Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಮುರಳಿ - ಸಹನಾ ನಿಶ್ಚಿತಾರ್ಥವನ್ನು ಮುರಿದು ಹಾಕುತ್ತಾಳಾ ರಾಜಿ?
ಸಹನಾ ಹಾಗೂ ಮುರಳಿ ಮೇಷ್ಟ್ರ ನಿಶ್ಚಿತಾರ್ಥ ತಯಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಸೀರೆ ಆಯ್ಕೆ ಮಾಡುವ ವೇಳೆ ಪುಟ್ಟಕ್ಕಗೆ ಹಲವು ಸೀರೆ ಇಷ್ಟ ಆಗುತ್ತದೆ. ಆದರೆ ಕೌಸಲ್ಯ ಮಾತ್ರ ನನಗೆ ಯಾವುದು ಇಷ್ಟ ಆಗಿಲ್ಲ, ಏನು ಚೆನ್ನಾಗಿ ಇಲ್ಲ, ನಾನು.ಮೈಸೂರಿಗೆ ಹೋಗಿ ಮೈಸೂರು ಸಿಲ್ಕ್ ಸೀರೆ ತೆಗೆಯುತ್ತೇನೆ ಗಂಡಿನ ಕಡೆಯವರು ಎಂದರೆ ಗತ್ತಿನಲ್ಲಿ ಇರಬೇಕು ಎಲ್ಲಾರು ನಮ್ಮನ್ನು ನೋಡುತ್ತಾರೆ ಎಂದು ಹೇಳುತ್ತಾಳೆ.. ಇನ್ನೂ ಕೆಲವು ಸೀರೆಯನ್ನು ನೋಡಿದ ಸಹನಾಗೆ ಇಷ್ಟ ಆಗಿದ್ದನು ತೆಗೆದುಕೊಳ್ಳುತ್ತಾಳೆ. ಇನ್ನು ಸ್ನೇಹಾ ಮತ್ತು ಕಂಠಿ ಮಾತನಾಡುತ್ತಾ ಇರುವುದನ್ನು ನೋಡಿದ ಕೌಸಲ್ಯ ಆಕೆ ಸೀರೆ ತೆಗೆದುಕೊಳ್ಳುವುದಿಲ್ವಾ, ಅಲ್ಲಿ ಯಾರದ್ದೋ ಜೊತೆ ಮಾತನಾಡುತ್ತಾ ಇದ್ದಾಳಲ್ಲ ಎಂದು ಹೇಳಿದಾಗ ಪುಟ್ಟಕ್ಕ ಸ್ನೇಹಾಳನ್ನು ಕರೆದು ಸೀರೆ ಸೆಲೆಕ್ಟ್ ಮಾಡಲು ಹೇಳುತ್ತಾಳೆ. ಆದರೆ ಸ್ನೇಹಾ ನೀನು ನನಗೆ ಯಾವುದೇ ಸೀರೆಯನ್ನು ತೆಗೆದುಕೊಂಡರು ಅದನ್ನೇ ಇಟ್ಟುಕೊಳ್ಳುತ್ತೇನೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಪುಟ್ಟಕ್ಕ ನಿನಗೆ ಯಾವ ಕಲರ್ ಸೀರೆ ಬೇಕು ಎಂದು ಕೇಳುತ್ತಾರೆ. ಕಂಠಿ ಹಾಗೂ ಸ್ನೇಹಾ ಇಬ್ಬರು ಒಟ್ಟಾಗಿ ಕೇಸರಿ ಎನ್ನುತ್ತಾರೆ. ಅವರಿಬ್ಬರೂ ಒಟ್ಟಾಗಿ ಹೇಳಿದ್ದನ್ನು ನೋಡಿ ಎಲ್ಲರೂ ಅವಕ್ಕಗುತ್ತಾರೆ. ಬಳಿಕ ಕಂಠಿ ಸ್ನೇಹಾ ಅವರಿಗೆ ಕೇಸರಿ ಬಣ್ಣ ಚೆನ್ನಾಗಿ ಕಾಣುತ್ತದೆ ಅದಕ್ಕೆ ಹೇಳಿದೆ ಎಂದು ಹೇಳಿದಾಗ ಎಲ್ಲರೂ ನಗುತ್ತಾರೆ.. ಬಳಿಕ ಸ್ನೇಹಾ ಕೇಸರಿ ಸೀರೆಯನ್ನು ಕಂಠಿಗೆ ತೋರಿಸಿ ಹೇಗಿದೆ ಎಂದು ಕೇಳುತ್ತಾಳೆ.
ರಾಜಿ
ಕಾಲಿಗೆ
ಬೀಳದ
ಪುಟ್ಟಕ್ಕ;
ರಾಜಿ
ಪ್ಲಾನ್
ಫ್ಲಾಪ್!
ಕಂಠಿ ಚೆನ್ನಾಗಿ ಇದೆ ಎಂದ ಬಳಿಕ ಸ್ನೇಹಾ ಅದನ್ನು ತೆಗೆದುಕೊಳ್ಳುತ್ತಾಳೆ. ಇನ್ನು ಕೌಸಲ್ಯ ನಮ್ಮ ಕಡೆ ಒಂಭತ್ತು ಜನರಿಗೆ ಸೀರೆ ಕೊಡಬೇಕು ಎಂದು ಹೇಳಿದಾಗ ಸ್ನೇಹಾ ಹಾಗಾದರೆ ಸೀರೆಯ ಹಣವನ್ನು ನೀವೇ ಕೊಡುತ್ತೀರಾ ಎನ್ನುತ್ತಾಳೆ. ಸ್ನೇಹಾಳ ಈ ಉತ್ತರದಿಂದ ಕೌಸಲ್ಯಗೆ ಶಾಕ್ ಆಗುತ್ತದೆ. ಬಳಿಕ ಸುಮ್ಮನೆ ಇರುತ್ತಾಳೆ. ಪುಟ್ಟಕ್ಕ ಸ್ನೇಹಾಗೆ.ಮಾತನಾಡದಂತೆ ಸುಮ್ಮನಿರಲು ಹೇಳುತ್ತಾಳೆ.

