Puttakkana Makkalu : ಮನೆ ಮುಂದೆ ಡ್ಯಾನ್ಸ್! ರಾಜೇಶ್ವರಿ ಮೇಲೆ ಸೇಡು ತೀರಿಸಿಕೊಂಡ ಪುಟ್ಟಕ್ಕನ ಮಕ್ಕಳು
ಗಂಗಮ್ಮ ಹೇಳಿದ ಮಾತಿಗೆ ಪುಟ್ಟಕ್ಕ ಬಹಳ ಬೇಸರಗೊಂಡಿದ್ದಾರೆ. ಅದಕ್ಕೆ ತಕ್ಕನಾಗಿ ಸ್ನೇಹಾ ಸಹ ಯಾರಿಗೂ ಹೇಳದೆ ಬಾವಿ ಬಳಿ ಕುಳಿತು ರಾತ್ರಿ ವೇಳೆ ಮನೆಗೆ ಬರುತ್ತಾಳೆ. ಮನೆಗೆ ಬರುತ್ತಿದ್ದ ಹಾಗೆಯೇ ಅಮ್ಮನ ಬಳಿ 'ಅಮ್ಮ ಸಾರಿ ಸ್ವಲ್ಪ ಲೇಟ್ ಆಯಿತು. ಎಲ್ಲರೂ ಊಟ ಮಾಡಿದಿರಿ ಅಲ್ವಾ. ಇಲ್ಲ ನನಗಾಗಿ ಕಾದು ಕುಳಿತಿದ್ದಿರಾ? ಹಾಗಾದರೆ ನಾನು ಕೈ ಕಾಲು ಮುಖ ತೊಳೆದುಕೊಂಡು ಬರುತ್ತೇನೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪುಟ್ಟಕ್ಕ ಸಹನಾ ಮುಖವನ್ನು ನೋಡುತ್ತಾಳೆ.
ಬಳಿಕ ಕೈ ಕಾಲು ಮುಖ ತೊಳೆದುಕೊಂಡು ಪುನಃ ಬರುತ್ತಾಳೆ ಸ್ನೇಹಾ. ಈ ವೇಳೆ ಪುಟ್ಟಕ್ಕನ ಬಳಿ ಬಂದು ಕೇಳಿದ ಸ್ನೇಹಾ ಅಮ್ಮ ಊಟ ಆಯ್ತಾ ಎಂದು ಕೇಳಿದಾಗ ಕೋಪಗೊಂಡ ಪುಟ್ಟಕ್ಕ ಇದೀಗ ಸಮಯ ಎಷ್ಟು? ಕಷಾಯ ಮಾಡಿಕೊಂಡು ಹೋದೆ. ನಾವು ಬರುತ್ತೇವೆ ಅಂದಾಗ ಬೇಡ ಎಂದೆ ಇದೀಗ ಎಷ್ಟು ಹೊತ್ತಿಗೆ ಬಂದಿದ್ದೀಯಾ? ನೋಡಿದವರೆಲ್ಲ ಏನು ಹೇಳುವುದಿಲ್ಲ ಎಂದು ಜೋರಾಗಿ ಪುಟ್ಟಕ್ಕ ಪ್ರಶ್ನಿಸುತ್ತಾಳೆ. ಇದನ್ನು ಕೇಳಿದ ಸ್ನೇಹಾ, 'ಯಾಕಮ್ಮ ಇಷ್ಟು ಜೋರು ಕಿರುಚುತ್ತಾ ಇದ್ದೀಯಾ ಇಷ್ಟು ದಿನ ನಾವು ಊರವರ ಮಾತು ಕೇಳಿ ಜೀವನ ನಡೆಸಿದ್ದ ಅಲ್ಲ ಅಲ್ವಾ ಎಂದು ಹೇಳುತ್ತಾಳೆ. ಆದರೆ ಪುಟ್ಟಕ್ಕ ಮಾತ್ರ ಅದಾವುದನ್ನು ಕೇಳದೆ ಸಿಡುಕುತ್ತಾ ಇರುತ್ತಾಳೆ.

