ಸ್ನೇಹಾ ಬಳಿ ತನ್ನ ಸಹನಾ ಪ್ರೀತಿ ರಹಸ್ಯ ಬಿಚ್ಚಿಟ್ಟ ಮುರಳಿ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಇದೀಗ ದಿನಕ್ಕೊಂದು ಆಸಕ್ತಿಕರ ತಿರುವನ್ನು ನೀಡುತ್ತಾ ಬಂದಿದೆ. ಟೈಲರಿಂಗ್ ಕ್ಲಾಸ್‌ಗೆ ತೆರಳುತ್ತಿದ್ದ ಸಹನಾ ಹಾಗೂ ಆಕೆಯ ಗೆಳತಿ ಮಾತನಾಡುತ್ತಾ ಇರುತ್ತಾರೆ. ಸ್ವಲ್ಪ ಹೊತ್ತು ಆದ ಬಳಿಕ ಸಹನಾ ತನ್ನದೇ ಲೋಕದಲ್ಲಿ ಕಳೆದು ಹೋಗಿ ಬಿಡುತ್ತಾಳೆ. ಇದನ್ನೆಲ್ಲ ನೋಡಿದ ಆಕೆಯ ಗೆಳತಿ ಜೋರಾಗಿ ಕರೆಯುತ್ತಾಳೆ. ಸಹನಾ ನಿನ್ನನ್ನು ಆವಾಗಿನಿಂದ ಕರೆಯುತ್ತಿದ್ದೇನೆ ಏನಾಯ್ತು ನಿನಗೆ ? ಎಂದು ಕೇಳುತ್ತಾಳೆ.

ಬಳಿಕ, ಮೆಸ್ ಬಳಿ ಬಂದಾಗ ಸ್ನೇಹಾ ನನ್ನನ್ನು ಬದಿಗೆ ಕರೆದು ಕೇಳಿದಳು, ಟೈಲರಿಂಗ್ ಕ್ಲಾಸ್‌ಗೆ ಹೋಗುವಾಗ ಯಾರಾದ್ರೂ ಶಾಲಾ ಶಿಕ್ಷಕರು ಅಥವಾ ಯಾರಾದರೂ ಸಹನಾಗೆ ಕಿರಿಕಿರಿ ಮಾಡುತ್ತಿದ್ದಾರಾ ಎಂದೆಲ್ಲ ಕೇಳಿದಳುಎಂದು ಹೇಳುತ್ತಾಳೆ. ಆದರೆ ಇದ್ಯಾವುದನ್ನೂ ಸೀರಿಯಸ್ ಆಗಿ ಗಣನೆಗೆ ತೆಗೆದುಕೊಳ್ಳದ ಸಹನಾ. ಆಕೆ ಸುಮ್ಮನೆ ನಿನ್ನ ಬಳಿ ಕೇಳಿರುತ್ತಾಳೆ. ನೀನು ಕಡ್ಡಿಯನ್ನು ಗುಡ್ಡದ ರೀತಿ ಮಾಡುತ್ತಿದ್ದೀಯ ಎಂದು ಹೇಳುತ್ತಾಳೆ ಬಳಿಕ ಮೇಷ್ಟ್ರು ಬಳಿ ಮಾತನಾಡಲು ತೆರಳುತ್ತಾಳೆ ಸಹನಾ.

ಪ್ರೀತಿಸುತ್ತೇನೆ ಎಂದ ಸಹನಾ

ಪ್ರೀತಿಸುತ್ತೇನೆ ಎಂದ ಸಹನಾ

ಮೇಷ್ಟ್ರು ಕೆರೆ ಬಳಿ ನಿಂತುಕೊಂಡು ಇರುತ್ತಾರೆ. ಬಳಿಕ ಕಾಲೇಜಿಗೆ ಕರೆ ಮಾಡಿ ನಾನು ಕಾಲೇಜಿಗೆ ಬರುವುದು ಕೊಂಚ ತಡ ಆಗುತ್ತದೆ. ಎಂದು ಹೇಳುತ್ತಾರೆ. ಇನ್ನು ಸಹನಾ ಬರುತ್ತಿರುವುದನ್ನು ಕಂಡ ಮುರಳಿ ಖುಷಿ ಪಡುತ್ತಾರೆ. ಬಳಿಕ ಸಹನಾ ಹತ್ತಿರ ಬರುತ್ತಾಳೆ ಸಹನಾ ಬಳಿ ಹೇಳುತ್ತಾರೆ. ಸಹನಾ ನನಗೆ ಈಗಾಗಲೇ ಹುಡುಗಿಯನ್ನು ಮನೆಯವರು ಹುಡುಕಿದ್ದಾರೆ ಎಂದು ಹೇಳಿದಾಗ ಸಹನಾ ಕಣ್ಣುಗಳು ನೀರಲ್ಲಿ ಮಿಂದು ಹೋಗಿರುತ್ತದೆ. ಇನ್ನು ಸಹನಾ ಹೇಳುತ್ತಾಳೆ ಮೇಷ್ಟ್ರೇ ನಿಮ್ಮನ್ನು ನಾನು ಮನಸಾರೆ ಪ್ರೀತಿಸುತ್ತಿದ್ದೇನೆ ನೀವೇ ಹೀಗೆ ಹೇಳಿದರೆ ಹೇಗೆ? ಎಂದೆಲ್ಲ ಹೇಳಿ ಅಳುತ್ತಾಳೆ.

