ಪುಟ್ಟಕ್ಕನ ಮಕ್ಕಳು: ಸಹನಾ ಮದುವೆ ಫಿಕ್ಸ್! ಮುಂದೆ ಮೇಷ್ಟ್ರ ಗತಿ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿಯಲ್ಲಿ ಇದೀಗ ಮುರಳಿ ಮೇಷ್ಟ್ರ ಲವ್ ಸ್ಟೋರಿ ಸ್ನೇಹಾಗೆ ತಿಳಿದು ಹೋಗಿದೆ. ತಾನು ಸಹನಾಳನ್ನು ಪ್ರೀತಿಸುತ್ತಿರುವ ವಿಚಾರವನ್ನು ಸ್ನೇಹಾ ಬಳಿ ಹೇಳುತ್ತಾರೆ ಆದರೆ ಸ್ನೇಹಾ ಮಾತ್ರ ಕೋಪಗೊಂಡು ಮೇಷ್ಟ್ರುಗೆ ಏರ್ರಾ-ಬಿರ್ರಿ ಬಯ್ಯುತ್ತಾಳೆ. ಬಳಿಕ ಇನ್ನು ಮುಂದೆ ಮೆಸ್‌ಗೆ ಬಾರದೆ ಇರುವುದೇ ಉತ್ತಮ ಎನ್ನುತ್ತಾಳೆ.

ನಮ್ಮ ಅಕ್ಕನಿಗೆ ಪ್ರೀತಿ-ಗೀತಿ ಆಗಿ ಬರಲ್ಲ. ಆಕೆ ತುಂಬಾ ಇನೋಸೆಂಟು. ಮೆಸ್‌ಗೆ ಬರೋ ಪೋಕರಿಗಳಿಗೆಲ್ಲ ಬಾಸುಂಡೆ ಬರುವ ಹಾಗೆ ಬಾರಿಸಿದ್ದೀನಿ. ಆದರೆ ನೀವು ಸ್ಪೆಷಲ್. ಎಲ್ಲರಲ್ಲೂ ಉತ್ತಮರಾಗಿ ಬಂದು ಇದೀಗ ನನ್ನ ಅಕ್ಕನ ಪ್ರೀತಿ ಮಾಡುತ್ತಿದ್ದೇನೆ ಎಂದು ನನ್ನ ಬಳಿ ಇಷ್ಟು ಧೈರ್ಯ ವಾಗಿ ಹೇಳುತ್ತಿದ್ದೀರಿ ಅಲ್ವಾ ಎಷ್ಟು ಧೈರ್ಯ ನಿಮಗೆ ಎಂದು ಪ್ರಶ್ನಿಸುತ್ತಾಳೆ ಸ್ನೇಹಾ. ಮೇಷ್ಟ್ರನ್ನು ಸ್ವಲ್ಪ ಕೂಡ ಮಾತನಾಡಲು ಬಿಡದೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಬಳಿಕ, ಗುರುವಾರದಂದು ನಮ್ಮ ಅಕ್ಕನ ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ ಎಂದು ಹೇಳುತ್ತಾಳೆ ಸ್ನೇಹಾ.

ನನ್ನ ಅಕ್ಕನಿಗೆ ಆ ಗಂಡು ಇಷ್ಟ ಆಗಿದ್ದಾರೆ. ಇನ್ನು ನೀವು ಇದಕ್ಕೆ ತೊಂದರೆ ಮಾಡುವುದು ಇಲ್ಲ ಎಂದುಕೊಂಡಿದ್ದೇನೆ ಆದರೆ ತೊಂದರೆ ಮಾಡಿದರೆ ಮಾತ್ರ ನಾನಂತೂ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿ ಮೇಷ್ಟ್ರಿಗೆ ಶಾಕ್ ಆಗುತ್ತದೆ. ನಿಮ್ಮ ಲೆಟರ್ ಅನ್ನು ಅಕ್ಕ ಓದಿಲ್ಲ ಎಲ್ಲಾದರೂ ಓದಿದ್ದರೆ ಬಹಳ ಕಷ್ಟ ಪಡುತ್ತಿದ್ದಳು. ಆಕೆ ಹೆದರಿ ಮನದಲ್ಲಿ ಎಲ್ಲವನ್ನೂ ಇಟ್ಟುಕೊಳ್ಳುತ್ತಿದ್ದರು ಎನ್ನುತ್ತಾಳೆ ಸ್ನೇಹಾ.

