ಹೇಳುತ್ತಾಳೆ.
ಮನೆಗೆ ಬಂದ ಕಂಠಿ
ಇನ್ನು ಕಂಠಿ ಮನೆಗೆ ಬಂದಿದ್ದಾನೆ. ಆತನಿಗೆ ಏಟು ಆಗಿದ್ದನ್ನು ಕಂಡ ಬಂಗಾರಮ್ಮ ಮಗನಿಗೆ ಇಷ್ಟರಮಟ್ಟಿಗೆ ಪೆಟ್ಟಾಯಿತಾ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆದರೆ ಕಂಠಿ ಮಾತ್ರ ಅಮ್ಮನ ಜೊತೆ ಅಷ್ಟಾಗಿ ಮಾತನಾಡದೇ ರೂಮ್‌ಗೆ ಹೋಗುತ್ತಾನೆ. ಆತನ ಮನದಲ್ಲಿ ಅಮ್ಮ ರೌಡಿಗಳನ್ನು ಕಳಿಸಿ ತಪ್ಪು ಮಾಡಿದಳು ಎನಿಸಿರುತ್ತದೆ. ಈ ವಿಚಾರವನ್ನು ತಂಗಿ ಬಳಿ ಹೇಳುತ್ತಾನೆ ಕಂಠಿ. ಆ ಬಳಿಕ ಸ್ನೇಹಾಗೆ ಕರೆ ಮಾಡುತ್ತಾನೆ. ಕಂಠಿ ಆದರೆ ಸ್ನೇಹಾ ಕರೆ ಸ್ವೀಕರಿಸಲು ಅಮ್ಮನ ಆಣೆ ಪ್ರಮಾಣ ಅಡ್ಡ ಬರುತ್ತದೆ.


Click it and Unblock the Notifications











