ದೊರೆಯ ಹುಡುಕುವ ಪ್ರಯತ್ನ ಮತ್ತೆ ಆರಂಭಿಸಿದ ಸ್ನೇಹಾ

By ಪೂರ್ವ

ಸ್ನೇಹಾ ಈಗ ಮತ್ತೆ ದೊರೆಯ ಹಿಂದೆ ಬಿದ್ದಿದ್ದಾಳೆ. ಸಹನಾ ಮದುವೆ ಮಾತುಕತೆ ವೇಳೆ ಪುಟ್ಟಕ್ಕನ ಮೆಸ್ ಬಳಿ ಇರುವ ಗೇಟ್ ಬಳಿ ಸ್ನೇಹಾಗೆ ಒಂದು ಲೆಟರ್ ಸಿಕ್ಕಿತ್ತು. ಆ ಲೆಟರ್ ನಲ್ಲಿ ಸಹನಾಗೆ ಶುಭಾಶಯ ಬರೆಯಲಾಗಿತ್ತು. ಇದೆಲ್ಲ ನೆನಪಿಸಿಕೊಂಡ ಸ್ನೇಹಾಗೆ ಮುತ್ತಯ್ಯ ಕೂಡ ಕುಮ್ಮಕ್ಕು ನೀಡುತ್ತಾನೆ. ಮೆಸ್ ಬಳಿ ಬಂದ ಸ್ನೇಹಾ, ಪುಟ್ಟಕ್ಕನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.

ಪುಟ್ಟಕ್ಕನ ಬಳಿ ಬಂದ ಸ್ನೇಹಾ, ಯಾರು ನಿನಗೆ ಅಕ್ಕನ ಪ್ರೀತಿ ವಿಚಾರ ಹೇಳಿದ್ದು ಆ ದೊರೆನಾ ಎಂದು ಕೇಳುವ ಸಮಯದಲ್ಲಿ ಶಾಂತಕ್ಕನ ಗಂಡ ಸಹ ಮೆಸ್‌ನಲ್ಲಿ ಕುಳಿತು ತಿಂಡಿ ಮಾಡುತ್ತಿದ್ದ. ಸ್ನೇಹಾ, ದೊರೆ ಎಂದು ಹೇಳಿದ ಕೂಡಲೇ ಮುತ್ತಯ್ಯ ಕೂಡ ದೊರೆ ಎಂದು ಕರೆಯುತ್ತಾನೆ. ಇದನ್ನು ಕೇಳಿದ ಸ್ನೇಹಾ ಒಮ್ಮೆಲೆ ಬಿಚ್ಚಿ ಬೀಳುತ್ತಾಳೆ. ಬಳಿಕ ಮುತ್ತಯ್ಯ ದೊರೆ ದೊರೆ ಎಂದು ಹೇಳುತ್ತ ಇರುತ್ತಾನೆ.

ಅದಕ್ಕೆ ಶಾಂತವ್ವ ಹೇಳುತ್ತಾಳೆ ಆಗಾಗ ದೊರೆ ದೊರೆ ಅಂತ ಹೇಳುತ್ತಾ ಇರುತ್ತಾನೆ ಎಂದು ಹೇಳುತ್ತಾಳೆ. ಅದಕ್ಕೆ ಮುತ್ತಯ್ಯ ಹೇಳುತ್ತಾನೆ ನನಗೆ ಎಲ್ಲಾ ಗೊತ್ತು ಅವ್ವ, ಅಚ್ಚೆ ಎನ್ನುತ್ತಾ ತಡಬಡಾಯಿಸುತ್ತಾನೆ. ಇದನ್ನು ಕೇಳಿದ ಸ್ನೇಹಾಗೆ ಇನ್ನೂ ಆಶ್ಚರ್ಯ ಆಗುತ್ತದೆ. ಬಳಿಕ ಮುತ್ತಯ್ಯ ಹೇಳುತ್ತಾನೆ ಅವನೇ ದೊರೆ ಅವ್ವ ಹಚ್ಚೆ ಹುಡುಗ ನನಗೆ ಗೊತ್ತು ಅವನೆ ಎಂದು ಮಕ್ಕಳ ಹಾಗೆ ಹೇಳುತ್ತಾನೆ.

