Don't Miss!
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ನೇಹಾಗೆ ದೊರೆ ಯಾರು ಎಂಬ ವಿಚಾರ ತಿಳಿದೇ ಹೋಯಿತಾ?
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಮುರಳಿ ಹಾಗೂ ಆತನ ಅಕ್ಕ ಚೈತ್ರ ಇಬ್ಬರು ಮಾತನಾಡುತ್ತಾ ಇದ್ದಾರೆ. ಮುರಳಿ ಸಪ್ಪಗೆ ಮುಖ ಮಾಡಿ ಇರುವುದನ್ನು ನೋಡಿದ ಚೈತ್ರಾ ಏನೋ ಮುರುಳಿ ಬಹಳ ಸಪ್ಪಗಾಗಿದ್ದೀಯಾ ಏನಾಯಿತು? ಪುಟ್ಟಕ್ಕ ಹಾಗೆ ಹೇಳಿದರು ಅಂತಾನಾ ಎಂದಾಗ ಮುರಳಿ ಹೇಳುತ್ತಾರೆ ಹಾಗೇನಿಲ್ಲ, ಸಹನಾ ಜೊತೆ ಮದುವೆ ಆದ ಬಳಿಕ ಮಾತನಾಡಬಹುದು ಎಂದು ಹೇಳುತ್ತಾನೆ ಇದನ್ನು ಕೇಳಿದ ಚೈತ್ರಾ ತಮ್ಮನ ಕಾಲು ಎಳೆಯುತ್ತ ಇರುತ್ತಾಳೆ.
ಆಗಲೇ ಚೈತ್ರಾ ಆಕೆಯ ಗಂಡನಿಗೆ ಮದುವೆ ವಿಚಾರವಾಗಿ ತಂದೆ-ತಾಯಿ ಬಳಿ ಮಾತನಾಡಲು ಹೇಳುತ್ತಾಳೆ. ಇದನ್ನು ಕೇಳಿದ ಆತ ಮುರಳಿ ತಂದೆಯ ಬಳಿ ಮಾತನಾಡುತ್ತಾನೆ. ನಮಗೆ ಆ ಕುಟುಂಬಕ್ಕೂ ಸರಿ ಬರುವುದಿಲ್ಲ. ನಾವು ಗಂಡು ಹೆತ್ತವರು ಅವರು ಹೆಣ್ಣು ಹೆತ್ತವರು ಒಂದು ಸಲ ಮನೆಯ ಬಳಿ ಬರಲಿಲ್ಲ ನನ್ನ ಬಳಿ ಮಾತುಕತೆ ನಡೆಸಲಿಲ್ಲ. ನಮಗೆ ಈ ಸಂಬಂಧ ಸೆಟ್ ಆಗಲ್ಲ ಅನ್ನಿಸುತ್ತದೆ. ಮುರಳಿಗೆ ಬೇರೆ ಮದುವೆ ಮಾಡೋಣ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಇದನ್ನು ಕದ್ದು ಚೈತ್ರ ಹಾಗೂ ಮುರಳಿ ಕೇಳಿಸಿಕೊಳ್ಳುತ್ತಾರೆ. ಆ ವೇಳೆ ಒಳಗೆ ಬಂದ ಮುರಳಿಯ ಬಾವ, ಈ ಮದುವೆ ಆದ ಹಾಗೆ ಹೆಣ್ಣಿನ ಕಡೆಯವರು ಮನೆಗೆ ಬರಬೇಕು ಎಂಬ ನಿರೀಕ್ಷೆಯಲ್ಲಿ ಇದ್ದಾರೆ ಏನು ಮಾಡುತ್ತೀರೋ ಮಾಡಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮುರಳಿಗೆ ಕೊಂಚ ಶಾಕ್ ಆದರೂ ಪುಟ್ಟಕ್ಕನ ಬಳಿ ಈ ವಿಚಾರ ಪ್ರಸ್ತಾಪ ಮಾಡುತ್ತಾನ ಎಂಬುವುದರ ಬಗ್ಗೆ ಕಾತುರತೆ ಇದೆ. ಇನ್ನೂ ಸ್ನೇಹಾ ಕಂಠಿ ನೋಡಲು ಆಸ್ಪತ್ರೆಗೆ ತೆರಳುತ್ತಾಳೆ ಆತನಿಗಾಗಿ ಕಷಾಯವನ್ನು ರೆಡಿ ಮಾಡಿ ತಂದಿರುತ್ತಾಳೆ.

