twitter
    For Quick Alerts
    ALLOW NOTIFICATIONS  
    For Daily Alerts

    ಸ್ನೇಹಾಗೆ ಸತ್ಯ ಹೇಳಲೇ ಬೇಕಾದ ಪರಿಸ್ಥಿತಿಯಲ್ಲಿ ಕಂಠಿ!

    By ಪೂರ್ವ
    |

    'ಪುಟ್ಟಕ್ಕನ ಮಕ್ಕಳು' ಧಾರವಾಹಿ ನೋಡುಗರ ಸಂಖ್ಯೆ ಹೆಚ್ಚಿದೆ. ಧಾರಾವಾಹಿಯಲ್ಲಿ ಪುಟ್ಟಕ್ಕ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪುಟ್ಟಕ್ಕ ಮೂರು ಮಕ್ಕಳನ್ನು ಬಹಳ ಪ್ರೀತಿಯಿಂದ ಸಾಕಿ ಸಲಹಿದ್ದಾಳೆ. ಆದರೆ ಮಗಳ ಮದುವೆ ಮಾಡುವ ಹಂತಕ್ಕೆ ಬಂದಾಗ ಯಾವನೋ ಒಬ್ಬ ಮನೆಗೆ ಬಂದು ನಾನೇ ಆಕೆಯನ್ನು ಮದುವೆ ಆಗುತ್ತೇನೆ ಎಂದಾಗ ಪುಟ್ಟಕ್ಕನಿಗೆ ಕೋಪ ಉಕ್ಕಿ ಬಂದಿದೆ.

    ಮಗಳ ಮದುವೆಗೆ ಅಡ್ಡಿ ಆದಾಗ ಒಬ್ಬ ತಾಯಿ ಎನು ಮಾಡಬೇಕೋ ಅದನ್ನು ಮಾಡಿದ್ದೇನೆ ಎಂಬುದು ಪುಟ್ಟಕ್ಕನ ಅಭಿಪ್ರಾಯ.

    ಇನ್ನೂ ವಸು, ಕಂಠಿ, ಚಂದ್ರು ಮಾತನಾಡುತ್ತಾ ಇರುತ್ತಾರೆ. ಕಂಠಿ ಹೇಳುತ್ತಾನೆ ದಯವಿಟ್ಟು ಬಾವ ವಸು ಜೊತೆ ಮಾತನಾಡಿ ಎಂದು ಕೈ ಮುಗಿಯುತ್ತಾನೆ ಅದಕ್ಕೆ ವಸು ಕೋಪದಿಂದ ನೀನ್ಯಾಕೆ ಇವರ ಬಳಿ ಬೇಡಿಕೊಳ್ಳುತ್ತಿದ್ದಿಯಾ ಬಿಡು ಅಣ್ಣಯ್ಯ ಎಂದು ಕೈ ಬಿಡಿಸುತ್ತಾಳೆ. ಬಳಿಕ ಅಲ್ಲಿಂದ ಚಂದ್ರು ಹೊರಡುತ್ತಾನೆ.

    ಚಂದ್ರು ವಿರುದ್ಧ ಗರಂ ಆದ ವಸು

    ಚಂದ್ರು ವಿರುದ್ಧ ಗರಂ ಆದ ವಸು

    ''ಅವರಿಗೆ ಈಗ ನನಗಿಂತ, ನಿನಗಿಂತ ಅವರ ಪ್ರಕಾರ ಎನು ನ್ಯಾಯ ಅಂತ ನಾಂಬಿದ್ದಾರೋ ಆದೆ ಮುಖ್ಯ ಕೋರ್ಟಲ್ಲಿ ವಾದ ಮಾಡಿ ಮಾಡಿ ಭಾವನೆಗಳಿಗೆ ಬೆಲೆ ಕೊಡುವುದನ್ನು ಮರೆತು ಹೋಗಿ ಬಿಟ್ಟಿದ್ದಾರೆ. ಚಂದ್ರು ನೀವು ಹೋಗಿ ಮತ್ಯಾವತ್ತು ನನ್ನ ಬಳಿ ಮಾತನಾಡಬೇಡಿ ಎಂದು ಹೇಳಿದಾಗ ಚಂದ್ರು ನಿಲ್ಲುತ್ತಾನೆ. ಅದಕ್ಕೆ ಕಂಠಿ ಹೇಳುತ್ತಾನೆ ಎನು ಮಾತನಾಡುತ್ತ ಇದ್ದೀಯಾ ವಸು ನೀನು ಸ್ವಲ್ಪ ಸುಮ್ಮನಿರು ಎಂದಾಗ ವಸು ಹೇಳುತ್ತಾಳೆ ನೀನು ಸುಮ್ಮನಿರು ಎಂದು ಕಂಠಿಯನ್ನು ಸುಮ್ಮನಾಗಿಸುತ್ತಾಳೆ.

