ಕಂಠಿಗೆ ಮುತ್ತಿಟ್ಟ ಸ್ನೇಹಾ! ಇತ್ತ ಹಳ್ಳ ಹಿಡಿಯುತ್ತಿರುವ ಮುರಳಿ ಮೇಷ್ಟ್ರ ಪ್ರೇಮಕತೆ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಸ್ನೇಹಾಗೆ ತನ್ನ ತಪ್ಪಿನ ಅರಿವಾಗಿದೆ ಕಂಠಿ ಮನಸನ್ನು ಅರ್ಥ ಮಾಡಿಕೊಳ್ಳದೆ ಪದೇ ಪದೇ ನೋಯಿಸುತ್ತಿದ್ದಾಳೆ. ಇನ್ನು ಪರೀಕ್ಷೆ ಗೆ ಹೋಗಲೆಂದು ಹೊರಡುತ್ತಾಳೆ. ಬಳಿಕ ರಸ್ತೆಯಲ್ಲಿ ಹೋಗಬೇಕಾದರೆ ಕಂಠಿಯನ್ನು ನೋಡುತ್ತಾಳೆ ಸ್ನೇಹಾ. ಸ್ನೇಹಾ ಕಂಠಿ ಬಳಿ ಬರುತ್ತಾಳೆ ಆ ವೇಳೆ ಕಂಠಿ ಸ್ನೇಹಾ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾನೆ. ಆ ವೇಳೆ ಸ್ನೇಹಾ ಅಲ್ಲಿಗೆ ಬಂದಿರುವುದನ್ನು ಕಂಡ ಕಂಠಿಗೆ ಶಾಕ್ ಆಗುತ್ತದೆ. ಬಳಿಕ ಸ್ನೇಹ ಅವರೇ ನೀವೇನು ಇಲ್ಲಿ ಎಂದು ಕೇಳುತ್ತಾರೆ.

ಅದಕ್ಕೆ ಸ್ನೇಹಾ ಪರೀಕ್ಷೆ ಬರೆಯಲು ಹೋಗುತ್ತಿದ್ದೇನೆ ಎಂದು ಹೇಳುತ್ತಾಳೆ. ಸ್ನೇಹಾಗೆ ಕಂಠಿ ಹೂ ಕೊಟ್ಟು ಆಲ್ ದೀ ಬೆಸ್ಟ್ ಹೇಳುತ್ತಾನೆ. ಹೂವನ್ನು ಸ್ವೀಕರಿಸಿದ ಸ್ನೇಹಾ ಪುಸ್ತಕದ ಒಳಗೆ ಇಟ್ಟುಕೊಳ್ಳುತ್ತಾಳೆ. ಇನ್ನು ಕಂಠಿ ಗೆಳೆಯ ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ನೀವು ಅಣ್ಣನನ್ನು ತಪ್ಪಾಗಿ ತಿಳಿದುಕೊಂಡು ಇದ್ದೀರಿ ಸ್ನೇಹಾ ಅಕ್ಕ ನನಗೆ ನಿಮ್ಮ ವರ್ತನೆ ಸ್ವಲ್ಪವೂ ಹಿಡಿಸಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಬೇಸರಗೊಂಡ ಸ್ನೇಹಾ ಕ್ಷಮೆಯಾಚಿಸುತ್ತಾಳೆ. ಬಳಿಕ ಅಲ್ಲಿಂದ ಹೊರಡಲು ಅನುವಾಗುತ್ತಾಳೆ. ಕಂಠಿ ಗೆಳೆಯರು ಮುಂದೆ ನಡೆದರೆ ಸ್ನೇಹಾ ಕಂಠಿ ಇಬ್ಬರು ಮಾತನಾಡುತ್ತಾ ಹಿಂದೆ ಬರುತ್ತಾರೆ.

ಕಂಠಿಗೆ ಮುತ್ತು ಕೊಡುವ ಸ್ನೇಹಾ!

ಕಂಠಿಗೆ ಮುತ್ತು ಕೊಡುವ ಸ್ನೇಹಾ!