ಸ್ನೇಹಾಳನ್ನು ಗಮನಿಸದ ಬಂಗಾರಮ್ಮ
ಈ ವೇಳೆ ಕಂಠಿಯನ್ನು ನೋಡಲು ಸ್ನೇಹಾ ಬಂದಿದ್ದ ಕಾರಣ ಅವರನ್ನು ಸಿದ್ಧೇಶ ಹೊರಗೆ ನಿಲ್ಲಿಸುತ್ತಾನೆ. ಬಂಗಾರಮ್ಮ ಹಾಗೂ ಕಂಠಿ ಗೆಳೆಯರು ಮಾತನಾಡುತ್ತಾ ಬರುತ್ತಿರುತ್ತಾರೆ. ಇನ್ನು ಸ್ನೇಹಾಳನ್ನು ಬಂಗಾರಮ್ಮ ನೋಡದೆ ಹೋಗುತ್ತಾರೆ. ಈ ವೇಳೆ ಸ್ನೇಹಾ ಬಳಿ ಬಂದ ಸಿದ್ದೇಶ್, ಅಕ್ಕ ಒಳಗೆ ಹೋಗಬಹುದು ಎಂದು ಡಾಕ್ಟರ್ ಹೇಳಿದರು ನೀವು ಹೋಗಿ ಎಂದು ಹೇಳುತ್ತಾನೆ ಇದನ್ನು ಕೇಳಿದ ಸ್ನೇಹಾ ಡಾಕ್ಟರ್ ಹೇಳಿದ್ರ ಎಷ್ಟು ಹೊತ್ತಿಗೆ ಎಂದು ಕೇಳುತ್ತಾಳೆ.

ವಸುಗೆ ಮಗುವಿನ ಚಿಂತೆ
ಸ್ವಲ್ಪ ಹೊತ್ತಿಗೆ ಮುಂಚೆ ಹೇಳಿದರು ಎಂದು ಹೇಳುತ್ತ ಸುಮ್ಮನಾಗುತ್ತಾರೆ. ಬಳಿಕ ಕಂಠಿಯನ್ನು ನೋಡಲು ಹೋಗುತ್ತಾಳೆ. ಬಳಿಕ ಕಂಠಿಯನ್ನು ಕಂಡು ಕಷಾಯವನ್ನು ಕುಡಿಸುತ್ತಾಳೆ. ಕಂಠಿಗೆ ಸ್ನೇಹಾ ಹಾಗೂ ಅಮ್ಮನೂ ಕಿತ್ತಾಡುವ ಹಾಗೆ ಆಗುತ್ತದೆ. ಈ ಕನವರಿಕೆಯಿಂದ ಕೊಂಚ ವಿಚಲಿತನಾದ ಕಂಠಿ ಭಯದಲ್ಲಿ ಇರುತ್ತಾನೆ. ಇತ್ತ ಕ್ಯಾಂಟೀನ್‌ಗೆ ಬಂದ ಬಂಗಾರಮ್ಮ ತಿಂಡಿ ತೆಗೆದುಕೊಳ್ಳುವ ವೇಳೆ ಅಲ್ಲೇ ಇದ್ದ ಪುಟ್ಟ ಹುಡುಗಿಗೆ ಆಕೆಯ ತಾಯಿ ಹೊಡೆಯುತ್ತಾರೆ ಇದನ್ನು ಕಂಡ ಬಂಗಾರಮ್ಮ ಆಕೆಯ ತಂದೆ ಹೇಳಿ ತಡೆಯುತ್ತಾರೆ. ಬಳಿಕ ಮಕ್ಕಳು ದೇವರು ಸಮಾನ ಎನ್ನುತ್ತಾರೆ ಇದನ್ನೆಲ್ಲ ನೋಡಿದ ವಸು ಮಾತ್ರ ಆ ಮಗುವಿನತ್ತ ಗಮನ ಹರಿಸುತ್ತ ಇರುತ್ತಾಳೆ.

