ತಮ್ಮನ ಭವಿಷ್ಯ ಉಳಿಸಲು ಪುಟ್ಟಕ್ಕನ ಮನೆಗೆ ಬಂದ ಮೇಷ್ಟ್ರ ಅಕ್ಕ!

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ದಿನದಿಂದ ದಿನಕ್ಕೆ ಕೂತೂಹಲ ಹೆಚ್ಚು ಮಾಡುತ್ತಿದೆ. ಇದೀಗ ರಾಜಿ, ಮೇಷ್ಟ್ರು ಮನೆಗೆ ಹೋಗಿರುವ ವಿಷಯ ಪುಟ್ಟಕ್ಕನಿಗೆ ತಿಳಿಯುವ ಹಾಗೆ ಕಾಣುತ್ತಿದೆ. ಮೇಷ್ಟ್ರ ಅಕ್ಕ ಇದನ್ನು ಪುಟ್ಟಕ್ಕನಿಗೆ ಹೇಗಾದರೂ ತಿಳಿಸಬೇಕು ಇಲ್ಲವಾದರೆ ತನ್ನ ತಮ್ಮನ ಭವಿಷ್ಯ ಹಾಳಾಗುತ್ತದೆ ಎಂದು ಯೋಚಿಸಿದಾಗ ಪುಟ್ಟಕ್ಕಗೆ ಈ ವಿಚಾರ ಹೇಳುವುದು ಉತ್ತಮ ಎಂದು ಕೊಂಡು ಪುಟ್ಟಕ್ಕನ ಮನೆಗೆ ಆಗಮಿಸುತ್ತಾರೆ. ಪುಟ್ಟಕ್ಕನ ಮನೆಯಲ್ಲಿ ಮೇಷ್ಟ್ರ ಅಕ್ಕನಿಗೆ ಆದರದ ಆತಿಥ್ಯ ಸಿಗುತ್ತದೆ.

ಪುಟ್ಟಕ್ಕನ ಮನೆಯಲ್ಲಿ ಮೇಷ್ಟ್ರ ಅಕ್ಕ ಕೊಂಚ ಗಾಬರಿಯಿಂದ ಇರುತ್ತಾರೆ. ರಾಜೇಶ್ವರಿ ಕುತಂತ್ರಕ್ಕೆ ಸಹನಾ ಜೀವನ ನುಚ್ಚು ನೂರಾಗುತ್ತದೆ ಎಂದು ಯೋಚಿಸುತ್ತಾರೆ. ಮೊದಲೇ ತನ್ನ ತಂದೆ ಮನಸ್ಥಿತಿ ಸರಿಯಿಲ್ಲ ಅಂತಹದರಲ್ಲಿ ಈ ರೀತಿ ಘಟನೆಗಳು ನಡೆದರೆ ಇನ್ನೂ ತಂದೆಯ ಮನಸ್ಸು ಕಠೋರ ಆಗಬಹುದು ಎಂದು ಇನ್ನೊಂದು ಯೋಚನೆ ಆಕೆಯಲ್ಲಿ ಇನ್ನಷ್ಟು ಗಾಬರಿ ಮೂಡಿಸುತ್ತದೆ.

