For Quick Alerts
  ALLOW NOTIFICATIONS  
  For Daily Alerts

  ಪೂರ್ವಿ ಮನಸ್ಸು ಒಡೆದ ಕಂಠಿ: ಸುಮ್ಮನೆ ಬಿಡುತ್ತಾಳಾ ಪೂರ್ವಿ

  By ಪೂರ್ವ
  |

  'ಪುಟ್ಟಕ್ಕನ ಮಕ್ಕಳು' ನೋಡುಗರಿಗೆ ಮುದ ನೀಡುತ್ತಿದೆ. ಬಾವಿ ಕಟ್ಟೆ ಬಳಿ ಮುರಳಿ ಮೇಷ್ಟ್ರು ಕೊಟ್ಟ ಗಿಫ್ಟ್ ಅನ್ನು ಓಪನ್ ಮಾಡದೇ ಭಯದಿಂದ ಅದನ್ನೇ ನೋಡುತ್ತಾ ನಿಲ್ಲುತ್ತಾಳೆ ಸಹನಾ. ಆ ವೇಳೆ ಬಂದ ಪುಟ್ಟಕ್ಕ ಏನಮ್ಮ ಸಹನಾ ಇಲ್ಲಿ ನಿಂತಿದ್ದಿಯಾ ಮೆಸ್ ಬಳಿ ಹೋಗು ಎಂದಾಗ ಭಯಗೊಂಡ ಸಹನಾ ಗಿಫ್ಟ್ ಅನ್ನು ಬಾವಿ ದಂಡೆಯಲ್ಲಿ ಇಡುತ್ತಾಳೆ ಅಮ್ಮ ಹೋದ ಬಳಿಕ ಅದನ್ನು ತೆಗೆದುಕೊಳ್ಳಬೇಕು ಅನ್ನುವಷ್ಟ್ರಲ್ಲಿ ಆ ಗಿಫ್ಟ್ ಬಾವಿಗೆ ಬೀಳುತ್ತದೆ.

  ಇದನ್ನು ಕಂಡ ಸಹನಾ, 'ಅಯ್ಯಯ್ಯೋ ಗಿಫ್ಟ್ ಬಾವಿಗೆ ಬಿದ್ದು ಹೋಯಿತಲ್ಲಾ' ಎಂದುಕೊಳ್ಳುತ್ತಾಳೆ. ಇನ್ನು ಮಂಜಮ್ಮನಿಗೆ ರಾಜೇಶ್ವರಿ ಕರೆ ಮಾಡಿ, 'ಏನಾದ್ರು ಸಮಾಚಾರ ಇದೆಯಾ ಪುಟ್ಟಕ್ಕ ಎಲ್ಲಿದ್ದಾಳೆ. ಅವಳನ್ನು ಭೇಟಿ ಆಗು ಅವಳು ಹೇಗಿದ್ದಾಳೆ ಎಂದೆಲ್ಲಾ ಹೇಳು ಎಂದು ಹೇಳುತ್ತಾಳೆ. ಆಗ ಮಂಜಮ್ಮ ಹೇಳುತ್ತಾಳೆ ಪುಟ್ಟಕ್ಕನ ವಿಚಾರ ಎಲ್ಲಾ ನಿಮ್ಮ ಬಳಿ ಹೇಳುತ್ತೇನೆ ಎಂದು ಮಂಜಮ್ಮ ಹೇಳುವುದನ್ನು ಶಾಂತ ಕೇಳಿಸಿಕೊಳ್ಳುತ್ತಾಳೆ.

  ಪುಟ್ಟಕ್ಕನ ಮಕ್ಕಳು: ಕ್ಯಾರೆಕ್ಟರ್‌ಗೆ ಕ್ಯಾರೆಟ್ ಎಂದು ಬರೆದ ದೊರೆ, ಮುಂಗುಸಿಯಿಂದ ಸಿಕ್ಕಿ ಬೀಳುತ್ತಾನಾ?ಪುಟ್ಟಕ್ಕನ ಮಕ್ಕಳು: ಕ್ಯಾರೆಕ್ಟರ್‌ಗೆ ಕ್ಯಾರೆಟ್ ಎಂದು ಬರೆದ ದೊರೆ, ಮುಂಗುಸಿಯಿಂದ ಸಿಕ್ಕಿ ಬೀಳುತ್ತಾನಾ?