ಮೇಷ್ಟ್ರ ಬಳಿ ಮೆಸ್ ಗೆ ಬರದಂತೆ ಹೇಳಿದ ಸ್ನೇಹಾ

ಮೇಷ್ಟ್ರ ಬಳಿ ಮೆಸ್ ಗೆ ಬರದಂತೆ ಹೇಳಿದ ಸ್ನೇಹಾ

ಬಳಿಕ ಅಲ್ಲಿಂದ ಸ್ನೇಹಾ ಕೋಪದಿಂದ ತೆರಳುತ್ತಾಳೆ. ಮೆಸ್ ಬಳಿ ಬಂದಾಗ ಹೋಟೆಲ್‌ಗೆ ಬಂದ ಕಸ್ಟಮರ್ ಒಬ್ಬರು ನೀವು ಯಾರಾದರೂ ಹೋಟೆಲ್ ನಲ್ಲಿ ಇರಬೇಕಿತ್ತು. ನಿಮ್ಮ ಮಂಜಾಕ್ಕಾ ಹಾಗೂ ಕಾಳಿ ಇಬ್ಬರು ಗುಸು ಗುಸು ಎಂದು ಮಾತನಾಡುತ್ತಾ ಇದ್ದರೂ ಏನು ಎಂಬುವುದು ಮಾತ್ರ ಗೊತ್ತಿಲ್ಲ ಎಂದು ಹೇಳಿ ಹೋಗುತ್ತಾರೆ.

ಮಂಜಕ್ಕನ ಮೇಲೆ ಸ್ನೇಹಾಗೆ ಅನುಮಾನ

ಮಂಜಕ್ಕನ ಮೇಲೆ ಸ್ನೇಹಾಗೆ ಅನುಮಾನ

ಇದನ್ನು ತಿಳಿದ ಸ್ನೇಹಾ ಮಂಜಕ್ಕಳನ್ನು ಕರೆಯುತ್ತಾರೆ. ಬಳಿಕ ಕಾಳಿ ಬಂದಿದ್ದನಂತೆ ಯಾಕೆ ಎಂದು ಕೇಳಿದಾಗ ಮಂಜಮ್ಮ ಭಯದಲ್ಲಿ ಬೇವತುಕೊಳ್ಳುತ್ತಾಳೆ. ಇನ್ನು ರಾಜೇಶ್ವರಿ ಗಂಡನ ಬಳಿ ಹೇಳುತ್ತಾಳೆ. ಕಾಳಿ ಹಾಗೂ ಸಹನಾ ಮದುವೆ ಆದರೆ ಪುಟ್ಟಕ್ಕನ ಜುಟ್ಟು ನಮ್ಮ ಕೈಯಲ್ಲಿ ಇರುತ್ತದೆ. ಅದಕ್ಕಾಗಿ ಕಾಳಿ ಮಾಡುತ್ತಿರುವುದು ಕೂಡ ಸರಿಯೆ ಎಂದು ಹೇಳುತ್ತ ಇರುವಾಗ ರಾಜೀ ಗಂಡನಿಗೆ ತಲೆ ಬಿಸಿ ಆಗುತ್ತದೆ. ಇದೆಲ್ಲ ಸರಿ ಇಲ್ಲ ಎಂದು ಹೇಳಿದಾಗ ರಾಜಿ ಮಾತ್ರ ಹಿಡಿದ ಹಠ ಬಿಡದೆ ಗಂಡನ ಮೇಲೆ ಜೋರು ಮಾಡುತ್ತಾಳೆ.