ಬಳಿಕ ಕೊಂಚ ಎಡವಿ ಕಂಠಿ ಕೆನ್ನೆ ಮೇಲೆ ಮುತ್ತು ಕೊಡುತ್ತಾಳೆ ಸ್ನೇಹಾ. ಬಳಿಕ ಅಲ್ಲಿಂದ ತೆರಳುತ್ತಾಳೆ. ರಾತ್ರಿ ಕನಸಲ್ಲೂ ಕಂಠಿ ಕಾಣಿಸುತ್ತಾ ಇರುತ್ತಾನೆ. ಇದರಿಂದ ಎಚ್ಚೆತ್ತ ಸ್ನೇಹಾ ಬೆಡ್ ಮೇಲೆ ಕುಳಿತು ಇರುತ್ತಾಳೆ. ಸುಮಾ ಸ್ನೇಹಾಳ ಪರದಾಟ ನೋಡಿ ಆಕೆಯು ಎದ್ದು ಕೂರುತ್ತಾರೆ. ಸ್ನೇಹಾಗೆ ಸುಮಾ ಎದ್ದಿರುವುದನ್ನು ಕಂಡು ಗಲಿಬಿಲಿ ಆಗುತ್ತದೆ ಆ ವೇಳೆ ಸುಮಾ ಸ್ನೇಹಾನ ಬಳಿ ಕೇಳುತ್ತಾಳೆ. ಏನಕ್ಕಾ ಎದ್ದಿದ್ದಿಯ ಏನಾಯ್ತು. ಲವ್ ಆಗಿದೆಯಾ ಅಥವಾ ಪರೀಕ್ಷೆ ಭಯನ ಎಂದು ಕೇಳಿದಾಗ ಆಕೆಗೆ ಗದರುತ್ತಾಳೆ. ಬಳಿಕ ಇಬ್ಬರೂ ಮಲಗುತ್ತಾರೆ.

ಪ್ರೀತಿ ವಿಚಾರ ಹೇಳಲು ಮೇಷ್ಟ್ರ ಪರದಾಟ

ಪ್ರೀತಿ ವಿಚಾರ ಹೇಳಲು ಮೇಷ್ಟ್ರ ಪರದಾಟ

ಇನ್ನು ಮುರಳಿ ಮೇಷ್ಟ್ರ ತಂದೆ ತಾಯಿ ಕೆಲಸ ಬಿಟ್ಟು ಊರಿಗೆ ಹೋಗುವ ಎಂದು ಹೇಳಿದ್ದಾರೆ. ಅದನ್ನು ಯಾವುದನ್ನು ಕೇಳದೆ ಕಾಲೇಜಿಗೆ ನಾನು ಹೋಗಲೇ ಬೇಕು ಇಲ್ಲವಾದರೆ ಮಕ್ಕಳ ಭವಿಷ್ಯ ಹಾಳು ಆಗುತ್ತದೆ ಎಂದು ಹೇಳುತ್ತಾರೆ ಮೇಷ್ಟ್ರು. ಬಳಿಕ ತಂದೆ ತಾಯಿಯನ್ನು ಒಲಿಸಿಕೊಳ್ಳಲು ಶುರು ಮಾಡಿದ್ದಾನೆ. ಬಳಿಕ ಮುರಳಿ ಮಾತಿಗೆ ಒಪ್ಪಿದ ತಂದೆ ಒಳ ಹೋಗುತ್ತಾರೆ. ಪುಟ್ಟಕ್ಕನ ಮೆಸ್‌ಗೆ ಮುರಳಿ ಮೇಷ್ಟ್ರು ಬರುತ್ತಾರೆ ಮೇಷ್ಟ್ರನ್ನ ಕಂಡ ಸುಮಾ ಹೇಳುತ್ತಾಳೆ. ಎನು ಮೇಷ್ಟ್ರೇ ಹೊರಗಡೆ ನಿಂತಿದ್ದಿರ ಯಾಕೆ ಏನಾಯ್ತು? ಎಂದು ಕೇಳುತ್ತಾರೆ. ಅದಕ್ಕೆ ಮುರಳಿ ಮೇಷ್ಟ್ರು ಏನಿಲ್ಲ ಸುಮ್ಮನೆ ಎಂದು ಹೇಳುತ್ತಾರೆ.

