ಕಂಠಿ ಗುಣಕ್ಕೆ ಮನಸೋತ ಸ್ನೇಹಾ! ದೊರೆಯ ಮರೆತು ಕಂಠಿ ಮೇಲೆ ಪ್ರೀತಿ?

By ಪೂರ್ವ

ಕಂಠಿ ಜೊತೆ ಎಲ್ಲಾ ವಿಚಾರವನ್ನು ಹೇಳಿಕೊಂಡು ಅಳುತ್ತಾಳೆ ಸ್ನೇಹಾ. ಚಂದ್ರು ಆಡಿದ ಮಾತುಗಳು ಸ್ನೇಹಾ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿವೆ. ಸ್ನೇಹಾಳ ಮಾತು ಕೇಳುವ ಕಂಠಿ, ಮಿಸ್ಸು ನಿಮಗೆ ಇದು ಯಾವುದು ಸೆಟ್ ಆಗುತ್ತಿಲ್ಲ. ಮಿಸ್ಸು ದಯಮಾಡಿ ಅಳಬೇಡಿ ಎಂದು ಕಂಠಿ ಹೇಳುತ್ತಾನೆ. ಅಳಬೇಡಿ ಯಾವತ್ತೂ ನಗುತ್ತಾ ಇರಬೇಕು ಎಂದು ಹೇಳುತ್ತಾನೆ. ಬಳಿಕ ಕಂಠಿ ಬಳಿ ಕ್ಷಮೆನು ಕೇಳುತ್ತಾಳೆ ಸ್ನೇಹಾ.

ಬಳಿಕ ಮಾತು ಮುಂದುವರಿಸುವ ಸ್ನೇಹಾ, 'ನಾನು ಕಣ್ಣೀರು ಹಾಕಿ ನಿಮಗೂ ಮುಜುಗರ ಆಗುವ ಹಾಗೆ ಮಾಡಿ ಬಿಟ್ಟೆ ಎಂದು ಕಂಠಿ ಬಳಿ ಹೇಳಿದಾಗ, ಅದನ್ನೆಲ್ಲ ಗಣನೆಗೆ ತೆಗೆದುಕೊಳ್ಳದ ಕಂಠಿ ಮಾತು ಒಂದೇ, 'ಹಾಗಲ್ಲ ಮೇಡಂ ನೀವು ಯಾವತ್ತೂ ನಗುತ್ತಾ ಇರಬೇಕು ಈ ರೀತಿ ಅಳುತ್ತಾ ಇರುವುದು ಶ್ರೇಯಸ್ಸು ಅಲ್ಲ. ನೀವು ಯಾವತ್ತೂ ಗತ್ತಲ್ಲಿ ಇರಬೇಕು. ಹಾಗಾದರೆ ಮಾತ್ರ ನೀವು ಬಹಳ ಚೆನ್ನಾಗಿ ಕಾಣುವುದು. ನಿಮ್ಮ ಅಣ್ಣಯ್ಯ ಹಾಗೆ ಹೇಳಿದ ಎಂದು ಕಣ್ಣು ಒದ್ದೆ ಮಾಡಿಕೊಂಡು ಇದ್ದರೆ ಹೇಗೆ ಹೇಳಿ. ಒಂದು ಮಾತು ಬರುತ್ತದೆ ಹೋಗುತ್ತದೆ. ಅದನ್ನೇ ಯೋಚನೆ ಮಾಡಿಕೊಂಡು ಇರಲು ಸಾಧ್ಯಾನ ಅಷ್ಟಕ್ಕೆಲ್ಲ ಮನಸ್ಸು ಮುರಿದುಕೊಳ್ಳಬಾರದು. ನೀವು ಪುಟ್ಟಕ್ಕನ ಮಗಳು ಹಾಗೂ ಈ ಶ್ರೀ ದೋಸ್ತ್ ಕೂಡ ಗತ್ತಿನಲ್ಲಿ ಇರಬೇಕು' ಎಂದು ಹುರಿದುಂಬಿಸುತ್ತಾನೆ.