ಬಳಿಕ ಪುಟ್ಟಕ್ಕನ ಬಳಿ ಮೇಷ್ಟ್ರ ಅಕ್ಕ ಹೇಳುತ್ತಾಳೆ, ನಾನು ಈಗಲೂ ಮನೆಯಲ್ಲಿ ಸುಳ್ಳು ಹೇಳಿ ಬಂದಿದ್ದೇನೆ, ಆವತ್ತು ಬಂದಾಗ ನಿಮ್ಮ ಬಳಿ ಸರಿಯಾಗಿ ಮಾತನಾಡಲಿಲ್ಲ. ಅಪ್ಪಾಜಿ ಸ್ವಲ್ಪ ಹೀಗೇನೇ ಅವರು ಚಿಕ್ಕಂದಿನಿಂದಲೂ ಕೂಡ ಅವರು ಹೇಳಿದ್ದೇ ಆಗಬೇಕು. ಅವರು ಹಾಕಿದ ಹಾದಿಯಲ್ಲೇ ಹೋಗಬೇಕು ಎಂದು ಬಯಸುತ್ತಾರೆ. ಚಿಕ್ಕಂದಿನಿಂದ ಕೂಡ ನಮ್ಮನ್ನೆಲ್ಲಾ ಹಾಗೆ ಬೆಳೆಸಿದ್ದು ಕೂಡ ಎಂದು ಹೇಳಿ ಮೆತ್ತಗೆ ನಗು ಬೀರುತ್ತಾಳೆ.

ಮಗಳ ಪ್ರೀತಿ ಗೆಲ್ಲುವುದು ಮುಖ್ಯ ಎಂದ ಪುಟ್ಟಕ್ಕ

ಮಗಳ ಪ್ರೀತಿ ಗೆಲ್ಲುವುದು ಮುಖ್ಯ ಎಂದ ಪುಟ್ಟಕ್ಕ

ಅದಕ್ಕೆ ಪುಟ್ಟಕ್ಕ ಹೇಳುತ್ತಾಳೆ, ಅದರಲ್ಲಿ ಏನೂ ತಪ್ಪು ಇಲ್ಲ ಕಣಮ್ಮ. ತಮ್ಮ ಮಕ್ಕಳು ತಮ್ಮ ಮಾತು ಕೇಳಬೇಕು ಅಂತ ಹೆತ್ತವರು ಸಹಜವಾಗಿ ಆಸೆ ಪಡುವುದು ತಪ್ಪು ಅಲ್ಲ ಎಂದು ಹೇಳುತ್ತಾರೆ. ಬಳಿಕ ಸುಮ್ಮನಾದ ಪುಟ್ಟಕ್ಕ ಹೇಳುತ್ತಾರೆ ನಾನು ಅಂದುಕೊಂಡೆ ಮೇಷ್ಟ್ರು ಮನೆಯಲ್ಲಿ ಹೇಳಿ ಕರೆದುಕೊಂಡು ಬಂದಿದ್ದಾರೆ ಎಂದು ಅಂದುಕೊಂಡಿದ್ದೆ. ಆದರೆ ನನಗೆ ನೀವು ಬರುವ ತನಕ ಏನೂ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಗಿದ್ದು ನಿಮ್ಮ ಅಪ್ಪನಿಗೆ ಈ ಮದುವೆ ಹಾಗೂ ನಮ್ಮ ಸಂಬಂಧ ಇಷ್ಟ ಇಲ್ಲಾಂತ ಎಂದು ಬೇಸರದಿಂದ ಹೇಳುತ್ತಾಳೆ.

