Puttakkana Makkalu: ಕೋಪದಲ್ಲೂ ಕಂಠಿ ಪರವಾಗಿ ಮಾತನಾಡಿದ ಸ್ನೇಹಾ, ಕೋಪಗೊಂಡ ಚಂದ್ರು
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹಲವು ತಿರುವುಗಳೊಂದಿಗೆ ಉತ್ತಮವಾಗಿ ಮೂಡಿ ಬರುತ್ತಿದೆ. ಕಂಠಿಗೆ ಮಾತ್ರ ಅಮ್ಮನ ಮೇಲೆ ನಂಬಿಕೆ ಕಳೆದು ಹೋಗಿದೆ. ಆದರೆ, ಬಂಗಾರಮ್ಮಗೆ ಮಾತ್ರ ತನ್ನ ಮಗ ನನ್ನನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಯಾರೇ ನಂಬದೆ ಹೋದರು ನನ್ನ ಮಗ ನನ್ನನ್ನು ನಂಬುತ್ತಾನೆ ಎನ್ನುವ ಭ್ರಮೆಯಲ್ಲಿ ಇದ್ದ ಬಂಗಾರಮ್ಮಗೆ ಇದೀಗ ನಿಜ ವಿಚಾರ ತಿಳಿದು ಬಹಳ ನೊಂದುಕೊಂಡಿದ್ದಾಳೆ.
ಇನ್ನೂ ಕಂಠಿಗೆ ತನ್ನ ತಾಯಿ ತಪ್ಪು ಮಾಡಿದ್ದಾಳೆ ಎಂದು ಮನದಲ್ಲಿ ಅಂದುಕೊಂಡು ಸ್ನೇಹಾನನ್ನು ಕರೆದುಕೊಂಡು ಪೊಲೀಸ್ ಸ್ಟೇಷನ್‌ಗೆ ಹೊರಟಿದ್ದಾನೆ. ಇನ್ನೂ ತಾಂಡವ್ ಮಾತ್ರ ಇದೆಲ್ಲವನ್ನೂ ನೋಡಿ ಖುಷಿ ಪಡುತ್ತಾನೆ. ಸ್ಟೇಷನ್‌ನಲ್ಲಿ ಕಂಠಿಯನ್ನ ಕಂಡ ತಾಂಡವ ಹೇಳುತ್ತಾನೆ. ಏನು ಇಲ್ಲಿ ತನಕ ಬಂದಿದ್ದು ಎಂದಾಗ ಕಂಠಿ ಕಂಪ್ಲೇಂಟ್ ಕೊಡಲು ಬಂದಿದ್ದೇನೆ ಎಂದು ಹೇಳಿ ತನ್ನ ತಾಯಿ ಬಗ್ಗೆ ಅನುಮಾನ ಇದೆ ಎಂದು ಹೇಳುತ್ತಾನೆ.

ಇದನ್ನು ಕೇಳಿಸಿಕೊಂಡ ತಾಂಡವ ಮಾತ್ರ ಕೊಂಚ ಶಾಕ್ ಆದರೆ ಇದನ್ನೆಲ್ಲ ಕೇಳಿಸಿಕೊಂಡ ಸ್ನೇಹಾ ಕೂಡ ಬಹಳ ಆಶ್ಚರ್ಯ ಪಡುತ್ತಾಳೆ. ತನ್ನ ತಾಯಿ ಬಗ್ಗೆಯೇ ಅನುಮಾನ ಹೊರ ಹಾಕಿದ ಕಂಠಿ ಮೇಲೆ ಕೊಂಚ ಪ್ರೀತಿ ಬರುತ್ತದೆ. ಇನ್ನೂ ಕಂಪ್ಲೇಂಟ್ ಕೊಟ್ಟು ಬಂಗಾರಮ್ಮನ ಮಗ ಬೈಕ್‌ನಲ್ಲಿ ಕುಳಿತುಕೊಂಡು ಇರಬೇಕಾದರೆ ಅಲ್ಲಿಗೆ ಬಂದ ಸ್ನೇಹಾ ಕಂಠಿಗೆ ಧನ್ಯವಾದ ಹೇಳುತ್ತಾಳೆ.
ಕಂಠಿ ಮೊಗದಲ್ಲಿ ನಗು ತರಿಸಿದ ಸ್ನೇಹಾ
ಇದನ್ನು ನೋಡಿದ ಕಂಠಿ ಮಾತ್ರ ಏನೋ ಯೋಚನೆಯ ಮೊಗದಲ್ಲಿ ನಗು ಬರುತ್ತದೆ. ಇನ್ನೂ ಕಂಠಿ ಮಾತಿಗೆ ಸ್ನೇಹಾ ಕೊಂಚ ಆಶ್ಚರ್ಯ ವ್ಯಕ್ತಪಡಿಸುತ್ತಾ ಇರುತ್ತಾಳೆ. ಇನ್ನೂ ಮನೆಗೆ ಬಂದ ಕಂಠಿ ಹಾಗೂ ಸ್ನೇಹಾಳನ್ನು ನೋಡಿದ ಪುಟ್ಟಕ್ಕ ಮಾತ್ರ ಖುಷಿ ಪಡುತ್ತ ಇರುತ್ತಾರೆ. ಇನ್ನೂ ಪುಟ್ಟಕ್ಕನನ್ನು ನೋಡಲು ಚಂದ್ರು ಹಾಗೂ ನಂಜಮ್ಮ ಬರುತ್ತಾರೆ. ಆಗ ಚಂದ್ರು ಸ್ನೇಹಾ ಬಳಿ ಕೊಂಚ ಜೋರಾಗಿ ಗದರುತ್ತಾನೆ.