ಸ್ನೇಹಾ ಕಂಡು ಹೆದರಿದ ಮೇಷ್ಟ್ರು

ಸ್ನೇಹಾ ಕಂಡು ಹೆದರಿದ ಮೇಷ್ಟ್ರು

ಮುರಳಿ, ಸಹನಾ ಬಳಿ ಎಲ್ಲಾ ವಿಚಾರ ಹೇಳಬೇಕು ಎಂದು ಆಲೋಚಿಸುತ್ತಾ ಇರುತ್ತಾರೆ. ಸ್ನೇಹಾ ಕೇಳುತ್ತಾಳೆ ಏನಾಯ್ತು ಮೇಷ್ಟ್ರೇ ಏನು ತಿಂಡಿ ತಿನ್ನುತ್ತಿರಾ ಎಂದು ಕೇಳಿದಾಗ ಇಡ್ಲಿ ಎಂದು ಹೇಳುತ್ತಾರೆ. ಇಡ್ಲಿ ಬಡಿಸಲು ಹೋದ ಸಹನಾ ಕೈ ಗೆ ಒಂದು ಲೆಟರ್ ಕೊಡುತ್ತಾರೆ ಮೇಷ್ಟ್ರು ಇದನ್ನು ಸ್ನೇಹಾ ನೋಡಿಬಿಡುತ್ತಾಳೆ. ಸಹನಾ ಅದನ್ನು ಟೇಬಲ್‌ನ ಡ್ರಾವರ್‌ನಲ್ಲಿ ಇಡುತ್ತಾಳೆ. ಇದನ್ನು ನೋಡಿದ ಸ್ನೇಹಾ ಸಹನಾ ಅಲ್ಲಿಂದ ಹೋದ ಬಳಿಕ ಆ ಲೆಟರ್ ಓದುತ್ತಾಳೆ. ಆ ಲೆಟರ್ ಅಲ್ಲಿ ಸಹನಾ ಅವರೇ ನಿಮ್ಮ ಬಳಿ ಮಾತನಾಡಬೇಕು ಕೆರೆಯ ಹತ್ತಿರ ಬನ್ನಿ ಎಂದು ಬರೆದಿರುತ್ತಾರೆ ಮುರಳಿ ಮೇಷ್ಟ್ರು. ಮೇಷ್ಟ್ರು, ಸಹನಾಗೆ ಬರೆದ ಪತ್ರ ಸ್ನೇಹಾಗೆ ಸಿಗುತ್ತದೆ, ಇದು ಸ್ನೇಹಾಳ ಅನುಮಾನ ಇನ್ನಷ್ಟು ಹೆಚ್ಚು ಮಾಡುತ್ತದೆ.

ಮದುವೆ ಇಷ್ಟವಿಲ್ಲ ಎಂದ ಕಂಠಿ

ಮದುವೆ ಇಷ್ಟವಿಲ್ಲ ಎಂದ ಕಂಠಿ

ಬಂಗಾರಮ್ಮ ಕಂಠಿಯ ಬಗ್ಗೆ ಕೇಳುತ್ತಾ ಇರಬೇಕಾದರೆ ಕಂಠಿ ಮಹಡಿ ಮೇಲಿಂದ ಇಳಿದು ಬರುತ್ತಾ ಇರುತ್ತಾನೆ. ಇದನ್ನು ನೋಡಿದ ಬಂಗಾರಮ್ಮ ಬಹಳ ಖುಷಿ ಪಡುತ್ತಾರೆ. ಬಾ ಕಂಠಿ ಬಾ ಏಲ್ಲಿ ವಸು ಎಂದು ಬಂಗಾರಮ್ಮ ಕೇಳುತ್ತಾರೆ. ಅದಕ್ಕೆ ವಸು ವಾಶ್ ರೂಮ್ ನಲ್ಲಿ ಇದ್ದಾಳೆ ಎಂದು ಹೇಳುತ್ತಾನೆ ಬಳಿಕ ತೊದಲುತ್ತಾ ಹೇಳುತ್ತಾನೆ ಪೂರ್ವಿ ಮದುವೆ ಆಗಲು ನನಗೆ ಇಷ್ಟ ಇಲ್ಲ ಎಂದು ಹೇಳುತ್ತಾನೆ. ಇದರಿಂದ ಕೊಂಚ ಬೇಸರ ಮಾಡಿಕೊಂಡ ಬಂಗಾರಮ್ಮ ಮಗನ ಜೊತೆ ತಾನು ಬೆಳೆದು ಬಂದ ಹಾದಿ ಇದೆಲ್ಲವನ್ನೂ ಹೇಳುತ್ತಾಳೆ. ಆದರೆ ಇದನ್ನೆಲ್ಲ ಕೇಳಲು ಕಂಠಿ ರೆಡಿ ಇಲ್ಲ. ಇನ್ನು ಮುರಳಿ ಸಹನಾ ಲವ್ ಸ್ಟೋರಿ ಇದೀಗ ಕೊಂಚ ಮಟ್ಟಿಗೆ ಸ್ನೇಹಾಗೆ ತಿಳಿದು ಹೋಗಿದೆ. ಅಮ್ಮನ ಬಳಿ ಸಹನಾ ಬಗ್ಗೆ ಹೇಳುತ್ತಾಳ ಸ್ನೇಹಾ ಎಂಬುವುದನ್ನು ಮುಂದೆ ಕಾದು ನೋಡಬೇಕಿದೆ

More from Filmibeat

English summary
Kannada serial Puttakkana Makkalu written updated on 4th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X