ಮುತ್ತಯ್ಯನ ಕೂಗಿಗೆ ಶಾಕ್ ಆದ ಸ್ನೇಹಾ

ಮುತ್ತಯ್ಯನ ಕೂಗಿಗೆ ಶಾಕ್ ಆದ ಸ್ನೇಹಾ

ಇದನ್ನು ಕೇಳಿದ ಸ್ನೇಹಾ ಮುತ್ತಯ್ಯನ ಬಳಿ ಕೇಳುತ್ತಾಳೆ. ಮುತ್ತಯ್ಯ ನಿನಗೆ ದೊರೆ ಯಾರು ಗೊತ್ತಾ ಎಂದು ಕೇಳುತ್ತಾಳೆ. ಅದಕ್ಕೆ ಗೊತ್ತು ಎಂದು ಹೇಳುತ್ತಾನೆ ಮುತ್ತಯ್ಯ. ಅವನಿಂದಲೇ ನನಗೆ ಹೀಗೆ ಆಗಿದ್ದು ಕೂಡ, ಎಂದು ಮುತ್ತಯ್ಯ ಹೇಳಿದಾಗ ಅರ್ಥ ಆಗದೆ ಸ್ನೇಹಾ ಕೇಳುತ್ತಾಳೆ ಎನು ದೊರೆಯಿಂದ ನಿನಗೆ ಏನು ಆಗಿದೆ ಮುತ್ತಯ್ಯ. ಎಂದಾಗ ಮುತ್ತಯ್ಯ ಹೇಳುತ್ತಾನೆ, ದೊರೆಯಿಂದ ನನಗೆ ಹುಷಾರ್ ತಪ್ಪಿತು, ಅವ್ವ ಎಂದು ಹಚ್ಚೆ ಅವನೇ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಮುತ್ತಯ್ಯನ ಬಳಿ ಕೇಳುತ್ತಾಳೆ ದೊರೆ ಹೇಗಿದ್ದಾನೆ ನೋಡಲು ಎಂದಾಗ ಮುತ್ತಯ್ಯ ತೊದಲುತ್ತಾ ಅವನು ಅವರ ಮಗ, ವಸೂಲಿ, ಸಾಲ, ವಸೂಲಿ ಅವನೇ ಎಂದು ಹೇಳುತ್ತಾನೆ ಇದನ್ನು ಕೇಳಿದ ಸ್ನೇಹಾಗೆ ಅರ್ಥ ಆಗದೆ ಅವನ ಮುಖವನ್ನೇ ನೋಡುತ್ತಾಳೆ.

ಕಂಠಿ-ಸ್ನೇಹಾಳನ್ನು ದೂರ ಮಾಡುವ ಯತ್ನ

ಕಂಠಿ-ಸ್ನೇಹಾಳನ್ನು ದೂರ ಮಾಡುವ ಯತ್ನ

ಇತ್ತ ಚಂದ್ರು ಸ್ಥಿತಿ ಮಾತ್ರ ಶೋಚನೀಯವಾಗಿದೆ. ತನ್ನ ಹೆಂಡತಿ ವಿಚ್ಛೇದನ ನೀಡುತ್ತಾಳೆ ಎಂಬುವುದರ ಕಲ್ಪನೆ ಇರದೆ ತನ್ನ ತಾಯಿಯ ಮಾತು ಕೇಳಿ ಎಲ್ಲದಕ್ಕೂ ತಲೆ ಆಡಿಸಿದ ಚಂದ್ರು ಇದೀಗ ನೋವು ಅನುಭವಿಸುವಂತಾಗಿದೆ. ಕಂಠಿ ಹಾಗೂ ಸ್ನೇಹಾಳನ್ನು ದೂರ ಮಾಡಲು ಹೋಗಿ ಇವರಿಬ್ಬರ ಪ್ರೀತಿ ಕೊನೆ ಹಂತಕ್ಕೆ ಬಂದು ನಿಂತಿದೆ. ಚಂದ್ರುಗೆ ನಾನು ಬೇಡ ಆತನಿಗೆ ಆತನ ಅಮ್ಮ ಒಬ್ಬರು ಇದ್ದರೆ ಸಾಕು ನಾನು ಏನಕ್ಕೆ ಬೇಕು ಎಂದೆಲ್ಲ ಯೋಚನೆ ಮಾಡಿ ಬಹಳ ಕಟು ಹೃದಯ ಮಾಡಿಕೊಂಡು ವಿಚ್ಛೇದನ ಪೇಪರ್‌ಗೆ ಸಹಿ ಹಾಕುತ್ತಾಳೆ.

