Don't Miss!
- Sports
ಜಸ್ಪ್ರೀತ್ ಬೂಮ್ರಾ ಪಾಕ್ ವೇಗಿ ಶಾಹಿನ್ ಅಫ್ರಿದಿಯ ಹತ್ತಿರಕ್ಕೂ ಬರಲ್ಲ ಎಂದ ಪಾಕ್ ಮಾಜಿ ಕ್ರಿಕೆಟಿಗ
- News
ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಫೆಬ್ರವರಿ 6 ರಂದು ಕೇಂದ್ರದ ನಿಷೇಧದ ವಿರುದ್ಧದ ಮನವಿ ಆಲಿಸಲು SC ಒಪ್ಪಿಗೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಂಠಿಯೇ ಶ್ರೀ ಎನ್ನುವುದು ಸ್ನೇಹಾಗೆ ಖಾತ್ರಿ! ಮುಂದೇನು ಮಾಡ್ತಾಳೆ?
ಇದೀಗ ಸ್ನೇಹಳಿಗೆ ತಾನು ಇಷ್ಟು ದಿನ ಹುಡುಕುತ್ತಿದ್ದ ದೊರೆ ಯಾರು ಎಂಬ ವಿಚಾರ ಗೊತ್ತಾಗಿದೆ. ಇದರಿಂದ ಬಹಳ ಬೇಸರಗೊಂಡ ಸ್ನೇಹಾ, ಶ್ರೀ ನನಗೆ ಸುಳ್ಳು ಹೇಳಿದ್ದಾರೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇತ್ತ ಬಂಗಾರಮ್ಮ, ನರ್ಸ್ ಹೇಳಿದ ಮಾತು ಕೇಳಿ ಮಗನ ರೂಮಿನತ್ತ ಓಡಿಕೊಂಡು ಬರುತ್ತಾರೆ. ಯಾರೋ ಹುಡುಗಿಯೊಬ್ಬಳು ಕಂಠಿ ಅವರಿಗೆ ಏನೋ ಕುಡಿಸುತ್ತಾ ಇದ್ದರೂ ಎಂದು ನರ್ಸ್ ಬಂಗಾರಮ್ಮ ಬಳಿ ಹೇಳಿದಾಗ ಅದರಿಂದ ಕೊಂಚ ಕೋಪ ಗೊಂಡು ಭಯದಲ್ಲಿ ಓಡುತ್ತ ಬರುತ್ತಾರೆ.
ಯಾವ ಹುಡುಗಿ ತನ್ನ ಮಗನ ಬಳಿ ಬಂದಿರಬಹುದು. ನಂಜಮ್ಮನ ಜೊತೆ ಇದ್ದ ಹುಡುಗಿ ಬಂದಿರಬಹುದೇ ಎಂದು ಯೋಚನೆ ಮಾಡುತ್ತಾ ಕಂಠಿ ಇದ್ದ ಕೋಣೆಗೆ ಬರುತ್ತಾಳೆ. ಅಷ್ಟರಲ್ಲಿ ಆಗಲೇ ಸ್ನೇಹಾ ಅಲ್ಲಿಂದ ಹೋಗಿರುತ್ತಾಳೆ. ಕೋಣೆಯೊಳಗೆ ಬಂದು ಆ ಹುಡುಗಿಗಾಗಿ ಬಂಗಾರಮ್ಮ ಹುಡುಕುತ್ತಾಳೆ. ಆದರೆ ಅಲ್ಲಿ ಇರದ ಕಾರಣ ಸುಮ್ಮನಾಗುತ್ತಾಳೆ. ಬಳಿಕ ಕಷಾಯದ ಪಾತ್ರೆಯನ್ನು ನೋಡಿ ಡಾಕ್ಟರ್ ಅನ್ನು ಕರೆಯುತ್ತಾರೆ. ಡಾಕ್ಟರ್ ಅದನ್ನು ಪರೀಕ್ಷಿಸಿ ಕಷಾಯ ಎಂದು ಹೇಳಿದ ಬಳಿಕ ಸುಮ್ಮನಾಗುತ್ತಾರೆ. ಬಳಿಕ ಹೇಳುತ್ತಾರೆ ನಾನೆಲ್ಲೋ ನಂಜಮ್ಮನ ಬಳಿ ಇರುವ ಹುಡುಗಿ ಬಂದು ಬಿಟ್ಟಿರಬೇಕು ಎಂದುಕೊಂಡೆ ಎಂದು ಹೇಳಿದಾಗ ವಸುಗೆ ಶಾಕ್ ಆಗುತ್ತದೆ ಬಳಿಕ ಕಂಠಿಯನ್ನೂ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ.