ನಂಜಮ್ಮ ಮಾತು ಕೇಳುತ್ತಾನ ಚಂದ್ರು
ಇನ್ನು ನಂಜಮ್ಮ ಮಾತ್ರ ಚಂದ್ರು ಬಳಿ ವಸು ಬಗ್ಗೆ ಇಲ್ಲದಲ್ಲದನ್ನು ಹೇಳಿ ತಲೆಕೆಡಿಸಿ ಬಿಟ್ಟಿದ್ದಾಳೆ. ತರಕಾರಿ ಮಾರ್ಕೆಟ್‌ಗೆ ತೆರಳಿದ್ದ ನಂಜಮ್ಮ ಹೊತ್ತಾಯಿತು ಚಂದು ಹೋಗೋಣ ಎಂದು ಹೇಳುತ್ತಾರೆ. ಈ ವೇಳೆ ಅಲ್ಲಿಗೆ ಒಬ್ಬ ಬಲೂನ್ ಮಾರಾಟ ಮಾಡುವವರು ಬರುತ್ತಾರೆ. ಆದರೆ ಇದನ್ನು ನೋಡಿ ನಮ್ಮ ಮನೆಯಲ್ಲಿ ಯಾರೂ ಮಕ್ಕಳಿಲ್ಲ ಹೋಗಪ್ಪಾ ಎಂದು ಹೇಳುತ್ತಾರೆ. ಆ ವೇಳೆ ಒಂದು ಪುಟ್ಟ ಮಗು ಅಲ್ಲಿಗೆ ಬಂದು ಬಲೂನ್ ತೆಗೆದುಕೊಂಡು ಆಟ ಆಡುತ್ತಾ ಇರುತ್ತಾರೆ ಇದನ್ನು ನೋಡಿದ ಚಂದ್ರು ಎಲ್ಲಾ ಸರಿ ಇರುತ್ತಿದ್ದರೆ ನನಗೆ ಇಂಥ ಮುದ್ದಾದ ಮಗು ಇರುತ್ತಿತ್ತು ಎಂದು ಯೋಚನೆ ಮಾಡುತ್ತಾ ಇರುತ್ತಾನೆ ಇದನ್ನು ನೋಡಿ ನಂಜಮ್ಮ ಸದ್ಯ ಎಲ್ಲಾ ಸರಿ ಇರುತ್ತಾ ಇದ್ದರೆ ಇಷ್ಟು ಹೊತ್ತಿನಲ್ಲಿ ನಿನಗೂ ಮಗು ಆಗಿರುತ್ತಿತ್ತು. ಸರಿ ಇರಲಿ ಬಿಡು ಎಂದಾಗ ಕಿಶೋರ್ ಚಂದ್ರು ಗೆ ಕರೆ ಮಾಡುತ್ತಾನೆ.

ಕಂಠಿಯೇ ದೊರೆ ಎಂಬ ವಿಷಯ ತಿಳಿಯಿತು ಸ್ನೇಹಾಗೆ
ಇನ್ನೂ ಸ್ನೇಹಾ ಕಂಠಿ ಮೈ ಉಜ್ಜಲು ರೆಡಿಯಾಗುತ್ತಾಳೆ. ಇನ್ನು ಮಲಗಿರುವ ಕಂಠಿ ಬಳಿ ನನಗೆ ಬೇರೆ ಉಪಾಯ ಇಲ್ಲದ ಕಾರಣ ಈ ಕೆಲಸ ಮಾಡುತ್ತಾ ಇದ್ದೇನೆ. ನನ್ನ ಬೈ ಬೇಡಿ ಎಂದು ಹೇಳುತ್ತಾಳೆ. ಬಳಿಕ ಆತನ ಮೈ ಎಲ್ಲ ಉಜ್ಜುತ್ತಾ ಇರುತ್ತಾಳೆ. ಈ ವೇಳೆ ಕಂಠಿಗೆ ಜ್ಞಾನ ಇಲ್ಲದೆ ಮಲಗಿ ಇರುತ್ತಾನೆ. ಇನ್ನೂ ಸ್ನೇಹಾ ಆತನ ಎದೆಯ ಭಾಗ ಉಜ್ಜುತ್ತಾ ಇರಬೇಕಾದರೆ. ನಾನೇ ದೊರೆ ನಾನೇ ಶ್ರೀ ಎಂದು ಕನವರಿಕೆಯಲಿ ಹೇಳುತ್ತಾ ಇರುತ್ತಾನೆ. ಇನ್ನೂ ಆತನ ಎದೆಯಲ್ಲಿ ಅವ್ವ ಎಂಬ ಹಚ್ಚೆ ಬರೆದಿರುವುದನ್ನು ನೋಡಿ ಶಾಕ್ ಆಗುತ್ತಾಳೆ ಸ್ನೇಹಾ. ಇನ್ನೂ ಬಂಗಾರಮ್ಮ ಡಾಕ್ಟರ್ ಬಳಿ ಮಾತನಾಡಬೇಕು ಕಂಠಿಯನ್ನ ಮನೆಗೆ ಕರೆದುಕೊಂಡು ಹೋಗಬಹುದು ಏನು ಎಂದು ಕೇಳಿ ಎನ್ನುತ್ತಾರೆ. ಮುಂದೇನಾಗುತ್ತದೆ ನೋಡಬೇಕಿದೆ.