ಚಂದ್ರುಗೆ ಸಮಾಧಾನ ಹೇಳಿದ ಸ್ನೇಹಿತ

ಚಂದ್ರುಗೆ ಸಮಾಧಾನ ಹೇಳಿದ ಸ್ನೇಹಿತ

ಇನ್ನು ಕೋರ್ಟ್ ನಲ್ಲಿ ಇದ್ದ ಚಂದ್ರುಗೆ ಆತನ ಗೆಳೆಯ ಸಿಗುತ್ತಾನೆ. ಬಳಿಕ ಆತ ಚಂದ್ರು ಜೀವನ ಹಾಳಾಗಿರುವ ಸುದ್ದಿ ಕೇಳಿ ವಿಷಾದ ವ್ಯಕ್ತಪಡಿಸುತ್ತಾನೆ. ಬಳಿಕ, ಏನಯ್ಯ ಇಷ್ಟು ದೊಡ್ಡ ವಿಚಾರ ಆಗಿದೆ, ನನಗೆ ಈ ಬಗ್ಗೆ ಏನೂ ಹೇಳಿಲ್ಲ ಅಲ್ವಾ, ಎಂದಾಗ ಚಂದ್ರು ಗೆ ಅರ್ಥ ಆಗದೆ ಏನು ಅದು ಎಂದು ಕೇಳುತ್ತಾನೆ ಆಗ ಆತನ ಗೆಳೆಯ ಹೇಳುತ್ತಾನೆ ವಿಚ್ಛೇದನ ವಿಚಾರ ಕಿಶೋರ್ ನಿಮ್ಮ ಮನೆಗೆ ಬಂದು ಇದರ ಬಗ್ಗೆ ಮಾತನಾಡಿದರಂತೆ. ನನಗೆ ಹೇಳಬಾರದಾಗಿತ್ತಾ ಎಂದಾಗ ಚಂದ್ರು ಅದು ಎಂದು ತೊದಲುತ್ತಾನೆ. ಆಗಾ ಮಾತು ಮುಂದುವರಿಸಿದ ಆತನ ಗೆಳೆಯ ನೀನು ಫೀಲ್ ಆಗಬೇಡ ಚಂದು ನಾವೆಲ್ಲ ಇದ್ದೇವೆ. ಆಡಿಕೊಳ್ಳುವವರು ಆಡಿಕೊಳ್ಳುತ್ತಾರೆ ಎನ್ನುತ್ತಾನೆ.

ಆತಂಕದಲ್ಲಿ ಚಂದ್ರು

ಆತಂಕದಲ್ಲಿ ಚಂದ್ರು

ಆಗ ಚಂದ್ರು, ಇದರ ಬಗ್ಗೆ ಹೆಚ್ಚಿಗೆ ಮಾತನಾಡಬಾರದು ಎಂದು ಸುಮ್ಮನಿದ್ದೆ ಅಷ್ಟೇ ಎನ್ನುತ್ತಾನೆ ಅದಕ್ಕೆ ಆತನ ಗೆಳೆಯ ಹೇಳುತ್ತಾನೆ ನೀನು ಸುಮ್ಮನಿದ್ದಿಯಾ ಆದರೆ ಆ ರಾಜೇಂದ್ರ, ಅವನೇ ಅಂತೆ ಲಾಯರ್. ಈ ವಿಚಾರ ನಿನಗೆ ಗೊತ್ತಿಲ್ವಾ. ಲಾಯರ್ ರಾಜೇಂದ್ರನ್ನ ನಿಮ್ಮ ಅತ್ತೆ ಮನೆಗೆ ಕರೆದಿದ್ದರಂತೆ. ಅವನು ಹೋಗಿ ಮ್ಯುಚ್ಯುವಲ್ ಡೈವರ್ಸ್ ಬಗ್ಗೆ ಮಾತನಾಡಿಕೊಂಡು ಬಂದರಂತೆ. ಚಂದ್ರು ಕೇಸ್‌ನ ನಾನು ತೆಗೆದುಕೊಂಡು ಇದ್ದೇನೆ ಎಂದು ಊರು ತುಂಬಾ ಹೇಳಿಕೊಂಡು ಬರುತ್ತಿದ್ದಾನಂತೆ ಎನ್ನುತ್ತಾನೆ. ಆಗ ಚಂದ್ರು ಮನದಲ್ಲಿ ವಸು ನನ್ನ ಬಳಿ ಮಾತನಾಡುತ್ತಾಳೆ ಎಂದುಕೊಂಡಿದ್ದೆ. ಈ ವಿಚಾರ ನಡೆದರೆ ಕಂಠಿ ನನ್ನ ಹಾದಿಗೆ ಬರುತ್ತಾನೆ ಎಂದುಕೊಂಡಿದ್ದೆ ಆದರೆ ವಸು ನನಗೆ ವಿಚ್ಛೇದನ ಕೊಡುವ ನಿರ್ಧಾರ ಮಾಡುತ್ತಾಳೆ ಅಂದುಕೊಂಡು ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾನೆ.

More from Filmibeat

English summary
Kannada serial Puttakkana Makkalu written updated on 4th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X