ಸಹನಾಗೆ ಸಮಾಧಾನ ಹೇಳಿದ ಮೇಷ್ಟ್ರು

ಸಹನಾಗೆ ಸಮಾಧಾನ ಹೇಳಿದ ಮೇಷ್ಟ್ರು

ಸಹನಾಳನ್ನು ಸಂತೈಸಿದ ಮೇಷ್ಟ್ರು ಹೇಳುತ್ತಾರೆ ಏನಾಯಿತು ಎಂದು ಅಳುತ್ತಿದ್ದಿಯಾ ನಾನು ನಿನ್ನನ್ನು ಮನಸಾರೆ ಪ್ರೀತಿ ಮಾಡುತ್ತಿದ್ದೇನೆ. ಅಪ್ಪ ಅಮ್ಮ ಒಪ್ಪದಿದ್ದರೆ ನೀನು ನನ್ನ ಜೊತೆ ಬರಲು ತಯಾರಿದ್ದಿಯಾ ಎಂದು ಸುಮ್ಮನೆ ಕೇಳುತ್ತಾರೆ ಅದಕ್ಕೆ ಸಹನಾ ಮೇಷ್ಟ್ರೆ ಅಪ್ಪ ಅಮ್ಮ ಒಪ್ಪದಿದ್ದರೆ ನಾನು ನಿಮ್ಮನ್ನು ಮದುವೆಯಾಗುವುದಿಲ್ಲ ಎಂದಾಗ ಮೇಷ್ಟ್ರು ಹೇಳುತ್ತಾರೆ ಸಹನಾ ಅವರೇ ಮೊದಲಿಗೆ ನಾನು ಸ್ನೇಹಾ ಬಳಿ ಮಾತನಾಡುತ್ತೇನೆ ಬಳಿಕ ನಿಮ್ಮ ಮನೆಯಲ್ಲಿ ಮಾತನಾಡುತ್ತೇನೆ ಎಂದು ಹೇಳುತ್ತಾರೆ ಇದರಿಂದ ಖುಷಿಗೊಂಡ ಸಹನಾ ಮೇಷ್ಟ್ರು ಕೈ ಹಿಡಿಯುತ್ತಾಳೆ. ಬಳಿಕ ಅಲ್ಲಿಂದ ಮನೆಗೆ ತೆರಳುತ್ತಾಳೆ.

ಖಡಕ್ ವಾರ್ನಿಂಗ್ ಕೊಟ್ಟ ಸ್ನೇಹಾ

ಖಡಕ್ ವಾರ್ನಿಂಗ್ ಕೊಟ್ಟ ಸ್ನೇಹಾ

ಸಹನಾ ಹೋದ ಬಳಿಕ ಅಲ್ಲಿಗೆ ಸ್ನೇಹಾ ಬರುತ್ತಾಳೆ. ಮೇಷ್ಟ್ರು ಬಳಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಸಾಕಷ್ಟು ಜನ ಪೋರ್ಕಿಗಳು ನಮ್ಮ ಮೆಸ್‌ಗೆ ಬಂದಿದ್ದಾರೆ ಅದಕ್ಕೆ ತಕ್ಕ ಹಾಗೆ ಅವರ ಬೆಂಡೆತ್ತಿದ್ದೇನೆ. ನಿಮ್ಮನ್ನು ಒಳ್ಳೆ ವ್ಯಕ್ತಿ ಎಂದುಕೊಂಡಿದ್ದೆ ಆದರೆ ನೀವು ಇಂಥ ಕೆಲಸ ಮಾಡುತ್ತೀರಿ ಎಂದುಕೊಂಡಿರಲಿಲ್ಲ. ನಮ್ಮ ಅಕ್ಕ ತುಂಬಾ ಇನೋಸೆಂಟ್ ಆಕೆಗೆ ಈ ಪತ್ರ ಸಿಗಲಿಲ್ಲ. ಸಿಕ್ಕಿದ್ರೆ ಬಹಳ ಭಯ ಪಟ್ಟುಕೊಳ್ಳುತ್ತಿದ್ದಳು. ಇಷ್ಟೆಲ್ಲ ಹೇಳಿದಾಗ ಮುರಳಿಗೆ ತಡೆದುಕೊಳ್ಳಲು ಆಗುವುದಿಲ್ಲ ಆತ ತಾನು ಸಹನಾನ ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ.

ವಸು ಬಳಿ ಮನದ ಮಾತು ಹೇಳುತ್ತಿರುವ ಕಂಠಿ

ವಸು ಬಳಿ ಮನದ ಮಾತು ಹೇಳುತ್ತಿರುವ ಕಂಠಿ

ಇನ್ನು ಕಂಠಿ ಹಾಗೂ ವಸು ಮಾತನಾಡುತ್ತಾ ಇರುತ್ತಾರೆ. ವಸು ಹೇಳುತ್ತಾಳೆ ನೀನು ಅಮ್ಮನ ಬಳಿ ಮಾತನಾಡುವ ಮೊದಲು ನನ್ನ ಬಳಿ ಹೇಳಬಾರದಿತ್ತಾ ಯಾಕೆ ಹೇಳಲಿಲ್ಲ ಎಂದಾಗ ಹೇಳಲು ಬಂದಾಗ ನೀನು ಸ್ನಾನಕ್ಕೆ ಹೋಗಿದ್ದೆ ಅದಕ್ಕೆ ಹೇಳಲಿಲ್ಲ ಎನ್ನುತ್ತಾನೆ. ಬಳಿಕ ಕಂಠಿ ಬಾವನ ಮೇಲೆ ಸಿಟ್ಟು ಆಗಿರುವುದು ತಪ್ಪು. ನನ್ನಿಂದಾಗಿ ನೀವಿಬ್ಬರೂ ಯಾಕೆ ಕಿತ್ತಾಟ ನಡೆಸುತ್ತಿದ್ದೀರ ಎಂದಾಗ ವಸು ಮಾತ್ರ ತನ್ನ ಹಠ ಬಿಡಲು ತಾಯಾರಿಲ್ಲ ಮುಂದೆ ಏನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 5th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X