ಸ್ನೇಹಾ ಮೇಲೆ ಪುಟ್ಟಕ್ಕ ಸಿಟ್ಟು
ಇದನ್ನು ಕೇಳಿದ ಸ್ನೇಹಾ, ನಾನು ಆಸ್ಪತ್ರೆಗೆ ಶ್ರೀ ನೋಡಿಕೊಳ್ಳಲು ಹೋಗಿದ್ದೆ ಆದರೆ ಇದೀಗ ಇಷ್ಟು ಹೊತ್ತು ಆಯಿತು. ಯಾಕೆ ಕೋಪ ಮಾಡಿಕೊಂಡು ಇದ್ದೀಯಾ ಯಾರಾದರೂ ಏನಾದರೂ ಅಂದ್ರ ಎಂದು ಕೇಳುತ್ತಾಳೆ. ಬಳಿಕ ಊಟ ಮಾಡಲು ಕರೆಯುತ್ತಾಳೆ ಸ್ನೇಹಾ. ಸುಮಾ ಕೋಪ ಮಾಡಿಕೊಂಡು ಇರುವುದನ್ನು ಪುಟ್ಟಕ್ಕ ಸ್ನೇಹಾಗೆ ಹೇಳುತ್ತಾಳೆ. ಇನ್ನು ಸುಮಾನನ್ನು ಸಮಾಧಾನ ಮಾಡಿದ ಸ್ನೇಹಾ ಗೆ ರಾಜೇಶ್ವರಿ ಮನೆ ಎದುರು ಡಾನ್ಸ್ ಮಾಡುವುದು ಯಾವಾಗ ಎಂದೆಲ್ಲ ಹೇಳುತ್ತಾಳೆ. ಮರುದಿನ ಎದ್ದ ಸುಮಾ ಹಾಗೂ ಸ್ನೇಹಾ ತಮಟೆ ಶಬ್ದದೊಂದಿಗೆ ರಾಜೇಶ್ವರಿ ಮನೆ ಮುಂದೆ ಡಾನ್ಸ್ ಮಾಡುತ್ತಾರೆ. ಈ ವೇಳೆ ತಮಟೆ ಸದ್ದಿಗೆ ರಾಜೇಶ್ವರಿ ಹಾಗೂ ಪುರುಷೋತ್ತಮ ಮನೆಯ ಹೊರಗೆ ಬರುತ್ತಾರೆ. ಪುರುಷೋತ್ತಮನಿಗೆ ಅಕ್ಕನನ್ನು ಕಂಡು ಬಹಳ ಖುಷಿ ಆದರೆ ರಾಜೇಶ್ವರಿ ಮಾತ್ರ ಕುಹಕ ಆಡುತ್ತಾ ಇರುತ್ತಾಳೆ. ಇನ್ನು ಸ್ನೇಹಾ ಮಾತ್ರ ರಾಜೇಶ್ವರಿ ಏನೆಲ್ಲ ಹೇಳಿದ್ದಳು ಅದನ್ನೆಲ್ಲ ರಾಜೀ ಬಳಿ ಹೇಳಿ ಚುಕ್ತಾ ಮಾಡುತ್ತಾಳೆ.

ರಾಜೇಶ್ವರಿ ಮನೆಯಲ್ಲಿ ಡಾನ್ಸ್ ಮಾಡಿದ ಸಹೋದರಿಯರು
ಇನ್ನು ಗೋಪಾಲ ಹಾಗೂ ಕಾಳಿ ಕಿಟಕಿಯಿಂದ ನೋಡುತ್ತಾ ಇರುತ್ತಾರೆ. ಈ ವೇಳೆ ಕಾಳಿ, ಗೋಪಾಲನ ಬಳಿ ಹೇಳುತ್ತಾಳೆ. ನನ್ನ ಹುಡುಗಿ ಬಂದಿಲ್ಲ ಅಲ್ವಾ ಎಂದು ಹೇಳುತ್ತಾನೆ, ಇದನ್ನು ಕೇಳಿದ ಗೋಪಾಲ ಥೂ ಎಂದು ಹೇಳಿ ಬಳಿಕ ಕೆಮ್ಮು ಬಂದವನ ಹಾಗೆ ಆಕ್ಟ್ ಮಾಡುತ್ತಾನೆ. ಸ್ನೇಹಾ ಹಾಗೂ ಸುಮಾ ಮತ್ತೆ ನನ್ನ ಅಮ್ಮನ ತಂಟೆಗೆ ಬಂದರೆ ಸರಿ ಇರುವುದು ಇಲ್ಲ ಎಂದು ಜೋರಾಗಿ ಹೇಳುತ್ತಾರೆ.