ತಂದೆಯನ್ನು ಒಪ್ಪಿಸುವುದಾಗಿ ಹೇಳಿದ ಮೇಷ್ಟ್ರ ಅಕ್ಕ

ತಂದೆಯನ್ನು ಒಪ್ಪಿಸುವುದಾಗಿ ಹೇಳಿದ ಮೇಷ್ಟ್ರ ಅಕ್ಕ

ಆ ವೇಳೆ ತೊದಲುತ್ತಾ ಹೇಳಿದ ಮೇಷ್ಟ್ರ ಅಕ್ಕ... ಅದು... ಮುರಳಿಗೆ ಬೇರೆ ಕಡೆ ಹೆಣ್ಣು ನೋಡಿದ್ದೆವು. ಅದು ನಡೆಯಲಿಲ್ಲ ಅಂತ ಸ್ವಲ್ಪ ಸಿಟ್ಟು ಅಷ್ಟೇ. ಹೇಳದೆ ಕೇಳದೆ ಎಲ್ಲಾ ಇವನೇ ಮಾಡುತ್ತಾ ಇದ್ದಾನೆ ಎನ್ನುವ ಕೋಪ ಕೂಡ. ಎನ್ನುತ್ತಾರೆ. ಅದಕ್ಕೆ ಪುಟ್ಟಕ್ಕ ಹೇಳುತ್ತಾಳೆ. ನನಗೂ ಎಲ್ಲಾ ಅರ್ಥ ಆಗುತ್ತದೆ. ಅದಕ್ಕೆ ನಾನು ಬಲವಂತ ಮಾಡಲು ಹೋಗಲಿಲ್ಲ. ನಾನು ಕೂಡ ಮುರಳಿ ಮೇಷ್ಟ್ರ ಬಳಿ ಮಾತನಾಡಬೇಕು ಆಗಿತ್ತು ಆದರೆ ಆಗಲಿಲ್ಲ ಎಂದು ಹೇಳುತ್ತಾಳೆ.

ಇಬ್ಬರ ಮಾತುಕತೆಯನ್ನು ಕದ್ದಾಲಿಸುಟ್ಟಿರುವ ಮಂಜಮ್ಮ

ಇಬ್ಬರ ಮಾತುಕತೆಯನ್ನು ಕದ್ದಾಲಿಸುಟ್ಟಿರುವ ಮಂಜಮ್ಮ

ಇದನ್ನು ಮಂಜಮ್ಮ ದೂರದಿಂದ ನೋಡುತ್ತಾ ಇರುತ್ತಾಳೆ. ಇದನ್ನು ರಾಜೇಶ್ವರಿ ಬಳಿ ಹೇಳಿದರೆ ಇನ್ನಷ್ಟು ಹಣವನ್ನು ಅವಳಿಂದ ತೆಗೆದುಕೊಳ್ಳಬಹುದಲ್ವಾ ಎಂದು ಮನದಲ್ಲಿ ಯೋಚನೆ ಮಾಡುತ್ತಾಳೆ. ಇದನ್ನೆಲ್ಲ ಗಮನಿಸದ ಪುಟ್ಟಕ್ಕ ಹೇಳುತ್ತಾಳೆ. ಮೇಷ್ಟ್ರ ಬಳಿ ಮಾತನಾಡಲು ನನಗೆ ಸಮಯ ಸಿಗಲಿಲ್ಲ. ನೀವು ಬೇರೆ ಸಂಬಂಧ ನೋಡುತ್ತಾ ಇದ್ದೀರಿ. ನನ್ನ ಮಗಳು ನನ್ನ ಮೇಲಿನ ಗೌರವಕ್ಕೆ ನಾನು ಯಾವ ಹುಡುಗ ತೋರಿಸುತ್ತೇನೆ ಅವನನ್ನೇ ಒಪ್ಪಿಕೊಳ್ಳಲು ರೆಡಿ ಇದ್ದಾಳೆ. ಎಲ್ಲಾ ಕೂಡ ಅವಸರವಸರವಾಗಿ ಆಗಿ ಬಿಟ್ಟಿತು. ಈಗಲೂ ಏನೂ ಕಾಲ ಮಿಂಚಿ ಹೋಗಿಲ್ಲ. ನಿಮ್ಮ ಮನೆಯವರು ಒಪ್ಪಿಗೆ ಕೊಡುವುದು ಒಂದೇ ಬಾಕಿ. ಅದಕ್ಕೆ ನಾವು ಕಾಯುತ್ತಿದ್ದೇವೆ ಎಂದು ಆಸೆಯಿಂದ ಹೇಳುತ್ತಾಳೆ ಪುಟ್ಟಕ್ಕ .