  ಶಾಂತಾಳನನ್ನು ಕಂಡು ಮಂಜಮ್ಮ ಒಳ ಹೋಗುತ್ತಾಳೆ. ಶಾಂತ ಮನದಲ್ಲೇ ಯೋಚನೆ ಮಾಡುತ್ತಾಳೆ ಪುಟ್ಟಕ್ಕನ ವಿಚಾರ ಹೇಳುತ್ತೇನೆ ಎಂದು ಹೇಳಿದಳು ಯಾರ ಬಳಿ ಇರಬಹುದು ಎಂದು ಯೋಚಿಸುತ್ತಾ ಇರುತ್ತಾಳೆ. ಇತ್ತ ಕಂಠಿ, ಪೂರ್ವಿಯನ್ನು ಕರೆದುಕೊಂಡು ಹೋಗಲು ಆಕೆಯ ಮನೆಗೆ ಬಂದಿರುತ್ತಾನೆ. ಇದೀಗ ಪೂರ್ವಿ ತಂದೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಮಾಡಿ ಕಂಠಿ ಬಾಯಿ ಬಿಡಿಸುತ್ತಿದ್ದಾನೆ.

  ಕಂಠಿ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿರುವ ಪೂರ್ವಿ ತಂದೆ

  ಕಂಠಿ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿರುವ ಪೂರ್ವಿ ತಂದೆ

  ನಿಮಗೆ ಒಂದು ದಿನಕ್ಕೆ ಒಂದು ಕೋಟಿಗೂ ಹೆಚ್ಚು ಹಣ ಬರುತ್ತದೆ ಅಲ್ವಾ. ಬಡ್ಡಿಗೆ ದುಡ್ಡು ತೆಗೆದುಕೊಳ್ಳಲು ಯಾರು ಹೋಗುತ್ತಾರೆ ಎಂದೆಲ್ಲಾ ಪ್ರಶ್ನೆ ಮಾಡುತ್ತಾನೆ. ಈ ಪ್ರಶ್ನೆಗಳಿಗೆ ಮನಸಿಲ್ಲದ ಮನಸ್ಸಿನಿಂದ ಕಂಠಿ ಉತ್ತರವನ್ನು ನೀಡುತ್ತಾನೆ. ಅಷ್ಟರಲ್ಲಿ ಪೂರ್ವಿ ಹೊರಗಡೆ ಹೋಗಲು ಹೊರಟು ನಿಲ್ಲುತ್ತಾಳೆ. ಬಳಿಕ ಕಂಠಿ ಪೂರ್ವಿಯನ್ನು ಕರೆದುಕೊಂಡು ಹೋಗುತ್ತಾನೆ.

  ಕಂಠಿ ಮೇಲೆ ಪೂರ್ವಿ ಗೆ ಸಖತ್ ಲವ್

  ಕಂಠಿ ಮೇಲೆ ಪೂರ್ವಿ ಗೆ ಸಖತ್ ಲವ್

  ಕಂಠಿಗೆ ನನ್ನ ಮೇಲೆ ಬಹಳ ಪ್ರೀತಿ ಆಗಿದೆ ಎಂದು ಖುಷಿ ಪಟ್ಟ ಪೂರ್ವಿ, 'ನೀವು ಯಾವತ್ತೂ ನನಗೆ ಐ ಲವ್ ಯು ಅಂತ ಹೇಳಲೇ ಇಲ್ಲ ಎಂದು ಹೇಳುತ್ತಾಳೆ ಅದಕ್ಕೆ ಕಂಠಿ ಹೇಳುತ್ತಾನೆ, ಪೂರ್ವಿ ನನಗೆ ನಿನಂದರೆ ಇಷ್ಟ ಇಲ್ಲ. ನಾನು ಯಾವತ್ತು ನಿನ್ನ ಆ ದೃಷ್ಟಿ ಅಲ್ಲಿ ನೋಡಿಯೇ ಇಲ್ಲ. ನೀನು ಅಮ್ಮ ಕೂಡಿಕೊಂಡು ಈ ರೀತಿ ಮಾಡಿದ್ದೀರಾ ನಾನು ನಿನ್ನನ್ನು ಇಷ್ಟ ಪಡುತ್ತಿಲ್ಲ ಪೂರ್ವಿ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಪೂರ್ವಿ ಗೆ ಸಿಡಿಲು ಬಡಿದ ಹಾಗೆ ಆಗುತ್ತದೆ.

