ಪುಟ್ಟಕ್ಕನ ಮನೆಗೆ ಎಂಟ್ರಿ ಕೊಟ್ಟ ಕಾಳಿ: ಮದುವೆ ಮುರಿಯುತ್ತಾನಾ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಪುಟ್ಟಕ್ಕನ ಮನೆಗೆ ಆಗಮಿಸಿದ ಗಂಡಿನ ಕಡೆಯವರಿಗೆ ಸಹನಾಳನ್ನು ಕಂಡು ಬಹಳ ಖುಷಿಯಾಗಿದೆ. ಗಂಡಿಗೂ ಸಹನಾ ಇಷ್ಟವಾಗುತ್ತಾಳೆ. ಆದರೆ ಸಹನಾಗೆ ಈ ಸಂಬಂಧ ಚೂರು ಇಷ್ಟವಿಲ್ಲ. ಇತ್ತ ಸ್ನೇಹಾಗೆ ಗಂಡಿನ ಕಡೆಯವರ ಬಳಿ ಹಲವಾರು ಪ್ರಶ್ನೆ ಕೇಳುತ್ತಾರೆ. ಇತ್ತ ಮುರಳಿ ಸರ್ ಸಹಾನಾಳ ಗುಂಗಲ್ಲೇ ಇದ್ದಾರೆ. ನಾನು ಸಹನಾ ಗೆ ಪ್ರೀತಿ ಹೇಳಬೇಕಿತ್ತು ಎಂದೆಲ್ಲಾ ಅಂದುಕೊಳ್ಳುತ್ತಿದ್ದೆ ಆದರೆ ಕೈ ಮೀರಿ ಹೋಗಿದೆ ಎಂದೆಲ್ಲ ತಲೆ ಕೆಡಿಸಿಕೊಂಡಿದ್ದಾರೆ.

ಇತ್ತ ಶಾಂತಾ ಗಂಡನ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದೆ. ಆತನ ಪರಿಸ್ಥಿತಿ ಕಂಡು ಆತ ಬದುಕುವುದೇ ಅನುಮಾನ ಅನ್ನುವ ರೀತಿ ಕಾಣುತ್ತಿದೆ. ಇದನ್ನು ಪುಟ್ಟಕ್ಕಗೆ ತಿಳಿಸಬೇಕು ಎಂದು ಕೊಂಡು ಕರೆ ಮಾಡುತ್ತಾಳೆ. ಆದರೆ ಪುಟ್ಟಕ್ಕ ಮದುವೆ ಮಾತುಕತೆಯಲ್ಲಿ ಇದ್ದ ಕಾರಣ ಕರೆಯನ್ನು ಕಟ್ ಮಾಡುತ್ತಾಳೆ ಆದರೆ ಇದನ್ನು ಕಂಡ ಶಾಂತಕ್ಕ ಸುಮ್ಮನಾಗುತ್ತಾಳೆ. ಇದೇ ಸಮಯದಲ್ಲಿ ಪುಟ್ಟಕ್ಕನ ಮಗಳಿಗೆ ಗಂಡಿನ ಕಡೆಯವರು ಬಂದ್ರು ಎಂದು ಕಾಳೀ ಕೋಪದಲ್ಲಿ ಬುಸುಗುಟ್ಟುತ್ತಾ ಬರುತ್ತಿದ್ದಾನೆ.

ಅಕ್ಕ-ಬಾವ ಈ ಬಗ್ಗೆ ನನಗೆ ತಿಳಿಸದೆ ಯಾವೊಂದು ಕೆಲಸ ಮಾಡಲ್ಲ ಆದರೆ ಈ ಬಾರಿ ಇಷ್ಟು ದೊಡ್ಡ ವಿಚಾರ ನನ್ನಿಂದ ಮುಚ್ಚಿಟ್ಟಿದ್ದಾರಲ್ಲ ಎಂದು ಕೋಪಾಗೊಂಡಿದ್ದಾನೆ ಕಾಳಿ. ಹೇಗಾದರೂ ಸಹನಾ ಮದುವೆ ನಿಲ್ಲಿಸಲೇ ಬೇಕು ಎಂದು ಬೈಕ್ ನಲ್ಲಿ ಶರವೇಗದಲ್ಲಿ ಬರುತ್ತಿದ್ದಾನೆ.