ರಾಜಿ ಮನೆಗೆ ಬಂದಿದ್ದನ್ನು ತಿಳಿಸಿದ ಮೇಷ್ಟ್ರ ಅಕ್ಕ

ರಾಜಿ ಮನೆಗೆ ಬಂದಿದ್ದನ್ನು ತಿಳಿಸಿದ ಮೇಷ್ಟ್ರ ಅಕ್ಕ

ಇದನ್ನು ಕೇಳಿದ ಮೇಷ್ಟ್ರ ಅಕ್ಕ, ಆದರೆ ಇದರಲ್ಲಿ ಒಂದು ಚಿಕ್ಕ ಸಮಸ್ಯೆ ಇದೆ, ಎಂದಾಗ ಚಕಿತಗೊಂಡ ಪುಟ್ಟಕ್ಕ ಏನು ಎಂದು ಕೇಳುತ್ತಾರೆ. ಆ ವೇಳೆ ಮೇಷ್ಟ್ರ ಅಕ್ಕ ಹೇಳುತ್ತಾಳೆ, ರಾಜೇಶ್ವರಿಯವರು ಅಪ್ಪ ಅಮ್ಮನ ಬಳಿ ಮಾತನಾಡಲು ಬಂದಿದ್ದರು ಎಂದಾಗ ಪುಟ್ಟಕ್ಕನಿಗೆ ಶಾಕ್ ಆಗುತ್ತದೆ. ಬಳಿಕ ಮಾತು ಮುಂದುವರಿಸಿದ ಮೇಷ್ಟ್ರ ಅಕ್ಕ, ಈ ಸಂಬಂಧ ಮುರಿಯಲು ಆಕೆಗೆ ಏನು ಇಷ್ಟಾನೋ ಗೊತ್ತಿಲ್ಲ? ಅಪ್ಪನ ಬಳಿ ನಿಮ್ಮ ಬಗ್ಗೆ ಬಹಳ ಚಾಡಿ ಹೇಳುತ್ತ ಇದ್ದರೂ. ಇದನ್ನೆಲ್ಲ ನಿಮ್ಮ ಬಳಿ ಹೇಳುತ್ತಿದ್ದೇನೆ ಎಂದು ತಪ್ಪಾಗಿ ತಿಳಿಯಬೇಡಿ. ನಮ್ಮ ಮನೆಯಲ್ಲಿ ನಡೆಯುತ್ತಿರುವುದು ನಿಮಗೂ ಗೊತ್ತಾಗಲಿ ಎಂದು ಹೇಳಿದೆ. ಮುರಳಿಗೆ ಇಲ್ಲಿ ಬಂದು ಮಾತನಾಡಲು ಆಗುತ್ತಿಲ್ಲ. ಆದರೆ ಅವನ ಜೊತೆ ನಾನಿದ್ದೇನೆ. ಅವನ ಪ್ರೀತಿಗೆ ನನ್ನ ಸಪೋರ್ಟ್ ಇದೆ. ನೀವೇನು ಚಿಂತೆ ಮಾಡಬೇಡಿ ಅಪ್ಪ ಅಮ್ಮನನ್ನು ನಾನು ಒಪ್ಪಿಸಿಯೆ ಒಪ್ಪಿಸುತ್ತೇನೆ. ಈ ಮದುವೆ ಖಂಡಿತ ನಡೆದೇ ನಡೆಯುತ್ತದೆ. ಎಂದು ಹೇಳಿದಾಗ ಪುಟ್ಟಕ್ಕನಿಗೆ ಇನ್ನೂ ಖುಷಿ ಆಗುತ್ತದೆ. ಇದನ್ನೆಲ್ಲ ದೂರದಿಂದ ನೋಡುತ್ತಿದ್ದ ಮಂಜಮ್ಮ ಇದನ್ನು ರಾಜೇಶ್ವರಿಗೆ ಹೇಳುತ್ತಾಳೆ ಎಂಬುವುದಕ್ಕೆ ಸಂಶಯವೆ ಇಲ್ಲ.

More from Filmibeat

English summary
Kannada serial Puttakkana Makkalu written updated on 7th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X