ಚಂದ್ರು ಮಾತಿಗೆ ಬೇಸರಗೊಂಡ ಸ್ನೇಹಾ
ಸ್ನೇಹಾ ನಿನಗೆ ನಾನು ಹೇಳಿದ್ದು ತಿಳಿದಿಲ್ಲವೆ ನೀನು ಯಾಕೆ ಬಂಗಾರಮ್ಮನ ಮನೆಗೆ ಹೋಗಿರುವುದು. ನಿನಗೆ ಇನ್ನೊಂದು ಆಪ್ಷನ್ ಇದೆ. ನಿನ್ನ ಮದುವೆ ಹೆಂಗೋ ರಿಜಿಸ್ಟ್ರೇಷನ್ ಆಗಿಲ್ಲ ಆದ್ದರಿಂದ ಈ ಮದುವೆಯನ್ನು ರದ್ದು ಮಾಡಬಹುದು ಎಂದು ಹೇಳಿದಾಗ ಸ್ನೇಹಾ ಹೇಳುತ್ತಾಳೆ ನಾನು ಕಂಠಿಯನ್ನೂ ನನ್ನ ಗಂಡ ಎಂದು ಒಪ್ಪಿಕೊಂಡಿದ್ದೇನೆ. ಆ ಕಾರಣದಿಂದ ನಾನು ಆ ಮನೆಗೆ ಹೋದೆ. ಇನ್ನೂ ಓದಿನ ವಿಚಾರದಲ್ಲಿ ಇವರು ಎಷ್ಟು ತಪ್ಪು ಮಾಡಿದ್ದಾರೋ ಅವರ ತಾಯಿ ಕೂಡ ಅಷ್ಟೇ ದೊಡ್ಡ ತಪ್ಪು ಮಾಡಿದ್ದಾರೆ ಎಂದಿದ್ದಾಳೆ.
ಸ್ನೇಹಾ ಮಾತಿಗೆ ಶಾಕ್ ಆದ ಚಂದ್ರು!
ಆ ಕಾರಣದಿಂದ ಇವರನ್ನು ಬಿಟ್ಟು ಬಿಡುವುದು ಬಹಳ ದೊಡ್ಡ ತಪ್ಪು ಎಂದೆಲ್ಲ ಹೇಳಿದಾಗ ಚಂದ್ರುಗೆ ಕೊಂಚ ಶಾಕ್ ಆಗುತ್ತದೆ. ಬಳಿಕ ಪುಟ್ಟಕ್ಕ ನಂಜಮ್ಮನ ಬಳಿ ಮಾತನಾಡಿದ ಪರಿಯನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ಸ್ನೇಹಾ ಬಳಿ ಪ್ರೀತಿಯಿಂದ ಮಾತನಾಡಿದಾಗ ಆಕೆ ಹೇಳುತ್ತಾಳೆ ತನ್ನ ಗಂಡನ ಬಗ್ಗೆ ಏನೇ ಎಂದರು ಸಹಿಸುವುದಿಲ್ಲ ಅದಕ್ಕೆ ಹಾಗೆ ಮಾತನಾಡಿದೆ ಎಂದು ಹೇಳುತ್ತಾಳೆ.


Click it and Unblock the Notifications