ಬಳಿಕ ಕಂಠಿ ಬಳಿ ಸ್ನೇಹಾ ಹೇಳುತ್ತಾಳೆ, ಎಲ್ಲಾ ಹುಡುಗರು ಹುಡುಗಿಯರು ಅಳುತ್ತಿದ್ದಾರೆ ಅದರ ಅಡ್ವಾಂಟೇಜ್ ತೆಗೆದುಕೊಳ್ಳಲು ಯತ್ನಿಸುತ್ತಾರೆ. ಸಮಾಧಾನ ಮಾಡುವ ನೆಪದಲ್ಲಿ ಸಲಿಗೆ ತೆಗೆದುಕೊಳ್ಳುತ್ತಾರೆ. ಆದರೆ ನೀವು ಹಾಗೆ ಮಾಡಲಿಲ್ಲ. ಆದರೆ ಈಗ ನನಗೆ ಅರ್ಥ ಆಯಿತು ಎಲ್ಲಾ ಹುಡುಗರು ಒಂದೇ ರೀತಿ ಅಲ್ಲ ಎಂದು ನಿಮ್ಮನ್ನು ನೋಡಿದ ಮೇಲೆ ಎಂದು ಹೇಳುತ್ತಾಳೆ. ಇದನ್ನು ನೋಡಿದ ಕಂಠಿಗೆ ಬಹಳ ಖುಷಿ ಆಗುತ್ತದೆ.

ಸ್ನೇಹಾ ಬಳಿ ಸಹನಾ ಮಾತು

ಸ್ನೇಹಾ ಬಳಿ ಸಹನಾ ಮಾತು

ಬಳಿಕ ಸ್ನೇಹಾ ಹೇಳುತ್ತಾಳೆ, 'ಶ್ರೀ ನೀವು ನನ್ನ ಜೊತೆ ನಡೆದುಕೊಂಡ ರೀತಿ ನೋಡಿ ಇನ್ನೂ ನಿಮ್ಮ ಮೇಲೆ ಗೌರವ ಜಾಸ್ತಿ ಆಗಿದೆ' ಎಂದು ಹೇಳಿ ಧನ್ಯವಾದ ಸೂಚಿಸುತ್ತಾಳೆ. ಬಳಿಕ ಅಲ್ಲಿಂದ ಹೊರಟ ಸ್ನೇಹಾಳನ್ನು ಬೀಳ್ಕೊಡುತ್ತಾನೆ. ಇನ್ನು ಮದುವೆ ಖುಷಿಯಲ್ಲಿ ಇರುವ ಸಹನಾ, ಮುರಳಿ ಮೇಷ್ಟ್ರ ಅಕ್ಕನನ್ನು ಹಾಡಿ ಹೋಗಳುತ್ತಾ ಇರುತ್ತಾಳೆ. ಮುರಳಿ ಮೇಷ್ಟ್ರ ಅಕ್ಕ ಮನೆಗೆ ಬಂದು ಅಮ್ಮನ ಬಳಿ ಎಲ್ಲಾ ವಿಚಾರವನ್ನು ಹೇಳಿದರು ಎಂದು ಸುಮಾ ಬಳಿ ಹೇಳುತ್ತಾಳೆ ಸಹನಾ. ಮುರಳಿ ಹಾಗೂ ಸಹನಾ ಮದುವೆ ನಡೆದೇ ನಡೆಯುತ್ತೆ ನಾನು ಅಪ್ಪ ಅಮ್ಮನ ಬಳಿ ಮಾತನಾಡುತ್ತೇನೆ ಎಂದು ಮೇಷ್ಟ್ರ ಅಕ್ಕ ಹೇಳಿರುವುದನ್ನು ಹೇಳುತ್ತಾಳೆ.

ಸುಮಾಳ ಬಳಿ ದುಃಖ ತೋಡಿಕೊಂಡ ಸಹನಾ

ಸುಮಾಳ ಬಳಿ ದುಃಖ ತೋಡಿಕೊಂಡ ಸಹನಾ

ಆಗ ಸುಮಾ ಹೇಳುತ್ತಾಳೆ 'ಅಕ್ಕ ಅವರ ಗಂಡನು ಇವತ್ತು ಮೇಷ್ಟ್ರ ಜೊತೆ ಕಾಲೇಜಿಗೆ ಬಂದಿದ್ದರು. ಈಗಂತೂ ನಮಗೆ ಸಪೋರ್ಟ್ ಜಾಸ್ತಿನೇ ಆಗಿದೆ. ಬಳಿಕ ಸಹನಾ, ಸುಮಾ ಬಳಿ ಮದುವೆಗೆ ದುಡ್ಡು ಬೇಕು ಎಂದು ಹೇಳುತ್ತಾ ಇರುತ್ತಾಳೆ. ಮೇಷ್ಟ್ರ ಅಕ್ಕ ಚಿತ್ರ ಹೇಳಿದ ವಿಚಾರವನ್ನು ಸುಮಾ ಬಳಿ ಹೇಳುತ್ತಾಳೆ. ಆದರೆ ಅಕ್ಕನಿಗೆ ಸುಮಾ ಧೈರ್ಯ ಹೇಳುತ್ತಾಳೆ.

