ರೌದ್ರಾವತಾರಾ ತಾಳಿದ ಪುಟ್ಟಕ್ಕ, ರಸ್ತೆಯ ತುಂಬೆಲ್ಲ ಒಡೆದ ಬಾಟಲಿ!
ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕುತೂಹಲಕಾರಿ ತಿರುವು ಎದುರಾಗಿದೆ. ಬಾರ್ ನಲ್ಲಿ ಕಳ್ಳ ಬಟ್ಟಿ ಮಾರುತ್ತಿದ್ದಾರೆ ಎಂಬ ವಿಚಾರವನ್ನು ಶಾಂತ ಪುಟ್ಟಕ್ಕನ ಬಳಿ ಪುಟ್ಟಕ್ಕ ಹೇಳುತ್ತಾಳೆ. ಇದಕ್ಕೆ ಕುಪಿತಗೊಂಡ ಪುಟ್ಟಕ್ಕ ಅದನ್ನು ತೋರ್ಪಡಿಸದೆ ಗಂಡಿನ ಕಡೆಯರ ಬಳಿ ಬಹಳ ಅನ್ಯೋನ್ಯತೆಯಿಂದ ಮಾತನಾಡುತ್ತಾರೆ. ರಾಜೇಶ್ವರಿ ಮಾತ್ರ ಸ್ವಲ್ಪ ಭಯಗೊಳ್ಳುತ್ತಾಳೆ.
ಈ ವೇಳೆ ಗಂಡಿನ ಕಡೆಯವರು ಕೇಳುತ್ತಾರೆ. ಆ ಬಾರ್ ಯಾರಿದ್ದು ಎಂದು ಅದಕ್ಕೆ ಸ್ನೇಹಾ ಹೇಳುತ್ತಾರೆ ಇಲ್ಲಿ ಕುತಿದ್ದಾರಲ್ಲ ಇವರದ್ದೇ ಎಂದು. ಪುಟ್ಟಕ್ಕ ಸ್ನೇಹಾಳನ್ನು ಸುಮ್ಮನಿರುವಂತೆ ಹೇಳುತ್ತಾಳೆ. ಬಳಿಕ ಕಾಳೀ ಕುಡಿದು ಪುಟ್ಟಕ್ಕನ ಮನೆಗೆ ಬರುತ್ತಾನೆ.
ಕಾಳಿ ಅವತಾರ ಕಂಡು ರಾಜೇಶ್ವರಿ ದಂಗಾಗುತ್ತಾಳೆ. ಇನ್ನೂ ಸಹನಾಳನ್ನು ನೋಡಿದ ಕಾಳಿ ಯವ್ವಿ ಬೇರೆ ಮದುವೆಯಾಗಲು ಹೊರಟ್ಟಿದ್ದಿಯಾ? ನಾನು ನಿನ್ನ ಪ್ರೀತಿ ಮಾಡುತ್ತಿದ್ದೇನೆ ಇದೆಲ್ಲ ಗೊತ್ತಿದ್ದರೂ ಬೇರೆ ಗಂಡನ್ನು ಮದುವೆ ಆಗಲು ಹೊರಟಿದ್ದಿಯಾ ಎಂದಾಗ ರಾಜೇಶ್ವರಿಗೆ ಶಾಕ್ ಆಗುತ್ತದೆ ಪುಟ್ಟಕ್ಕಗೆ ಕೆಂಡದಂತಹ ಕೋಪ ಬರುತ್ತದೆ. ಇತ್ತ ಪುಟ್ಟಕ್ಕ, ಲೆ ಏನು ಮಾತನಾಡುತ್ತಿದ್ದಿಯಾ ನೀನು ಬಾರಲ್ಲಿ ಕಳ್ಳ ಭಟ್ಟಿ ಮಾರುತ್ತಿರುವ ವಿಷಯ ನನಗೆ ಗೊತ್ತಿಲ್ಲ ಅಂದುಕೊಂಡಿದ್ದಿಯಾ ಎಂದೆಲ್ಲಾ ಹೇಳಿದಾಗ ಕಾಳಿಗೆ ಶಾಕ್ ಆಗುತ್ತದೆ.