ಇನ್ನು ಖುಷಿಯಲ್ಲಿ ಪುಟ್ಟಕ್ಕನ ಬಳಿ ಬಂದ ಶಾಂತಕ್ಕ ಗಂಡ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಬಹಳ ಖುಷಿ ಪಡುತ್ತಾರೆ. ಆಗಲಿ ಮುಂಚಿನ ರೀತಿಯಲ್ಲಿ ಆಗಲಿ. ಮನೆಯನ್ನು ನೋಡಿಕೊಳ್ಳುವ ಹಾಗೆ ಹುಷಾರಾಗಿ ಬರಲಿ ಎಂದಾಗ ಶಾಂತ, ಮುಂಚಿನ ಹಾಗೆ ಆಗಲಿ ಆದರೆ ಕುಡಿತದ ದಾಸ ಆಗುವುದು ಬೇಡ ಎಂದು ಹೇಳುತ್ತಾಳೆ. ಇದಕ್ಕೆ ಪುಟ್ಟಕ್ಕ ನಸು ನಗುತ್ತಾಳೆ. ಆಗ ಪುಟ್ಟಕ್ಕನ ಮೆಸ್ ಬಳಿ ಬಂದ ಒಬ್ಬಾಕೆ ಇಡ್ಲಿ ಪಾರ್ಸಲ್ ಮಾಡಲು ಹೇಳುತ್ತಾಳೆ.

ಸಹನಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಗಂಗವ್ವ
ಸಹನಾಳನ್ನು ನೋಡಿ ಎನಾವ್ವ ಸಹನಾ ಮದುವೆ ಮಾತುಕತೆ ಆಯಿತಂತೆ. ಮದುವೆ ಯಾವಾಗ? ಇಷ್ಟ ಪಟ್ಟು ಮದುವೇ ಆಗುತ್ತಾ ಇರುವುದಂತೆ ಹೌದಾ ಎಂದು ಕೇಳಿದಾಗ ಸಹನಾಗೆ ಏನು ಹೇಳಬೇಕು ಎಂದು ಅರಿಯದೆ ಹೋಗುತ್ತದೆ. ಇದನ್ನು ನೋಡಿದ ಶಾಂತ ಏನು ಗಂಗಕ್ಕ ವಿಚಾರಣೆ ಎಲ್ಲಾ ಜೋರಾಗಿದೆ ಎಂದು ಕೇಳುತ್ತಾಳೆ. ಬಳಿಕ ಗಂಗಮ್ಮ, ಸ್ನೇಹಾ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಾಳೆ. ಆದರೆ ಇದನ್ನೆಲ್ಲ ಕೇಳಿದ ಶಾಂತಕ್ಕ ಖಡಕ್ ಆಗಿ ಬೈಯುತ್ತಾಳೆ. ಇನ್ನು ಗಂಗಮ್ಮನಿಗೆ ಇಡ್ಲಿ ಪಾರ್ಸಲ್ ಕೊಟ್ಟು ಕಳುಹಿಸುತ್ತಾರೆ. ಇದನ್ನೆಲ್ಲ ನೋಡಿ ಪುಟ್ಟಕ್ಕ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಇನ್ನೂ ಸ್ನೇಹಾ ಏನಾದರೂ ಪ್ರೀತಿ ಮಾಡಿ ಮದುವೆ ಆದರೆ ಸ್ನೇಹಾನಿಗೂ ಹೀಗೆ ಅನ್ನುತ್ತಾರೆ ಎಂದು ಹೇಳಿ ಅಲ್ಲಿಂದ ಒಳಗೆ ಹೋಗುತ್ತಾರೆ.