ಮಗನ ಮೇಲೆ ಅನುಮಾನ ಪಡುತ್ತಿರುವ ನಂಜವ್ವ

ಮಗನ ಮೇಲೆ ಅನುಮಾನ ಪಡುತ್ತಿರುವ ನಂಜವ್ವ

ಇತ್ತ ನಂಜವ್ವ ಮಗ ಚಂದ್ರು ಇತ್ತ ಹೋಗುತ್ತಿದ್ದಾನೆ ಎಂದು ತಿಳಿದುಕೊಳ್ಳುತ್ತಿದ್ದಾಳೆ. ಈ ವೇಳೆ ಚಂದ್ರುಗೆ ಕರೆ ಮಾಡುತ್ತಾಳೆ ನಂಜವ್ವ ಕರೆ ರಿಸೀವ್ ಮಾಡಿದ ಚಂದ್ರು ಹಲೋ ಅವ್ವ ಎಂದು ಹೇಳುತ್ತಾನೆ ಆಗ ನಂಜವ್ವ ಹಲೋ ಚಂದ್ರು ಎಲ್ಲಿದಿಯಪ್ಪ ಎಂದು ಕೇಳುತ್ತಾಳೆ. ಅದಕ್ಕೆ ಚಂದ್ರು ತೊದಲುತ್ತಾ ಇನ್ನೇನು ಕೋರ್ಟ್ ಹತ್ತಿರ ಬಂದೆಯಮ್ಮ ಯಾಕಮ್ಮ ಎಂದು ಹೇಳುತ್ತಾನೆ ಅದಕ್ಕೆ ನಂಜವ್ವ ಕೋರ್ಟ್‌ಗೆ ಹೋಗಿ ಬಳಿಕ ಹಾಗೆ ಗುಡಿಯ ಹತ್ತಿರ ಹೋಗಿ ಬರುತ್ತೀಯಾ ಅಂದುಕೊಂಡೆ ಎಂದು ಹೇಳುತ್ತಾಳೆ. ಅದಕ್ಕೆ ಚಂದ್ರು ಇಲ್ಲಾ ಇಲ್ಲಾ ಅದಕ್ಕೆಲ್ಲ ಈಗ ಟೈಮ್ ಇಲ್ಲಮ್ಮ ನಾನು ಆಮೇಲ್ ಮಾಡುತ್ತೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾನೆ.

ನಂಜವ್ವಗೆ ಮಗನ ಮೇಲೆ ಸಿಟ್ಟು

ನಂಜವ್ವಗೆ ಮಗನ ಮೇಲೆ ಸಿಟ್ಟು

ಇತ್ತ ನಂಜವ್ವ ಕೋಪದಿಂದ ಸುಳ್ಳು ಹೇಳುವುದನ್ನು ಬೇರೆ ಕಲಿತುಕೊಂಡು ಬಿಟ್ಟಿದ್ದಾನೆ. ಈಗ ಎಲ್ಲಿಗೆ ಹೋಗುತ್ತಿದ್ದಾನೆ ಎಂದು ಮಗಳನ್ನು ಕೇಳಿದಾಗ ಊರಿಂದ ಆಚೆ ಹೋಗುತ್ತಿದ್ದಾನೆ ಅಣ್ಣ ಎಂದು ಹೇಳುತ್ತಾಳೆ. ಅದಕ್ಕೆ ನಂಜವ್ವ ಹೇಳುತ್ತಾಳೆ ಏನು ಊರಿಂದ ಆಚೆ ಹೋಗವ್ರಾ ಅವನಿಗೇನು ಊರಿಂದ ಆಚೆ ಕೆಲ್ಸಾ ಎಂದು ಯೋಚಿಸುತ್ತಿರುತ್ತಾಳೆ. ಇತ್ತ ಸುಮಾ ಹಾಗೂ ಅವರ ಗೆಳೆಯರು ಮ್ಯಾಚ್ ಅಲ್ಲಿ ಆಡಲೆ ಬೇಕು ಎಂದು ಓದಿಕೊಂಡು ಪಕ್ಕದ ಊರಿಗೆ ತೆರಳುತ್ತಾರೆ. ಅಷ್ಟರಲ್ಲಿ ಆಗಲೇ ಕೊನೆಯ ಬಾರಿ ಇವರ ತಂಡವನ್ನು ಮೈಕ್ ನಲ್ಲಿ ಹೇಳುತ್ತಿದ್ದರು. ಓಡಿ ಬಂದ ಸುಮಾ ಮ್ಯಾಮ್ ಎಂದು ಕರೆಯುತ್ತಾಳೆ. ಅದಕ್ಕೆ ಅವರು ಕೇಳುತ್ತಾರೆ ಯಾಕಿಷ್ಟು ತಡ ಎನಯ್ತು ಎಂದು ಕೇಳುತ್ತಾರೆ. ಬಳಿಕ ಅವರ ತಂಡವನ್ನು ನೊಂದಾಯಿಸುತ್ತಾರೆ.