ಕಂಠಿಯನ್ನು ಕೋರ್ಟ್‌ಗೆ ಕರೆದ ಬಂಗಾರಮ್ಮ
ಇನ್ನೂ ಮುಂಗುಸಿ, ಕಂಠಿ ರೂಮ್ ಗೆ ಹೋಗುತ್ತಿರುವಾಗ ಬಂಗಾರಮ್ಮ ತಡೆದು ನಿಲ್ಲಿಸುತ್ತಾರೆ. ಎಲ್ಲಿಗೆ ಎಂದು ಕೇಳುತ್ತಾರೆ? ಈ ಮಾತಿಗೆ ಮುಂಗುಸಿ ಅಣ್ಣನ ನೋಡಕ್ಕೆ ಎಂದಾಗ ಬಂಗಾರಮ್ಮ ಮಾತ್ರ ಇವತ್ತು ಅವನನ್ನು ಮೀಟ್ ಆಗಲು ಸಾಧ್ಯ ಇಲ್ಲ ಎಂದಾಗ ಮುಂಗುಸಿ, ನನ್ನನ್ನು ಅಣ್ಣ ಬರಲು ಹೇಳಿದ್ದಾರೆ ಎಂದು ಹೇಳುತ್ತಾನೆ. ಈ ವೇಳೆ ದೇವರಿಗೆ ಪೂಜೆ ಮಾಡುತ್ತ ಇರುತ್ತಾನೆ ಕಂಠಿಯ ನೋಡಿ ಬಂಗಾರಮ್ಮಗೆ ಆಶ್ಚರ್ಯ ಆಗುತ್ತದೆ. ಈ ವೇಳೆ ಬಂಗಾರಮ್ಮ ಮಗನ ಬಳಿ, ನೀನು ಸರಿಯಾಗಿ ಇದ್ದಾರೆ ನನ್ನ ಜೊತೆ ಬಾಸ್ ಕೋರ್ಟ್ ಗೆ ಹೋಗಬೇಕು ಎಂದಾಗ ಮನೆ ಮಂದಿಗೆ ಶಾಕ್ ಆಗುತ್ತದೆ.

ಸ್ನೇಹಾ ಕಾಲೆಳೆದ ಮೇಷ್ಟ್ರು
ಇನ್ನೂ ಪುಟ್ಟಕ್ಕನ ಮನೆಗೆ ಸ್ನೇಹಾನ ಶಾಲಾ ಮೇಷ್ಟ್ರು ಬರುತ್ತಾರೆ. ಪುಟ್ಟಕ್ಕ ಅವರನ್ನು ನೋಡಿ ಆದರದಿಂದ ಆತಿಥ್ಯ ನೀಡುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಸಹನಾ ಕೂಡ ಮೇಷ್ಟ್ರ ಕಾಲಿಗೆ ಬೀಳುತ್ತಾಳೆ. ಈ ವೇಳೆ ಮೇಷ್ಟ್ರು ಸ್ನೇಹಾನಾ ಕೇಳಿದಾಗ ಸ್ನೇಹಾ ಮನೆಯಿಂದ ಹೊರಬರುತ್ತಾರೆ ರಾಜೇಶ್ವರಿ ಮನೆ ಮುಂದೆ ನಡೆದ ಘಟನೆಯನ್ನು ಹೇಳುತ್ತಾರೆ ಮೇಷ್ಟ್ರು ಇದನ್ನು ಕೇಳಿದ ಸ್ನೇಹಾ ಮಾತ್ರ ಏಷ್ಟು ಬೇಗ ಸುದ್ದಿ ಆಯಿತಲ್ಲ ಎಂದು ಯೋಚನೆ ಮಾಡುತ್ತಾಳೆ.


Click it and Unblock the Notifications