  ಮುಂದೇನು ಮಾಡುತ್ತಾಳೆ ಪೂರ್ವಿ

  ಮುಂದೇನು ಮಾಡುತ್ತಾಳೆ ಪೂರ್ವಿ

  ಇಷ್ಟರಲ್ಲಿ ನಿಶ್ಚಿತಾರ್ಥ ಇಟ್ಟುಕೊಂಡು ಈಗ ಈ ವಿಚಾರ ಹೇಳುತ್ತಿದ್ದಾನಲ್ಲಾ ಎಂಬ ಕೋಪ ಇತ್ತು. ಇದನೆಲ್ಲ ನೋಡುತ್ತಿದ್ದ ಸ್ನೇಹಾ ಕಂಠಿ ಬಳಿ ಬಂದು ಶ್ರೀ ನೀವಿಬ್ಬರೂ ಇಲ್ಲಿ ಎನು ಮಾಡುತ್ತಾ ಇದ್ದೀರಾ ಏನಾಯ್ತು ಎಂದು ಕೇಳುತ್ತಾಳೆ. ಸ್ನೇಹಾಳನ್ನು ನೋಡಿ ಕಂಠಿ ಶಾಕ್ ಆದರೆ ಪೂರ್ವಿ ಮಾತ್ರ ಸರಿಯಾಗಿ ಉರಿದುಕೊಂಡಿದ್ದಾಳೆ. ಇತ್ತ ಕಾಳಿ ಹಾಗೂ ಆತನ ಗೆಳೆಯ ಮುತ್ತಯ್ಯನ ಬಳಿ ಬಂದಿದ್ದಾರೆ. ಶಾಂತಕ್ಕ ಬಂದರೆ ಕಷ್ಟವಾಗುತ್ತದೆ ಎಂದು ಪದೇ-ಪದೇ ಹೇಳುತ್ತಾನೆ ಇರುತ್ತಾನೆ ಕಾಳಿ ಗೆಳೆಯ ಮುತ್ತಯ್ಯನ ಮನೆಗೆ ಬಂದ ಕಾಳಿ ಹಾಗೂ ಆತನ ಗೆಳೆಯ ಮುತ್ತಯ್ಯನನ್ನು ಕಿಟಕಿ ಬಳಿಯಿಂದ ನೋಡುತ್ತಾರೆ. ಮುತ್ತಯ್ಯ ಮಲಗಿರುತ್ತಾನೆ ಆತನನ್ನು ನೋಡಿದ ಕಾಳಿ ಮುತ್ತಯ್ಯ..... ಮುತ್ತಯ್ಯ ಎಂದು ಕರೆಯುತ್ತಾನೆ.

  ಮುತ್ತಯ್ಯ ನನ್ನ ಭೇಟಿ ಆಗಲು ಬಂದ ಕಾಳಿ

  ಮುತ್ತಯ್ಯ ನನ್ನ ಭೇಟಿ ಆಗಲು ಬಂದ ಕಾಳಿ

  ಕಾಳಿ ಸನ್ನೆ ಮಾಡಿದ್ದನ್ನು ನೋಡಿದ ಮುತ್ತಯ್ಯ ಬಾಗಿಲು ತೆಗೆಯುತ್ತಾನೆ. ಬಾಗಿಲು ತೆಗೆದು ಹೊರ ಬಂದ ಮುತ್ತಯ್ಯ ನನ್ನು ಮಾತನಾಡಿಸುವ ತವಕದಲ್ಲಿದ್ದ ಕಾಳಿಗೆ ಆಘಾತವಾಗುತ್ತದೆ. ಆ ವೇಳೆಗೆ ಶಾಂತಕ್ಕ ಬರುತ್ತಾರೆ ಶಾಂತಳನ್ನ ನೋಡಿದ ಕಾಳಿ ಸ್ವಲ್ಪ ಮರೆಯಲ್ಲಿ ನಿಲ್ಲುತ್ತಾನೆ. ಇನ್ನೂ ಮುತ್ತಯ್ಯ ಬಾಗಿಲು ತೆಗೆದು ಹೊರಗೆ ಬಂದಿರುವುದನ್ನು ನೋಡಿದ ಶಂತಾಗೆ ಕೊಂಚ ಶಾಕ್ ಆಗುತ್ತದೆ. ಏನಾಯ್ತು ಎಂದು ವಿಚಾರಿಸಿದರು ಮುತ್ತಯ್ಯನಿಗೆ ಏನು ತಿಳಿಯುವುದಿಲ್ಲ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

  English summary
  Kannada serial Puttakkana Makkalu written updated on 5th September. Know more.
  Tuesday, September 6, 2022, 19:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X