ಕುಡಿದು ಪುಟ್ಟಕ್ಕನ ಮನೆಗೆ ಬರುವ ಕಾಳಿ

ಕುಡಿದು ಪುಟ್ಟಕ್ಕನ ಮನೆಗೆ ಬರುವ ಕಾಳಿ

ರಾಜಿ ಬಾರ್ ಬಳಿ ಬಂದ ಕಾಳಿ ಕೋಪದಿಂದ ಇರುತ್ತಾನೆ ಆ ಸಮಯದಲ್ಲಿ ಆತನ ಸಹಚರ ಮೋಸ ಮಾಡುತ್ತಿದ್ದಾರೆ ಕಣೋ ನಿನಗೆ ಎಲ್ರುನೂ ಕೂರಿಸಿಕೊಂಡು ಅಲ್ಲಿ ಮಾತು ಕತೆ ನಡೆಸುತ್ತಿದ್ದಾರೆ. ನಿನ್ನ ಕೈಗೆ ದೊಡ್ಡ ಚಿಪ್ಪು ಕೊಡುತ್ತಾರೆ. ಎಂದು ಹೇಳಿದಾಗ ಒಂದು ಬಾಟಲ್ ಮದ್ಯಪಾನ ಮಾಡಿ ಪುಟ್ಟಕ್ಕನ ಮನೆಗೆ ಎಂಟ್ರಿ ನೀಡುತ್ತಾನೆ ಕಾಳಿ. ಮನೆ ಒಳಗೆ ಬಂದು ಏಯ್ ನಿಲ್ಲಿಸಯ್ಯೋ ಎಂದು ಹೇಳುತ್ತಾನೆ.

ಉಗ್ರರೂಪ ತಾಳಿದ ಪುಟ್ಟಕ್ಕ

ಉಗ್ರರೂಪ ತಾಳಿದ ಪುಟ್ಟಕ್ಕ

ಕರೆಯನ್ನು ಸ್ವೀಕರಿಸಿದ ಪುಟ್ಟಕ್ಕ ಆಕಡೆಯಿಂದ ಆಳುತ್ತಿರುವ ಶಾಂತಳ ಧ್ವನಿ ಕೇಳಿಸುತ್ತದೆ. ಪುಟ್ಟಕ್ಕ ನನ್ನ ಗಂಡ ತುಂಬಾ ಸೀರಿಯಸ್ ಆಗಿದ್ದಾನೆ. ಡಾಕ್ಟರ್ ಆ ಕಡೆ ಈ ಕಡೆ ಓಡಾಡ್ತಾ ಇದ್ದಾರೆ. ಒಂದು ಗೊತ್ತಾಗುತ್ತಿಲ್ಲ ಎಂದು ಹೇಳಿದಾಗ ಪುಟ್ಟಕ್ಕ ಸ್ತಬ್ಧ ಆಗುತ್ತಾಳೆ. ಬಳಿಕ ಸ್ನೇಹಾ ಕರೆಯನ್ನು ಲೋಡ್ ಸ್ಪೀಕರ್ ಗೆ ಹಾಕುತ್ತಾಳೆ. ಪುಟ್ಟಕ್ಕ ಬಾರ್ ನಲ್ಲಿ ಕಳ್ಳಬಟ್ಟಿ ಮಾರುತ್ತಿದ್ದಾರೆ. ಇದರಿದಲೆ ನನ್ನ ಗಂಡನಿಗೆ ಈ ಪರಿಸ್ಥಿತಿ ಬಂದಿದೆ ಎಂದಾಗ ಪುಟ್ಟಕ್ಕ ಉಗ್ರ ರೂಪ ತಾಳುತ್ತಾಳೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

English summary
Kannada serial Puttakkana Makkalu written updated on 5th July.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X