ಪುಟ್ಟಕ್ಕನ ಬಳಿ ಮಾತನಾಡಲು ಹೋದ ಕೌಸಲ್ಯ
ಇನ್ನು ಕೌಸಲ್ಯ ಪುಟ್ಟಕ್ಕನ ಬಳಿ ನಾನು ನಿಮ್ಮ ಬಳಿ ಮಾತನಾಡಬೇಕು ಎಂದು ಎದ್ದು ಹೊರಗೆ ಹೋಗುತ್ತಾಳೆ. ಪುಟ್ಟಕ್ಕ ಕೂಡ ಹೊರಗೆ ಹೋಗುತ್ತಾಳೆ. ಪುಟ್ಟಕ್ಕನವರೆ ನಿಮ್ಮ ಮಗಳ ತಂದೆ ಬರುತ್ತಾರೆ ಅಲ್ವಾ, ನಿಶ್ಚಿತಾರ್ಥಕ್ಕೆ ಬರಲೇ ಬೇಕು ಇಲ್ಲ ಅಂದರೆ ಈ ನಿಶ್ಚಿತಾರ್ಥ ನಡೆಯಲ್ಲ ಎಂದು ಹೇಳಿದ ಕೌಸಲ್ಯ ಬಳಿಕ ಅಲ್ಲಿಂದ ಹೋಗುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ..

ತಂದೆ ಬಂದರೆ ಮಾತ್ರ ನಿಶ್ಚಿತಾರ್ಥ ಎಂದ ಕೌಸಲ್ಯ
ಸೀರೆ ಎಲ್ಲಾ ಸೆಲೆಕ್ಟ್ ಮಾಡಿದ ಬಳಿಕ ಮಂತ್ರ ಹೋಗುತ್ತಾರೆ. ಮನೆಗೆ ಬಂದ ಕೌಸಲ್ಯ ಅವರ ಅಳಿಯ ಸೀರೆಯ ಬಿಲ್ ಕೊಡುತ್ತಾನೆ. ಅದರಲ್ಲಿ ಮೂವತ್ತು ಸಾವಿರ ಎಂದು ಬರೆದಿರುವುದನ್ನು ನೋಡಿದ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಇದೆಲ್ಲ ನಮ್ಮ ಮಕ್ಕಳಿಗೆ ತಿಳಿಯುವುದು ಬೇಡ ಎಂದು ಹೇಳಿ ಆತನನ್ನು ಕಳುಹಿಸುತ್ತಾರೆ.. ಬಳಿಕ ಪುಟ್ಟಕ್ಕ ಮನೆಯಲ್ಲಿ ಯಾರು ಇಲ್ಲದ ವೇಳೆ ಗೋಪಾಲನಿಗೆ ಕರೆ ಮಾಡುತ್ತಾರೆ..

ಗೋಪಾಲನಿಗೆ ಕರೆ ಮಾಡಿದ ಪುಟ್ಟಕ್ಕ
ನಿಶ್ಚಿತಾರ್ಥ ನಡೆಯುವ ವೇಳೆ ಬಾರಯ್ಯ ಎಂದು ಪುಟ್ಟಕ್ಕ ಕೇಳಿಕೊಳ್ಳುತ್ತಾಳೆ. ಆದರೆ ಗೋಪಾಲ ಒಪ್ಪದೇ ಇದ್ದದ್ದನ್ನು ಕಂಡು ಅಳುತ್ತಾಳೆ. ಗೋಪಾಲನಿಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಎದುರಿಗೆ ರಾಜೀ ಇದ್ದಿದ್ದರಿಂದ ಏನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನೆ ಇರುತ್ತಾನೆ.

ಪುಟ್ಟಕ್ಕನ ಬಳಿ ನಾಟಕೀಯವಾಗಿ ಮಾತನಾಡಿದ ಗೋಪಾಲ
ಬಳಿಕ ರಾಜಿಗೆ ಗೊತ್ತಿಲ್ಲದ ಹಾಗೆ ಬರುತ್ತೇನೆ ಎಂದು ಗೋಪಾಲ ಪುಟ್ಟಕ್ಕನಿಗೆ ತಿಳಿಸಿ ಫೋನ್ ಇಡುತ್ತಾನೆ. ಇದನ್ನೆಲ್ಲ ಕೇಳಿದ ರಾಜಿಗೆ ಖುಷಿ ಆಗುತ್ತದೆ ಪುಟ್ಟಕ್ಕಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಅಲ್ಲಿಂದ ಹೋಗುತ್ತಾಳೆ. ಮುಂದೆ ಗೋಪಾಲ ಏನು ಮಾಡುತ್ತಾನೆ ಕಾದು ನೋಡಬೇಕಿದೆ.