ಅಳಿಯನ ಬಳಿ ಮಗನ ಬಗ್ಗೆ ವಿಚಾರಿಸಿದ ಮೇಷ್ಟ್ರು ತಂದೆ

ಅಳಿಯನ ಬಳಿ ಮಗನ ಬಗ್ಗೆ ವಿಚಾರಿಸಿದ ಮೇಷ್ಟ್ರು ತಂದೆ

ಇನ್ನು ಮೇಷ್ಟ್ರ ಮನೆಯಲ್ಲಿ ಅವರ ತಂದೆಯ ಮುಖ ಕೋಪದಿಂದ ಊದಿಕೊಂಡು ಇರುತ್ತದೆ. ಅಳಿಯನ ಜೊತೆ ಮಾತನಾಡುತ್ತಾ, 'ಇವತ್ತು ಮುರಳಿ ಕಾಲೇಜಿಗೆ ಹೋಗಿದ್ದನಾ ಅಥವಾ ಮೆಸ್ ಬಳಿ ಹೋಗಿದ್ದಾನಾ ಎಂದು ಕೇಳಿದಾಗ ಆತ ಕಾಲೇಜಿಗೆ ಹೋಗಿರುವುದಾಗಿ ಅಳಿಮಯ್ಯ ಹೇಳುತ್ತಾನೆ. ಬಳಿಕ ರಾಜಿ ಬಂದ ವಿಚಾರ ಮೇಷ್ಟ್ರ ಕಿವಿಗೆ ಬೀಳುತ್ತಿದ್ದ ಹಾಗೆಯೇ ಮೇಷ್ಟ್ರು ಹೇಳುತ್ತಾರೆ ರಾಜಿ ಒಳ್ಳೆಯವಳಲ್ಲ ಆಕೆಗೆ ಈ ಊರಲ್ಲಿ ಅಷ್ಟು ಒಳ್ಳೆಯ ಹೆಸರಿಲ್ಲ ಎಂದು ಹೇಳುತ್ತಾನೆ.

ಮೇಷ್ಟ್ರ ಜೊತೆಗೆ ದನಿಗೂಡಿಸಿದ ಚಿತ್ರ

ಮೇಷ್ಟ್ರ ಜೊತೆಗೆ ದನಿಗೂಡಿಸಿದ ಚಿತ್ರ

ಇದನ್ನು ಕೇಳಿದ ಮೇಷ್ಟ್ರ ಅಕ್ಕ ಚಿತ್ರ ಕೂಡಾ ಹೇಳುತ್ತಾಳೆ ನಾನು ಮಾರುಕಟ್ಟೆಗೆ ಹೋಗಿದ್ದ ವೇಳೆ ಆ ಹೆಂಗಸಿನ ಬಗ್ಗೆ ವಿಚಾರಿಸಿದೆ ಈ ಊರಲ್ಲಿ ಆಕೆಗೆ ಯಾವುದೇ ಒಳ್ಳೆಯ ಹೆಸರಿಲ್ಲ ಆಕೆ ಪುಟ್ಟಕ್ಕನ ಮೆಸ್ ಹಾಗೂ ಮನೆಯನ್ನು ತನ್ನದಾಗಿಸಬೇಕೂ ಎಂದು ಹೊಂಚು ಹಾಕುತ್ತಾ ಇದ್ದಾಳೆ ಎಂದೆಲ್ಲ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಮೇಷ್ಟ್ರ ತಂದೆಗೆ ಇನ್ನೂ ಖುಷಿ ಆಗುತ್ತದೆ. ಮುಂದೆ ಮೇಷ್ಟ್ರ ತಂದೆ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೋ ಅಥವಾ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 8th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X