ಕಾಳಿಯ ಕೆನ್ನೆಗೆ ಹೊಡೆದ ಪುಟ್ಟಕ್ಕ
''ಎಲ್ಲ ಗೊತ್ತಿದ್ದರೂ ಸುಮ್ಮನಿದ್ದೇನೆ. ಸುಮ್ಮನೆ ಇಲ್ಲಿಂದ ಹೋಗುತ್ತಿಯೋ ಇಲ್ಲವೋ' ಎಂದು ಜೋರಾಗಿ ಹೇಳುತ್ತಾಳೆ. ಇದಕ್ಕೆ ಕ್ಯಾರೇ ಎನ್ನದ ಕಾಳಿ ''ಏನಿವಾಗ ಕಳ್ಳ ಭಟ್ಟಿ ಮಾರುತ್ತಿದ್ದೇನೆ ಮಾರಾಟ ಮಾಡುತ್ತೇನೆ ಸಾಧ್ಯವಾದರೆ ತಡಿ. ಹಾಗೆಯೇ ನಿನ್ನ ಮಗಳನ್ನೂ ನಿಮ್ಮೆಲ್ಲರ ಸಮ್ಮುಖ ದಲ್ಲಿ ಮದುವೆ ಆಗುತ್ತೇನೆ ಎಂದು ಸಹನಾಳ ಕೈ ಹಿಡಿಯಲು ಹೋದಾಗ ಕಾಳಿಯ ಕೈ ಹಿಡಿಯುತ್ತಾಳೆ ಪುಟ್ಟಕ್ಕ. ಇದನ್ನು ನೋಡಿದ ರಾಜೇಶ್ವರಿ ಹಾಗೂ ಕಾಳಿಗೆ ಶಾಕ್ ಆಗುತ್ತದೆ. ಬಳಿಕ ಕಾಳಿಯ ಎರಡು ಕೆನ್ನೆಗೆ ಬಾರಿಸಿ, ದರ ದರನೆ ಮನೆಯಿಂದ ಹೊರ ಹಾಕುತ್ತಾಳೆ ಪುಟ್ಟಕ್ಕ.

ಬಾರಿಗೆ ನುಗ್ಗಿದ ಪುಟ್ಟಕ್ಕ
ಇದನ್ನು ನೋಡಿದ ರಾಜೇಶ್ವರಿ ಪುಟ್ಟಕ್ಕ ನನ್ನ ತಮ್ಮ ಕಣೆ ಎನು ಮಾಡಬೇಡ ಎಂದು ಜೋರಾಗಿ ಅರಚುತ್ತಾ ಬರುತ್ತಾಳೆ. ಇತ್ತ ಪುಟ್ಟಕ್ಕ ಹೇಳುತ್ತಾಳೆ. ಸುಮ್ಮನೆ ಗೇಟಿನಿಂದ ಆ ಕಡೆ ಹೋದ್ರೆ ಸರಿ ಇಲ್ಲಾಂದ್ರೆ ನಿನ್ನ ಬಾರ್ ಅನ್ನು ಮುಚ್ಚಿಸಿ ಬಿಡುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕಂಡ ರಾಜೇಶ್ವರಿ ಏನೇ ಪುಟ್ಟಕ್ಕ ಏನೋ ಪಾಪ ಎಂದು ನಿನ್ನ ಮನೆಗೆ ಬಂದರೆ ಈ ರೀತಿ ಮಾಡುವುದಾ. ನೀನೆಲ್ಲಾದರು ಬಾರಿನ ಸುದ್ದಿಗೆ ಬಂದ್ರೆ ನಾನು ಸುಮ್ಮನಿರಲ್ಲ ಎಂದು ಹೇಳುತ್ತಾಳೆ ಇದನ್ನು ಕಂಡ ಕಾಳಿನು ಹಾಗೆ ಬುಸುಗುಡುತ್ತಾನೆ. ''ಈಗೇನು ಕಾಳಿ ಮನೆಯಿಂದ ಹೋಗೊದಿಲ್ವಾ'' ಎಂದು ಕೇಳಿದ ಪುಟ್ಟಕ್ಕ, ಬಾರಿನಿಂದ ಜನರಿಗೆ ಅನ್ಯಾಯಾ ಆಗೊದನ್ನು ನೆನೆಸಿಕಳ್ಳುತ್ತಾ ಸಿಟ್ಟಾಗಿ ಸೀದಾ ಬಾರಿಗೆ ನುಗ್ಗುತ್ತಾಳೆ. ಬಳಿಕ ಅಲ್ಲಿದ್ದ ಕುಡುಕರನ್ನು ಹೊರಗೆ ಕಳುಹಿಸಿ ಒಂದೊಂದೇ ಬಾಟಲ್ ಅನ್ನು ಒಡೆದು ಹಾಕುತ್ತಾಳೆ ಬಳಿಕ ಸ್ನೇಹಾ ನಿಗೆ ಹೇಳುತ್ತಾಳೆ ಪುಟ್ಟಕ್ಕ, ಬಾ ಸ್ನೇಹಾ ಇದನ್ನೆಲ್ಲ ಒಡೆದು ಹಾಕುವ ಎಂದು ಹೇಳಿದಾಗ ಸ್ನೇಹಾ ಅಮ್ಮನ ಜೊತೆ ಕೈ ಜೋಡಿಸುತ್ತಾಳೆ.