ಕಂಠಿ ಪ್ರಪೊಸ್ ಮಾಡಿದಂತೆ ಕನಸ ಕಂಡ ಸ್ನೇಹಾ
ಇದನ್ನು ನೋಡಿದ ಸಹನಾಗೆ ಬಹಳ ಬೇಸರ ಆಗುತ್ತದೆ. ಇನ್ನು ಕೆರೆಯ ಬಳಿ ಒಬ್ಬಳೇ ಕುಳಿತ ಸ್ನೇಹಾ, ಶ್ರೀ ಬಗ್ಗೆ ಯೋಚನೆಯಲ್ಲಿ ಮಗ್ನಳಾಗಿರುತ್ತಾಳೆ. ಯಾಕೆ ಶ್ರೀ ನನ್ನ ಬಳಿ ಸುಳ್ಳು ಹೇಳಿದಿರಿ ನೀವು ದೊರೆ ಆಗಿ ಇದ್ದುಕೊಂಡೇ ಇಷ್ಟೆಲ್ಲ ಸಹಾಯ ಮಾಡಿದಿರಿ ಎಂದು ಹೇಳುತ್ತಾ ಇರುತ್ತಾಳೆ. ನನಗೆ ನಿಮ್ಮ ಮೇಲೆ ಬಹಳ ಅಕ್ಕರೆ ಅದಕ್ಕಾಗಿ ಇಷ್ಟೆಲ್ಲ ಸಹಾಯ ಮಾಡಿದೆ ಎಂದು ಹೇಳುತ್ತಾನೆ. ಬಳಿಕ ಸ್ನೇಹಾಗೆ ಡೈರೆಕ್ಟ್ ಆಗಿ ಪ್ರಪೋಸ್ ಮಾಡುತ್ತಾನೆ. ಇದನ್ನು ನೋಡಿ ಸ್ನೇಹಾ ಎದ್ದು ನಿಲ್ಲುತ್ತಾಳೆ ಅಷ್ಟೊತ್ತಿಗೆ ಶ್ರೀ ಅಲ್ಲಿ ಇರುವುದಿಲ್ಲ. ಇದು ಸ್ನೇಹಾಳ ಭ್ರಮೆ ಆಗಿರುತ್ತದೆ.

ಕಂಠಿಗೆ ಸ್ನೇಹಾಳ ನೆನಪು
ಇನ್ನೂ ಮನೆಯಲ್ಲಿ ಇರುವ ಕಂಠಿ ಗೆ ನಿಧಾನವಾಗಿ ಎಚ್ಚರ ಆಗುತ್ತದೆ. ಆ ವೇಳೆ ಬಂಗಾರಮ್ಮ ಹೇಳುತ್ತಾರೆ ಇನ್ನೂ ಮುಂದೆ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎನ್ನುತ್ತಾಳೆ. ಬಳಿಕ ಆಯಿತು ಎಂದ ಕಂಠಿ ಅಮ್ಮನನ್ನು ರೂಮಿನಿಂದ ಹೊರಗೆ ಕಳುಹಿಸುತ್ತಾನೆ. ಬಳಿಕ ಮೆತ್ತಗೆ ಎದ್ದೆಳುತ್ತಾನೆ. ಬಳಿಕ ಮುಂಗುಸಿ ಬಳಿ ಅಮ್ಮ ಏನಾದರು ಸ್ನೇಹಾನ ನೋಡಿದ್ರ ಎಂದು ಕೇಳಿದಾಗ ಮುಂಗುಸಿ ಜೆಸ್ಟ್ ಮಿಸ್ ಅಣ್ಣ ಎಂದು ಹೇಳಿದಾಗ ಕಂಠಿಗೆ ಸ್ನೇಹಾ ನೆನಪಾಗಿ ಸ್ನೇಹಾ ಎಲ್ಲಿ ಹೋದಳು ಎಂದು ಕೇಳುತ್ತಾನೆ. ಆದರೆ ಮುಂಗುಸಿ, ಸ್ನೇಹಾ ಎಲ್ಲಿ ಹೋದಳು ಎಂಬುವುದೇ ಗೊತ್ತಾಗುವುದಿಲ್ಲ ಎಂದಾಗ ಕಂಠಿ ಸ್ನೇಹಾ ಬಳಿ ಮಾತನಾಡಲು ಫೋನ್ ಕೇಳುತ್ತಾನೆ. ಅದೇ ವೇಳೆಗೆ ಚಂದ್ರು ವಸುನ ಫೋಟೋ ನೋಡಿ ಮರುಗುತ್ತಾತ್ತಾನೆ.