    ಸ್ನೇಹಾ ಬಳಿ ಸತ್ಯ ಹೇಳಲೇ ಬೇಕು ಕಂಠಿ

    ಸ್ನೇಹಾ ಬಳಿ ಸತ್ಯ ಹೇಳಲೇ ಬೇಕು ಕಂಠಿ

    ಆದರೆ ಸುಮ್ಮನಾಗದ ಕಂಠಿ, ಇಲ್ಲ ಬಾವ ವಸು ಕೋಪದಲ್ಲಿ ಮಾತನಾಡುತ್ತಿದ್ದಾಳೆ. ನನ್ನ ನಂಬಿ ಬಾವ ಇದರ ಬಗ್ಗೆ ಆಮೇಲೆ ಕೂತು ಮಾತನಾಡೋಣ ಬಾವ ಸದ್ಯಕ್ಕೆ ತಂಗಿ ನ ನಿಮ್ಮ ಮನೆಗೆ ಹೇಗೆ ಕರೆದುಕೊಂಡು ಹೋಗುವುದು ಅಂತ ಯೋಚನೆ ಮಾಡೋಣ'' ಎಂದು ಹೇಳಿದಾಗ ಚಂದ್ರು ವಾಪಸ್ ಬರುತ್ತಾನೆ. ಓಕೆ ಈ ವಿಚಾರದ ಬಗ್ಗೆ ಸ್ನೇಹಾ ಬಳಿ ನಾನು ಏನು ಮಾತು ಆಡುವುದಿಲ್ಲ. ಆದ್ರೆ ನೀನೊಂದು ನನಗೆ ಮಾತು ಕೊಡು ಎಂದು ಹೇಳುತ್ತಾನೆ. ಸ್ನೇಹಾ ಹತ್ರ ನಿಜ ಹೇಳುತ್ತೇನೆ ಎಂದು ಮಾತುಕೊಡು ಎಂದು ಹೇಳುತ್ತಾನೆ. ಇದಕ್ಕೆ ಕೋಪಗೊಂಡ ವಸು ಮುಖ ತಿರುಗಿಸುತ್ತಾಳೆ.

    ಕಷ್ಟಪಟ್ಟು ಖೋ-ಖೋ ಆಡುತ್ತಿರುವ ಸುಮಾ

    ಕಷ್ಟಪಟ್ಟು ಖೋ-ಖೋ ಆಡುತ್ತಿರುವ ಸುಮಾ

    ಇತ್ತ ಸುಮಾ ಖೋ-ಖೋ ಆಟ ಆಡುತ್ತಿರುತ್ತಾಳೆ. ಇಬ್ಬರನ್ನೂ ಮುಟ್ಟಿ ಎರಡು ಅಂಕಗಳನ್ನು ಸುಮಾ ಟೀಂ ಗಳಿಸಿಕೊಳ್ಳುತ್ತದೆ. ಮೊದಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಓಡಿ ಬರುತ್ತಿದ್ದ ವೇಳೆ ಸುಸ್ತಾಗಿರುತ್ತದೆ ಇದರಿಂದ ಆಟದಲ್ಲಿ ಗಮನ ಕೊಡಲು ಸುಮಾಳಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೂ ಕಷ್ಟ ಪಟ್ಟು ಆಡುತ್ತಿರುತ್ತಾಳೆ.

    ಪೊಲೀಸ್ ಜೀಪಿಗೆ ಜನರ ಮುತ್ತಿಗೆ

    ಪೊಲೀಸ್ ಜೀಪಿಗೆ ಜನರ ಮುತ್ತಿಗೆ

    ಇತ್ತ ಪುಟ್ಟಕ್ಕನನ್ನೂ ಜೈಲಿಗೆ ಕರೆದುಕೊಂಡು ಹೋಗಲು ಜನ ಬಿಡುತ್ತಿರಲಿಲ್ಲ. ಪೊಲೀಸ್ ಜೀಪಿಗೆ ಜನ ಮುತ್ತಿಗೆ ಹಾಕುತ್ತಾರೆ. ಪುಟ್ಟಕ್ಕ ಪೊಲೀಸ್ ಜೀಪ್ ನಲ್ಲಿ ಇದ್ದುಕೊಂಡೇ ಯಾರು ಗಲಾಟೆ ಮಾಡಬೇಡಿ, ನೀವೆಲ್ಲ ಹೋಗಿ ಎನ್ನುತ್ತಾಳೆ. ''ನಿಮ್ಮನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರೆ ನಾವು ಹೆಂಗಕ್ಕಾ ಸುಮ್ಮನಿರೋದು. ನಾವು ಬಿಡುವುದಿಲ್ಲ ಎಂದು ಜೋರಾಗಿ ಬೊಬ್ಬೆ ಹೊಡೆಯುತ್ತಾರೆ ಜನ. ಆಗ ಸ್ನೇಹಾ, ''ಎಲ್ಲರೂ ಶಾಂತವಾಗಿ ಇರಿ, ಇವರು ಅಮ್ಮನನ್ನು ಇಲ್ಲಿಂದ ಕರೆದುಕೊಂಡು ಹೋಗಲು ಸಾಧ್ಯವಿಲ್ಲ'' ಎಂದು ಹೇಳುತ್ತಾಳೆ. ಕೊನೆಗೆ ಪುಟ್ಟಕ್ಕನನ್ನೂ ಪೊಲೀಸರು ಪುಟ್ಟಕ್ಕನನ್ನೂ ಪೊಲೀಸ್ ಜೀಪಿನಿಂದ ಇಳಿಸಿ ಹೋಗಿದ್ದಾರೆ.

    English summary
    Kannada serial puttakkana makkalu written updated on 8 th July.
    Saturday, July 9, 2022, 20:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X