ವಸು ಅನ್ನು ಭೇಟಿ ಮಾಡಲು ಬಂದ ಚಂದ್ರು
ಇತ್ತ ಚಂದ್ರು ಊರಾಚೆಗಿನ ಪಾಳು ಮನೆಯ ಬಳಿ ಬರುತ್ತಾನೆ. ಅಲ್ಲಿಗೆ ವಸು ಹಾಗೂ ಕಂಠಿಯೂ ಬರುತ್ತಾರೆ. ಬಂದೊಡನೆ ಚಂದ್ರು ಕಂಠಿ ಬಳಿ ಮಾತನಾಡಲು ತೊಡಗುತ್ತಾನೆ. ಏನು ಕಂಠಿ ಇದೆಲ್ಲ ನೀನು ಮಾಡುತ್ತಿರುವ ವಿಚಾರ ಸ್ನೇಹಾಗೆ ಗೊತ್ತಾದರೆ ಬಹಳ ಕಷ್ಟ ವಾಗುತ್ತದೆ ಎಂದು ಹೇಳಿದಾಗ ಕಂಠಿ ಹೇಳುತ್ತಾನೆ ನಮ್ಮಿಬ್ಬರ ವಿಚಾರ ಇರಲಿ ನೀವಿಬ್ಬರೂ ಮಾತನಾಡಿಕೊಳ್ಳಿ ಎಂದು ಹೇಳುತ್ತಾನೆ. ವಸುಂಧರ ಹೇಳುತ್ತಾಳೆ ಚಂದ್ರು ನೀವು ನನ್ನ ಹತ್ರ ಮಾತನಾಡಲು ಬಂದ್ರಾ ಅಥವಾ ಅಣ್ಣಯ್ಯನ ಬಳಿ ಮಾತನಾಡಲು ಬಂದ್ರ ಎಂದು ಕೇಳಿದಾಗ ವಸು ಸುಮ್ಮನಿರು ಇದು ದೊಡ್ಡ ವಿಚಾರ ಹೇಳು ಕಂಠಿ ಎಂದು ಹೇಳಿದಾಗ ಕಂಠಿ ಹೇಳುತ್ತಾನೆ

ಸ್ನೇಹಾಳನ್ನು ಪ್ರೀತಿಸುತ್ತಿದ್ದೇನೆ ಎಂದ ಕಂಠಿ
ಹಾ...ನಾನು ಸ್ನೇಹಾನಾ ಪ್ರೀತಿ ಮಾಡುತ್ತಿದ್ದೇನೆ. ಎಂದು ಹೇಳಿದಾಗ ಚಂದ್ರು ಹೇಳುತ್ತಾನೆ ನೀನು ಸ್ನೇಹಾನಾ ಪ್ರೀತಿಸಿದ್ದು ಸರಿ ಆದರೆ ಅವಳಿಗೆ ಮೋಸ ಮಾಡುತ್ತಿರುವುದು ತಪ್ಪು. ಇದು ಕಾನೂನು ಪ್ರಕಾರ ಅಪರಾಧ ಎಂದು ಹೇಳುತ್ತಾನೆ. ನಾನು ಸ್ನೇಹಾ ಗೆ ನಿಜ ಹೇಳಬೇಕುಂತಾ ತುಂಬಾ ಪ್ರಯತ್ನ ಪಟ್ಟಿದ್ದಿನಿ ಬಂಗಾರಮ್ಮ ಹಾಗೂ ಅವರ ಮಗ ಬಹಳ ಜೋರು ಏಂದೆಲ್ಲಾ ಅವಳ ಮನದಲ್ಲಿ ಕೆಟ್ಟ ಯೋಚನೆ ಬಂದಿದೆ. ಈಗ ಅವಳಿಗೆ ನಿಜ ಹೇಳಲು ಸಾಧ್ಯವಿಲ್ಲ ಎಂದಾಗ, ಚಂದ್ರು ಹೇಳುತ್ತಾನೆ ನೀನು ಎಲ್ಲಾದರೂ ಆಕೆಗೆ ನಿಜ ಹೇಳದೆ ಆಕೆಗೆ ಗೊತ್ತಾದರೆ ಆಕೆ ನಿನ್ನ ಬಳಿ ಯಾವತ್ತೂ ಮಾತನಾಡುವುದಿಲ್ಲ ಎಂದು ಹೇಳಿದಾಗ ಕಂಠಿ ಗೆ ಶಾಕ್ ಆಗುತ್ತದೆ. ಮುಂದೇನಾಗುತ್ತದೆ ನೋಡಬೇಕಿದೆ.


Click it and Unblock the Notifications