ಸ್ನೇಹಾಗೆ ಕರೆ ಮಾಡಿದ ಕಂಠಿ
ವಸು ಒಂದೇ ಒಂದು ಬಾರಿ ನಾವು ಕೂತು ಮಾತನಾಡಿ ಇದ್ದಿದ್ದರೆ ನಾವು ಇವತ್ತು ಹೀಗೆ ಇರುತ್ತಿರಲಿಲ್ಲ. ನೀನು ನನ್ನ ಬಿಟ್ಟು ದೂರ ಹೋಗುತ್ತಿಯಾ ಎಂದು ಯೋಚನೆ ಮಾಡುತ್ತಾ ಇರುತ್ತಾನೆ ಚಂದ್ರು ಆಗ ಅಲ್ಲಿಗೆ ಬಂದ ಚಂದ್ರು ತಂಗಿ ಚಾರ್ಜರ್ ಕೇಳುತ್ತಾಳೆ. ಬಳಿಕ ಅಣ್ಣನ ಬಳಿ ಅತ್ತಿಗೆಯ ಬಗ್ಗೆ ಯೋಚನೆ ಮಾಡುತ್ತಾ ಇದ್ದೀಯಾ ಅಣ್ಣ ಎಂದು ಹೇಳಿದಾಗ ಅಲ್ಲಿಗೆ ಬಂದ ನಂಜಮ್ಮ ಮಗನಿಗೆ ಸಮಾಧಾನ ಹೇಳಿ ನಾಳೆ ಕೋರ್ಟ್ ಇರುವ ಬಗ್ಗೆ ನೆನಪಿಸುತ್ತಾಳೆ. ಬಳಿಕ ಅಲ್ಲಿಂದ ಹೊರಡುತ್ತಾಳೆ. ಇನ್ನು ಶ್ರೀ ಸ್ನೇಹಾ ಗೆ ಕರೆ ಮಾಡಿ ಎಲ್ಲಿದ್ದಿರಾ ಎನು ಮಾಡುತ್ತಾ ಇದ್ದೀರಾ ಎಂದೆಲ್ಲ ಕ್ಷೇಮ ಸಮಾಚಾರ ವಿಚಾರಣೆ ಮಾಡುತ್ತಾನೆ. ಇದನ್ನೆಲ್ಲ ಕೇಳಿದ ಸ್ನೇಹಾ ಚೆನ್ನಾಗಿದ್ದೀನಿ. ನೀವು ಹೇಗೆ ಇದ್ದೀರಾ ಎಂದೆಲ್ಲ ಕೇಳುತ್ತಾಳೆ ಕೊನೆಗೆ ಆತನ ಬಳಿ ಒಂದು ವಿಚಾರದ ಬಗ್ಗೆ ಪ್ರಸ್ತಾಪ ಮಾಡಲು ಅನುವಾಗುತ್ತಾಳೆ. ಆದರೆ ಈ ವಿಚಾರ ಕೇಳಲು ಸ್ನೇಹಾಗೆ ಮುಜುಗರ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.