ಕಾಳಿ ಮದುವೆಗೆ ರಾಜಿ ಗ್ರೀನ್ ಸಿಗ್ನಲ್

ಕಾಳಿ ಮದುವೆಗೆ ರಾಜಿ ಗ್ರೀನ್ ಸಿಗ್ನಲ್

ನಿನಗೆ ನಾನು ಇಷ್ಟ ಇಲ್ಲ. ಪುಟ್ಟಕ್ಕನೆ ನಿನ್ನ ಮೊದಲ ಹೆಂಡತಿ ಅಲ್ವಾ ನಾನು ಎಲ್ಲಿಂದಲೋ ಬಂದವಳು ಎಂದೆಲ್ಲ ಹೇಳಿ ಜೋರಾಗಿ ಅಳುತ್ತಾಳೆ. ಇದನ್ನು ಕಂಡ ಆಕೆಯ ಗಂಡ ನೀನೆ ನನ್ನ ಪ್ರೀತಿಯ ಹೆಂಡತಿ ಎಂದು ಹೇಳಿ ಹೊರ ನಡೆಯುತ್ತಾನೆ. ಇನ್ನೂ ರಾಜೇಶ್ವರಿ ಕಾಳಿಯನ್ನು ಮಾತನಾಡಿಸಲು ಹೋಗುತ್ತಾಳೆ. ಕಾಳಿ ಬಳಿ ಹೇಳುತ್ತಾರೆ. ನೀನು ಸಹನಾಳನ್ನು ಮದುವೆ ಆಗುವುದು ಸರಿಯಾದ ನಿರ್ಧಾರ. ಈ ವಿಚಾರಕ್ಕೆ ನನ್ನ ಸಪೋರ್ಟ್ ನಿನಗಿದೆ ಎಂದಾಗ ಕಾಳಿ ಕುಣಿದು ಕುಪ್ಪಳಿಸುತ್ತಾನೆ. ಏನಕ್ಕ ನೀನು, ನನಗೆ ಸಪೋರ್ಟ್ ಮಾಡುವುದಿಲ್ಲ ಎಂದು ಹೇಳಿ ಮಂಜುಳಾಗೆ ದುಡ್ಡು ಕೊಟ್ಟು ಗಂಡಿನ ಕಡೆಯವರ ವಿವರ ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿದಾಗ ರಾಜಿಗೆ ಕೊಂಚ ಶಾಕ್ ಆಗುತ್ತದೆ ಮಂಜಕ್ಕ ನಿನ್ನ ಜೊತೆ ದುಡ್ಡು ತೆಗೆದುಕೊಂಡಳಾ ಎಂದು ಕೇಳುತ್ತಾಳೆ ಅದಕ್ಕೆ ಕಾಳಿ ಹೂ ಎನ್ನುತ್ತಾನೆ. ಇದಕ್ಕೆ ರಾಜಿ ಮಾತ್ರ ಸಿಕ್ಕಾ ಪಟ್ಟೆ ಕೋಪ ಮಾಡಿಕೊಳ್ಳುತ್ತಾಳೆ.

ಕಂಠಿಯ ನೋಡಿ ನಾಚಿದ ಸ್ನೇಹಾ

ಕಂಠಿಯ ನೋಡಿ ನಾಚಿದ ಸ್ನೇಹಾ

ಇನ್ನು ಕಂಠಿ ಬಂದ ಕೂಡಲೇ ಸ್ನೇಹಾ ನಾಚಿ ಬೇರೆಡೆ ತಿರುಗುತ್ತಾಳೆ ಅದಕ್ಕೆ ಕಂಠಿ ತನ್ನ ಮೇಲೆ ಕೋಪ ಇದೆ ಅದಕ್ಕೆ ಸ್ನೇಹಾ ಈ ರೀತಿ ಮಾಡಿರಬಹುದು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಏನು ಸ್ನೇಹಾ ಇನ್ನೂ ಕೋಪ ನ ಎಂದು ಹೇಳಿದ ಬಳಿಕ ಅಲ್ಲಿಂದ ತೆರಳಲು ಅನುವಾಗುತ್ತಾರೆ. ಆಗ ಸ್ನೇಹಾ ಕಂಠಿ ನೋಡಿ ಕೋಪ ಏನು ಇಲ್ಲ. ಒಳಗೆ ಬನ್ನಿ ಎಂದು ಕರೆಯುತ್ತಾಳೆ. ಬಳಿಕ ತಿಂಡಿಯನ್ನು ಆರ್ಡರ್ ಮಾಡಿ ತಿನ್ನುತ್ತಾರೆ. ಆದರೆ ಕಂಠಿ ಮುಖ ನೋಡಿದ ಸ್ನೇಹಾ ಮಾತ್ರ ನಾಚಿ ಕೆನ್ನೆ ಕೆಂಪು ಮಾಡಿಕೊಳ್ಳುತ್ತಾಳೆ. ಇನ್ನು ಕಂಠಿಗೆ ಕೊಟ್ಟ ಮುತ್ತನ್ನು ನೆನಪಿಸಿ ಕೊಳ್ಳುತ್ತಾ ಇರುತ್ತಾಳೆ. ಮುಂದೆ ಏನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 6th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X